Headlines

weekend drinking health risksವಾರಕ್ಕೊಮ್ಮೆ ವಿಸ್ಕಿ-ಬಿಯರ್ ಕುಡಿದರೆ ಏನಾಗೋಲ್ಲ ಅನ್ನೋರು ಈ ಸುದ್ದಿ ಓದಲೇಬೇಕು! | Think Drinking Whiskey Or Beer Weekly Is Safe You Must Read This Health Warning

weekend drinking health risksವಾರಕ್ಕೊಮ್ಮೆ ವಿಸ್ಕಿ-ಬಿಯರ್ ಕುಡಿದರೆ ಏನಾಗೋಲ್ಲ ಅನ್ನೋರು ಈ ಸುದ್ದಿ ಓದಲೇಬೇಕು! | Think Drinking Whiskey Or Beer Weekly Is Safe You Must Read This Health Warning



weekend drinking health risksವಾರಕ್ಕೊಮ್ಮೆ ವಿಸ್ಕಿ-ಬಿಯರ್ ಕುಡಿದರೆ ಏನಾಗೋಲ್ಲ ಅನ್ನೋರು ಈ ಸುದ್ದಿ ಓದಲೇಬೇಕು! | Think Drinking Whiskey Or Beer Weekly Is Safe You Must Read This Health Warning

ವಾರಾಂತ್ಯದಲ್ಲಿ ‘ಸ್ವಲ್ಪ’ ಎಂದು ಕುಡಿಯುವ ಮದ್ಯವು ನಿಮ್ಮ ಡಯಟ್ ಮತ್ತು ವ್ಯಾಯಾಮದ ಶ್ರಮವನ್ನು ವ್ಯರ್ಥಗೊಳಿಸುತ್ತದೆ. ವಾರಕ್ಕೊಮ್ಮೆ ಅತಿಯಾಗಿ ಕುಡಿಯುವುದರಿಂದಲೂ ಯಕೃತ್ತು, ಹೃದಯ ಮತ್ತು ಕಿಡ್ನಿಗಳ ಮೇಲೆ ತೀವ್ರ ಒತ್ತಡ ಬಿದ್ದು, ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಗೆ ದಾರಿಯಾಗುತ್ತದೆ. 

ಅನೇಕರು ವಾರವಿಡೀ ಕಷ್ಟಪಟ್ಟು ಜಿಮ್ ಮಾಡಿ, ಡಯಟ್ ಪಾಲಿಸುತ್ತಾರೆ. ಆದರೆ ವಾರಾಂತ್ಯದಲ್ಲಿ ‘ಜಸ್ಟ್ ಎರಡು ಬಿಯರ್ ತಾನೇ’ ಎಂದು ಕುಡಿಯಲು ಕುಳಿತರೆ, ಅದರ ಜೊತೆಗಿನ ಸ್ನ್ಯಾಕ್ಸ್ ಸೇರಿ ನಿಮ್ಮ ದೇಹಕ್ಕೆ ಬರೋಬ್ಬರಿ 1200 ಕ್ಯಾಲೊರಿಗಳು ಸೇರುತ್ತವೆ! ಇಡೀ ದಿನದಲ್ಲಿ ನೀವು ತೆಗೆದುಕೊಳ್ಳಬೇಕಾದ್ದೇ 1600 ಕ್ಯಾಲೊರಿ ಎಂದಾದರೆ, ಈ ಒಂದು ದಿನದ ಪಾರ್ಟಿ ನಿಮ್ಮ ಇಡೀ ವಾರದ ಶ್ರಮವನ್ನು ಮಣ್ಣುಪಾಲು ಮಾಡುತ್ತದೆ ಎಂದು ‘ಹೆಲ್ದಿ ಪಾಡ್‌ಕ್ಯಾಸ್ಟ್’ ಎಚ್ಚರಿಸಿದೆ.

ಡಾಕ್ಟರ್ ಹೇಳೋದೇನು? 60ML ಗಿಂತ ಜಾಸ್ತಿ ಆದ್ರೆ ಡೇಂಜರ್!

ಅಂಬಾಲಾದ ಪೂಜಾ ಸ್ಪೆಷಾಲಿಟಿ ಕ್ಲಿನಿಕ್‌ನ ತಜ್ಞರಾದ ಡಾ ದೀಪಕ್ ಸಹೋಟಾ ಅವರ ಪ್ರಕಾರ, ವಾರಕ್ಕೆ 60ml ಮದ್ಯಪಾನ ಆರೋಗ್ಯವಂತ ವ್ಯಕ್ತಿಗಳಿಗೆ ತುಲನಾತ್ಮಕವಾಗಿ ಸುರಕ್ಷಿತವಿರಬಹುದು. ಆದರೆ ‘ಮಿತ’ ಎನ್ನುವುದು ಅಪಾಯವಿಲ್ಲದ ಸ್ಥಿತಿಯಲ್ಲ. ವಾರಕ್ಕೊಮ್ಮೆ ತಾನೇ ಎಂದು ಅತಿಯಾಗಿ ಕುಡಿಯುವುದು (ಬಿಂಜ್ ಡ್ರಿಂಕಿಂಗ್) ನಿಮ್ಮ ಯಕೃತ್ತು (ಲಿವರ್) ಮತ್ತು ಹೃದಯದ ಮೇಲೆ ಅತಿಯಾದ ಒತ್ತಡ ಹೇರುತ್ತದೆ. ಇದು ಹಠಾತ್ ಹೃದಯಾಘಾತ ಅಥವಾ ಲಿವರ್ ಫೇಲ್ಯೂರ್‌ಗೂ ಕಾರಣವಾಗಬಹುದು!

