
ಬೆಳಗಾವಿಯಲ್ಲಿ ದುರಂತ, ಟಿಪ್ಪರ್ ಡಿಕ್ಕಿಯಾಗಿ ತಂದೆ ಕಣ್ಣೆದುರೇ ನಾಲ್ಕು ವರ್ಷದ ಮಗು ಸಾವು, ತಂದೆ ಮಗ ಬೈಕ್ನಲ್ಲಿ ಹೋಗುವಾಗ ಈ ಅಪಘಾತ ಸಂಭವಿಸಿದೆ. ಕುಟುಂಬಸ್ಥರು ಆಕ್ರಂದನ ಮುಗಿಲು ಮುಟ್ಟಿದೆ.
ಬೆಳಗಾವಿ (ಏ.06) ನಾಲ್ಕು ವರ್ಷದ ಮಗನ ಜೊತೆ ತಂದೆ ಬೈಕ್ನಲ್ಲಿ ತೆರಳುವಾಗ ಸಂಭವಿಸಿದ ಭೀಕರ ಅಪಘಾತದಲ್ಲಿ ದುರಂತ ಸಂಭವಿಸಿದೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮೇಕಲಮರಡಿ ಕ್ರಾಸ್ ಬಳಿ ಘಟನೆ ನಡೆದಿದೆ. ಬೈಕ್ನಲ್ಲಿ ತೆರಳುವಾಗ ಹಿಂಬದಿಯಿಂದ ಬಂದ ಟಿಪ್ಪರ್ ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದೆ. ಪರಿಣಾಮ ಕಣ್ಣೆದುರೇ ತನ್ನ ನಾಲ್ಕು ವರ್ಷದ ಮಗ ದುರಂತ ಸಾವು ಕಂಡ ಘಟನೆ ನಡೆದಿದೆ.
ಚಿಕ್ಕಬೂದನೂರ ಗ್ರಾಮದಿಂದ ನೇಸರಗಿ ಗ್ರಾಮದ ಕಡೆ ಬರುತ್ತಿದ್ದಾಗ ಈ ಆಪಘಾತ ನಡೆದಿದೆ. ಚಿಕ್ಕಬೂದನೂರ ಗ್ರಾಮದ ಪುಂಡಲಿಕ ಲಿಂಬಣ್ಣ ಗಿರೆಣ್ಣವರ (4) ಸಾವು ಕಂಡಿದ್ದರೆ, ತಂದೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುವನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ನೇಸರಗಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಟಿಪ್ಪರ್ ವಶಕ್ಕೆ ಪಡೆದಿದ್ದಾರೆ.
ಕಾರು ಹರಿದು ಬಾಲಕ ಧಾರುಣ ಸಾವು
ಬೀದರ್ ನಗರದ ಮಂಡಲ್ ಬಳಿ ನಡೆದ ಅಪಘಾತದಲ್ಲಿ ಕಾರು ಹರಿದು 7 ವರ್ಷದ ಬಾಲಕ ರುದ್ರಾ ಉಪಾಧ್ಯೆ ಮೃತಪಟ್ಟ ಘಟನೆ ನಡೆದಿದೆ. ಕಾರ್ ಚಾಲಕನ ನಿರ್ಲಕ್ಷ್ಯದಿಂದಲೇ ಬಾಲಕ ಮೃತಪಟ್ಟಿದ್ದಾನೆಂದು ಕುಟುಂಬಸ್ಥರ ಆರೋಪಿಸಿದ್ದಾರೆ. ಮೃತ ಬಾಲಕನ ದೇಹವನ್ನು ಬ್ರಿಮ್ಸ್ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಕುಟುಂಬಸ್ಥರ ಆಕ್ರೋಶ ಮುಗಿಲು ಮುಟ್ಟಿದೆ. ಖಾನ್ ಚಾಚಾ ಹೊಟೆಲ್ಗೆ ಎದುರು ಕುಟುಂಬಸ್ಥರು ಜಮಾವಣೆಗೊಂಡಿದ್ದಾರೆ. ಕಾರ್ ಚಾಲಕನ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ. ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬೈಕ್ ಅಪಘಾತ : 17 ವರ್ಷದ ವಿದ್ಯಾರ್ಥಿ ಸಾವು
ಹಳಿಯಾಳ–ದಾಂಡೇಲಿ ರಸ್ತೆಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ 17 ವರ್ಷದ ಜಾನ್ವಿಯಾನಿ ಜೇಮ್ಸ್ ಡಿಸೋಜಾ ಸಾವು ಕಂಡಿದ್ದಾರೆ. ಹೆಲ್ಮೆಟ್ ಧರಿಸದೆ, ಲೈಸನ್ಸ್ ಇಲ್ಲದೇ ವೇಗವಾಗಿ ಬೈಕ್ ಚಲಾಯಿಸಿದ್ದ ಯುವಕ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ. ಬೈಕ್ ನಿಯಂತ್ರಣ ತಪ್ಪಿ ಕಬ್ಬಿನ ಗದ್ದೆ ಬಳಿ ಅಪಘಾತ ಸಂಭವಿಸಿದೆ. ದಾಂಡೇಲಿ ಗ್ರಾಮೀಣ ಠಾಣೆ ಪೊಲೀಸರಿಂದ ಪ್ರಕರಣ ದಾಖಲಾಗಿದೆ.