ಷೇರು ಬೈಬ್ಯಾಕ್‌ ಮೇಲೆ ಕ್ಯಾಪಿಟಲ್‌ ಗೇನ್‌ ತೆರಿಗೆ! ಏನಿದು ಬೈಬ್ಯಾಕ್‌? ಸಣ್ಣ ಹೂಡಿಕೆದಾರರ ಮೇಲೆ ಏನು ಪರಿಣಾಮ? | Buyback Tax Rule Changed Capital Gains Tax To Apply Relief For Small Investors

ಷೇರು ಬೈಬ್ಯಾಕ್‌ ಮೇಲೆ ಕ್ಯಾಪಿಟಲ್‌ ಗೇನ್‌ ತೆರಿಗೆ! ಏನಿದು ಬೈಬ್ಯಾಕ್‌? ಸಣ್ಣ ಹೂಡಿಕೆದಾರರ ಮೇಲೆ ಏನು ಪರಿಣಾಮ? | Buyback Tax Rule Changed Capital Gains Tax To Apply Relief For Small Investors



ಷೇರು ಬೈಬ್ಯಾಕ್‌ ಮೇಲೆ ಕ್ಯಾಪಿಟಲ್‌ ಗೇನ್‌ ತೆರಿಗೆ! ಏನಿದು ಬೈಬ್ಯಾಕ್‌? ಸಣ್ಣ ಹೂಡಿಕೆದಾರರ ಮೇಲೆ ಏನು ಪರಿಣಾಮ? | Buyback Tax Rule Changed Capital Gains Tax To Apply Relief For Small Investors

ಷೇರು ಮರುಖರೀದಿ (ಬೈಬ್ಯಾಕ್‌) ಮೇಲಿನ ತೆರಿಗೆ ನಿಯಮಗಳನ್ನು ಬದಲಾಯಿಸಲಾಗಿದ್ದು, ಇದನ್ನು ಇನ್ನು ಮುಂದೆ ಕ್ಯಾಪಿಟಲ್‌ ಗೇನ್‌ ತೆರಿಗೆಯಾಗಿ ಪರಿಗಣಿಸಲಾಗುತ್ತದೆ. ಈ ಬದಲಾವಣೆಯು ಅಲ್ಪಸಂಖ್ಯಾತ ಷೇರುದಾರರನ್ನು ರಕ್ಷಿಸುವ ಗುರಿ ಹೊಂದಿದೆ.

ಅಲ್ಪಸಂಖ್ಯಾತ ಷೇರುದಾರರನ್ನು ರಕ್ಷಿಸುವ ಹಾಗೂ ಕಂಪನಿಯ ಪ್ರವರ್ತಕರು ಕಡಿಮೆ ತೆರಿಗೆ ಪಾವತಿಸುವುದನ್ನು ತಡೆಯಲು ಷೇರು ಮರು ಖರೀದಿ(ಬೈಬ್ಯಾಕ್‌) ಮೇಲಿನ ತೆರಿಗೆಯಲ್ಲಿ ಬದಲಾವಣೆ ತರಲಾಗಿದೆ. ಇನ್ನು ಮುಂದೆ ಷೇರು ಮರುಖರೀದಿಯನ್ನು ಕ್ಯಾಪಿಟಲ್‌ ಗೇನ್‌(ಬಂಡವಾಳ ಲಾಭ) ಟ್ಯಾಕ್ಸ್‌ ಆಗಿ ಪರಿಗಣಿಸಲಾಗುತ್ತದೆ.

