ಆಸ್ಟ್ರೇಲಿಯಾ ಕಾನೂನು ನಡೆಯಲ್ಲ! ಧವನ್‌ಗೆ ಸೇರಿದ ಕೋಟ್ಯಂತರ ಹಣ ಮರಳಿಸಲು ಮಾಜಿ ಪತ್ನಿಗೆ ದೆಹಲಿ ಕೋರ್ಟ್‌ ಸೂಚನೆ! | Delhi Court Orders Shikhar Dhawan Ex Wife Aesha Mukherjee Return 5 7 Crore San

ಆಸ್ಟ್ರೇಲಿಯಾ ಕಾನೂನು ನಡೆಯಲ್ಲ! ಧವನ್‌ಗೆ ಸೇರಿದ ಕೋಟ್ಯಂತರ ಹಣ ಮರಳಿಸಲು ಮಾಜಿ ಪತ್ನಿಗೆ ದೆಹಲಿ ಕೋರ್ಟ್‌ ಸೂಚನೆ! | Delhi Court Orders Shikhar Dhawan Ex Wife Aesha Mukherjee Return 5 7 Crore San



ಆಸ್ಟ್ರೇಲಿಯಾ ಕಾನೂನು ನಡೆಯಲ್ಲ! ಧವನ್‌ಗೆ ಸೇರಿದ ಕೋಟ್ಯಂತರ ಹಣ ಮರಳಿಸಲು ಮಾಜಿ ಪತ್ನಿಗೆ ದೆಹಲಿ ಕೋರ್ಟ್‌ ಸೂಚನೆ! | Delhi Court Orders Shikhar Dhawan Ex Wife Aesha Mukherjee Return 5 7 Crore San

ದೆಹಲಿ ಕೌಟುಂಬಿಕ ನ್ಯಾಯಾಲಯವು ಕ್ರಿಕೆಟಿಗ ಶಿಖರ್ ಧವನ್ ಅವರ ಮಾಜಿ ಪತ್ನಿ ಆಯೇಷಾ ಮುಖರ್ಜಿಗೆ, ಆಸ್ಟ್ರೇಲಿಯಾದ ಆಸ್ತಿ ಇತ್ಯರ್ಥದ ಭಾಗವಾಗಿ ಪಡೆದಿದ್ದ ₹5.7 ಕೋಟಿಯನ್ನು ವಾಪಸ್ ನೀಡುವಂತೆ ಆದೇಶಿಸಿದೆ. ಆಸ್ಟ್ರೇಲಿಯಾದ ನ್ಯಾಯಾಲಯದ ನಿರ್ಧಾರ ಭಾರತದಲ್ಲಿ ಅನ್ವಯಿಸುವುದಿಲ್ಲ ಎಂದಿದೆ.

