US trade investigation : ನ್ಯಾಯೋಚಿತವಲ್ಲದ ವ್ಯಾಪಾರ: ಭಾರತ ಸೇರಿ 16 ದೇಶಗಳ ವಿರುದ್ಧ ತನಿಖೆಗೆ ಟ್ರಂಪ್ ನಿರ್ಧಾರ | Unfair Trade Trump Decides To Investigate 16 Countries Including India

US trade investigation : ನ್ಯಾಯೋಚಿತವಲ್ಲದ ವ್ಯಾಪಾರ: ಭಾರತ ಸೇರಿ 16 ದೇಶಗಳ ವಿರುದ್ಧ ತನಿಖೆಗೆ ಟ್ರಂಪ್ ನಿರ್ಧಾರ | Unfair Trade Trump Decides To Investigate 16 Countries Including India



US trade investigation : ನ್ಯಾಯೋಚಿತವಲ್ಲದ ವ್ಯಾಪಾರ: ಭಾರತ ಸೇರಿ 16 ದೇಶಗಳ ವಿರುದ್ಧ ತನಿಖೆಗೆ ಟ್ರಂಪ್ ನಿರ್ಧಾರ | Unfair Trade Trump Decides To Investigate 16 Countries Including India

ಟ್ರಂಪ್ ನೇತೃತ್ವದ ಅಮೆರಿಕ ಸರ್ಕಾರವು, ಭಾರತ ಸೇರಿದಂತೆ 16 ದೇಶಗಳ ವಿರುದ್ಧ ಅನ್ಯಾಯದ ವ್ಯಾಪಾರ ನಡವಳಿಕೆ ಆರೋಪದ ಮೇಲೆ ತನಿಖೆ ಆರಂಭಿಸಿದೆ.ತನ್ನ ಈ ಹಿಂದಿನ ಪ್ರತಿ ತೆರಿಗೆ ನೀತಿಯನ್ನು ಅಲ್ಲಿನ ಸುಪ್ರೀಂಕೋರ್ಟ್ ರದ್ದು ಮಾಡಿದ ಹಿನ್ನೆಲೆ ಹೊಸ ರೂಪದಲ್ಲಿ ತೆರಿಗೆ ಹೇರಲು ಈ ಅಡ್ಡದಾರಿ ಹಿಡಿದಿದೆ ಎನ್ನಲಾಗ್ತಿದೆ

ಭಾರತವೂ ಸೇರಿ 16 ದೇಶಗಳ ವಿರುದ್ಧ ಅಮೆರಿಕ ತನಿಖೆ

ನ್ಯೂಯಾರ್ಕ್: ಭಾರತವೂ ಸೇರಿ 16 ದೇಶಗಳ ವಿರುದ್ಧ ಅಮೆರಿಕದ ಡೊನಾಲ್ಡ್ ಟ್ರಂಪ್ ಸರ್ಕಾರ ಇದೀಗ ‘ನ್ಯಾಯೋಚಿತವಲ್ಲದ ವ್ಯಾಪಾರ ನಡವಳಿಕೆ’ ಆರೋಪದ ಮೇಲೆ ತನಿಖೆ ನಡೆಸಲು ಮುಂದಾಗಿದೆ. ತನ್ನ ಈ ಹಿಂದಿನ ಪ್ರತಿ ತೆರಿಗೆ ನೀತಿಯನ್ನು ಅಮೆರಿಕಾದ ಸುಪ್ರೀಂಕೋರ್ಟ್ ರದ್ದು ಮಾಡಿರುವ ಹಿನ್ನೆಲೆಯಲ್ಲಿ ಹೊಸ ರೂಪದಲ್ಲಿ ತೆರಿಗೆ ಹೇರಲು ಟ್ರಂಪ್ ಸರ್ಕಾರ ಈ ಅಡ್ಡದಾರಿ ಹಿಡಿದಿದೆ ಎಂದು ಹೇಳಲಾಗಿದೆ.

