
ಆರ್ಸಿಬಿ ಅಬ್ಬರಕ್ಕೆ ಕುಣಿದು ಕುಪ್ಪಳಿಸಿದ ಫ್ಯಾನ್ಸ್, ಸಿಎಸ್ಕ್ಗೆ 251 ರನ್ ಟಾರ್ಗೆಟ್ ನೀಡಿ ದಾಖಲೆ, ದೇವದತ್ ಪಡಿಕ್ಕಲ್, ಸಾಲ್ಟ್ ಸೇರಿದಂತೆ ಇಡೀ ಆರ್ಸಿಬಿ ಬ್ಯಾಟರ್ ಅಬ್ಬರಿಸಿದರು. ಇದೀಗ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸಂಕಷ್ಟ ಹೆಚ್ಚಾಗಿದೆ.
ಬೆಂಗಳೂರು (ಏ.05) ಹಾಲಿ ಚಾಂಪಿಯನ್ ಆರ್ಸಿಬಿ ಐಪಿಎಲ್ 2026ರಲ್ಲಿ ಅಬ್ಬರ ಮುಂದುವರಿಸಿದೆ. ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿದ ಆರ್ಸಿಬಿ ಇದೀಗ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದೆ. ಸಿಎಸ್ಕೆ ವಿರುದ್ಧ ಅಬ್ಬರಿಸಿದ ಆರ್ಸಿಬಿ 250 ರನ್ ಸಿಡಿಸಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ 251 ರನ್ ಟಾರ್ಗೆಟ್ ನೀಡಿದೆ. ಇದು ಚಿನ್ನಸ್ವಾಮಿ ಕ್ರೀಡಾಂಗದಲ್ಲಿ ಗರಿಷ್ಠ ರನ್ ದಾಖಲೆಯಾಗಿದೆ.
ಟಾಸ್ ಸೋತರೂ ಅಬ್ಬರಿಸಿದ ಆರ್ಸಿಬಿ
ಟಾಸ್ ಸೋತ ಆರ್ಸಿಬಿ ಮೊದಲು ಬ್ಯಾಟಿಂಗ್ ಇಳಿದಿತ್ತು. ಚೇಸಿಂಗ್ ಫ್ಲೆಂಡ್ಲಿ ಚಿನ್ನಸ್ವಾಮಿಯಲ್ಲಿ ಈ ನಡೆ ಅಭಿಮಾನಿಗಳಿಗೆ ಆತಂಕ ಸೃಷ್ಟಿಸಿತ್ತು. ಇಧರ ಬೆನ್ನಲ್ಲೇ ಬ್ಯಾಟಿಂಗ್ ಆರಂಭಿಸಿದ ಆರ್ಸಿಬಿ ಆರಂಭಿಕ 2 ಓವರ್ ರನ್ ಗಳಿಸಲು ಸಾಧ್ಯವಾಗಲಿಲ್ಲ. ಇತ್ತ ವಿರಾಟ್ ಕೊಹ್ಲಿ 28 ರನ್ ಸಿಡಿಸಿ ಔಟಾದರು. ಇದು ಮತ್ತಷ್ಟು ಆತಂಕ ಹೆಚ್ಚಿಸಿದೆ. ಆದರೆ ದೇವದತ್ ಪಡಿಕ್ಕಲ್ ಫಿಲಿಪ್ ಸಾಲ್ಟ್ ಅಬ್ಬರಕ್ಕೆ ಆರ್ಸಿಬಿ ಅಭಿಮಾನಿಗಳ ಆತಂಕ ದೂರು ಮಾಡಿತು.
ಪಡಿಕ್ಕಲ್ 28 ಎಸೆತದಲ್ಲಿ ಹಾಫ್ ಸೆಂಚುರಿ ಸಿಡಿಸಿ ಅಬ್ಬರಿಸಿದರು. ಇತ್ತ ಫಿಲ್ ಸಾಲ್ಟ್ 30 ಎಸೆತದಲ್ಲಿ 46 ರನ್ ಸಿಡಿಸಿ ಔಟಾದರು.