Headlines

ದೇಗುಲಗಳಲ್ಲಿ ರೀಲ್ಸ್, ಶೂಟಿಂಗ್ ಮಾಡಲು ಇನ್ನು ಅನುಮತಿ ಜೊತೆಗೆ ಶುಲ್ಕವೂ ಕಡ್ಡಾಯ! ಮುಜರಾಯಿ ಇಲಾಖೆ ಹೊಸ ಸುತ್ತೋಲೆ | Photography Filming Fees Made Mandatory At Muzrai Temples In Karnataka

ದೇಗುಲಗಳಲ್ಲಿ ರೀಲ್ಸ್, ಶೂಟಿಂಗ್ ಮಾಡಲು ಇನ್ನು ಅನುಮತಿ ಜೊತೆಗೆ ಶುಲ್ಕವೂ ಕಡ್ಡಾಯ! ಮುಜರಾಯಿ ಇಲಾಖೆ ಹೊಸ ಸುತ್ತೋಲೆ | Photography Filming Fees Made Mandatory At Muzrai Temples In Karnataka



ದೇಗುಲಗಳಲ್ಲಿ ರೀಲ್ಸ್, ಶೂಟಿಂಗ್ ಮಾಡಲು ಇನ್ನು ಅನುಮತಿ ಜೊತೆಗೆ ಶುಲ್ಕವೂ ಕಡ್ಡಾಯ! ಮುಜರಾಯಿ ಇಲಾಖೆ ಹೊಸ ಸುತ್ತೋಲೆ | Photography Filming Fees Made Mandatory At Muzrai Temples In Karnataka

ರಾಜ್ಯದ ದೇವಾಲಯಗಳಲ್ಲಿ ಹೆಚ್ಚುತ್ತಿರುವ ರೀಲ್ಸ್ ಮತ್ತು ವೀಡಿಯೋ ಚಿತ್ರೀಕರಣಕ್ಕೆ ಕಡಿವಾಣ ಹಾಕಲು, ಮುಜರಾಯಿ ಇಲಾಖೆಯು ನಿಯಮಗಳನ್ನು ಕಟ್ಟುನಿಟ್ಟುಗೊಳಿಸಿದೆ. ಇನ್ನುಮುಂದೆ ಸಿನಿಮಾ, ಧಾರಾವಾಹಿ, ಅಥವಾ ಯಾವುದೇ ವೃತ್ತಿಪರ ಚಿತ್ರೀಕರಣಕ್ಕೆ ಪೂರ್ವಾನುಮತಿ ಹಾಗೂ ನಿಗದಿತ ಶುಲ್ಕ ಪಾವತಿಸುವುದು ಕಡ್ಡಾಯವಾಗಿದೆ.

ಬೆಂಗಳೂರು: ರಾಜ್ಯದ ಮುಜರಾಯಿ ವ್ಯಾಪ್ತಿಯಲ್ಲಿರುವ ಎಲ್ಲಾ ಎ ಮತ್ತು ಬಿ ವರ್ಗದ ದೇವಾಲಯಗಳಲ್ಲಿ ಇನ್ನುಮುಂದೆ ಯಾವುದೇ ರೀತಿಯ ಚಿತ್ರೀಕರಣಕ್ಕೆ ಕಡ್ಡಾಯವಾಗಿ ಶುಲ್ಕ ಪಾವತಿಸಬೇಕಾಗುತ್ತದೆ. ಸಿನಿಮಾ, ಧಾರಾವಾಹಿ, ಸಾಕ್ಷ್ಯಚಿತ್ರಗಳ ನಿರ್ಮಾಣ, ಸುದ್ದಿವಾಹಿನಿಗಳ ವಿಶೇಷ ವರದಿ ಸೇರಿದಂತೆ ವೃತ್ತಿಪರ ಉದ್ದೇಶಗಳಿಗಾಗಿ ದೇವಸ್ಥಾನ ಆವರಣದಲ್ಲಿ ಶೂಟಿಂಗ್ ಅಥವಾ ರೆಕಾರ್ಡಿಂಗ್ ನಡೆಸಬೇಕಾದರೆ ಮುಂಚಿತ ಅನುಮತಿ ಪಡೆಯುವ ಜೊತೆಗೆ ನಿಗದಿತ ಶುಲ್ಕವನ್ನು ಪಾವತಿಸಬೇಕು ಎಂದು ಮುಜರಾಯಿ ಇಲಾಖೆ ಸ್ಪಷ್ಟ ಸೂಚನೆ ನೀಡಿದೆ.

