Headlines

Dhanush-Vignesh Fallout: ಧನುಷ್ ಜೊತೆಗಿನ ಮುನಿಸಿನ ಬಗ್ಗೆ ವಿಘ್ನೇಶ್ ಶಿವನ್ ಭಾವುಕ ಮಾತು: ಕಾರಣ ನಯನತಾರಾನಾ? | Vignesh Shivan Dhanush Relationship Issue Nayanthara Documentary Legal Notice Gvd

ವಿಘ್ನೇಶ್ ಶಿವನ್ ಮತ್ತು ಧನುಷ್ ನಡುವಿನ ಸಂಘರ್ಷ 2024ರ ಆರಂಭದಲ್ಲಿ ಶುರುವಾಯ್ತು. ವಿಘ್ನೇಶ್ ನಿರ್ದೇಶಿಸಿ, ನಯನತಾರಾ ನಟಿಸಿದ್ದ ‘ನಾನುಂ ರೌಡಿದಾನ್’ ಚಿತ್ರವನ್ನು ಧನುಷ್ ನಿರ್ಮಿಸಿದ್ದರು.

ನಯನತಾರಾ ಅವರ ಪತಿ ಹಾಗೂ ನಿರ್ದೇಶಕ ವಿಘ್ನೇಶ್ ಶಿವನ್, ನಟ ಧನುಷ್ ಅವರೊಂದಿಗಿನ ತಮ್ಮ ಮುನಿಸು ಮತ್ತು ಸದ್ಯದ ಸಂಬಂಧದ ಸ್ಥಿತಿಯ ಬಗ್ಗೆ ಭಾವುಕವಾಗಿ ಮಾತನಾಡಿದ್ದಾರೆ. ವಿಘ್ನೇಶ್ ಶಿವನ್ ಮತ್ತು ಧನುಷ್ ನಡುವಿನ ಸಂಘರ್ಷ 2024ರ ಆರಂಭದಲ್ಲಿ ಶುರುವಾಯ್ತು. ವಿಘ್ನೇಶ್ ನಿರ್ದೇಶಿಸಿ, ನಯನತಾರಾ ನಟಿಸಿದ್ದ ‘ನಾನುಂ ರೌಡಿದಾನ್’ ಚಿತ್ರವನ್ನು ಧನುಷ್ ನಿರ್ಮಿಸಿದ್ದರು.

ಈ ಚಿತ್ರದ 3 ಸೆಕೆಂಡಿನ ದೃಶ್ಯವನ್ನು ‘Nayanthara: Beyond the Fairytale’ ಎಂಬ ನಯನತಾರಾ ಮದುವೆಯ ಡಾಕ್ಯುಮೆಂಟರಿಯಲ್ಲಿ ಬಳಸಿದ್ದಕ್ಕೆ, ಧನುಷ್ 10 ಕೋಟಿ ರೂ. ಪರಿಹಾರ ಕೇಳಿ ಲೀಗಲ್ ನೋಟಿಸ್ ಕಳುಹಿಸಿದ್ದರು. ಇದು ನಯನತಾರಾ ಮತ್ತು ವಿಘ್ನೇಶ್ ಶಿವನ್‌ಗೆ ದೊಡ್ಡ ಆಘಾತ ನೀಡಿತ್ತು. ಸದ್ಯ ತಮ್ಮ ಹೊಸ ಚಿತ್ರ ‘ಲವ್ ಇನ್ಶೂರೆನ್ಸ್ ಕಂಪನಿ’ (LIC) ಬಿಡುಗಡೆಗೆ ಸಿದ್ಧವಾಗುತ್ತಿರುವ ವಿಘ್ನೇಶ್ ಶಿವನ್, ಇತ್ತೀಚೆಗೆ ಗೋಪಿನಾಥ್ ಅವರೊಂದಿಗಿನ ಸಂದರ್ಶನದಲ್ಲಿ ಧನುಷ್ ಜೊತೆಗಿನ ಸಂಬಂಧದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

“ನನಗೆ ನಟ ಧನುಷ್ ಅಂದ್ರೆ ತುಂಬಾ ಇಷ್ಟ. ನಟನಿಗಿಂತ ಹೆಚ್ಚಾಗಿ ಅವರನ್ನು ಉನ್ನತ ಸ್ಥಾನದಲ್ಲಿಟ್ಟಿದ್ದೇನೆ. ಜುಲೈ 28 ಧನುಷ್ ಹುಟ್ಟುಹಬ್ಬ. ಅದೇ ಜುಲೈ 28ರಂದು ನಮ್ಮಪ್ಪ ತೀರಿಕೊಂಡರು. ನಾನು ಧನುಷ್‌ನಲ್ಲಿ ನಮ್ಮಪ್ಪನನ್ನು ಕಾಣುತ್ತೇನೆ. ಅಷ್ಟರಮಟ್ಟಿಗೆ ಅವರು ನನಗೆ ಇಷ್ಟ. ಆದರೆ, ಕೆಲವೊಮ್ಮೆ ಯಾಕೆ ಹೀಗೆ ಭಿನ್ನಾಭಿಪ್ರಾಯ ಬರುತ್ತೆ ಅಂತ ಅರ್ಥವಾಗಲ್ಲ” ಎಂದಿದ್ದಾರೆ.

ನನ್ನ ಜೀವನದ ದೊಡ್ಡ ನಷ್ಟ

“ಸನ್ನಿವೇಶಗಳು ಹಾಗೆ ಮಾಡಿಬಿಟ್ಟವು. ಧನುಷ್ ಜೊತೆಗಿನ ನನ್ನ ಸ್ನೇಹ ಮುರಿದಿದ್ದು ನನ್ನ ಜೀವನದ ದೊಡ್ಡ ನಷ್ಟವೆಂದು ಭಾವಿಸುತ್ತೇನೆ. ಇವತ್ತು ನಾನಿಲ್ಲಿ ಇರುವುದಕ್ಕೆ ಧನುಷ್ ಅವರೇ ಕಾರಣ. ‘ವೇಲೈಯಿಲ್ಲಾ ಪಟ್ಟದಾರಿ’ ಚಿತ್ರದ ಶೂಟಿಂಗ್ ವೇಳೆ 2 ವರ್ಷಕ್ಕೂ ಹೆಚ್ಚು ಕಾಲ ಅವರ ಜೊತೆಯಲ್ಲೇ ಇದ್ದೆ. ಅವರು ಊಟ ಮಾಡಿದ ಮೇಲೆಯೇ ನಾನು ಊಟ ಮಾಡುತ್ತಿದ್ದೆ. ಅಂತಹ ಸಂಬಂಧ ನಮ್ಮದಾಗಿತ್ತು” ಎಂದು ವಿಘ್ನೇಶ್ ಶಿವನ್ ಹೇಳಿದ್ದಾರೆ.

Source link

Leave a Reply

Your email address will not be published. Required fields are marked *