ನವದೆಹಲಿ (ಫೆ.26): ದೆಹಲಿಯ ಕೌಟುಂಬಿಕ ನ್ಯಾಯಾಲಯವು ಕ್ರಿಕೆಟಿಗ ಶಿಖರ್ ಧವನ್ ಅವರ ಮಾಜಿ ಪತ್ನಿ ಆಯೇಷಾ ಮುಖರ್ಜಿಗೆ ಆಸ್ಟ್ರೇಲಿಯಾದ ಆಸ್ತಿಯನ್ನು ಮಾರಾಟ ಮಾಡುವುದರಿಂದ ಪಡೆದಿದ್ದ ಮಧ್ಯಂತರ ಆಸ್ತಿ ಇತ್ಯರ್ಥದ ಭಾಗವಾಗಿ ಕ್ರಿಕೆಟಿಗರಿಂದ ಪಡೆದ ಸರಿಸುಮಾರು AU$894,397 (₹5.7 ಕೋಟಿ) ಅನ್ನು ವಾಪಾಸ್‌ ನೀಡುವಂತೆ ಆದೇಶ ನೀಡಿದೆ. ಆಯೇಷಾ ಮುಖರ್ಜಿ ಜೊತೆಗಿನ ವಿಚ್ಛೇದನದ ಸೆಟ್ಲ್‌ಮೆಂಟ್‌ನ ಭಾಗವಾಗಿ ಶಿಖರ್‌ ಧವನ್‌ ಈ ಹಣವನ್ನು ನೀಡಿದ್ದರು. ಆದರೆ, ದೆಹಲಿ ಹೈಕೋರ್ಟ್‌, ಧವನ್‌ ಅವರ ಆಸ್ತಿ ಸೆಟ್ಲ್‌ಮೆಂಟ್‌ ಭಾರತೀಯ ಕಾನೂನಿನ ಪ್ರಕಾರ ಮಾನ್ಯವಲ್ಲ ಎಂದು ಹೇಳಿದೆ. ಅದಲ್ಲದೆ, ಆಸ್ಟ್ರೇಲಿಯಾದ ಕೌಟುಂಬಿಕ ನ್ಯಾಯಾಲಯದ ನಿರ್ಧಾರವು, ಭಾರತಕ್ಕೆ ಯಾವುದೇ ಕಾರಣಕ್ಕೂ ಅನ್ವಯಿಸುವುದಿಲ್ಲ ಎಂದು ತಿಳಿಸಿದೆ.

ವರದಿಯ ಪ್ರಕಾರ, ದೆಹಲಿ ಕುಟುಂಬ ನ್ಯಾಯಾಲಯದ ನ್ಯಾಯಾಧೀಶ ದೇವೇಂದ್ರ ಕುಮಾರ್ ಗರ್ಗ್ ತಮ್ಮ ಆದೇಶದಲ್ಲಿ ಆಯೇಷಾ ಅವರು ಆಸ್ಟ್ರೇಲಿಯಾದ ನ್ಯಾಯಾಲಯದ ತೀರ್ಪಿನ ಪ್ರಕಾರ ಶಿಖರ್ ಧವನ್ ಅವರಿಂದ ₹16.9 ಕೋಟಿ ಕೇಳುವಂತಿಲ್ಲ ಎಂದು ಹೇಳಿದ್ದಾರೆ. ಭಾರತೀಯ ಕುಟುಂಬ ಕಾನೂನು ಕಾಯ್ದೆ 1975 ರ ಅಡಿಯಲ್ಲಿ ಆಸ್ತಿ ಇತ್ಯರ್ಥ ನಿಯಮಗಳು ಭಾರತೀಯ ವೈವಾಹಿಕ ಕಾನೂನು ಮತ್ತು ಹಿಂದೂ ವಿವಾಹ ಕಾಯ್ದೆ 1955 ಕ್ಕೆ ಅನುಗುಣವಾಗಿವೆ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ. ಆದ್ದರಿಂದ, ಆಸ್ತಿ ಇತ್ಯರ್ಥ ನಿಯಮಗಳ ಅಡಿಯಲ್ಲಿ ಆಯೇಷಾ ಅವರು ಪಡೆದ ₹5.7 ಕೋಟಿಯನ್ನು ಶಿಖರ್ ಧವನ್‌ಗೆ ಕಡ್ಡಾಯವಾಗಿ ವಾಪಾಸ್‌ ನೀಡಬೇಕು ಎಂದು ತಿಳಿಸಿದೆ. ಅದರೊಂದಿಗೆ ಈ ಪ್ರಕರಣದಲ್ಲಿ ಶಿಖರ್‌ ಧವನ್‌ ಭಾರೀ ದೊಡ್ಡ ಗೆಲುವನ್ನು ಪಡೆದಂತಾಗಿದೆ.

