
ವಿಶ್ವದ ಅತೀದೊಡ್ಡ ಗ್ಯಾಸ್ ಘಟಕದ ಮೇಲೆ ಇರಾನ್ ದಾಳಿ, ಭಾರತ ಸೇರಿ ಹಲವು ದೇಶದಲ್ಲಿ ಹೆಚ್ಚಿದ ಆತಂಕ, ಗ್ಯಾಸ್ ಘಟಕ ಸ್ಥಗಿತಗೊಂಡಿದೆ. ಇದರಿಂದ ಗ್ಯಾಸ್ ಪೂರೈಕೆಯಲ್ಲಿ ಭಾರಿ ವ್ಯತ್ಯಯವಾಗಲಿದೆ.
ಖತಾರ್ (ಮಾ.19) ವಿಶ್ವದ ಅತೀ ದೊಡ್ಡ ಗ್ಯಾಸ್ ಘಟಕವಾಗಿರುವ ರಾಸ್ ಲಫನ್ ಮೇಲೆ ಇರಾನ್ ಮಿಸೈಲ್ ದಾಳಿ ಮಾಡಿದೆ. ಖತಾರ್‌ನಲ್ಲಿರುವ ಈ ಘಟಕದ ಮೇಲೆ ಇರಾನ್ ಮಿಸೈಲ್ ದಾಳಿಯಿಂದ ಘಟಕ ಸಂಪೂರ್ಣ ಸ್ಥಗಿತಗೊಂಡಿದೆ. ಭಾರತ ಸೇರಿದಂತೆ ಹಲವು ದೇಶಗಳಿಗೆ ಗ್ಯಾಸ್ ಪೂರೈಕೆ ಮಾಡುತ್ತಿರುವ ಈ ಘಟಕ ಸ್ಥಗಿತಗೊಂಡಿರುವ ಕಾರಣ ಗ್ಯಾಸ್ ಪೂರೈಕೆ ಸಮಸ್ಯೆ ತೀವ್ರಗೊಳ್ಳಲಿದೆ. ಇರಾನ್ ದಾಳಿ ಬೆನ್ನಲ್ಲೇ ಖತಾರ್ ವಿದೇಶಾಂಗ ಸಚಿವಾಲಯ ಪ್ರಕಟಣೆ ಹೊರಡಿಸಿದೆ.
ಪ್ರಾಣಹಾನಿಯಾಗಿಲ್ಲ, ಘಟಕ ಸ್ಥಗಿತ
ಖತಾರ್‌ನಲ್ಲಿ ರಾಸ್ ಲಫಾನ ಗ್ಯಾಸ್ ಘಟಕ ವಿಶ್ವದಲ್ಲೇ ಅತೀದೊಡ್ಡ ಘಟಕಾಗಿದೆ. ಇದರ ಮೇಲೆ ಇರಾನ್ ಮಿಸೈಲ್ ಮೂಲಕ ದಾಳಿ ಮಾಡಿದೆ. ಹೀಗಾಗಿ ಘಟಕ ಸ್ಥಗಿತಗೊಂಡಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ. ಗ್ಯಾಸ್ ಸೋರಿಕೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಖತಾರ್ ವಿದೇಶಾಂಗ ಸಚಿವಾಲಯ ಹೇಳಿದೆ. ಇರಾನ್ ದಾಳಿ ಗಲ್ಫ್ ರಾಷ್ಟ್ರದ ಮೇಲೆ ನಡೆಯುತ್ತಿದೆ. ಇದು ಸರಿಯಲ್ಲ. ಈಗಾಗಲೇ ಹಲವು ಎಚ್ಚರಿಕೆ ನೀಡಿದರೂ ಇರಾನ್ ಗಲ್ಫ್ ರಾಷ್ಟ್ರಗಳ ಗುರಿಯಾಗಿಸಿ ದಾಳಿ ಮಾಡುತ್ತಿದೆ ಎಂದು ಖತಾರ್ ಹೇಳಿದೆ.
