ಮಂಗಳೂರಿನ ಸುರತ್ಕಲ್‌ನಲ್ಲಿ ಅತ್ಯಾಧುನಿಕ Gen Z ಅಂಚೆ ಕಚೇರಿ ಉದ್ಘಾಟನೆ; ಏನಿದರ ವಿಶೇಷತೆ? | Gen Z Post Office Inaugurated At National Institute Of Technology Karnataka Campus Suratkal Mangaluru Mrq

ಕರಾವಳಿ ಕರ್ನಾಟಕದ ಮೊದಲ ಅತ್ಯಾಧುನಿಕ ನ್ಯೂಜೆನ್ ಅಂಚೆ ಕಚೇರಿಯು ಮಂಗಳೂರಿನ ಸುರತ್ಕಲ್ ಎನ್‌ಐಟಿಕೆ ಕ್ಯಾಂಪಸ್‌ನಲ್ಲಿ ಉದ್ಘಾಟನೆಗೊಂಡಿದೆ. ಈ ಕಚೇರಿಯು ಹೈಸ್ಪೀಡ್ ವೈಫೈ, ಸ್ವಯಂ ಬುಕಿಂಗ್ ಕಿಯೋಸ್ಕ್, ಗೇಮ್ ಝೋನ್ ಮತ್ತು ಸೆಲ್ಫಿ ಪಾಯಿಂಟ್‌ನಂತಹ ಆಧುನಿಕ ಸೌಲಭ್ಯಗಳನ್ನು ಹೊಂದಿದೆ.

ಮಂಗಳೂರು: ಮಂಗಳೂರು ಅಂಚೆ ವಿಭಾಗವು ಕರಾವಳಿ ಕರ್ನಾಟಕದ ಮೊದಲ ಅತ್ಯಾಧುನಿಕ ನ್ಯೂಜೆನ್ (ಎನ್- ಜೆನ್) ಅಂಚೆ ಕಚೇರಿಯನ್ನು ಸುರತ್ಕಲ್ ಎನ್‌ಐಟಿಕೆ ಕ್ಯಾಂಪಸ್‌ನಲ್ಲಿ ಸಿದ್ಧಗೊಳಿಸಿದ್ದು, ಸೋಮವಾರ ಉದ್ಘಾಟನೆಗೊಂಡಿತು.

ಎನ್‌-ಜೆನ್‌ ಕಚೇರಿ ಸುರತ್ಕಲ್‌ನಲ್ಲಿ ಕಾರ್ಯಾರಂಭ

ಬೆಂಗಳೂರಿನ ಆಚಾರ್ಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಗೀತಂ ವಿಶ್ವವಿದ್ಯಾನಿಲಯ ಮತ್ತು ರಾಯಚೂರಿನ ಕೃಷಿ ವಿಜ್ಞಾನ ವಿಶ್ವವಿದ್ಯಾನಿಲಯದಲ್ಲಿ ಎನ್- ಜೆನ್ ಅಂಚೆ ಕಚೇರಿ ಸ್ಥಾಪನೆಯ ಬಳಿಕ ನಾಲ್ಕನೇ ಎನ್‌-ಜೆನ್‌ ಕಚೇರಿ ಸುರತ್ಕಲ್‌ನಲ್ಲಿ ಕಾರ್ಯಾರಂಭ ಮಾಡಿದೆ.

ಏನೆಲ್ಲಾ ಸೌಲಭ್ಯಗಳು ಇರಲಿವೆ?

