Headlines

ಮತ್ತಷ್ಟು ತೆರಿಗೆ ಹಾಕುವೆ : ಟೀಕಾಕಾರ ದೇಶಗಳಿಗೆ ಟ್ರಂಪ್‌ ಎಚ್ಚರಿಕೆ-ತೀರ್ಪಿಂದ ನನಗೆ ಮೊದಲಿಗಿಂತ ಈಗ ಅಧಿಕ ಅಧಿಕಾರ | Will Impose More Tariffs Trump Warns Critical Nations

ಸುಂಕ ನೀತಿಯನ್ನು ಅಸಾಂವಿಧಾನಿಕ ಎಂದ ಸುಪ್ರೀಂ ತೀರ್ಪಿನ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ಟ್ರಂಪ್‌, ‘ಸುಪ್ರೀಂ ಆದೇಶದಿಂದ ನನಗೆ ಇನ್ನಷ್ಟು ಅಧಿಕಾರಗಳು ದೊರಕಿವೆ. ರಫ್ತು ಮತ್ತು ಆಮದನ್ನು ನಿಯಂತ್ರಿಸಲು ನಾನು ಪರವಾನಗಿ ಪದ್ಧತಿಯನ್ನು ಜಾರಿಗೆ ತರಬಹುದು’ ಎಂದು ಹೇಳಿದ್ದಾರೆ.

ವಾಷಿಂಗ್ಟನ್‌: ತಮ್ಮ ಆಮದು ಸುಂಕ ನೀತಿಯನ್ನು ಅಸಾಂವಿಧಾನಿಕ ಎಂದ ಸುಪ್ರೀಂ ಕೋರ್ಟ್‌ ತೀರ್ಪಿನ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ‘ಸುಪ್ರೀಂ ಆದೇಶದಿಂದ ನನಗೆ ಇನ್ನಷ್ಟು ಅಧಿಕಾರಗಳು ದೊರಕಿವೆ. ರಫ್ತು ಮತ್ತು ಆಮದನ್ನು ನಿಯಂತ್ರಿಸಲು ನಾನು ಪರವಾನಗಿ ಪದ್ಧತಿಯನ್ನು ಜಾರಿಗೆ ತರಬಹುದು’ ಎಂದು ಹೇಳಿದ್ದಾರೆ.

ಕೋರ್ಟ್‌ ತೀರ್ಪಿನ ನೆಪದಲ್ಲಿ ನಮ್ಮೊಂದಿಗೆ ಆಟವಾಡಿದರೆ ಹೆಚ್ಚು ತೆರಿಗೆ

ಅಲ್ಲದೆ, ‘ಕೋರ್ಟ್‌ ತೀರ್ಪಿನ ನೆಪದಲ್ಲಿ ನಮ್ಮೊಂದಿಗೆ ಆಟವಾಡಿದರೆ ಹೆಚ್ಚು ತೆರಿಗೆ ವಿಧಿಸಬೇಕಾಗುತ್ತದೆ’ ಎಂದು ವಿದೇಶಗಳಿಗೆ ಎಚ್ಚರಿಸಿದ್ದಾರೆ.ಈ ಬಗ್ಗೆ ಟ್ರುತ್‌ ಸೋಷಿಯಲ್‌ನಲ್ಲಿ ಪೋಸ್ಟ್‌ ಮಾಡಿರುವ ಟ್ರಂಪ್‌, ‘ಸುಪ್ರೀಂ ಕೋರ್ಟ್‌ಅನ್ನು ಇನ್ನು ನಾನು ಕ್ಯಾಪಿಟಲ್‌ ಅಕ್ಷರದಲ್ಲಿ ಬರೆಯಲ್ಲ. ಏಕೆಂದರೆ ಅದು ಮಹತ್ವ ಕಳೆದುಕೊಂಡಿದೆ.

ಇನ್ನಷ್ಟು ಅಧಿಕಾರಗಳನ್ನು ಕೊಟ್ಟಂತಾಗಿದೆ

‘ನಾನು ವಿಧಿಸಿದ್ದ ತೆರಿಗೆಯನ್ನು ರದ್ದು ಮಾಡುವ ಮೂಲಕ ಅದು ನನಗೆ ಆಕಸ್ಮಿಕವಾಗಿ ಮತ್ತು ಅರಿವಿಲ್ಲದೆ ಪರವಾನಗಿ ಪದ್ಧತಿಯಂತಹ ಇನ್ನಷ್ಟು ಅಧಿಕಾರಗಳನ್ನು ಕೊಟ್ಟಂತಾಗಿದೆ. ಇದನ್ನು ಬಳಸಿಕೊಂಡು ನಾನು ವಿದೇಶಗಳ ವಿಷಯದಲ್ಲಿ ಭಯಾನಕ ಹೆಜ್ಜೆಗಳನ್ನಿಡಬಹುದು. ಪರವಾನಗಿಗೂ ಶುಲ್ಕವನ್ನು ಪಡೆಯುತ್ತೇನೆ’ ಎಂದು ಹೇಳಿದ್ದಾರೆ.ಪೋಸ್ಟ್‌ನಲ್ಲಿ ‘ಸುಪ್ರೀಂ ಕೋರ್ಟ್‌’ ಎಂಬುದನ್ನು ಸಣ್ಣ ಅಕ್ಷರಗಳಲ್ಲಿ ಬರೆದಿರುವ ಅವರು, ‘ಸುಪ್ರೀಂಗೆ ಅಗೌರವ ತೋರಲು ಹೀಗೆ ಮಾಡಿದ್ದೇನೆ’ ಎಂದೂ ಉಲ್ಲೇಖಿಸಿದ್ದಾರೆ.

Source link

Leave a Reply

Your email address will not be published. Required fields are marked *