Ramayana Teaser: ಯಶ್ ರಾಮಾಯಣ ಸಿನಿಮಾದ ಬಗ್ಗೆ 6 ದೊಡ್ಡ ರಹಸ್ಯಗಳು ಬಹಿರಂಗ: ಏನದು? | 6 Big Secrets Revealed About Yashs Ramayana Movie Gvd

Ramayana Teaser: ಯಶ್ ರಾಮಾಯಣ ಸಿನಿಮಾದ ಬಗ್ಗೆ 6 ದೊಡ್ಡ ರಹಸ್ಯಗಳು ಬಹಿರಂಗ: ಏನದು? | 6 Big Secrets Revealed About Yashs Ramayana Movie Gvd



Ramayana Teaser: ಯಶ್ ರಾಮಾಯಣ ಸಿನಿಮಾದ ಬಗ್ಗೆ 6 ದೊಡ್ಡ ರಹಸ್ಯಗಳು ಬಹಿರಂಗ: ಏನದು? | 6 Big Secrets Revealed About Yashs Ramayana Movie Gvd

ಯಶ್ ರಾಮಾಯಣ ಪಾತ್ರವನ್ನು ಅನಾವರಣ ಮಾಡಲಾಗಿಲ್ಲ. ನಾಯಕ ನಟ ರಣಬೀರ್‌ ಕಪೂರ್‌, ‘ನಾನು ಇಲ್ಲಿ ರಾಮನನ್ನು ಪ್ರತಿನಿಧಿಸಲು ಬಂದಿಲ್ಲ. ಬದಲಾಗಿ ರಾಮನ ಪಾತ್ರದಿಂದ ಕಲಿಯಲು ಬಂದಿದ್ದೇನೆ’ ಎಂದು ಹೇಳಿದ್ದಾರೆ.

1. ಹಾಲಿವುಡ್‌ ಲೆವೆಲ್‌ ತಂತ್ರಜ್ಞಾನ – ಕ್ರಿಸ್ಟೋಫರ್ ನೋಲನ್ ಇಂಟರ್‌ಸ್ಟೆಲ್ಲರ್ ಸಿನಿಮಾದಲ್ಲಿ ಬಳಸಲಾದ 86-ಕ್ಯಾಮೆರಾ ಅರೇ ತಂತ್ರಜ್ಞಾನವನ್ನು ಈ ಚಿತ್ರದಲ್ಲಿ ಬಳಸಲಾಗಿದೆ. ಇದು ಪಾತ್ರಗಳ ಮುಖಭಾವವನ್ನು ಸೂಕ್ಷ್ಮವಾಗಿ ಸೆರೆಹಿಡಿಯಲು ಸಹಕಾರಿ.

2. ಎ.ಆರ್. ರೆಹಮಾನ್ ಮತ್ತು ಹ್ಯಾನ್ಸ್ ಜಿಮ್ಮರ್ ಸಂಗೀತ ನೀಡಿದ್ದಾರೆ. ಇಬ್ಬರೂ ಆಸ್ಕರ್ ವಿಜೇತ ಸಂಗೀತ ನಿರ್ದೇಶಕರು. 3. ‘ಅವತಾರ್’ ಮತ್ತು ‘ಪ್ಲಾನೆಟ್ ಆಫ್ ದಿ ಏಪ್ಸ್’ ಸಿನಿಮಾಗಳಿಗೆ ಕೆಲಸ ಮಾಡಿದ್ದ ಟೆರ್ರಿ ನೋಟರಿ ವಾನರ ಸೇನೆಗೆ ಕೊರಿಯೋಗ್ರಫಿ ಮಾಡಿದ್ದಾರೆ.

4. ಲಂಕೆ ಮತ್ತು ಅಯೋಧ್ಯೆಯ ಸೆಟ್‌ಗಳನ್ನು ಅತ್ಯಂತ ಬೃಹತ್ ಪ್ರಮಾಣದಲ್ಲಿ ನಿರ್ಮಿಸಲಾಗಿದೆ. ಟೀಸರ್ ಝಲಕ್ ನೋಡಿರುವ ಪ್ರೇಕ್ಷಕರು ಇದನ್ನು ಡ್ಯೂನ್ ಸಿನಿಮಾಗೆ ಹೋಲಿಸುತ್ತಿದ್ದಾರೆ.

5. ಕೇವಲ ಭಾರತಕ್ಕೆ ಸೀಮಿತವಾಗದೆ, ಜಾಗತಿಕ ಮಟ್ಟದ ಸಿನಿಮಾವಾಗಿ ಮೂಡಿಬರುತ್ತಿದೆ. ನೇರವಾಗಿ ಐಮ್ಯಾಕ್ಸ್ 3ಡಿನಲ್ಲಿ ಚಿತ್ರೀಕರಣ ಮಾಡಲಾಗುತ್ತಿದ್ದು, ಹಾಲಿವುಡ್ ಸಿನಿಮಾಗಳಿಗೆ ಪೈಪೋಟಿ ನೀಡುವ ಗುರಿ ಹೊಂದಿದೆ.

