Headlines

ತನ್ನ ಚಿನ್ನಾಭರಣ ಅಡವಿಟ್ಟು ಗಂಡನ ಇಂಜಿನಿಯರ್ ಓದಿಸಿದ ಹೆಂಡ್ತಿ: ಉದ್ಯೋಗದ ಬಳಿಕ ತೊರೆದು ಹೋದ ಪತಿ | Wife Helps Her Husbands Education By Pledging Gold But Husband Cheated After Got Job

ತನ್ನ ಚಿನ್ನಾಭರಣ ಅಡವಿಟ್ಟು ಗಂಡನ ಇಂಜಿನಿಯರ್ ಓದಿಸಿದ ಹೆಂಡ್ತಿ: ಉದ್ಯೋಗದ ಬಳಿಕ ತೊರೆದು ಹೋದ ಪತಿ | Wife Helps Her Husbands Education By Pledging Gold But Husband Cheated After Got Job



ತನ್ನ ಚಿನ್ನಾಭರಣ ಅಡವಿಟ್ಟು ಗಂಡನ ಇಂಜಿನಿಯರ್ ಓದಿಸಿದ ಹೆಂಡ್ತಿ: ಉದ್ಯೋಗದ ಬಳಿಕ ತೊರೆದು ಹೋದ ಪತಿ | Wife Helps Her Husbands Education By Pledging Gold But Husband Cheated After Got Job

ತನ್ನ ಚಿನ್ನಾಭರಣಗಳನ್ನು ಅಡವಿಟ್ಟು ಗಂಡನನ್ನು ಇಂಜಿನಿಯರ್ ಮಾಡಿದ ಪತ್ನಿಗೆ, ಆತ ಉದ್ಯೋಗ ಸಿಕ್ಕ ನಂತರ ದ್ರೋಹ ಬಗೆದಿದ್ದಾನೆ. ತನ್ನನ್ನು ಹಾಗೂ ಮಕ್ಕಳನ್ನು ತೊರೆದು ಹೋದ ಪತಿಯ ಬಗ್ಗೆ ಆಕೆ ಗದ್ಗದಿತಳಾಗಿ ಮಾತನಾಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಉದ್ಯೋಗ ಸಿಕ್ಕಿದ ಬಳಿಕ ತೊರೆದು ಹೋದ ಗಂಡ

ಅನೇಕ ಪುರುಷರು ವಿವಾಹದ ನಂತರ ತಮ್ಮ ಪತ್ನಿಯರನ್ನು ತಾವು ಓದಿರುವುದಕ್ಕಿಂತ ಹೆಚ್ಚು ಓದಿಸಿ ಉದ್ಯೋಗ ಸೇರುವಂತೆ ಮಾಡುತ್ತಾರೆ. ಅನೇಕ ಹೆಣ್ಣು ಮಕ್ಕಳನ್ನು 18 ತುಂಬುತ್ತಿರುವಂತೆ ಪೋಷಕರು ಮದುವೆ ಮಾಡುವುದರಿಂದ ಗಂಡ ಅರ್ಥ ಮಾಡಿಕೊಳ್ಳುವವನಾಗಿದ್ದರೆ ಮನೆಯ ಆರ್ಥಿಕ ಸ್ಥಿತಿ ಚೆನ್ನಾಗಿದ್ದಾರೆ ಹೆಂಡತಿಯನ್ನು ಉನ್ನತ ಶಿಕ್ಷಣಕ್ಕೆ ಕಳುಹಿಸುತ್ತಾನೆ. ಹೆಂಡತಿಗೆ ಉದ್ಯೋಗ ಸಿಕ್ಕ ನಂತರ ಇಬ್ಬರು ಚೆನ್ನಾಗಿ ಜೀವನ ನಡೆಸುವುದನ್ನು ನೋಡಬಹುದು. ಆದರೆ ಹಲವು ಪ್ರಕರಣಗಳಲ್ಲಿ ಹೀಗೆ ಹೆಂಡ್ತಿಗೆ ಉನ್ನತ ಶಿಕ್ಷಣ ನೀಡಿದ ನಂತರ ಹೆಂಡತಿ ಗಂಡನನ್ನು ತೊರೆದು ಹೋದ ಘಟನೆಗಳು ನಡೆದಿವೆ. ಹಾಗೆಯೇ ಇಲ್ಲೊಂದು ಕಡೆ ಪತ್ನಿಯೊಬ್ಬಳು ತನಗೆ ಮದುವೆಯ ವೇಳೆ ತವರಿನಿಂದ ನೀಡಿದ ಚಿನ್ನಬಣ್ಣ ಒಡವೆಗಳನ್ನು ಅಡಮಾನ ಇಟ್ಟು ಗಂಡನನ್ನು ಇಂಜಿನಿಯರ್ ಓದಿಸಿದ್ದು, ಆದರೆ ಆತ ಓದಿ ಉದ್ಯೋಗ ಗಳಿಸಿದ ನಂತರ ಹೆಂಡತಿಯನ್ನು ತೊರೆದು ಹೋದಂತಹ ಘಟನೆ ನಡೆದಿದೆ. ಈ ಬಗ್ಗೆ ಆತನ ಪತ್ನಿ ಗದ್ಗದಿತಳಾಗಿ ಮಾತನಾಡುತ್ತಿರುವ ವೀಡಿಯೋವೊಂದು ವೈರಲ್ ಆಗಿದ್ದು ಅನೇಕರನ್ನು ಭಾವುಕರನ್ನಾಗಿಸಿದೆ.

