ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ನಡೆದಿದ್ದ ಸಾಫ್ಟ್ವೇರ್ ಇಂಜಿನಿಯರ್ ಶರ್ಮಿಳಾ ಅವರ ನಿಗೂಢ ಸಾವು ಪ್ರಕರಣಕ್ಕೆ ತಿರುವು ಸಿಕ್ಕಿದೆ. ಅತ್ಯಾಚಾರಕ್ಕೆ ಯತ್ನಿಸಿ ವಿಫಲನಾದ ನೆರೆಮನೆಯ 18 ವರ್ಷದ ಯುವಕನೇ ಆಕೆಯನ್ನು ಕೊಲೆ ಮಾಡಿರುವುದು ತನಿಖೆಯಲ್ಲಿ ಬಯಲಾಗಿದೆ.
ಬೆಂಗಳೂರು (ಫೆ. 20): ನಗರದ ರಾಮಮೂರ್ತಿ ನಗರದಲ್ಲಿ ನಡೆದಿದ್ದ ಸಾಫ್ಟ್ವೇರ್ ಇಂಜಿನಿಯರ್ ಶರ್ಮಿಳಾ ಅವರ ನಿಗೂಢ ಸಾವು ಪ್ರಕರಣ ಈಗ ಭೀಕರ ತಿರುವು ಪಡೆದುಕೊಂಡಿದೆ. ನೆರೆಮನೆಯ ಯುವಕನ ಕಾಮೋನ್ಮಾದಕ್ಕೆ ಮಹಿಳಾ ಟೆಕ್ಕಿ ಬಲಿಯಾಗಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ.
ಮೂರು ಬಾರಿ ರೆಕ್ಕಿ ನಡೆಸಿ ಕೃತ್ಯ ಎಸಗಿದ್ದ ಹಂತಕ!
ಜನವರಿ 3ರಂದು ಸುಬ್ರಮಣ್ಯ ಲೇಔಟ್ನಲ್ಲಿ ನಡೆದಿದ್ದ ಈ ಘಟನೆಯ ಆರೋಪಿ, 18 ವರ್ಷದ ಕರ್ನಾಲ್ ಕುರೈ ಎಂಬಾತನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದಾಗ ಸ್ಫೋಟಕ ಸತ್ಯಗಳು ಹೊರಬಂದಿವೆ. ಶರ್ಮಿಳಾ ಅವರ ಮನೆಗೆ ನುಗ್ಗುವುದು ಹೇಗೆ ಮತ್ತು ಕೃತ್ಯದ ನಂತರ ಎಸ್ಕೇಪ್ ಆಗುವುದು ಹೇಗೆ ಎಂಬ ಬಗ್ಗೆ ಈತ ಮೂರು ಬಾರಿ ಸ್ಥಳ ಪರಿಶೀಲನೆ (ರೆಕ್ಕಿ) ನಡೆಸಿದ್ದ ಎಂಬ ಆಘಾತಕಾರಿ ಮಾಹಿತಿ ಲಭ್ಯವಾಗಿದೆ.
ಅತ್ಯಾ೧ಚಾರಕ್ಕೆ ಯತ್ನ ಬೇಡಿಕೊಂಡರೂ ಬಿಡದ ವಿಕೃತ ಮತಿ
ಮನೆಯ ಸ್ಲೈಡ್ ಡೋರ್ ಮೂಲಕ ಹಿಂಬದಿಯಿಂದ ನುಗ್ಗಿದ ಹಂತಕ, ಅತ್ಯಾ೧ಚಾರಕ್ಕೆ ಯತ್ನಿಸಿದ್ದ ವೇಳೆ ಹಂತಕ ವಿಕೃತಿ ಮೆರೆದಿದ್ದಾನೆ. ಮನೆಯ ಸ್ಲೈಡ್ ಡೋರ್ ಓಪನ್ ಮಾಡಿ ಹಿಂಬದಿಯಿಂದ ಬಂದು ಹಿಡಿದುಕೊಂಡಿದ್ದ ಕಾಮುಕ. ಈ ವೇಳೆ ಯುವತಿ ಪ್ರತಿರೋಧ ಒಡ್ಡಿದ್ದು, ಒದ್ದಾಡಿದ್ದಾಗ ಸೋಪಾಗೆ ಶರ್ಮಿಳಾ ತಲೆ ತಗುಲಿ ತೀವ್ರ ರಕ್ತಸ್ರಾವವಾಗಿದೆ ಆದ್ರೂ ಬಿಡದೆ ಶರ್ಮಿಳಾನ್ನು ಹಿಡಿದುಕೊಂಡು ದುರುಳ ಅತ್ಯಾ೧ಚಾರಕ್ಕೆ ಯತ್ನಿಸಿದ್ದಾನೆ. ಈ ವೇಳೆ ಶರ್ಮಿಳಾ ಬಿಟ್ಟುಬಿಡುವಂತೆ ಬೇಡಿಕೊಂಡಿದ್ದಾಳೆ. ಕೈಮುಗಿದಿದ್ದಾಳೆ. ಆದ್ರೂ ಎರಡೂ ಕೈಗಳಿಂದ ಕತ್ತು ಹಿಸುಕಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.
