Headlines

Civic workers save victim ಗಾಯಾಳುವನ್ನು ಕಸದ ಗಾಡಿಯಲ್ಲಿ ಆಸ್ಪತ್ರೆ ಸಾಗಿಸಿ ಮಾನವೀಯತೆ ಮೆರೆದ ಪೌರ ಕಾರ್ಮಿಕರು | Sanitation Workers Use Garbage Vehicle To Transport Accident Victim For Emergency Care

ಗಾಯಾಳುವನ್ನು ಕಸದ ಗಾಡಿಯಲ್ಲಿ ಆಸ್ಪತ್ರೆ ಸಾಗಿಸಿ ಮಾನವೀಯತೆ ಮೆರೆದ ಪೌರ ಕಾರ್ಮಿಕರು, ನರಳಾಡುತ್ತಿದ್ದ ಗಾಯಾಳುವನ್ನು ತಕ್ಷಣವೇ ಆಸ್ಪತ್ರೆ ಸಾಗಿಸಲು ವಾಹನ ಇರಲಿಲ್ಲ. ಇತ್ತ ಆ್ಯಂಬುಲೆನ್ಸ್ ವಿಳಂಬವಾಗಿತ್ತು. ಹೀಗಾಗಿ ಪೌರಕಾರ್ಮಿಕರು ನೆರವು ನೀಡಿದ್ದಾರೆ. 

ತುಮಕೂರು (ಏ.13) ಅಪಘಾತದಲ್ಲಿ ಗಾಯಗೊಂಡು ನರಳಾಡುತ್ತಿದ್ದ ಗಾಯಾಳುವನ್ನು ತಕ್ಷಣಕ್ಕೆ ಆಸ್ಪತ್ರೆ ಸಾಗಿಸಲು ಯಾವುದೇ ವಾಹನಗಳಿದ್ದ ಕಾರಣ ತಕ್ಷಣವೇ ಪೌರಕಾರ್ಮಿಕರು ನೆರವಿನ ಹಸ್ತಚಾಚಿದ ಘಟನೆ ನಡೆದಿದೆ. ತುಮಕೂರಿನಲ್ಲಿ ನಡೆದ ಬೈಕ್ ಆಫಘಾತದಲ್ಲಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದ. ಗಾಯಾಳುವನ್ನು ಆಸ್ಪತ್ರೆ ಸಾಗಿಸಲು ಯಾವುದೇ ವಾಹನ ಇರಲಿಲ್ಲ. ಆ್ಯಂಬುಲೆನ್ಸ್ ಸೇವೆಯಿಂದ ಸ್ಪಂದನೆ ವ್ಯಕ್ತವಾಗದ ಕಾರಣ ಪೌರ ಕಾರ್ಮಿಕರು ನೆರವಿಗೆ ಧಾವಿಸಿದ್ದಾರೆ. ಕಸವನ್ನು ಚೆಲ್ಲಿ ಕಸದ ಲಾರಿಯಲ್ಲೇ ಗಾಯಾಳುವನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ ಘಟನೆ ನಡೆದಿದೆ.

ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಅವಳಗೆರೆ ಬಳಿ ಲಾರಿ ಹಾಕೂ ಬೈಕ್ ನಡುವೆ ಅಪಘಾತ ಸಂಭವಿಸಿದೆ. ಪುನೀತ್ ಅಪಘಾತದಲ್ಲಿ ಗಾಯಗೊಂಡು ನರಳಾಡುತ್ತಿದ್ದ, ಯಾರೂ ಕೂಡ ಪುನೀತ್ ಆಸ್ಪತ್ರೆ ದಾಖಲಿಸಲು ಮುಂದಾಗಲಿಲ್ಲ. ಇತ್ತ ಆ್ಯಂಬುಲೆನ್ಸ್‌ಗೆ ಕರೆ ಮಾಡಿದರೆ ಸರಿಯಾದ ಸ್ಪಂದನೆ ಸಿಗಲಿಲ್ಲ. ಇತ್ತ ಪುನೀತ್ ನರಳಾಟ ತೀವ್ರಗೊಂಡಿತ್ತು. ನಡು ರಸ್ತೆಯಲ್ಲೇ ಬಿದ್ದಿದ್ದ ಪುನೀತ್‌ನನ್ನು ಆಸ್ಪತ್ರೆಗೆ ದಾಖಲಿಸಲು ಪೌರ ಕಾರ್ಮಿಕರು ಮುಂದಾಗಿದ್ದಾರೆ.

ಕಸದ ಗಾಡಿಯಲ್ಲೇ ಆಸ್ಪತ್ರೆ ಕರೆದೊಯ್ಡ ಪೌರ ಕಾರ್ಮಿಕರು

ಕಸ ತುಂಬಿಕೊಂಡು ತೆರಳುತ್ತಿದ್ದ ಪೌರ ಕಾರ್ಮಿಕರು ಇದೇ ರಸ್ತೆಯಲ್ಲಿ ಆಗಮಿಸಿದ್ದಾರೆ. ಈ ವೇಳೆ ಪುನೀತ್ ನರಳಾಟ ನೋಡಿ ಆಸ್ಪತ್ರೆ ದಾಖಳಿಸಲು ವಾಹನದ ನೆರವು ಕೋರಿದ್ದಾರೆ. ಆದರೆ ತಕ್ಷಣಕ್ಕೆ ಯಾವುದೇ ವಾಹನ ಸಿಗದ ಕಾರಣ, ಪೌರ ಕಾರ್ಮಿಕರು ತುಂಬಿದ್ದ ಕಸವನ್ನು ರಸ್ತೆ ಬದಿಯಲ್ಲಿ ಚೆಲ್ಲಿ ಅದೇ ಕಸದ ಗಾಡಿಯಲ್ಲಿ ಗಾಯಾಳು ಪುನೀತ್‌ನನ್ನು ಚಿಕ್ಕನಾಯಕನಹಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಗಾಯಾಳುಗೆ ಚಿಕ್ಕನಾಯಕನಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಮೋಟಿಹಳ್ಳಿ ನಿವಾಸಿಯಾಗಿರುವ ಪುನೀತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತಕ್ಕ ಸಮಯದಲ್ಲಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಸಿಗುವಂತೆ ಮಾಡಿದ ಕಾರಣ ಭಾರಿ ಅಪಾಯ ತಪ್ಪಿದೆ. ಪೌರ ಕಾರ್ಮಿಕರ ಕರ್ತವ್ಯ ಪ್ರಜ್ಞೆಗೆ ಸಾರ್ವಜನಿಕ ವಲಯದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

Source link

Leave a Reply

Your email address will not be published. Required fields are marked *