ಸಾವಿತ್ರಿಯ ಫೇಸ್‌ಬುಕ್ ಮೆಸೆಂಜರ್ ಕಾಲ್ ರಿಸೀವ್ ಮಾಡಿದ್ರೆ ಲೈಂಗಿಕ ಕ್ರಿಯೆ ಮಾಡೋ ಅಶ್ಲೀಲ ವೀಡಿಯೋ ತೋರಿಸೋದಾ? | Writer Bhanu Mushtaq Cyber Harassment Savithri Mazumdar Messenger Video Call San

ಸಾವಿತ್ರಿಯ ಫೇಸ್‌ಬುಕ್ ಮೆಸೆಂಜರ್ ಕಾಲ್ ರಿಸೀವ್ ಮಾಡಿದ್ರೆ ಲೈಂಗಿಕ ಕ್ರಿಯೆ ಮಾಡೋ ಅಶ್ಲೀಲ ವೀಡಿಯೋ ತೋರಿಸೋದಾ? | Writer Bhanu Mushtaq Cyber Harassment Savithri Mazumdar Messenger Video Call San


ಬೂಕರ್ ಪ್ರಶಸ್ತಿ ವಿಜೇತೆ, ಲೇಖಕಿ ಭಾನು ಮುಷ್ತಾಕ್ ಅವರು ಮೆಸೆಂಜರ್‌ನಲ್ಲಿ ‘ಸಾವಿತ್ರಿ ಮಜುಂದಾರ್’ ಎಂಬ ಹೆಸರಿನಿಂದ ಬಂದ ಅಸಭ್ಯ ವಿಡಿಯೋ ಕಾಲ್‌ನಿಂದಾದ ಆಘಾತಕಾರಿ ಅನುಭವವನ್ನು ಹಂಚಿಕೊಂಡಿದ್ದಾರೆ. ಈ ಘಟನೆಯು ಸೈಬರ್ ಸ್ಪ್ಯಾಮ್ ಅಥವಾ ಸೆಕ್ಸ್‌ಟಾರ್ಶನ್ ಜಾಲದ ಬಗ್ಗೆ ಅನುಮಾನ ಮೂಡಿಸಿದೆ.

ಬೆಂಗಳೂರು (ಮಾ.9): ಸಾಮಾಜಿಕ ಜಾಲತಾಣಗಳು ಜಗತ್ತನ್ನು ಹತ್ತಿರ ತಂದಿವೆಯಾದರೂ, ಅದರ ಹಿಂದಿರುವ ಕರಾಳ ಮುಖಗಳ ಪರಿಚಯ ಈಗ ಸಾಮಾನ್ಯವಾಗಿ ಎಲ್ಲರಿಗೂ ಆಗುತ್ತಿದೆ. ಸೈಬರ್‌ ಕ್ರೈಮ್‌ ಬಗ್ಗೆ ಸಾಕಷ್ಟು ವರದಿ ಆಗುತ್ತಿರುವ ಹೊತ್ತಲ್ಲಿ, ಇದು ರಾಜ್ಯದ ಪ್ರಖ್ಯಾತ ಸಾಹಿತಿಗಳನ್ನೂ ಬಿಟ್ಟಿಲ್ಲ. ಬೂಕರ್ ಪ್ರಶಸ್ತಿ ವಿಜೇತೆ, ಹಿರಿಯ ಲೇಖಕಿ ಭಾನು ಮುಷ್ತಾಕ್ ಅವರು ಇತ್ತೀಚೆಗೆ ಸೈಬರ್ ಕ್ರಿಮಿನಲ್‌ಗಳ ವಿಕೃತಿಗೊಳಗಾದ ಘಟನೆಯನ್ನು ಹಂಚಿಕೊಂಡಿದ್ದಾರೆ.

ಶ್ರೀಲಂಕಾದ ಪ್ರವಾಸದಲ್ಲಿದ್ದಾಗ ಅವರಿಗೆ ‘ಸಾವಿತ್ರಿ ಮಜುಂದಾರ್’ ಎಂಬ ಹೆಸರಿನಿಂದ ಮೆಸೆಂಜರ್‌ನಲ್ಲಿ ವೀಡಿಯೋ ಕಾಲ್ ಬಂದಿದೆ. ಪರಿಚಿತ ಹೆಸರಿರಬಹುದೆಂದು ಅವರು ಕರೆ ಸ್ವೀಕರಿಸಿದಾಗ, ಎದುರಿಗಿದ್ದ ವ್ಯಕ್ತಿ ಅತ್ಯಂತ ಅಸಭ್ಯವಾಗಿ ತನ್ನ ಖಾಸಗಿ ಅಂಗಗಳನ್ನು ಪ್ರದರ್ಶಿಸಿ ಲೈಂಗಿಕ ವಿಕೃತಿಯನ್ನು ತೋರಿದ್ದಾನೆ.

