ಭಾಷಣ ಮಾಡುತ್ತಿದ್ದಾಗಲೇ ಟ್ರಂಪ್ ಅತ್ಯಾಪ್ತ ಚಾರ್ಲಿ ಕಿರ್ಕ್‌ಗೆ ಗುಂಡಿಕ್ಕಿ ಹತ್ಯೆ | Donald Trump Close Friend Charlie Kirk Shot Dead At Utah Valley University Event

ಭಾಷಣ ಮಾಡುತ್ತಿದ್ದಾಗಲೇ ಟ್ರಂಪ್ ಅತ್ಯಾಪ್ತ ಚಾರ್ಲಿ ಕಿರ್ಕ್‌ಗೆ ಗುಂಡಿಕ್ಕಿ ಹತ್ಯೆ | Donald Trump Close Friend Charlie Kirk Shot Dead At Utah Valley University Event



ಭಾಷಣ ಮಾಡುತ್ತಿದ್ದಾಗಲೇ ಟ್ರಂಪ್ ಅತ್ಯಾಪ್ತ ಚಾರ್ಲಿ ಕಿರ್ಕ್‌ಗೆ ಗುಂಡಿಕ್ಕಿ ಹತ್ಯೆ | Donald Trump Close Friend Charlie Kirk Shot Dead At Utah Valley University Event

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅತ್ಯಾಪ್ತ ಚಾರ್ಲಿ ಕಿರ್ಕ್ ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಉತಾಹ್‌ ವಿಶ್ವವಿದ್ಯಾನಿಲಯದಲ್ಲಿ ಭಾಷಣ ಮಾಡುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. 

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅತ್ಯಾಪ್ತನ ಹತ್ಯೆ:

ಕನ್ಸರ್ವೇಟಿವ್‌ ಕಾರ್ಯಕರ್ತ ಹಾಗೂ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅತ್ಯಾಪ್ತ ಚಾರ್ಲಿ ಕಿರ್ಕ್ ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಅಮೆರಿಕಾದ ಉತಾಹ್‌ ವ್ಯಾಲಿಯ ವಿಶ್ವವಿದ್ಯಾನಿಲಯದಲ್ಲಿ ಭಾಷಣ ಮಾಡುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ದುಷ್ಕರ್ಮಿ ಹಾರಿಸಿದ ಒಂದೇ ಒಂದು ಗುಂಡಿನಿಂದ ಚಾರ್ಲಿ ಕಿರ್ಕ್ ಕೊನೆಯುಸಿರೆಳೆದಿದ್ದಾರೆ. ಈ ಗುಂಡಿನ ದಾಳಿಯ ನಂತರ,ವರು ಭಾಷಣ ಮಾಡುತ್ತಿದ್ದ ವಿವಿ ಕ್ಯಾಂಪಸ್‌ನ್ನೂ ಫೂರ್ತಿ ಸೀಲ್ ಮಾಡಿದ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.

ವಿಶ್ವವಿದ್ಯಾಲಯವೊಂದರಲ್ಲಿ ಭಾಷಣ ಮಾಡುತ್ತಿದ್ದಾಗಲೇ ದುರಂತ

ಟರ್ನಿಂಗ್ ಪಾಯಿಂಟ್ ಯುಎಸ್‌ಎ ಎಂಬ ಸಂಸ್ಥೆಯ ಸಿಇಒ ಕೂಡ ಆಗಿರುವ 31 ವರ್ಷದ ಚಾರ್ಲಿ ಕಿರ್ಕ್, ‘ದಿ ಅಮೆರಿಕನ್ ಕಾಮ್‌ಬ್ಯಾಕ್’ ಪ್ರೂವ್ ಮೀ ರಾಂಗ್ ಎಂಬ ಘೋಷಣೆಗಳಿಂದ ಅಲಂಕರಿಸಲ್ಪಟ್ಟಿದ್ದ ವೇದಿಕೆಯಲ್ಲಿ ಮಾತನಾಡುತ್ತಿದ್ದಾಗಲೇ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಘಟನೆಯ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚಾರ್ಲಿ ಕಿರ್‌ಕ್ ಅವರ ಸಾವಿಗೆ ಸಂತಾಪ ಸೂಚಿಸಿ ಅಮೆರಿಕಾ ರಾಷ್ಟ್ರಧ್ವಜವನ್ನು ಭಾನುವಾರದವರೆಗೆ ಅಂದರೆ 4 ದಿನಗಳ ಕಾಲ ಅರ್ಧಕ್ಕೆ ಇಳಿಸಿ ಹಾರಿಸುವಂತೆ ಸೂಚಿಸಿದ್ದಾರೆ.

ಘಟನೆಯ ಬಳಿಕ ಕಿರ್ಕ್ ಅವರು ತಮ್ಮ ಕತ್ತನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದು, ಅವರ ಗಂಟಲಿನಿಂದ ರಕ್ತ ಸುರಿಯುತ್ತಿದ್ದ ದೃಶ್ಯಗಳು ಕ್ಯಾಮರಾದಲ್ಲಿ ಸೆರೆ ಆಗಿವೆ. ಈ ಘಟನೆಯಿಂದ ಆಘಾತಕ್ಕೊಳಗಾದ ಅಲ್ಲಿದ್ದ ವಿದ್ಯಾರ್ಥಿಗಳು ಕಿರುಚುತ್ತಾ ಅಲ್ಲಿಂದ ಓಡಿ ಹೋಗಿದ್ದಾರೆ. ಘಟನೆಯ ಬಳಿಕ ಆರೋಪಿಯೋರ್ವನನ್ನು ಬಂಧಿಸಲಾಗಿದೆ ಎಂದು ಅಮೆರಿಕಾದ ಎಫ್‌ಬಿಐ ನಿರ್ದೇಶಕ ಕಾಶ್ ಪಟೇಲ್ ಟ್ವಿಟ್ ಮಾಡಿದ್ದರು. ಆದರೆ ವಿಚಾರಣೆಯ ನಂತರ ಆತ ಅಲ್ಲ ಎಂಬುದು ತಿಳಿದ ನಂತರ ಆತನನ್ನು ಬಿಡುಗಡೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.



Source link

Leave a Reply

Your email address will not be published. Required fields are marked *