trike Scooter Bengaluru ಬೆಂಗಳೂರು ರಸ್ತೆಯಲ್ಲಿ ಟ್ರೈಕ್ ಸ್ಕೂಟರ್; ಬೀಳೋ ಭಯವಿಲ್ಲ, ಬ್ಯಾಲೆನ್ಸ್ ಬೇಕಿಲ್ಲ | No Balance No Problem Igo Ex4 Self Balancing Trike Scooter Taking Over Bengaluru Streets

trike Scooter Bengaluru ಬೆಂಗಳೂರು ರಸ್ತೆಯಲ್ಲಿ ಟ್ರೈಕ್ ಸ್ಕೂಟರ್; ಬೀಳೋ ಭಯವಿಲ್ಲ, ಬ್ಯಾಲೆನ್ಸ್ ಬೇಕಿಲ್ಲ | No Balance No Problem Igo Ex4 Self Balancing Trike Scooter Taking Over Bengaluru Streets



trike Scooter Bengaluru ಬೆಂಗಳೂರು ರಸ್ತೆಯಲ್ಲಿ ಟ್ರೈಕ್ ಸ್ಕೂಟರ್; ಬೀಳೋ ಭಯವಿಲ್ಲ, ಬ್ಯಾಲೆನ್ಸ್ ಬೇಕಿಲ್ಲ | No Balance No Problem Igo Ex4 Self Balancing Trike Scooter Taking Over Bengaluru Streets

ಬೆಂಗಳೂರು ರಸ್ತೆಯಲ್ಲಿ ಟ್ರೈಕ್ ಸ್ಕೂಟರ್; ಇದು ಮೂರು ಚಕ್ರದ ಎಲೆಕ್ಟ್ರಿಕ್ ಸ್ಕೂಟರ್, ಸ್ಕೂಟರ್ ಬ್ಯಾಲೆನ್ಸ್ ಬೇಕಿಲ್ಲ, ಎಲ್ಲಿ ಬೀಳುತ್ತೆ ಅನ್ನೋ ಭಯವಿಲ್ಲ. ಟ್ರಾಫಿಕ್‌ನಲ್ಲಿ ಪದೇ ಪದೇ ಕಾಲು ಕೆಳಗಿಡಬೇಕಾದ ಅನಿವಾರ್ಯತೆ ಇಲ್ಲ. 

ಬೆಂಗಳೂರು (ಫೆ.18) ಬೆಂಗಳೂರು ರಸ್ತೆಯಲ್ಲಿ ಹೊಸ ಸ್ಕೂಟರ್, ಬೈಕ್, ಕಾರು ಸೇರಿದಂತೆ ವಾಹನಗಳ ಓಡಾಟ ಹೊಸದೇನಲ್ಲ. ಆದರೆ ಹಲವು ಬಾರಿ ಬೆಂಗಳೂರು ರಸ್ತೆಯ ವಾಹನಗಳು ದೇಶ ವಿದೇಶಗಳ ಗಮನ ಸೆಳೆದಿದೆ. ಸೂಪರ್ ಕಾರು ಸೇರಿದಂತೆ ಹಲವು ವಾಹನಗಳು ಹೆಚ್ಚಾಗಿ ಬೆಂಗಳೂರು ರಸ್ತೆಯಲ್ಲೇ ಕಾಣಸಿಗುತ್ತದೆ. ಇನ್ನು ಹೊಸ ಆವಿಷ್ಕಾರ, ಟೆಸ್ಟಿಂಗ್ ವಾಹನಗಳೂ ಅದರಲ್ಲೂ ಎಲೆಕ್ಟ್ರಿಕ್ ವಾಹನಗಳು ಮೊದಲು ಬೆಂಗಳೂರು ರಸ್ತೆಯಲ್ಲಿ ಓಡಾಟ ಆರಂಭಿಸುತ್ತದೆ. ಹೀಗೆ ಬೆಂಗಳೂರು ರಸ್ತೆಯಲ್ಲಿ ಇದೇ ಮೊದಲ ಬಾರಿಗೆ ಟ್ರೈಕ್ ಸ್ಕೂಟರ್ ಒಂದು ಪತ್ತೆಯಾಗಿದೆ. ಇದು ಮೂರು ಚಕ್ರದ ಎಲೆಕ್ಟ್ರಿಕ್ ಸ್ಕೂಟರ್. ಈ ಸ್ಕೂಟರ್ ರೈಡ್ ಮಾಡಲು ಬ್ಯಾಲೆನ್ಸ್ ಬೇಕಿಲ್ಲ, ಗುಂಡಿ ರಸ್ತೆ, ಇತರೆಡೆ ಸ್ಕಿಡ್ ಆಗುತ್ತೆ, ಜಾರಿ ಬೀಳುತ್ತೆ, ಬ್ಯಾಲೆನ್ಸ್ ತಪ್ಪು ಅನ್ನೋ ಭಯವಿಲ್ಲ. ಟ್ರಾಫಿಕ್‌ನಲ್ಲಿ ಕಾಲು ಕೆಳಗಿಡಬೇಕಾದ ಅನಿವಾರ್ಯತೆ ಇಲ್ಲ.

