Headlines

ಮಕ್ಕಳ ಕೈಗೆ ಬೀಗ ಹಾಕಿದ ‘WhatsApp’.. ಇನ್ಮುಂದೆ ಪೋಷಕರ ಕಂಟ್ರೋಲ್‌ನಷ್ಟೇ ಮಕ್ಕಳ ಮೊಬೈಲ್ ಆಟ ಸಾಧ್ಯ! | Whatsapp Rolls Out Parent Managed Accounts For Under 13 Age Children Group

ಮಕ್ಕಳ ಕೈಗೆ ಬೀಗ ಹಾಕಿದ ‘WhatsApp’.. ಇನ್ಮುಂದೆ ಪೋಷಕರ ಕಂಟ್ರೋಲ್‌ನಷ್ಟೇ ಮಕ್ಕಳ ಮೊಬೈಲ್ ಆಟ ಸಾಧ್ಯ! | Whatsapp Rolls Out Parent Managed Accounts For Under 13 Age Children Group



ಮಕ್ಕಳ ಕೈಗೆ ಬೀಗ ಹಾಕಿದ ‘WhatsApp’.. ಇನ್ಮುಂದೆ ಪೋಷಕರ ಕಂಟ್ರೋಲ್‌ನಷ್ಟೇ ಮಕ್ಕಳ ಮೊಬೈಲ್ ಆಟ ಸಾಧ್ಯ! | Whatsapp Rolls Out Parent Managed Accounts For Under 13 Age Children Group

13 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗಾಗಿ ವಾಟ್ಸಾಪ್ ಹೊಸ ಸುರಕ್ಷತಾ ಫೀಚರ್ ತಂದಿದೆ. ಇನ್ಮುಂದೆ ಪೋಷಕರು ಮಕ್ಕಳ ವಾಟ್ಸಾಪ್ ಚಟುವಟಿಕೆಗಳನ್ನು ಸುಲಭವಾಗಿ ನಿಯಂತ್ರಿಸಬಹುದು ಮತ್ತು ಅವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಬಹುದು. ಮಕ್ಕಖ ಕೈಗೆ ಬೀಗ ಬಿದ್ದಿದ್ದು ಹೇಗೆ? ನೋಡಿ..

ಮಕ್ಕಳ ಕೈಗೆ ಬೀಗ

ಈಗಿನ ಡಿಜಿಟಲ್ ಜಗತ್ತಿನಲ್ಲಿ ಚಿಕ್ಕವರಿಂದ ಹಿಡಿದು ದೊಡ್ಡವರ ತನಕ ಎಲ್ಲರೂ ವಾಟ್ಸಾಪ್ ಬಳಸುತ್ತಾರೆ. ಅದರಲ್ಲೂ 13 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಆನ್‌ಲೈನ್ ಕ್ಲಾಸ್ ಅಥವಾ ಫ್ಯಾಮಿಲಿ ಜೊತೆ ಮಾತಾಡೋಕೆ ವಾಟ್ಸಾಪ್ ಯೂಸ್ ಮಾಡ್ತಾರೆ. ಆದರೆ, ಮಕ್ಕಳ ಸೇಫ್ಟಿ ಬಗ್ಗೆ ಪೋಷಕರಿಗೆ ಯಾವಾಗಲೂ ಒಂದು ಭಯ ಇದ್ದೇ ಇರುತ್ತೆ. ಈ ಚಿಂತೆಯನ್ನು ದೂರ ಮಾಡಲು ಮೆಟಾ (Meta) ಕಂಪನಿ ಈಗ ಒಂದು ದೊಡ್ಡ ಬದಲಾವಣೆ ತಂದಿದೆ.

