ಎಟಿಸಿ ತಾಂತ್ರಿಕ ಸಮಸ್ಯೆ : ದಿಲ್ಲೀಲಿ 800 ವಿಮಾನಗಳ ವಿಳಂಬ – ಆಟೋಮ್ಯಾಟಿಕ್‌ ಮೆಸೇಜ್‌ ಸಿಸ್ಟಂನಲ್ಲಿ ದೋಷ | Atc Technical Glitch Delays 800 Flights In Delhi

ಎಟಿಸಿ ತಾಂತ್ರಿಕ ಸಮಸ್ಯೆ : ದಿಲ್ಲೀಲಿ 800 ವಿಮಾನಗಳ ವಿಳಂಬ – ಆಟೋಮ್ಯಾಟಿಕ್‌ ಮೆಸೇಜ್‌ ಸಿಸ್ಟಂನಲ್ಲಿ ದೋಷ | Atc Technical Glitch Delays 800 Flights In Delhi



ಎಟಿಸಿ ತಾಂತ್ರಿಕ ಸಮಸ್ಯೆ : ದಿಲ್ಲೀಲಿ 800 ವಿಮಾನಗಳ ವಿಳಂಬ – ಆಟೋಮ್ಯಾಟಿಕ್‌ ಮೆಸೇಜ್‌ ಸಿಸ್ಟಂನಲ್ಲಿ ದೋಷ | Atc Technical Glitch Delays 800 Flights In Delhi

ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಏರ್‌ ಟ್ರಾಫಿಕ್‌ ಕಂಟ್ರೋಲರ್‌ (ಎಟಿಸಿ) ಟವರ್‌ನಲ್ಲಿ ಶುಕ್ರವಾರ ಇಡೀ ದಿನ ತಾಂತ್ರಿಕ ದೋಷವುಂಟಾಗಿ ಸುಮಾರು 800ಕ್ಕೂ ಹೆಚ್ಚು ವಿಮಾನಗಳ ಸೇವೆ ಬಾಧಿತವಾಗಿದ್ದು, 20 ವಿಮಾನ ಹಾರಾಟ ರದ್ದಾಗಿದೆ

ನವದೆಹಲಿ: ದೇಶದ ಅತ್ಯಂತ ದಟ್ಟಣೆಯ ಏರ್ಪೋರ್ಟ್‌ ಆಗಿರುವ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಏರ್‌ ಟ್ರಾಫಿಕ್‌ ಕಂಟ್ರೋಲರ್‌ (ಎಟಿಸಿ) ಟವರ್‌ನಲ್ಲಿ ಶುಕ್ರವಾರ ಇಡೀ ದಿನ ತಾಂತ್ರಿಕ ದೋಷವುಂಟಾಗಿ ಸುಮಾರು 800ಕ್ಕೂ ಹೆಚ್ಚು ವಿಮಾನಗಳ ಸೇವೆ ಬಾಧಿತವಾಗಿದ್ದು, 20 ವಿಮಾನ ಹಾರಾಟ ರದ್ದಾಗಿದೆ. ಹೀಗಾಗಿ ಸಾವಿರಾರು ಪ್ರಯಾಣಿಕರು ಪರದಾಡಿದ್ದಾರೆ.