ಹೌದು ದಾಂಪತ್ಯದಲ್ಲಿ ದ್ರೋಹ ಎಂಬುದು ಇತ್ತಿಚೆಗೆ ಸರ್ವೇಸಾಮಾನ್ಯವಾಗಿದೆ. ಒಬ್ಬರ ತ್ಯಾಗವನ್ನು ಇನ್ನೊಬ್ಬರು ಬಳಸಿಕೊಳ್ಳುವುದು ಸಹಜ ಎನಿಸಿ ಬಿಟ್ಟಿದೆ. ಎಷ್ಟು ಕುಟುಂಬಗಳಲ್ಲಿ ಗಂಡನ ಕಷ್ಟಕಾಲದಲ್ಲಿ ಪತ್ನಿಯರು ಚಿನ್ನದ ಮಾಂಗಲ್ಯವನ್ನೇ ಅಡವಿಟ್ಟು ಪತಿಗೆ ನೆರವಾಗಿರುವಂತಹ ಘಟನೆಗಳು ಇವೆ. ಭಾರತೀಯ ಹಳ್ಳಿಯಲ್ಲಿ ಅನೇಕ ಹೆಣ್ಣು ಮಕ್ಕಳ ಚಿನ್ನದ ಕರಿಮಣಿ ಸರವೂ ಸೇರಿದಂತೆ ಒಡವೆಗಳು ಕತ್ತಿನಲ್ಲಿ ಇರುವುದಕ್ಕಿಂತ ಬ್ಯಾಂಕಿನಲ್ಲೋ ಫೈನಾನ್ಸ್‌ಗಳಲ್ಲೋ ಇರುವುದು/ ಇದ್ದಿದ್ದು ಹೆಚ್ಚು, ಮಕ್ಕಳ ಶಿಕ್ಷಣಕ್ಕೆ ಗಂಡನ ಅನಾರೋಗ್ಯಕ್ಕೆ ಅಂತ ಹೆಣ್ಣು ಸದಾ ಕಾಲ ತನ್ನ ಚಿನ್ನಾಭರಣವನ್ನು ಅಲ್ಲಿಲ್ಲಿ ಅಡಮಾನವಿಟ್ಟು ಬಂಧುಗಳು ನೆಂಟರ ಮುಂದೆ ಯಾವುದನ್ನು ತೋರಿಸಿಕೊಳ್ಳದೇ ಸಂತೆಯಲ್ಲಿ ಸಿಗೋ ರೋಡ್‌ಗೋಲ್ಡ್ ಆಗಿ ವಿಜ್ರಂಭಿಸಿದ್ದ ಹೆಣ್ಣು ಮಕ್ಕಳೇ ಹೆಚ್ಚು. ಹೀಗಿರುವಾಗ ತಮ್ಮ ಬದುಕು ಸಂಭ್ರಮ, ಖುಷಿಯನ್ನೆಲ್ಲಾ ಬದಿಗಿಟ್ಟು ಗಂಡನ ಏಳ್ಗೆಗಾಗಿ ಮಾಡಿದ ಈ ತ್ಯಾಗಕ್ಕೆ ಪ್ರತಿಯಾಗಿ ಆತ ಮೋಸ ಮಾಡಿದರೆ ಯಾರಿಗಾದರೂ ಸಹಿಸಿಕೊಳ್ಳುವುದಕ್ಕೆ ಆಗುವುದಿಲ್ಲ, ಅದೇ ರೀತಿ ಇಲ್ಲಿ ಗಂಡನಿಗಾಗಿ ತನ್ನೆಲ್ಲಾ ಕನಸುಗಳನ್ನು ತ್ಯಾಗ ಮಾಡಿದ ಮಹಿಳೆಗೆ ಮೋಸವಾಗಿದ್ದು, ಆಕೆ ಕ್ಯಾಮರಾ ಮುಂದೆ ಒತ್ತರಿಸಿ ಬರುವ ದುಃಖವನ್ನು ಗಂಟಲಲ್ಲೇ ಹಿಡಿದಿಟ್ಟುಕೊಳ್ಳುವ ಪ್ರಯತ್ನ ಮಾಡಿ ಸೋತು ಗದ್ಗದಿತಳಾಗಿ ಮಾತನಾಡಿದ್ದಾಳೆ.