ಈ ಬಗ್ಗೆ ಅವರು ಫೇಸ್‌ಬುಕ್‌ನಲ್ಲಿ ಇಂಥದ್ದೇ ವಿಚಾರ ಹಂಚಿಕೊಂಡಿರುವ ಗಿರಿಜಾ ಶಾಸ್ತ್ರಿ ಅವರಿಗೆ ಕಾಮೆಂಟ್‌ ಮಾಡಿದ್ದು, ‘ನಾನು ಶ್ರೀಲಂಕಾದಲ್ಲಿ ಇದ್ದೇನೆ. ನನಗೆ ಕೂಡ ಸಾವಿತ್ರಿ ಮಜಮ್ಹಾರ್ ಹೆಸರಿನಲ್ಲಿ ಮೆಸೆಂಜರ್ ವಿಡಿಯೋ ಕಾಲ್ ಬಂತು. ನಾನು ಅದನ್ನು ಸಾವಿತ್ರಿ ಮನ್ನಿಂದರ್ ಹೆಸರನ್ನು ನೋಡಿ ರಿಸೀವ್ ಮಾಡಿದೆ. ಯಾರೋ ಒಬ್ಬ ತನ್ನ ಖಾಸಗಿ ಅಂಗಗಳನ್ನು ಅತ್ಯಂತ ಅಸಭ್ಯವಾಗಿ ಪ್ರದರ್ಶಿಸಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದನ್ನು ತೋರಿಸಿದ. ನನಗೆ ಗಾಬರಿಯಾಗಿ ಅದನ್ನು ಕಟ್ ಮಾಡಿದೆ. ಇಡೀ ದಿನ ಮನಸ್ಸೆಲ್ಲಾ ವ್ಯಗ್ರವಾಗಿತ್ತು. ಶ್ರೀಲಂಕಾದಲ್ಲಿ ಇರದಿದ್ದಲ್ಲಿ ಸಾಹಿತ್ಯ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳದೆ ಇದ್ದಿದ್ದಲ್ಲಿ ಬಹುಶಃ ನಾನು ಡಿಪ್ರೆಶನ್ ಗೆ ಒಳಗಾಗುತ್ತಿದ್ದೆ. ಜೊತೆಯಲ್ಲಿ ಇರುವ ಮಗಳು ಸಮೀನಾ ತುಂಬಾ ಸಮಾಧಾನ ಮಾಡಿದಳು. ಬಹುಶ ಮೆಸೆಂಜ‌ರ್ ನಲ್ಲಿ ಬರುವ ವಿಡಿಯೋ ಕಾಲ್ಗಳನ್ನು ರಿಸೀವ್ ಮಾಡಬಾರದು ಮತ್ತು ವಾಟ್ಸಪ್ ನಲ್ಲಿ ಬರುವ ಅನ್ನೋನ್ ವಿಡಿಯೋ ಕಾಲ್ಗಳನ್ನು ಕೂಡ ದಯವಿಟ್ಟು ರಿಸೀವ್ ಮಾಡಬೇಡಿ’ ಎಂದು ಬರೆದಿದ್ದಾರೆ.

ಕೇವಲ ಭಾನು ಮುಷ್ತಾಕ್ ಮಾತ್ರವಲ್ಲ, ಗಿರಿಜಾ ಶಾಸ್ತ್ರಿ ಎನ್ನುವವರಿಗೂ ಕೂಡ ಇದೇ ಹೆಸರಿನ ಅಕೌಂಟ್‌ನಿಂದ ಪದೇ ಪದೇ ವೀಡಿಯೋ ಕರೆಗಳು ಬಂದಿವೆ. ಇದು ಕೇವಲ ಒಬ್ಬಿಬ್ಬರ ಸಮಸ್ಯೆಯಲ್ಲ, ಇದೊಂದು ವ್ಯವಸ್ಥಿತ ‘ಸೈಬರ್ ಸ್ಪ್ಯಾಮ್’ ಅಥವಾ ‘ಸೆಕ್ಸ್‌ಟಾರ್ಶನ್’ ಜಾಲವಿರಬಹುದು ಎಂಬ ಅನುಮಾನ ದಟ್ಟವಾಗಿದೆ.