ಬೆಂಗಳೂರಲ್ಲಿ ಟ್ರೈಕ್ ಸ್ಕೂಟರ್

ಇದು ಐಗೋ ಎಕ್ಸ್4 ಅನ್ನೋ ಟ್ರೈಕ್ ಸ್ಕೂಟರ್. ಬೆಂಗಳೂರಿನಲ್ಲೇ ಅಭಿವೃದ್ಧಿಪಡಿಸಿ, ಉತ್ಪಾದನೆಯಾಗಿರುವ ಹಲವು ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಗೆ ಲಗ್ಗೆ ಇಟ್ಟು ಯಶಶ್ವಿಯಾಗಿದೆ. ಇದೀಗ ಐಗೋ ಎಕ್ಸ್4 ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾಗಿದೆ. ಸದ್ಯ ಬೆಂಗಳೂರು ರಸ್ತೆಯಲ್ಲಿ ಐಗೋ ಎಕ್ಸ್4 ಕಾಣಸಿಗುತ್ತದೆ. ಇದು ಟೆಸ್ಟಿಂಗ್ ಸ್ಕೂಟರ್. ಯಾರಿಗೆ ಸ್ಕೂಟರ್ ಬ್ಯಾಲೆನ್ಸ್ ಸರಿಯಾಗಿ ಆಗಲ್ಲ, ಅಥವಾ ಗುಂಡಿ ರಸ್ತೆ, ಹಿಂಬದಿ ಸವಾರರನ್ನು ಕೂರಿಸಿಕೊಂಡು ಹೋಗುವಾಗ ಎದುರಾಗುವ ಬ್ಯಾಲೆನ್ಸ್ ಸಮಸ್ಯೆಗಳಿಗೆ ಪರಿಹಾರವಾಗಿ ಈ ಟ್ರೈಕ್ ಸ್ಕೂಟರ್. ವಿಶೇಷವಾಗಿ ಹಿರಿ ನಾಗರೀಕರಿಗೂ ಈ ಸ್ಕೂಟರ್ ನೆರವಾಗಲಿದೆ. ಸ್ಕೂಟರ್ ಬ್ಯಾಲೆನ್ಸ್ ಮಾಡಬೇಕಿಲ್ಲ. ಅಥವಾ ಸ್ಕೂಟರ್ ಭಾರವನ್ನು ಎತ್ತವು, ಸ್ಟಾಂಡ್ ಹಾಕುವ, ನಿಲ್ಲಿಸುವಾಗ ಹಿಡಿದಿಟ್ಟುಕೊಳ್ಳಬೇಕಾದ ಅವಶ್ಯಕತೆ ಇಲ್ಲ.

ಮೂರು ಚಕ್ರದ ಸ್ಕೂಟರ್‌ಗೆ ಲೈಸೆನ್ಸ್ ಯಾವ್ದು?

ಫ್ಲಿವೀಲ್ ಅನ್ನೋ ವ್ಲಾಗರ್ ಕಣ್ಣಿಗೆ ಈ ಹೊಸ ಸ್ಕೂಟರ್ ಪತ್ತೆಯಾಗಿದೆ. ಈ ಕುರಿತು ಕೆಲ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಈ ಸ್ಕೂಟರ್‌ಗೆ ಮೂರು ಚಕ್ರವಿದೆ. ಇದಕ್ಕೆ ಬೇರೆ ಲೈಸೆನ್ಸ್ ಬೇಕಾ? ಖಂಡಿತ ಇಲ್ಲ. ಇದು ಗೇರ್ ಅಥವಾ ವಿಥೌಟ್ ಗೇರ್ ಟೂ ವ್ಹೀಲರ್ ಲೈನ್ಸ್ ಇದಕ್ಕೆ ಸಾಕು.ಯೂಟಿಲಿಟಿ ವೆಹಿಕಲ್ ಆಗಿ ಇದನ್ನು ಅಭಿವೃದ್ಧಿ ಮಾಡಲಾಗಿದೆ. ಸದ್ಯ ಸ್ಕೂಟರ್‌ಗಿಂತ ಗಾತ್ರದಲ್ಲಿ ದೊಡ್ಡದಿದೆ. ಆದರೆ ಟೆಸ್ಟಿಂಗ್ ನಡೆಯುತ್ತಿದೆ. ಹೀಗಾಗಿ ಮತ್ತಷ್ಟು ಅಭಿೃವೃದ್ಧಿ ಮಾಡಲಾಗುತ್ತದೆ. ಹೀಗಾಗಿ ವಿನ್ಯಾಸ, ಗಾತ್ರದಲ್ಲೂ ಕೆಲ ಬದಲಾವಣೆಯಾಗಲಿದೆ.

ಈ ಸ್ಕೂಟರ್‌ನಲ್ಲಿ ರಿವರ್ಸ್ ಗೇರ್, ಸ್ಕ್ರೀನ್ ಡಿಸ್‌ಪ್ಲೇ, ಮೊಡ್ ಸ್ವಿಚ್ ಸೇರಿದಂತೆ ಇತರ ಕೆಲ ಕ್ಲಸ್ಟರ್ ಫೀಚರ್ ನೀಡಲಾಗಿದೆ. ಇನ್ನು ಸೆಲ್ಫ್ ಬ್ಯಾಲೆನ್ಸ್ ಸ್ವಿಚ್ ಸೇರಿದಂತೆ ಪ್ರಮುಖ ಫೀಚರ್ ಇದರಲ್ಲಿದೆ. ಸದ್ಯ ಈ ಟ್ರೈಕ್ ಸ್ಕೂಟರ್ ಬೆಂಗಳೂರಿನಲ್ಲಿ ಭಾರಿ ಗಮನಸೆಳೆಯುತ್ತಿದೆ.



Source link

Leave a Reply

Your email address will not be published. Required fields are marked *