ಈ ಕಚೇರಿಯು ಉಚಿತ ಹೈಸ್ಪೀಡ್ ವೈಫೈ ಮತ್ತು ಸ್ವಯಂ ಬುಕಿಂಗ್ ಕಿಯೋತ್ಸ್‌, ಆಧುನಿಕವಾಗಿ ಬರೆಯುವ ಸ್ಥಳ, ವಿಶ್ರಾಂತಿಗಾಗಿ ಲಾಬಿ ಹಾಗೂ ಸ್ಫೂರ್ತಿದಾಯಕ ಪುಸ್ತಗಳನ್ನು ಒಳಗೊಂಡಿರುವ ಗ್ರಂಥಾಲಯವನ್ನು ಹೊಂದಿದೆ. ಜತೆಗೆ ಪ್ರತ್ಯೇಕ ಗೇಮ್ ಝೋನ್, ಸಾಂಪ್ರದಾಯಿಕ ಅಂಚೆ ಪೆಟ್ಟಿಗೆ ಹಾಗೂ ಜೆನ್‌-ಝಡ್‌ ವಿದ್ಯಾರ್ಥಿಯ ವಿಶೇಷ ಚಿತ್ರವಿರುವ ಸೆಲ್ಫಿ ಪಾಯಿಂಟ್ ಇರಲಿದೆ.

ಇಂಡಿಯಾ ಪೋಸ್ಟ್‌ನ ಜನರಲ್‌ ಮ್ಯಾನೆಜರ್‌ (ಪೋಸ್ಟಲ್‌ ಅಕೌಂಟ್ಸ್‌ ಆಂಡ್‌ ಫೈನಾನ್ಸ್‌) ಜ್ಯೂಲಿಯಾ ಮೊಹಪಾತ್ರ ಈ ನೂತನ ಕಚೇರಿಯನ್ನು ಉದ್ಘಾಟಿಸಿದರು. ಎನ್‌ಐಟಿಕೆ ಡೆಪ್ಯುಟಿ ಡೈರೆಕ್ಟರ್‌ ಪ್ರೊ.ಸುಭಾಶ್‌ ಸಿ. ಯರಗಲ್‌, ಅಂಚೆ ಇಲಾಖೆಯ ಉತ್ತರ ಕರ್ನಾಟಕ ವಲಯದ ಡೈರೆಕ್ಟರ್‌ (ಪೋಸ್ಟಲ್‌ ಸರ್ವಿಸಸ್‌) ಶ್ರೀಹರ್ಷ, ಮಂಗಳೂರು ವಿಭಾಗದ ಸೀನಿಯರ್‌ ಸುಪರಿಂಟೆಂಡೆಂಟ್‌ ದಿನೇಶ ಪಿ. ಮತ್ತಿತರರು ಇದ್ದರು.

ಇದನ್ನೂ ಓದಿ: ಖಾಸಗಿ ಕೊರಿಯರ್‌ಗಳಿಗೆ ಸೆಡ್ಡು: ಅಂಚೆ ಇಲಾಖೆಯ ಹೊಸ ಅಸ್ತ್ರ, ಬೆಂಗಳೂರು ಸೇರಿ ಹಲವು ನಗರಗಳಲ್ಲಿ ಈ ಸೇವೆ!

ಇದೇ ಸಂದರ್ಭ ಪತ್ರ ಬರವಣಿಗೆ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದಲ್ಲಿ ವಿಜೇತರಾದ ಪುಣ್ಯಶ್ರೀ ಅವರನ್ನು ಸನ್ಮಾನಿಸಲಾಯಿತು. ಅಕ್ಷತಾ ನಾಯಕ್ ಕಾರ್ಯಕ್ರಮ ನಿರ್ವಹಿಸಿದರು. ದಿನೇಶ ಪಿ. ಸ್ವಾಗತಿಸಿದರು. ಲೋಕನಾಥ ಎಂ. ವಂದಿಸಿದರು.

ಇದನ್ನೂ ಓದಿ: PPFಗಿಂತ ಹೆಚ್ಚಿನ ಬಡ್ಡಿ ನೀಡುವ ಅಂಚೆ ಕಚೇರಿಯ 6 ಉಳಿತಾಯ ಯೋಜನೆಗಳಿವು

Source link

Leave a Reply

Your email address will not be published. Required fields are marked *