ಹೆಚ್ಚುತ್ತಿರುವ ರೀಲ್ಸ್ ಹುಚ್ಚು

ವಾಸ್ತವವಾಗಿ, ದೇವಾಲಯಗಳಲ್ಲಿ ಚಿತ್ರೀಕರಣಕ್ಕೆ ಸಂಬಂಧಿಸಿದ ನಿಯಮಗಳು ಹೊಸದಲ್ಲ. ಈಗಾಗಲೇ 2003 ಹಾಗೂ 2012ರಲ್ಲಿ ಈ ಕುರಿತು ಸ್ಪಷ್ಟ ಮಾರ್ಗಸೂಚಿಗಳನ್ನು ಜಾರಿಗೆ ತರಲಾಗಿತ್ತು. ಆದರೆ ಕಾಲಕ್ರಮೇಣ ಈ ನಿಯಮಗಳ ಪಾಲನೆ ಸಡಿಲಗೊಂಡಿದ್ದು, ಇತ್ತೀಚಿನ ವರ್ಷಗಳಲ್ಲಿ ಸಾಮಾಜಿಕ ಜಾಲತಾಣಗಳ ಪ್ರಭಾವ ಹೆಚ್ಚಾದ ಹಿನ್ನೆಲೆಯಲ್ಲಿ ದೇವಾಲಯಗಳಲ್ಲಿ ನಿಯಂತ್ರಣವಿಲ್ಲದ ರೀಲ್ಸ್, ಯೂಟ್ಯೂಬ್ ವೀಡಿಯೋಗಳ ಚಿತ್ರೀಕರಣ ಹೆಚ್ಚುತ್ತಿರುವುದು ಗಮನಕ್ಕೆ ಬಂದಿದೆ.

ಕೆಲವು ಭಕ್ತರು ಹಾಗೂ ಕಂಟೆಂಟ್ ಕ್ರಿಯೇಟರ್‌ಗಳು ದೇವಾಲಯದ ಒಳಾಂಗಣ ಹಾಗೂ ಪೂಜಾ ಸಂದರ್ಭಗಳಲ್ಲಿ ಅನಗತ್ಯವಾಗಿ ವೀಡಿಯೋ ಚಿತ್ರೀಕರಣ ನಡೆಸುತ್ತಿರುವುದು ದೇವಾಲಯಗಳ ಪಾವಿತ್ರ್ಯತೆ ಮತ್ತು ಶಿಸ್ತಿಗೆ ಧಕ್ಕೆಯಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ. ಇದರಿಂದ ಭಕ್ತರ ಭಾವನೆಗಳಿಗೆ ಧಕ್ಕೆ ಉಂಟಾಗುವುದರ ಜೊತೆಗೆ, ಧಾರ್ಮಿಕ ವಾತಾವರಣಕ್ಕೂ ಅಡಚಣೆ ಆಗುತ್ತಿದೆ ಎಂದು ಇಲಾಖೆ ಅಭಿಪ್ರಾಯಪಟ್ಟಿದೆ.

ಮತ್ತೆ ನಿಯಮ ಕಟ್ಟುನಿಟ್ಟು

ಈ ಹಿನ್ನೆಲೆಯಲ್ಲಿ, ಹಿಂದಿನ ವರ್ಷಗಳಲ್ಲಿ ಜಾರಿಗೊಳಿಸಿದ್ದ ನಿಯಮಗಳನ್ನು ಮತ್ತೆ ಕಟ್ಟುನಿಟ್ಟಾಗಿ ಪಾಲಿಸುವಂತೆ ಮುಜರಾಯಿ ಇಲಾಖೆ ಎಲ್ಲಾ ಸಂಬಂಧಿತ ಅಧಿಕಾರಿಗಳಿಗೆ ಸೂಚನೆ ನೀಡಿದೆ. ದೇವಸ್ಥಾನಗಳಲ್ಲಿ ಶೂಟಿಂಗ್ ನಡೆಸುವವರು ಕಡ್ಡಾಯವಾಗಿ ಇಲಾಖೆಯಿಂದ ಪೂರ್ವಾನುಮತಿ ಪಡೆಯಬೇಕು, ನಿಗದಿತ ಶುಲ್ಕ ಪಾವತಿಸಬೇಕು ಹಾಗೂ ಧಾರ್ಮಿಕ ಸಂಪ್ರದಾಯ, ಶಿಸ್ತು ಮತ್ತು ಭಕ್ತರ ಗೌಪ್ಯತೆಯನ್ನು ಕಾಪಾಡುವಂತೆ ನಡೆದುಕೊಳ್ಳಬೇಕು ಎಂದು ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ.



Source link

Leave a Reply

Your email address will not be published. Required fields are marked *