ಇಸ್ರೇಲ್, ಅಮೆರಿಕ ಮೇಲಿನ ಕೋಪ
ಇರಾನ್ ನೇರವಾಗಿ ಅಮೆರಿಕ ಹಾಗೂ ಇಸ್ರೇಲ್ ಮೇಲೆ ದಾಳಿ ಮಾಡುತ್ತಿಲ್ಲ. ಅಮೆರಿಕ ಮೇಲೆ ದಾಳಿ ಅಸಾಧ್ಯವಾಗಿದೆ. ಇತ್ತ ಇಸ್ರೇಲ್ ಮೇಲೆ ಮಿಸೈಲ್ ದಾಳಿ ಮಾಡುತ್ತಿದ್ದರೂ ಇಸ್ರೇಲ್ ಐಯನ್ ಡೋನ್ ತಂತ್ರಜ್ಞಾನದಿಂದ ಬಹುತೇಕ ಮಿಸೈಲ್ ಹಾಗೂ ಡ್ರೋನ್ ಆಗಸದಲ್ಲಿ ಭಸ್ಮವಾಗುತ್ತಿದೆ. ಇದರಿಂದ ಇರಾನ್ ನೇರವಾಗಿ ಗಲ್ಫ್ ರಾಷ್ಟ್ರಗಳ ಮೇಲೆ ದಾಳಿ ಮಾಡುತ್ತಿದೆ. ಗಲ್ಫ್ ರಾಷ್ಟ್ರಗಳಲ್ಲಿ ಅಮರಿಕಾ ಸೇನಾ ನೆಲೆಗಳಿವೆ. ಇದು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಇದನ್ನು ಗುರಿಯಾಗಿಸಿ ಇರಾನ್ ದಾಳಿ ಮಾಡುತ್ತಿದೆ. ಆದರೆ ಹಲವು ದಾಳಿಗಳು ಗುರಿ ತಪ್ಪಿ ಗಲ್ಫ್ ರಾಷ್ಟ್ರಗಳ ಪ್ರಮುಖ ಜನವಸತಿಗಳ ಮೇಲೆ ಬೀಳುತ್ತಿದೆ.
ತೈಲ, ಗ್ಯಾಸ್ ಘಟಕದ ಮೇಲೆ ದಾಳಿ ಸೂಚನೆ ನೀಡಿದ್ದ ಇರಾನ್
ಇಸ್ರೇಲ್ ಹಾಗೂ ಅಮೆರಿಕ ಮೇಲಿನ ಆಕ್ರೋಶಕ್ಕೆ ಗಲ್ಫ್ ರಾಷ್ಟ್ರಗಳ ತೈಲ ಘಟಕ, ಗ್ಯಾಸ್ ಘಟಕಗಳ ಮೇಲೆ ದಾಳಿ ಮಾಡುವುದಾಗಿ ಇರಾನ್ ಎಚ್ಚರಿಸಿತ್ತು. ಈ ಎಚ್ಚರಿಕೆ ಬೆನ್ನಲ್ಲೇ ಖತಾರ್ ರಾಸ್ ಲಫನ್ ಗ್ಯಾಸ್ ಘಟಕದ ಮೇಲೆ ದಾಳಿಯಾಗಿದೆ.
ಗ್ಯಾಸ್ ಘಟಕದ ಮೇಲಿನ ದಾಳಿಯಿಂದ ಖತಾರ್ ಕೆರಳಿದೆ. ಖತಾರ್‌ನಲ್ಲಿರುವ ಇರಾನ್ ರಾಯಭಾರ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಲಾಗಿದೆ. 24 ಗಂಟೆಯಲ್ಲಿ ಖತಾರ್ ತೊರೆಯುವಂತೆ ಸೂಚಿಸಿದೆ. ಇತ್ತ ದೇಶದ ಸೌರ್ವಭೌಮತ್ವ, ಭದ್ರತೆ ಮೇಲೆ ದಾಳಿಯಾಗಿದೆ. ಇದನ್ನು ಖತಾರ್ ಸಹಿಸುವುದಿಲ್ಲ. ಪದೇ ಪದೇ ಎಚ್ಚರಿಕೆ ನೀಡಿದರೂ ಇರಾನ್ ದಾಳಿ ಮುಂದುವರಿಸುತ್ತಿದೆ. ಇದು ಉದ್ದೇಶಪೂರ್ವಕವಾಗಿ ನಡೆಸಿದ ದಾಳಿಯಾಗಿದೆ. ಇದಕ್ಕೆ ತಕ್ಕೆ ಬೆಲೆ ತೆರಬೇಕಾಕುತ್ತದೆ ಎಂದು ಖತಾರ್ ಎಚ್ಚರಿಸಿದೆ.