ಬಲತ್ಕಾರ ವೇಳೆ ಶೀಘ್ರ ಸ್ಕಲನವಾಗಿಬಿಡ್ತು..!
ಕೊಲೆಯ ನಂತರ ಆರೋಪಿ ತೋರಿದ ವಿಕೃತಿ ಅಷ್ಟಕ್ಕಲ್ಲ. ಕುತ್ತಿಗೆ ಹಿಸುಕಿ ಕೊಲೆ ಮಾಡಿದ ಬಳಿಕ ತಾನೇ ಯುವತಿಯ ರಕ್ತಸಿಕ್ತ ಬಟ್ಟೆಗಳನ್ನ ಬಿಚ್ಚಿ ಅದೇ ಬಟ್ಟೆಯಲ್ಲಿ ರಕ್ತಸ್ರಾವವಾಗಿರುವ ಭಾಗ ಒರೆಸಿ ನೀರಿನಲ್ಲಿ ತೊಳೆದಿದ್ದಾನೆ. ಬಟ್ಟೆ ಬಿಚ್ಚಿದ ವೇಳೆಯೂ ಅತ್ಯಾ೧ಚಾರಕ್ಕೆ ಯತ್ನಿಸಿರುವ ಕ್ರೂರಿ, ಆದರೆ ಶೀಘ್ರ ಸ್ಕಲನವಾಗಿಬಿಡ್ತು ಎಂದು ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ. ಕಾಮುಕನ ಅಟ್ಟಹಾಸ ಕೇಳಿ ಪೊಲೀಸರೇ ಬೆಚ್ಚಿಬಿದ್ದಾರೆ. ಬಳಿಕ ಬೀರುವಿನಲ್ಲಿದ್ದ ಬಟ್ಟೆಗಳನ್ನ ತಂದು ತಾನೇ ಯುವತಿಗೆ ಬಟ್ಟೆ ತೊಡೆಸಿದ್ದೆನೆ ಅನಂತರ ಟಾಪ್ ಸೇರಿ ಬಟ್ಟೆಗಳನ್ನ ಮಂಚದ ಮೇಲಿಟ್ಟು ಏನೂ ಅರಿಯದವನಂತೆ ಯುವತಿಯನ್ನ ಅಂಗಾತ ಮಲಗಿಸಿ. ತಿಶ್ಯು ಪೇಪರ್ಗೆ ಬೆಂಕಿ ಹಚ್ಚಿದ್ದಾನೆ ಆದರೆ ಈ ವೇಳೆ ಪ್ಯಾಂಟ್ ಮಿಸ್ ಆಗಿದ್ದು, ಅದನ್ನು ಪಕ್ಕದ ಮನೆಯ ಮರದ ಮೇಲೆ ಬಿಸಾಡಿ ಹೋಗಿದ್ದಾನೆ. ಸಾಕ್ಷ್ಯ ನಾಶಪಡಿಸಲು ಮನೆಯಲ್ಲಿ ಟಿಶ್ಯೂ ಪೇಪರ್ ಬಳಸಿ ಬೆಂಕಿ ಹಚ್ಚಿದ್ದರಿಂದ ಹೊಗೆ ತುಂಬಿಕೊಂಡು ಫಿಂಗರ್ ಪ್ರಿಂಟ್ ಸೇರಿದಂತೆ ಪ್ರಮುಖ ಸಾಕ್ಷ್ಯಗಳು ನಾಶವಾಗಿವೆ. ಯುವತಿಯ ಮೊಬೈಲ್ ಫೋನ್ ಅನ್ನು ಕೂಡ ಈತ ಧ್ವಂಸಗೊಳಿಸಿದ್ದಾನೆ.
ಪೊಲೀಸರಿಗೆ ಸವಾಲಾದ ಸಾಕ್ಷ್ಯ ಸಂಗ್ರಹ
ಅಕ್ಸೆಂಚರ್ ಕಂಪನಿಯ ಉದ್ಯೋಗಿಯಾಗಿದ್ದ ಶರ್ಮಿಳಾ ಅವರ ಕೊಲೆ ಪ್ರಕರಣದಲ್ಲಿ ಹಂತಕ ಅತ್ಯಂತ ಚಾಣಾಕ್ಷತನದಿಂದ ಸಾಕ್ಷ್ಯ ನಾಶಪಡಿಸಿದ್ದಾನೆ. ಮನೆಯಲ್ಲಿ ಫಿಂಗರ್ ಪ್ರಿಂಟ್ ಸಿಗದಂತೆ ಬೆಂಕಿ ಹಚ್ಚಿರುವುದು ಪೊಲೀಸರಿಗೆ ತಲೆನೋವಾಗಿದೆ. ಸದ್ಯ ಅತ್ಯಾ೧ಚಾರ ಯತ್ನದ ಕುರಿತಾದ ಎಫ್ಎಸ್ಎಲ್ (FSL) ವರದಿಗಾಗಿ ಪೊಲೀಸರು ಕಾಯುತ್ತಿದ್ದು, ಅದೇ ಈ ಪ್ರಕರಣದ ಪ್ರಮುಖ ಸಾಕ್ಷ್ಯವಾಗಲಿದೆ.