ದಿಲ್ಲಿ ಏರ್ಪೋರ್ಟ್ನಲ್ಲಿ ನಿತ್ಯ 1500 ವಿಮಾನಗಳ ಹಾರಾಟ

ದಿಲ್ಲಿ ಏರ್ಪೋರ್ಟ್ ನಿತ್ಯ 1500 ವಿಮಾನಗಳ ಹಾರಾಟ ನಡೆಸುತ್ತದೆ. ಇಂಥದ್ದರಲ್ಲಿ ವಿಮಾನಗಳ ಕುರಿತ ಮಾಹಿತಿಯನ್ನು ಕಂಟ್ರೋಲರ್‌ಗೆ ಕಳಿಸುವ ಆಟೋಮೆಟಿಕ್‌ ಮೆಸೇಜ್‌ ಸ್ವಿಚ್‌ ಸಿಸ್ಟಂ (ಎಎಂಎಸ್‌ಎಸ್‌)ನಲ್ಲಿ ತಾಂತ್ರಿಕ ದೋಷವುಂಟಾಗಿ ಕಂಟ್ರೋಲರ್‌ಗೆ ತಂತಾನೆ ಸಿಗಬೇಕಿದ್ದ ವಿಮಾನಗಳ ಆಗಮನ, ನಿರ್ಗಮನದ ಮಾಹಿತಿಯು ಸಿಗದೆ ಭಾರಿ ತೊಂದರೆಯಾಗಿದೆ. ಹೀಗಾಗಿ ವಿಮಾನಗಳು ಸರಿಯಾದ ಸಮಯಕ್ಕೆ ಟೇಕಾಫ್‌ ಆಗಲಿಲ್ಲ. ಅಲ್ಲದೆ, ಆಗಸದಲ್ಲಿರುವ ವಿಮಾನಗಳ ಲ್ಯಾಂಡಿಂಗ್‌ಗೆ 50 ನಿಮಿಷಗಳಿಗಿಂತ ಹೆಚ್ಚು ಕಾಲ ತಡವಾಗಿದೆ.

ಇದೆಲ್ಲದರ ಪರಿಣಾಮ 800ಕ್ಕೂ ಹೆಚ್ಚಿನ ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳು ವಿಳಂಬವಾಗಿದೆ. ಬಳಿಕ ವೈಯಕ್ತಿಕವಾಗಿ ಒಂದೊಂದೇ ವಿಮಾನಗಳ ಮಾಹಿತಿಯನ್ನು ಮ್ಯಾನ್ಯುವಲಿ ತೆಗೆದು ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು ಎಂದು ಭಾರತದ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ತಿಳಿಸಿದೆ.

ಈ ದೋಷದಿಂದಾಗಿ ವಿಮಾನ ನಿಲ್ದಾಣದ ಗೇಟ್‌, ಟರ್ಮಿನಲ್‌ಗಳಲ್ಲಿ ನೂರಾರು ಜನರು ವಿಮಾನಗಳ ಮಾಹಿತಿ ಸಿಗದೆ ಕಾಯುವಂತಾಗಿತ್ತು.

ಸೈಬರ್‌ ದಾಳಿಯಿಂದ ದೋಷ?

ಎಟಿಸಿ ತಾಂತ್ರಿಕದೋಷವು ಆಕಸ್ಮಿಕವಾಗಿಲ್ಲ. ಇದನ್ನು ಮಾಲ್ವೇರ್‌ಗಳನ್ನು ಬಳಸಿ ತೊಂದರೆಗೆ ಸಿಲುಕಿಸಲಾಗಿದೆ ಎನ್ನಲಾಗಿದೆ. ಮಾಲ್ವೇರ್ ಎಂಬುದು ಆನ್ಲೈನ್ ಮಾಹಿತಿಯನ್ನು ಕದಿಯಲು ಅಥವಾ ಅನಧಿಕೃತವಾಗಿ ಬಳಸಿಕೊಳ್ಳಲು ಬಳಸುವ ಸಾಫ್ಟ್‌ವೇರ್‌ ಸಾಧನವಾಗಿದೆ. ಇದನ್ನು ಸೈಬರ್‌ ವಂಚಕರು ಬಳಸಿರಬಹುದು ಎನ್ನಲಾಗಿದ್ದು, ಆದರೆ ಇಂಥಹ ಯಾವುದೇ ಸೈಬರ್‌ ದಾಳಿ ಆಗಿಲ್ಲ ಎಂದು ಕೇಂದ್ರ ಐಟಿ ಸಚಿವಾಲಯ ಸ್ಪಷ್ಟಪಡಿಸಿದೆ.



Source link

Leave a Reply

Your email address will not be published. Required fields are marked *