ಮಕ್ಕಳಿಗಾಗಿ ವಿಶೇಷ ‘ಪೇರೆಂಟ್-ಮ್ಯಾನೇಜ್ಡ್ ಅಕೌಂಟ್ಸ್’

ವಾಟ್ಸಾಪ್ ಕಂಪನಿ 13 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯೂಸರ್‌ಗಳಿಗಾಗಿ ‘Parent-Managed Accounts’ ಅನ್ನೋ ಹೊಸ ಫೀಚರ್ ಪರಿಚಯಿಸಿದೆ. ಇದರ ಮೂಲಕ ಪೋಷಕರು ತಮ್ಮ ಮಕ್ಕಳ ವಾಟ್ಸಾಪ್ ಖಾತೆಯನ್ನು ಪೂರ್ತಿಯಾಗಿ ಗಮನಿಸಬಹುದು ಮತ್ತು ಕಂಟ್ರೋಲ್ ಮಾಡಬಹುದು. ಮಕ್ಕಳು ಯಾರ ಜೊತೆ ಮಾತಾಡಬೇಕು, ಯಾವ ಗ್ರೂಪ್‌ಗಳಿಗೆ ಸೇರಬೇಕು ಅನ್ನೋದನ್ನು ಇನ್ಮುಂದೆ ಪೋಷಕರೇ ನಿರ್ಧರಿಸಬಹುದು.

ಪೋಷಕರ ಕೈಯಲ್ಲಿ ಪೂರ್ತಿ ಕಂಟ್ರೋಲ್

ಈ ಹೊಸ ಫೀಚರ್‌ನಲ್ಲಿ, ಅಪರಿಚಿತ ನಂಬರ್‌ಗಳಿಂದ ಬರುವ ಮೆಸೇಜ್ ರಿಕ್ವೆಸ್ಟ್‌ಗಳನ್ನು (Message Requests) ಮಕ್ಕಳು ನೇರವಾಗಿ ನೋಡಲು ಆಗಲ್ಲ. ಬದಲಾಗಿ, ಆ ಮೆಸೇಜ್‌ಗಳು ಪೋಷಕರ ಅನುಮತಿಗಾಗಿ ಕಾಯುತ್ತವೆ. ಪೋಷಕರು ಓಕೆ ಅಂದ್ಮೇಲೆ ಮಾತ್ರ ಆ ಚಾಟ್ ಮುಂದುವರಿಯುತ್ತೆ. ಅಷ್ಟೇ ಅಲ್ಲ, ಮಕ್ಕಳು ತಾವಾಗಿಯೇ ಪ್ರೈವಸಿ ಸೆಟ್ಟಿಂಗ್ಸ್ (Privacy Settings) ಬದಲಿಸದಂತೆ ತಡೆಯಲು 6-ಅಂಕಿಯ ‘ಪೇರೆಂಟ್ ಪಿನ್’ (Parent PIN) ಕೂಡ ಇದರಲ್ಲಿ ಸೇರಿಸಲಾಗಿದೆ.

ಯಾವೆಲ್ಲಾ ಫೀಚರ್‌ಗಳಿಗೆ ನಿರ್ಬಂಧ?

ಮಕ್ಕಳ ಸುರಕ್ಷತೆ ದೃಷ್ಟಿಯಿಂದ, ಈ ರೀತಿಯ ಅಕೌಂಟ್‌ಗಳಲ್ಲಿ ಕೆಲವು ಸಾಮಾನ್ಯ ಫೀಚರ್‌ಗಳನ್ನು ತೆಗೆದುಹಾಕಲಾಗಿದೆ. ವಾಟ್ಸಾಪ್ ಸ್ಟೇಟಸ್ (Status), ಚಾನೆಲ್ಸ್ (Channels) ಮತ್ತು ಮೆಟಾ ಎಐ (Meta AI) ನಂತಹ ಫೀಚರ್‌ಗಳು 13 ವರ್ಷದೊಳಗಿನ ಮಕ್ಕಳ ಖಾತೆಗಳಲ್ಲಿ ಕೆಲಸ ಮಾಡಲ್ಲ. ಇದರಿಂದ ಮಕ್ಕಳು ಅನಗತ್ಯ ಕಂಟೆಂಟ್ ನೋಡುವುದನ್ನು ತಪ್ಪಿಸಬಹುದು ಅಂತ ವಾಟ್ಸಾಪ್ ಹೇಳಿದೆ.