ಈ ನಿಯಮದ ಪ್ರಕಾರ ಇನ್ನು ಮುಂದೆ ಕಾರ್ಪೊರೇಟ್‌ ಪ್ರವರ್ತಕರಿಗೆ ಶೇ.22 ಹಾಗೂ ಕಾರ್ಪೊರೇಟೇತರ ಪ್ರವರ್ತಕರಿಗೆ ಶೇ.30 ಬೀಳಲಿದೆ. ಈ ಮೂಲಕ ಕಂಪನಿಗಳು ಇನ್ನು ಮುಂದೆ ತಮ್ಮ ಕೈಯಲ್ಲಿರುವ ಹೆಚ್ಚುವರಿ ಲಾಭಾಂಶವನ್ನು ಷೇರು ಮರುಖರೀದಿಗೆ ವಿನಿಯೋಗಿಸುವ ಬದಲು ಷೇರುದಾರರಿಗೆ ಡಿವಿಡೆಂಡ್‌ ರೂಪದಲ್ಲಿ ನೀಡಲು ಮತ್ತು ಕಂಪನಿಯ ವಿಸ್ತರಣೆ ಹಾಗೂ ರಿಸರ್ಜ್‌ ಆ್ಯಂಡ್‌ ಡೆವಲಪ್‌ಮೆಂಟ್‌ನಂಥ ಉದ್ದೇಶಗಳಿಗೆ ಬಳಸಲು ಅನುಕೂಲ ಆಗಲಿದೆ ಎಂದು ಹೇಳಲಾಗಿದೆ.

ಆನಂದ್‌ ರಾಠಿ ಷೇರ್‌ ಸಂಸ್ಥೆಯ ನಿರ್ದೇಶಕಿ ರೂಪಾ ಭೂತ್ರಾ ಅವರ ಪ್ರಕಾರ, ಸರ್ಕಾರದ ಈ ಕ್ರಮದಿಂದಾಗಿ ವೈಯಕ್ತಿಕ ಹೂಡಿಕೆದಾರರಿಗೆ ಅನುಕೂಲ ಆಗಲಿದೆ. ಯಾಕೆಂದರೆ ಷೇರುದಾರರು ಶೇ.30 ತೆರಿಗೆ ಸ್ಲ್ಯಾಬ್‌ನಲ್ಲಿದ್ದರೆ ಬೈಬ್ಯಾಕ್‌ನಲ್ಲಿ ಪಾಲ್ಗೊಂಡ್ರೆ ಅವರಿಗೆ ದೀರ್ಘಾವಧಿ(ಶೇ.12.5) ಅಥವಾ ಅಲ್ಪಾವಧಿ(ಶೇ.20) ಆಧರಿಸಿ ಕ್ಯಾಪಿಟಲ್‌ ಗೇನ್ ತೆರಿಗೆ ಅಷ್ಟೇ ಬೀಳಲಿದೆ. ಆದರೆ, ಕಾರ್ಪೊರೆಟ್‌ಗಳಿಗೆ ಇದರಿಂದ ಹೊರೆಯಾಗಲಿದೆ.

ಏನಿದು ಬೈಬ್ಯಾಕ್‌?

ಬೈಬ್ಯಾಕ್‌ ಅಂದರೆ ಕಂಪನಿಯು ತನ್ನ ಷೇರುಗಳನ್ನು ಮಾರುಕಟ್ಟೆಯಿಂದ ಅಥವಾ ನೇರವಾಗಿ ಷೇರುದಾರರಿಂದ ಖರೀದಿಸುವುದಾಗಿದೆ. ಸಾಮಾನ್ಯವಾಗಿ ಕಂಪನಿ ಕೈಯಲ್ಲಿ ಹೆಚ್ಚುವರಿ ಹಣ ಇದ್ದಾಗ ಮತ್ತು ಕಂಪನಿಯ ಮೇಲಿನ ವಿಶ್ವಾಸವನ್ನು ಹೆಚ್ಚಿಸಲು ಈ ರೀತಿ ಬೈಬ್ಯಾಕ್‌ ಮಾಡುತ್ತಿದೆ. ಹಿಂದೆ ಬೈಬ್ಯಾಕ್‌ ಮೇಲಿನ ತೆರಿಗೆ ಗೊಂದಲಕಾರಿಯಾಗಿತ್ತು. ಹಿಂದೆ ಬೈಬ್ಯಾಕ್‌ನಿಂದ ಬರುವ ಹಣದ ಮೇಲೆ ಡಿವಿಡೆಂಡ್‌ ರೀತಿ ತೆರಿಗೆ ವಿಧಿಸಲಾಗುತ್ತಿತ್ತು. ಷೇರುದಾರರ ಐಟಿ ಸ್ಲ್ಯಾಬ್‌ ಆಧಾರದ ಮೇಲೆ ಈ ತೆರಿಗೆ ಬೀಳುತ್ತಿತ್ತು. ಆದರೆ, ಇದೀಗ ಕ್ಯಾಪಿಟಲ್‌ ಗೈನ್‌ ಟ್ಯಾಕ್ಸ್‌ ಅಷ್ಟೇ ಬಳಲಿದೆ.