ವ್ಯಾಪಾರ ಪಾಲುದಾರರ ನ್ಯಾಯೋಚಿತವಲ್ಲದ ವ್ಯಾಪಾರ ನಡವಳಿಕೆಯು ಅಮೆರಿಕದ ಉತ್ಪಾದನಾ ವಲಯಕ್ಕೆ ವ್ಯತಿರಿಕ್ತ ಪರಿಣಾಮ ಬೀರಲಿದೆಯೇ ಎಂಬ ಕುರಿತು ತನಿಖೆ ನಡೆಯಲಿದೆ. ಈ ತನಿಖೆಯನ್ನು 1974ರ ವ್ಯಾಪಾರ ಒಪ್ಪಂದದ 301(ಬಿ) ಸೆಕ್ಷನ್ ಅಡಿ ಆರಂಭಿಸಲಾಗಿದೆ ಎಂದು ಅಮೆರಿಕದ ವ್ಯಾಪಾರ ಪ್ರತಿನಿಧಿ ಜೆಮಿಸನ್ ಗ್ರೀರ್ ತಿಳಿಸಿದ್ದಾರೆ. ಈ ಕಾಯ್ದೆಯು ನ್ಯಾಯೋಚಿತವಲ್ಲದ ವ್ಯಾಪಾರ ಪದ್ಧತಿ ಅನುಸರಿಸುತ್ತಿರುವ ದೇಶಗಳ ವಿರುದ್ಧ ಅಮೆರಿಕಕ್ಕೆ ತೆರಿಗೆ ಹೇರಲು ಅವಕಾಶ ಮಾಡಿಕೊಡಲಿದೆ ಎಂದು ಗ್ರೀರ್ ಹೇಳಿದ್ದಾರೆ.

ಯಾವ್ಯಾವ ದೇಶಗಳು?: ಭಾರತ ಮಾತ್ರವಲ್ಲದೆ, ಚೀನಾ, ಯುರೋಪಿಯನ್ ಯೂನಿಯನ್ (ಇಯು ಸದಸ್ಯ ದೇಶಗಳು), ಜಪಾನ್, ಕೊರಿಯಾ, ವಿಯೆಟ್ನಾಂ, ಬಾಂಗ್ಲಾದೇಶ, ಥಾಯ್ಲೆಂಡ್, ಕಾಂಬೋಡಿಯಾ, ಮಲೇಷ್ಯಾ, ಇಂಡೋನೇಷ್ಯಾ, ತೈವಾನ್, ಸಿಂಗಾಪುರ, ಮೆಕ್ಸಿಕೋ, ಸ್ವಿಜರ್‌ಲೆಂಡ್, ನಾರ್ವೆ ದೇಶಗಳ ವಿರುದ್ಧ ಅಮೆರಿಕವು ಇದೀಗ ತನಿಖೆ ನಡೆಸಲು ನಿರ್ಧರಿಸಿದೆ.

ಇದನ್ನೂ ಓದಿ: ಗೋಯಿಂಗ್ ಡಾರ್ಕ್ ತಂತ್ರ ಬಳಕೆ: ಯುದ್ಧ ಆರಂಭವಾದ ಬಳಿಕ ಯಶಸ್ವಿಯಾಗಿ ಹರ್ಮುಜ್ ದಾಟಿ ಭಾರತಕ್ಕೆ ಬಂದ ಮೊದಲ ಕಚ್ಚಾತೈಲ ಹಡಗು

ಇನ್ನು ಕೈಗಾರಿಕೆಗಳಲ್ಲಿ ಬಲವಂತವಾಗಿ ಕಾರ್ಮಿಕರನ್ನು ಬಳಸಿಕೊಳ್ಳುವ ಬಗ್ಗೆಯೂ ತನಿಖೆಯೂ ನಡೆಯಲಿದ್ದು, ಇದು 60 ದೇಶಗಳಿಗೆ ವಿಸ್ತರಿಸಲಿದೆ. ಈಗಾಗಲೇ ಅಮೆರಿಕವು ಉಯಿಗುರ್ ಜೀತದ ಕಾರ್ಮಿಕರ ರಕ್ಷಣಾ ಕಾಯ್ದೆಯಡಿ ಚೀನಾದ ಕಿನ್ ಜಿಯಾಂಗ್ ಪ್ರದೇಶದಲ್ಲಿ ಉತ್ಪಾದನೆಯಾಗುವ ಸೋಲಾರ್ ಪ್ಯಾನಲ್ ಮತ್ತಿತರ ವಸ್ತುಗಳ ಆಮದನ್ನು ನಿಷೇಧಿಸಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: Karnataka News Live: ಪ್ರಮುಖ ಹದಿನೈದು ಸಚಿವರಿಗೆ 16ರಂದು ಸಿಎಂ ಔತಣಕೂಟ



Source link

Leave a Reply

Your email address will not be published. Required fields are marked *