ಯಕೃತ್ತು ಮತ್ತು ಕಿಡ್ನಿ ಮೇಲೆ ಬೀಳುತ್ತೆ ಭಾರೀ ಹೊರೆ!

ಮದ್ಯವನ್ನು ಸಂಸ್ಕರಿಸುವುದು ಯಕೃತ್ತಿನ ಕೆಲಸ. ನೀವು ವಾರಕ್ಕೊಮ್ಮೆ ಕುಡಿದರೂ ಅದು ಲಿವರ್ ಮೇಲೆ ಸವಾರಿ ಮಾಡುತ್ತದೆ. ಇದರಿಂದ ‘ಫ್ಯಾಟಿ ಲಿವರ್’ ಸಮಸ್ಯೆ ಕಾಡಬಹುದು. ಅಷ್ಟೇ ಅಲ್ಲ, ಆಲ್ಕೋಹಾಲ್ ದೇಹವನ್ನು ನಿರ್ಜಲೀಕರಣ (Dehydration) ಮಾಡುವುದರಿಂದ, ನೀವು ಸರಿಯಾಗಿ ನೀರು ಕುಡಿಯದಿದ್ದರೆ ಕಿಡ್ನಿಗಳು ಹಾನಿಗೊಳಗಾಗುವ ಸಾಧ್ಯತೆ ದಟ್ಟವಾಗಿರುತ್ತದೆ. ಒಂದು ವೇಳೆ ನೀವು ಧೂಮಪಾನವನ್ನೂ ಮಾಡುತ್ತಿದ್ದರೆ, ಹೃದಯ ರಕ್ತನಾಳದ ಕಾಯಿಲೆಗಳು ನಿಮ್ಮ ಮನೆ ಬಾಗಿಲು ತಟ್ಟುವುದು ಗ್ಯಾರಂಟಿ.

ನಿದ್ದೆ ಬರುತ್ತೆ ಅಂದುಕೊಂಡ್ರೆ ಅದು ನಿಮ್ಮ ಭ್ರಮೆ!

ಕುಡಿದರೆ ಚೆನ್ನಾಗಿ ನಿದ್ದೆ ಬರುತ್ತದೆ ಎಂಬುದು ಕೇವಲ ಪುರಾಣ. ಆಲ್ಕೋಹಾಲ್ ನಿಮ್ಮನ್ನು ಬೇಗ ನಿದ್ದೆಗೆ ಜಾರಿಸಬಹುದು, ಆದರೆ ಅದು ಆಳವಾದ ಮತ್ತು ವಿಶ್ರಾಂತಿಯ ನಿದ್ದೆಗೆ ಅಡ್ಡಿಪಡಿಸುತ್ತದೆ. ಪರಿಣಾಮವಾಗಿ, ಮರುದಿನ ನಿಮಗೆ ವಿಪರೀತ ದಣಿವು, ಕಿರಿಕಿರಿ ಮತ್ತು ಮಾನಸಿಕ ಅಸ್ವಸ್ಥತೆ ಕಾಡಬಹುದು. ಅಸಿಡಿಟಿ, ಎದೆಯುರಿ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಗಳಂತೂ ಇದರ ಉಚಿತ ಕೊಡುಗೆಗಳು!

ಇವರು ಮದ್ಯದಿಂದ ದೂರವಿರುವುದೇ ಶ್ರೇಯಸ್ಕರ!

ಗರ್ಭಿಣಿಯರು, ಲಿವರ್ ಅಥವಾ ಹೃದಯ ಸಂಬಂಧಿ ಕಾಯಿಲೆ ಇರುವವರು, ಮಾನಸಿಕ ಖಿನ್ನತೆಯಿಂದ ಬಳಲುತ್ತಿರುವವರು ಮತ್ತು ನಿರಂತರವಾಗಿ ಔಷಧಿ ಸೇವಿಸುವವರು ಮದ್ಯಪಾನವನ್ನು ಮುಟ್ಟಲೇಬಾರದು. ಚಾಲನೆ ಮಾಡುವವರಂತೂ ಕುಡಿಯುವ ಸಾಹಸಕ್ಕೆ ಕೈಹಾಕಬಾರದು. ನಿಮ್ಮ ದೇಹದ ಸಮತೋಲನ ಕೆಡಿಸುವ ಈ ಅಭ್ಯಾಸ ‘ಒಂದು ದಿನದ ಮೋಜು’ ಅಲ್ಲ, ಬದಲಿಗೆ ದೀರ್ಘಕಾಲದ ಕಾಯಿಲೆಗೆ ಹಾಕುವ ಅಡಿಪಾಯ ಎಂಬುದು ನೆನಪಿರಲಿ.



Source link

Leave a Reply

Your email address will not be published. Required fields are marked *