ಗಿರಿಜಾ ಶಾಸ್ತ್ರಿ ಅವರು ಫೇಸ್‌ಬುಕ್‌ನಲ್ಲಿ ಈ ವಿಚಾರ ಬರೆದುಕೊಂಡಿದ್ದು, ‘ಸಾವಿತ್ರಿ ಮಜುಮ್ಹಾರ್ ಫೇಸ್‌ಬುಕ್‌ನ ಹೊಸಗೆಳತಿ. ನಾಲೈದು ದಿನಗಳಿಂದ ನನ್ನ ಮೆಸೆಂಜರ್ ಗೆ ವೀಡಿಯೋ ಕಾಲ್ ಮಾಡುತ್ತಿದ್ದಾರೆ. ನಿನ್ನೆ ರಾತ್ರಿ ಹತ್ತೂವರೆ ಮತ್ತು ಇಂದು ಬೆಳಗಿನ ಝಾವ ಐದು ಗಂಟೆಗೆ. ನಾನು ಫೋನ್ ಎತ್ತಿದರೂ, ನಾನೇ ಮಾಡಿದರೂ ಕಟ್ ಮಾಡ್ತಾರೆ. ಬಹುಶಃ ಇದು spam ಇರಬಹುದು. ಹಾಗೆಂದು ಗೂಗಲಮ್ಮ ಹೇಳ್ತಾಳೆ. ಸಾವಿತ್ರಿಯವರೇ ನಿಮ್ಮ ಅಕೌಂಟ್ ಹ್ಯಾಕ್ ಆಗಿರಬಹುದು. ಇಲ್ಲದಿದ್ದರೆ ವಿಷಯ ಏನೆಂದು ನನ್ನ ವಾಟ್ಸಾಪ್ ಗೆ ಬಂದು ತಿಳಿಸಿ’ ಎಂದು ಬರೆದಿದ್ದಾರೆ.

ಸೈಬರ್ ಸ್ಪ್ಯಾಮರ್‌ಗಳಿಂದ ರಕ್ಷಣೆ ಪಡೆಯುವುದು ಹೇಗೆ?

ಅಪರಿಚಿತ ಕರೆಗಳನ್ನು ಸ್ವೀಕರಿಸಬೇಡಿ: ಮೆಸೆಂಜರ್ ಅಥವಾ ವಾಟ್ಸಾಪ್‌ನಲ್ಲಿ ಅಪರಿಚಿತ ಸಂಖ್ಯೆ ಅಥವಾ ಅಪರಿಚಿತ ಅಕೌಂಟ್‌ಗಳಿಂದ ಬರುವ ವೀಡಿಯೋ ಕಾಲ್‌ಗಳನ್ನು ಯಾವುದೇ ಕಾರಣಕ್ಕೂ ರಿಸೀವ್ ಮಾಡಬೇಡಿ.

ಮೆಸೆಂಜರ್ ಪ್ರೈವಸಿ ಸೆಟ್ಟಿಂಗ್ಸ್: ಫೇಸ್‌ಬುಕ್ ಮೆಸೆಂಜರ್‌ನಲ್ಲಿ ನಿಮ್ಮ ಪರಿಚಿತರು ಮಾತ್ರ ಕರೆ ಮಾಡುವಂತೆ ಸೆಟ್ಟಿಂಗ್ಸ್ ಬದಲಾಯಿಸಿ. (Settings -> Privacy & Safety -> Message Delivery).

ಕ್ಯಾಮೆರಾ ಮುಚ್ಚಿಡಿ: ವೀಡಿಯೋ ಕರೆ ಸ್ವೀಕರಿಸುವುದು ಅನಿವಾರ್ಯವೆನಿಸಿದರೆ, ಮೊದಲು ಮೊಬೈಲ್‌ನ ಮುಂಭಾಗದ ಕ್ಯಾಮೆರಾವನ್ನು ಬೆರಳಿನಿಂದ ಮುಚ್ಚಿ ಆನಂತರ ಕರೆ ಸ್ವೀಕರಿಸಿ. ಎದುರಿಗಿರುವವರು ಪರಿಚಿತರೆಂದು ಖಚಿತವಾದ ಮೇಲೆ ಮಾತ್ರ ಕ್ಯಾಮೆರಾ ತೆರೆಯಿರಿ.

ಸ್ಕ್ರೀನ್ ರೆಕಾರ್ಡಿಂಗ್ ಬಗ್ಗೆ ಎಚ್ಚರ: ವಿಕೃತ ಮನಸ್ಸಿನವರು ನಿಮ್ಮ ಮುಖದ ಚಿತ್ರವನ್ನು ರೆಕಾರ್ಡ್ ಮಾಡಿಕೊಂಡು ಅದನ್ನು ಅಶ್ಲೀಲ ಚಿತ್ರಗಳಿಗೆ ಅಳವಡಿಸಿ (Deepfake) ನಿಮ್ಮನ್ನು ಬ್ಲ್ಯಾಕ್ ಮೇಲ್ ಮಾಡುವ ಸಾಧ್ಯತೆ ಇರುತ್ತದೆ.

ಬ್ಲಾಕ್ ಮತ್ತು ರಿಪೋರ್ಟ್: ಇಂತಹ ಘಟನೆ ನಡೆದ ತಕ್ಷಣ ಆ ಅಕೌಂಟ್ ಅನ್ನು ‘Report’ ಮಾಡಿ ಮತ್ತು ‘Block’ ಮಾಡಿ.



Source link

Leave a Reply

Your email address will not be published. Required fields are marked *