ಆಕೆ ಏನು ಹೇಳಿದ್ದಾಳೆ ನೋಡಿ

ನನ್ನ ಗಂಡನನ್ನು ನಾನೇ ಓದಿಸಿದ್ದೆ, ನನ್ನ ಚಿನ್ನವನ್ನು ಅಡಮಾನ ಇಟ್ಟು ಆತನನ್ನು ಓದಿಸಿದ್ದೆ, ಆದರೆ ಉದ್ಯೋಗ ಸಿಕ್ಕ ನಂತರ ಅವನು ನಮ್ಮನ್ನು ತೊರೆದು ಹೋದ, ಅವನು ಇಂಜಿನಿಯರ್ ಆಗಿದ್ದಾನೆ. ನಾನು ನನ್ನ ಜೀವನದ ಉಳಿತಾಯವನ್ನೆಲ್ಲಾ ಇಟ್ಟು ಆತನನ್ನು ಓದಿಸಿದೆ. ಮಕ್ಕಳಿದ್ದಾರೆ. ಆದರೆ ಆತ ತೊರೆದು ಹೋದ ಎಂದು ಅವರು ದುಃಖಿಸುತ್ತಾ ಹೇಳುವುದನ್ನು ನೋಡಿದರೆ ಎಂಥವರ ಕಣ್ಣಂಚುಗಳು ತೇವಗೊಳ್ಳುತ್ತವೆ.

ಇದನ್ನೂ ಓದಿ: ಶಾರ್ಟ್ ಸರ್ಕ್ಯೂಟ್‌ನಿಂದ ಕುರಿ ಶೆಡ್‌ಗೆ ಬೆಂಕಿ: 700ಕ್ಕೂ ಹೆಚ್ಚು ಕುರಿಗಳು ಸಜೀವ ದಹನ

ಆಕೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿಡಿಯೋ ನೋಡಿದ ಅನೇಕರು ಭಾವುಕರಾಗಿದ್ದಾರೆ. ಆಕೆಯ ಕಣ್ಣೀರೆ ವಾಸ್ತವವನ್ನು ಹೇಳುತ್ತಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇಲ್ಲಿ ಸ್ತ್ರೀ ಪುರುಷ ಎಂಬ ಭೇದವಿಲ್ಲ, ಎಲ್ಲರೂ ಮೋಸ ಮಾಡುತ್ತಾರೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಆತ ವಜ್ರವೊಂದನ್ನು ಕಳೆದುಕೊಂಡ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಕರ್ಮ ಯಾರನ್ನು ಬಿಡುವುದಿಲ್ಲ, ಎಲ್ಲದಕ್ಕೂ ಸಮಯ ಬರಬೇಕು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ಮ್ಯಾಚಿಂಗ್ ಬಟ್ಟೆ ಧರಿಸಿ ಮದುವೆಗೆ ಬಂದ ವಿಜಯ್ ತ್ರಿಷಾ ಕೃಷ್ಣನ್: ರವಿಮೋಹನ್ ಹಾಗೂ ಕೆನಿಷಾಗೆ ಹೋಲಿಸಿದ ನೆಟ್ಟಿಗರು

ಅವನು ಹೀಗೆ ಎಂದಿಗೂ ಮಾಡಬಾರದಿತ್ತು. ಇದು ನಿಜಕ್ಕೂ ತಪ್ಪು. ನಿಮ್ಮ ಕಷ್ಟದ ಸಮಯದಲ್ಲಿ ನಿಮ್ಮೊಂದಿಗೆ ನಿಂತ ವ್ಯಕ್ತಿಗೆ ನಿಮ್ಮ ನಿಷ್ಠೆ ಇರಬೇಕಿತ್ತು ದ್ರೋಹವಲ್ಲ,ಸಹೋದರಿ … ಅವನಿಗೆ ಹೆಚ್ಚು ಅಗತ್ಯವಿದ್ದಾಗ ಅವನನ್ನು ಪ್ರೀತಿಸಿ ಬೆಂಬಲಿಸಿದಳು, ಮತ್ತು ಅವಳಂತಹ ಮಹಿಳೆಯನ್ನು ಕಳೆದುಕೊಳ್ಳುವುದು ಸಣ್ಣ ನಷ್ಟವಲ್ಲ. ಒಂದು ದಿನ ಅವನು ಏನನ್ನು ಕಳೆದುಕೊಂಡಿದ್ದಾನೆಂದು ಅರಿತುಕೊಳ್ಳುತ್ತಾನೆ ಮತ್ತು ಆ ವಿಷಾದವು ಅವನ ಜೀವನದುದ್ದಕ್ಕೂ ಅವನೊಂದಿಗೆ ಇರುತ್ತದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.



Source link

Leave a Reply

Your email address will not be published. Required fields are marked *