Breaking: ಜಯಮಾಲ, ಸಾ.ರಾ.ಗೋವಿಂದಗೆ ಡಾ.ರಾಜ್‌ಕುಮಾರ್‌ ಪ್ರಶಸ್ತಿ, ಸುಂದರ್‌ರಾಜ್‌ಗೆ ವಿಷ್ಣುವರ್ಧನ ಪ್ರಶಸ್ತಿ ಪ್ರಕಟ! | Karnataka Awards Dr Rajkumar Vishnuvardhan Puttanna Kanagal Winners San

Breaking: ಜಯಮಾಲ, ಸಾ.ರಾ.ಗೋವಿಂದಗೆ ಡಾ.ರಾಜ್‌ಕುಮಾರ್‌ ಪ್ರಶಸ್ತಿ, ಸುಂದರ್‌ರಾಜ್‌ಗೆ ವಿಷ್ಣುವರ್ಧನ ಪ್ರಶಸ್ತಿ ಪ್ರಕಟ! | Karnataka Awards Dr Rajkumar Vishnuvardhan Puttanna Kanagal Winners San


ರಾಜ್ಯ ಸರ್ಕಾರವು 2020 ಮತ್ತು 2021ನೇ ಸಾಲಿನ ಡಾ.ರಾಜ್‌ಕುಮಾರ್‌, ಪುಟ್ಟಣ್ಣ ಕಣಗಾಲ್‌ ಹಾಗೂ ಡಾ. ವಿಷ್ಣುವರ್ಧನ್‌ ಪ್ರಶಸ್ತಿಗಳನ್ನು ಪ್ರಕಟಿಸಿದೆ.ಡಾ. ಜಯಮಾಲಾ, ಸಾ.ರಾ. ಗೋವಿಂದ್, ಎಂ.ಎಸ್. ಸತ್ಯು, ಶಿವರುದ್ರಯ್ಯ, ಪ್ರಗತಿ ಅಶ್ವಥ್ ನಾರಾಯಣ್ ಹಾಗೂ ಎಂ.ಕೆ. ಸುಂದರ್ ರಾಜ್ ಅವರು ಭಾಜನರಾಗಿದ್ದಾರೆ.

ಬೆಂಗಳೂರು (ಜ.8): ರಾಜ್ಯ ಸರ್ಕಾರ 2020 ಹಾಗೂ 2021ರ ಸಾಲಿನ ಡಾ.ರಾಜ್‌ಕುಮಾರ್‌ ಪ್ರಶಸ್ತಿ, ಪುಟ್ಟಣ್ಣ ಕಣಗಾಲ್‌ ಪ್ರಶಸ್ತಿ ಹಾಗೂ ಡಾ. ವಿಷ್ಣುವರ್ಧನ್‌ ಪ್ರಶಸ್ತಿಯನ್ನು ಪ್ರಕಟ ಮಾಡಿದೆ. 2020ರ ಸಾಲಿನ ಡಾ.ರಾಜ್‌ಕುಮಾರ್‌ ಪ್ರಶಸ್ತಿಯನ್ನು ಹಿರಿಯ ನಟಿ ಡಾ.ಜಯಮಾಲಾ ಅವರಿಗೆ ನೀಡಲಾಗಿದೆ, ಇನ್ನು 2021ರ ಸಾಲಿನ ಈ ಪ್ರಶಸ್ತಿಯನ್ನು ಹಿರಿಯ ನಿರ್ಮಾಪಕ ಸಾ.ರಾ.ಗೋವಿಂದ್‌ ಅವರಿಗೆ ಘೋಷಿಸಿಸಲಾಗಿದೆ.

ಇನ್ನು 2020ರ ಸಾಲಿನ ಪುಟ್ಟಣ್ಣ ಕಣಗಾಲ್‌ ಪ್ರಶಸ್ತಿಯನ್ನು ಹಿರಿಯ ನಿರ್ದೇಶಕ ಹಾಗೂ ರಂಗಭೂಮಿ ಕಲಾವಿದ ಎಂಎಸ್‌ ಸತ್ಯು ಅವರಿಗೆ ಘೋಷಿಸಲಾಗಿದ್ದರೆ, 2021ರ ಸಾಲಿನ ಈ ಪ್ರಶಸ್ತಿಯನ್ನು ನಿರ್ದೇಶಕ ಶಿವರುದ್ರಯ್ಯ ಅವರಿಗೆ ನೀಡಲಾಗಿದೆ.

ಸುಂದರ್‌ರಾಜ್‌ ಅವರಿಗೆ ಗೌರವ

ಜೀವಮಾನದ ಸಾಧನೆಗಾಗಿ ಸರ್ಕಾರ ನೀಡುವ ಡಾ. ವಿಷ್ಣುವರ್ಧನ್‌ ಪ್ರಶಸ್ತಿಯನ್ನು 2020ರ ಸಾಲಿನಲ್ಲಿ ಪ್ರಗತಿ ಅಶ್ವಥ್‌ ನಾರಾಯಣ್‌ ಅವರಿಗೆ ನೀಡಲಾಗಿದ್ದರೆ, 2021ರ ಸಾಲಿನ ಪ್ರಶಸ್ತಿನ್ನು ಹಿರಿಯ ನಟ ಎಂಕೆ ಸುಂದರ್‌ ರಾಜ್‌ ಅವರಿಗೆ ನೀಡಲಾಗಿದೆ.



Source link

Leave a Reply

Your email address will not be published. Required fields are marked *