6. ಚಿತ್ರದ ವಿಎಫ್ಎಕ್ಸ್‌ ಜವಾಬ್ದಾರಿಯನ್ನು ಪ್ರಸಿದ್ಧ ಡಿಎನ್‌ಇಜಿ ಸಂಸ್ಥೆ ಹೊತ್ತಿದೆ. ‘ಓಪನ್ ಹೈಮರ್’ನಂತಹ ಚಿತ್ರಗಳಿಗೆ ಕೆಲಸ ಮಾಡಿದ ಸಂಸ್ಥೆಯಿದು.

ಯಶ್‌ ರಾಮಾಯಣದ ರಾಮ ಪಾತ್ರದ ಟೀಸರ್‌ ಬಿಡುಗಡೆ

ಯಶ್‌ ಸಹ ನಿರ್ಮಾಣದ ಮತ್ತು ರಾವಣನಾಗಿ ನಟಿಸುತ್ತಿರುವ ‘ರಾಮಾಯಣ’ ಚಿತ್ರದ ರಾಮನ ಪಾತ್ರದ ಫಸ್ಟ್‌ ಲುಕ್‌ ಟೀಸರ್‌ ಬಿಡುಗಡೆ ಆಗಿದೆ. ರಾಮನ ಅವತಾರದಲ್ಲಿ ಕಾಣಿಸಿಕೊಂಡಿರುವ ರಣಬೀರ್‌ ಕಪೂರ್‌ ಲುಕ್‌ಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಅದ್ದೂರಿಯಾಗಿರುವ ದೃಶ್ಯ ಚಿತ್ರಣ ಹೊಂದಿರುವ ಈ ಟೀಸರ್‌ನಲ್ಲಿ ರಣಬೀರ್‌ ಪಾತ್ರವನ್ನು ಮಾತ್ರವೇ ತೋರಿಸಲಾಗಿದೆ. ಯಶ್ ಪಾತ್ರವನ್ನು ಅನಾವರಣ ಮಾಡಲಾಗಿಲ್ಲ. ನಾಯಕ ನಟ ರಣಬೀರ್‌ ಕಪೂರ್‌, ‘ನಾನು ಇಲ್ಲಿ ರಾಮನನ್ನು ಪ್ರತಿನಿಧಿಸಲು ಬಂದಿಲ್ಲ. ಬದಲಾಗಿ ರಾಮನ ಪಾತ್ರದಿಂದ ಕಲಿಯಲು ಬಂದಿದ್ದೇನೆ’ ಎಂದು ಹೇಳಿದ್ದಾರೆ.

ರಾಮಾಯಣದಿಂದ ರಾಕಿ ದೂರ ಇರಲು ಕಾರಣ ಟಾಕ್ಸಿಕ್

ರಾಕಿಂಗ್ ಸ್ಟಾರ್ ಯಶ್​ ರಾಮಾಯಣದಿಂದ ಅಂತರ ಕಾಯ್ದುಕೊಳ್ತಿದ್ದಾರೆ. ಅದಕ್ಕೆ ಕಾರಣ ಯಶ್​ ಹೆಗಲ ಮೇಲಿರೋ ಟಾಕ್ಸಿಕ್ ಸಿನಿಮಾ. ತಾನೇ ಬಂಡವಾಳ ಹೂಡಿ ಸಾವಿರಾರ ಕೋಟಿ ಕಲೆಕ್ಷನ್ ಮಾಡೋ ಟಾಕ್ಸಿಕ್​ ಸಿನಿಮಾ ಬಿಡುಗಡೆಯನ್ನ ಯಶ್ ಮುಂದೆ ತಳ್ಳಿದ್ದಾರೆ. ಜೂನ್ 4ಕ್ಕೆ ಈ ಸಿನಿಮಾ ತೆರೆ ಕಾಣುತ್ತೆ. ಅಷ್ಟೆ ಅಲ್ಲ ಟಾಕ್ಸಿಕ್‌ನ ಕೆಲ ದೃಶ್ಯಗಳನ್ನ ರೀ ಶೂಟ್ ಕೂಡ ಮಾಡಲಾಗುತ್ತಿದೆ. ಈ ಎಲ್ಲಾ ಕೆಲಸಗಳಿಂದ ಯಶ್ ರಾಮಾಯಣ ಚಿತ್ರದ ಪ್ರಮೋಷನ್​​ನಿಂದ ದೂರ ಉಳಿದಿದ್ದಾರೆ.



Source link

Leave a Reply

Your email address will not be published. Required fields are marked *