ಹೊಸ ಅಕೌಂಟ್ ಸೆಟ್-ಅಪ್ ಮಾಡುವುದು ಹೇಗೆ?

ನಿಮ್ಮ ಮಗುವಿನ ವಾಟ್ಸಾಪ್ ಖಾತೆಯನ್ನು ಸುರಕ್ಷಿತವಾಗಿ ಸೆಟ್ ಮಾಡಲು ಈ ಕೆಳಗಿನ ಸುಲಭ ಹಂತಗಳನ್ನು ಫಾಲೋ ಮಾಡಿ:

1. ಮಗುವಿನ ಫೋನ್‌ನಲ್ಲಿ ವಾಟ್ಸಾಪ್ ಡೌನ್‌ಲೋಡ್ ಮಾಡಿ, ಭಾಷೆ ಆಯ್ಕೆ ಮಾಡಿ.

2. ಅಲ್ಲಿರುವ ‘More Options’ ಗೆ ಹೋಗಿ ‘Create a Parent-Managed Account’ ಆಯ್ಕೆ ಮಾಡಿ.

3. ಮಗುವಿನ ಮೊಬೈಲ್ ನಂಬರ್ ಮತ್ತು ಹುಟ್ಟಿದ ದಿನಾಂಕವನ್ನು ಹಾಕಿ ಖಚಿತಪಡಿಸಿ.

4. ಈಗ ನಿಮ್ಮ (ಪೋಷಕರ) ಫೋನ್‌ನಲ್ಲಿ ವಾಟ್ಸಾಪ್ ಓಪನ್ ಮಾಡಿ, ಮಗುವಿನ ಫೋನ್‌ನಲ್ಲಿ ಕಾಣಿಸುವ QR ಕೋಡ್ ಅನ್ನು ಸ್ಕ್ಯಾನ್ ಮಾಡಿ.

5. ನೀವು 18 ವರ್ಷ ಮೇಲ್ಪಟ್ಟವರು ಎಂಬುದನ್ನು ಖಚಿತಪಡಿಸಿದ ನಂತರ, 6-ಅಂಕಿಯ ‘ಪೇರೆಂಟ್ ಪಿನ್’ ಒಂದನ್ನು ಕ್ರಿಯೇಟ್ ಮಾಡಿ.

6. ಕೊನೆಯದಾಗಿ, ಮಗುವಿನ ಫೋನ್‌ನಲ್ಲಿ ಈ ಪಿನ್ ನಂಬರ್ ಹಾಕಿದರೆ ಸೆಟ್-ಅಪ್ ಪೂರ್ತಿಯಾಗುತ್ತೆ.

ಸುರಕ್ಷಿತ ಡಿಜಿಟಲ್ ಜಗತ್ತು

ಕರ್ನಾಟಕ ಮತ್ತು ಆಂಧ್ರಪ್ರದೇಶದಂತಹ ರಾಜ್ಯಗಳು 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಸೋಶಿಯಲ್ ಮೀಡಿಯಾ ನಿಷೇಧಿಸುವ ಬಗ್ಗೆ ಚರ್ಚೆ ನಡೆಸುತ್ತಿರುವ ಈ ಸಮಯದಲ್ಲಿ, ಮೆಟಾ ಕಂಪನಿ ಇಂತಹ ‘ಪೇರೆಂಟಲ್ ಕಂಟ್ರೋಲ್’ ಫೀಚರ್‌ಗಳನ್ನು ತರುತ್ತಿರುವುದು ಮಹತ್ವ ಪಡೆದುಕೊಂಡಿದೆ. ಸಂಪೂರ್ಣ ನಿಷೇಧಕ್ಕಿಂತ, ಪೋಷಕರ ನಿಗಾದಲ್ಲಿ ಸುರಕ್ಷಿತವಾಗಿ ಬಳಸುವುದು ಉತ್ತಮ ಎಂಬುದು ಕಂಪನಿಯ ಅಭಿಪ್ರಾಯ.



Source link

Leave a Reply

Your email address will not be published. Required fields are marked *