Headlines

ಗಿಲ್ಲಿ ನಟನ Superhit Movie ಹೇಗಿದೆ? Bigg Boss ಥರ ಇಲ್ಲೂ ಕಮಾಲ್‌ ಮಾಡಿದ್ರಾ ಪಳಾರ್‌ ಗಿಲ್ಲಿ? | Bbk 12 Winner Gilli Nata Superhit Kannada Movie Review

BBK 12 Winner Gilli Nata Movie: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ವಿಜೇತ ಗಿಲ್ಲಿ ನಟ ಅಭಿನಯದ ಸೂಪರ್‌ಹಿಟ್‌ ಸಿನಿಮಾ ರಿಲೀಸ್‌ ಆಗಿದೆ. ಹೀರೋ ಆಗಿ ನಟಿಸಿದ ಮೊದಲ ಸಿನಿಮಾವಾಗಿತ್ತು. ಈ ಸಿನಿಮಾ ಹೇಗಿದೆ? 

ಆರ್‌.ಕೇಶವಮೂರ್ತಿ

ಚಿತ್ರ: ಸೂಪರ್‌ ಹಿಟ್‌

ತಾರಾಗಣ: ಗಿಲ್ಲಿನಟ, ಗೌರವ್ ಶೆಟ್ಟಿ, ಶ್ವೇತಾ, ಸಾಧು ಕೋಕಿಲಾ, ಪ್ರಮೋದ್‌ ಶೆಟ್ಟಿ, ಭಜರಂಗಿ ಲೋಕಿ, ಗಿರೀಶ್‌ ಶಿವಣ್ಣ, ಸ್ವಪ್ನ ಶೆಟ್ಟಿಗಾರ್‌, ಟೆನ್ನಿಸ್‌ ಕೃಷ್ಣ\B

ನಿರ್ದೇಶನ: ವಿಜಯಾನಂದ್‌\B

ರೇಟಿಂಗ್‌: 3 

ನಗುವಿಗೆ ಕಿಕ್‌ ಕೊಡುವ ಪಂಚಿಂಗ್‌ ಸಂಭಾಷಣೆಗಳಿವೆ, ಪ್ರತಿಯೊಂದು ಪಾತ್ರಕ್ಕೂ ಚೂರು ಪಾರು ಫ್ಲ್ಯಾಷ್‌ ಬ್ಯಾಕ್‌ ಕತೆಗಳಿವೆ, ಆಗಾಗ ಗ್ಲಾಮರ್‌ ಪ್ರೀತಿಯೂ ಇಣುಕುತ್ತದೆ. ಜೊತೆಗೊಂದು ಮರ್ಡರ್‌ ಕೂಡ ಇದೆ. ಇದೆಲ್ಲವನ್ನು ಒಂದು ಕಾರು ಟ್ರಾವೆಲ್‌ ಮೂಲಕವೇ ಹೇಳುತ್ತಾರೆ ನಿರ್ದೇಶಕ ವಿಜಯಾನಂದ್‌. ಕಾರಿನ ಕಿಡ್ನಾಪ್‌ ಹಿನ್ನೆಲೆಯಲ್ಲಿ ಎಷ್ಟು ಸಾಧ್ಯವೋ ಅಷ್ಟು ನಗಿಸುವ ಚಿತ್ರ.

ನಾಪತ್ತೆಯಾಗುವ ಕಾರಿನಲ್ಲೇ ಒಬೊಬ್ಬರೇ ಸೇರಿಕೊಳ್ಳುತ್ತಾರೆ. ಹೀಗೆ ಬರುವ ಪ್ರತಿಯೊಬ್ಬರದ್ದು ಒಂದು ಸಮಸ್ಯೆ ಇದೆ. ಆ ಸಮಸ್ಯೆಗೊಂದು ಕತೆ ಇದ್ದು, ಅದು ಪ್ರಯಾಣದ ಉದ್ದಕ್ಕೂ ತೆರೆದುಕೊಳ್ಳುತ್ತದೆ. ಹೀಗಾಗಿ ನೋಡುಗರಿಗೆ ಬೋರಿಂಗ್‌ ಜರ್ನಿ ಎನಿಸುವುದಿಲ್ಲ. ಕೊನೆಯಲ್ಲಿ ಟ್ವಿಸ್ಟ್‌ಗಳೂ ಇವೆ.

ಇದು ಮನರಂಜನೆ ಸಿನಿಮಾ. ಗೌರವ್‌ ಶೆಟ್ಟಿ ಹಾಗೂ ಗಿಲ್ಲಿ ನಟನ ಪಂಚಿಂಗ್‌ ಡೈಲಾಗ್‌ಗಳ ಜುಗಲ್ ಬಂದಿಯೇ ಚಿತ್ರದ ಹೈಲೈಟ್ ಆಗಿದ್ದರೂ ಕಳ್ಳನ ಪಾತ್ರಧಾರಿ ಗೋವಿಂದೇ ಗೌಡ, ಪೊಲೀಸ್ ಆಗಿ ಪ್ರಮೋದ್ ಶೆಟ್ಟಿ, ತನಗೆ ತಾನೇ ಸುಪಾರಿ ಕೊಟ್ಟಿಕೊಳ್ಳುವ ಸಾಧು ಕೋಕಿಲ, ಪ್ರೇಮಿಗಳ ಪಾತ್ರದಲ್ಲಿ ಗಿರೀಶ್ ಶಿವಣ್ಣ ಹಾಗೂ ಸ್ವಪ್ನ ಶೆಟ್ಟಿಗಾರ್ ಗಮನ ಸೆಳೆಯುತ್ತಾರೆ. ಲೈಟ್‌ ಹಾರ್ಟ್‌ ಕಾಮಿಡಿ ಬಯಸುವವರಿಗೆ ‘ಸೂಪರ್‌ ಹಿಟ್‌’ ಚಿತ್ರ ಮನಸ್ಸಿಗೆ ಹಿಡಿಸುತ್ತದೆ.

\B\B

Source link

Leave a Reply

Your email address will not be published. Required fields are marked *