Headlines

Hansika Divorce: ಗಂಡನಿಂದ ದೂರವಾದ ಪುನೀತ್‌ ರಾಜ್‌ಕುಮಾರ್ ಹೀರೋಯಿನ್‌: 4 ವರ್ಷದ ದಾಂಪತ್ಯ ಜೀವನ ಅಂತ್ಯ! | Hansika Motwani And Sohael Khaturiya Officially Divorced After 4 Years Of Marriage Gvd

ನಟಿ ಹನ್ಸಿಕಾ ಮೋಟ್ವಾನಿ ಮತ್ತು ಅವರ ಪತಿ, ಉದ್ಯಮಿ ಸೊಹೇಲ್ ಖತೂರಿಯಾ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದಾರೆ. ಇಬ್ಬರೂ ಅಧಿಕೃತವಾಗಿ ವಿಚ್ಛೇದನ ಪಡೆದಿದ್ದು, ನ್ಯಾಯಾಲಯ ಇದಕ್ಕೆ ಅನುಮತಿ ನೀಡಿದೆ.

ಸ್ಯಾಂಡಲ್‌ವುಡ್‌ನಲ್ಲಿ ಪುನೀತ್‌ ರಾಜ್‌ಕುಮಾರ್ ಜೊತೆ ಬಿಂದಾಸ್ ಚಿತ್ರದಲ್ಲಿ ಅಭಿನಯಿಸಿದ ನಟಿ ಹನ್ಸಿಕಾ ಮೋಟ್ವಾನಿ ಮತ್ತು ಅವರ ಪತಿ ಸೊಹೇಲ್ ಖತೂರಿಯಾ ಅಧಿಕೃತವಾಗಿ ಬೇರ್ಪಟ್ಟಿದ್ದಾರೆ. ಮುಂಬೈನ ಬಾಂದ್ರಾ ಕೌಟುಂಬಿಕ ನ್ಯಾಯಾಲಯ ಇಬ್ಬರಿಗೂ ವಿಚ್ಛೇದನ ನೀಡಿದೆ. ಅಚ್ಚರಿ ಅಂದ್ರೆ, ಹನ್ಸಿಕಾ ಯಾವುದೇ ಜೀವನಾಂಶವನ್ನೂ ಕೇಳಿಲ್ಲ ಎನ್ನಲಾಗಿದೆ.

ನಟಿ ಹನ್ಸಿಕಾ ಮೋಟ್ವಾನಿ ಮತ್ತು ಅವರ ಪತಿ, ಉದ್ಯಮಿ ಸೊಹೇಲ್ ಖತೂರಿಯಾ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದಾರೆ. ಇಬ್ಬರೂ ಅಧಿಕೃತವಾಗಿ ವಿಚ್ಛೇದನ ಪಡೆದಿದ್ದು, ಮುಂಬೈನ ಬಾಂದ್ರಾ ಕೌಟುಂಬಿಕ ನ್ಯಾಯಾಲಯ ಇದಕ್ಕೆ ಅನುಮತಿ ನೀಡಿದೆ. ಕಳೆದ ವರ್ಷದಿಂದಲೇ ಹನ್ಸಿಕಾ ವಿಚ್ಛೇದನ ಪಡೆಯಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಆದರೆ, ಈ ಬಗ್ಗೆ ಹನ್ಸಿಕಾ ಎಲ್ಲಿಯೂ ತುಟಿ ಬಿಚ್ಚಿರಲಿಲ್ಲ.

ವರದಿಗಳ ಪ್ರಕಾರ, ಇಬ್ಬರೂ ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಇಬ್ಬರ ನಡುವಿನ ಒಪ್ಪಂದದ ಪ್ರಕಾರ, ಹನ್ಸಿಕಾ ಯಾವುದೇ ಜೀವನಾಂಶ ಅಥವಾ ಪರಿಹಾರ ಧನವನ್ನು ಕೇಳದಿರಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಮದುವೆಯಾದ ನಂತರ ಇಬ್ಬರೂ ಕೆಲವೇ ಕಾಲ ಒಟ್ಟಿಗೆ ವಾಸವಿದ್ದರು. ಆದರೆ, ಇಬ್ಬರ ನಡುವೆ ಸಾಕಷ್ಟು ಭಿನ್ನಾಭಿಪ್ರಾಯಗಳು ಮೂಡಿದ್ದವು. ಸಣ್ಣ ಸಣ್ಣ ವಿಷಯಗಳಿಗೂ ಜಗಳ ಶುರುವಾಗಿ, ಒಂದೇ ಮನೆಯಲ್ಲಿ ಇರುವುದು ಕಷ್ಟವಾಗಿತ್ತು ಎಂದು ವರದಿಗಳು ತಿಳಿಸಿವೆ.

ಚಿತ್ರರಂಗದಲ್ಲಿ ದೊಡ್ಡ ಹೆಸರು

ಹನ್ಸಿಕಾ ಮತ್ತು ಸೊಹೇಲ್ 2022ರಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದರು. ಬಾಲನಟಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟ ಹನ್ಸಿಕಾ, ನಂತರ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದರು. ಬಿ. ಉಣ್ಣಿಕೃಷ್ಣನ್ ನಿರ್ದೇಶನದ, ಮೋಹನ್‌ಲಾಲ್ ನಟನೆಯ ‘ವಿಲ್ಲನ್’ ಚಿತ್ರದ ಮೂಲಕ ಅವರು ಮಲಯಾಳಂಗೂ ಎಂಟ್ರಿ ಕೊಟ್ಟಿದ್ದರು. 2024ರಲ್ಲಿ ತೆರೆಕಂಡ ತಮಿಳಿನ ‘ಗಾರ್ಡಿಯನ್’ ಚಿತ್ರ ಹನ್ಸಿಕಾ ನಟನೆಯ ಕೊನೆಯ ಸಿನಿಮಾ.

Source link

Leave a Reply

Your email address will not be published. Required fields are marked *