ಸಣ್ಣ ಹೂಡಿಕೆದಾರರ ಮೇಲೆ ಏನು ಪರಿಣಾಮ?

ಸಾಮಾನ್ಯ ಹೂಡಿಕೆದಾರನೊಬ್ಬನ ಬಳಿ ನಿರ್ದಿಷ್ಟ ಕಂಪನಿಯೊಂದರ ತಲಾ 800 ರುಪಾಯಿ ಮೌಲ್ಯದ 100 ಷೇರು ಇದೆ ಅಂತಿಟ್ಟುಕೊಳ್ಳಿ. ಆ ಕಂಪನಿ 1000 ರುಪಾಯಿಗೆ ಷೇರು ಬೈಬ್ಯಾಕ್‌ ಘೋಷಿಸಿದಾಗ ಅದರಲ್ಲಿ ಪಾಲ್ಗೊಂಡು ಎಲ್ಲಾ ಷೇರು ಒಪ್ಪಿಸಿದರೆ ಆತನಿಗೆ 20,000 ಲಾಭ ಸಿಕ್ಕಂತಾಗುತ್ತದೆ. ಆಗ, ಈ ಲಾಭದ ಮೇಲೆ ಅಲ್ಪಾವಧಿ(ಎಸ್‌ಟಿಜಿ) ಅಥವಾ ದೀರ್ಘಾವಧಿ(ಎಲ್‌ಟಿಜಿ) ಕ್ಯಾಪಿಟಲ್‌ ಗೇನ್‌ ಆಧಾರದಲ್ಲಿ ತೆರಿಗೆ ಬೀಳುತ್ತದೆ. ಹೆಚ್ಚುವರಿ ಬೈಬ್ಯಾಕ್‌ ತೆರಿಗೆ ವಿಧಿಸಲ್ಲ. ಒಂದು ವೇಳೆ ಆ ಷೇರುದಾನ ಪ್ರತಿ ಷೇರು ಖರೀದಿ ದರ ಬೈಬ್ಯಾಕ್‌ಗಿಂತ ಹೆಚ್ಚಿದ್ದರೆ, ಆತ ಷೇರುಗಳನ್ನು ಬೈಬ್ಯಾಕ್‌ ವೇಳೆ ಒಪ್ಪಿಸಿದರೆ ಆ ಕ್ಯಾಪಿಟಲ್‌ ನಷ್ಟವನ್ನು ಕ್ಯಾರಿಫಾರ್ವರ್ಡ್‌ ಮಾಡಬಹುದಾಗಿದೆ.

ಕಂಪನಿಯ ಪ್ರವರ್ತಕರ ಮೇಲೆ ‍ಪರಿಣಾಮ ಹೇಗೆ?

ಕಂಪನಿಯ ಪ್ರವರ್ತಕರು ಷೇರು ನೀಡಿ 5 ತೋಟಿ ರು. ಲಾಭ ಮಾಡಿಕೊಂಡರೆ ಮೊದಲ 5 ಕೋಟಿ ರು. ಮೇಲೆ ಕ್ಯಾಪಿಟಲ್‌ ಲಾಭದ ತೆರಿಗೆ ಹಾಕಲಾಗುತ್ತದೆ. ಆ ಬಳಿಕ ಹೆಚ್ಚುವರಿ ಬೈಬ್ಯಾಕ್‌ ತೆರಿಗೆ ವಿಧಿಸಲಾಗುತ್ತದೆ. ಕಾರ್ಪೊರೇಟರ್‌ ಪ್ರವರ್ತಕರಾಗಿದ್ದರೆ ಸರಿಸುಮಾರು ಶೇ.22ರಷ್ಟು ತೆರಿಗೆ ಬಿದ್ದರೆ, ಕಾರ್ಪೊರೇಟೇತರ ಪ್ರವರ್ತಕರ ಮೇಲೆ ಸರಿಸುಮಾರು ಶೇ.30ರಷ್ಟು ತೆರಿಗೆ ಹೊರೆ ಬೀಳಲಿದೆ.



Source link

Leave a Reply

Your email address will not be published. Required fields are marked *