ಆಸ್ಟ್ರೇಲಿಯಾದ ಕಾನೂನಿನಡಿಯಲ್ಲಿ 60% ಪಾಲು ಆದೇಶ

ಆಸ್ಟ್ರೇಲಿಯಾದ ಕಾನೂನಿನಡಿಯಲ್ಲಿ, ಪತಿಯ ಎಲ್ಲಾ ಆಸ್ತಿಯನ್ನು ವೈವಾಹಿಕ ಪೂಲ್‌ನಲ್ಲಿ ಪರಿಗಣಿಸಲಾಗುತ್ತದೆ. ಈ ಕಾನೂನಿನಡಿಯಲ್ಲಿ, ಆಸ್ಟ್ರೇಲಿಯಾದ ನ್ಯಾಯಾಲಯವು ಭಾರತ ಮತ್ತು ವಿದೇಶಗಳಲ್ಲಿ ಧವನ್ ಹೊಂದಿರುವ ಎಲ್ಲಾ ಆಸ್ತಿಗಳಲ್ಲಿ 60% ಪಾಲನ್ನು ಅವರ ಪತ್ನಿ ಆಯೇಷಾಗೆ ನೀಡಲು ಆದೇಶಿಸಿತ್ತು. ಆಸ್ಟ್ರೇಲಿಯಾದ ನ್ಯಾಯಾಲಯವು ಧವನ್‌ಗಾಗಿ 1975 ರ ಕಾಯ್ದೆಯ ಸೆಕ್ಷನ್ 79 ಅನ್ನು ಬಳಸಿತ್ತು ಮತ್ತು ಆಸ್ತಿಗಳನ್ನು ಮಾರಾಟ ಮಾಡುವ ಮೂಲಕ ಅವರಿಗೆ 8.12 ಲಕ್ಷ ಆಸ್ಟ್ರೇಲಿಯನ್ ಡಾಲರ್‌ಗಳನ್ನು ನೀಡುವಂತೆ ಆದೇಶಿಸಿತ್ತು.

ಆಸ್ಟ್ರೇಲಿಯಾದ ಆದೇಶವನ್ನು ಪ್ರಶ್ನಿಸಿದ ದೆಹಲಿ ಕುಟುಂಬ ನ್ಯಾಯಾಲಯವು ತನ್ನ ಆದೇಶದಲ್ಲಿ ಆಯೇಷಾ ನ್ಯಾಯಾಲಯಕ್ಕೆ ಹಾಜರಾಗಲಿಲ್ಲ ಮತ್ತು ಆಸ್ಟ್ರೇಲಿಯಾದ ನ್ಯಾಯಾಲಯವು ಧವನ್ ವಿರುದ್ಧ ಏಕಪಕ್ಷೀಯ ನಿರ್ಧಾರವನ್ನು ನೀಡಿದೆ ಎಂದು ಹೇಳಿದೆ. ಆಸ್ಟ್ರೇಲಿಯಾದ ನ್ಯಾಯಾಲಯವು ಧವನ್ ಆಸ್ಟ್ರೇಲಿಯಾದಲ್ಲಿರುವ ತನ್ನ ಎಲ್ಲಾ ಆಸ್ತಿಗಳನ್ನು ಮಾರಿ ಸಂಪೂರ್ಣ ಹಣವನ್ನು ಅವರ ಪತ್ನಿ ಆಯೇಷಾಗೆ ನೀಡಬೇಕು ಎಂದು ಹೇಳಿತ್ತು. ದೆಹಲಿ ಕುಟುಂಬ ನ್ಯಾಯಾಲಯವು ಧವನ್‌ ಹಣ ಪಾವತಿಸಲು ಒತ್ತಾಯಿಸಲಾಗಿತ್ತು. ತೀರ್ಪಿನಲ್ಲಿ, ನ್ಯಾಯಾಲಯವು ಧವನ್ ಆಸ್ತಿಯನ್ನು ಮಾರಾಟ ಮಾಡುವುದರಿಂದ ಆಯೇಷಾ ಪಡೆದ 5.70 ಕೋಟಿ ರೂ.ಗಳನ್ನು ಹಿಂದಿರುಗಿಸಲು ಆದೇಶಿಸಿದೆ.

ಭಾರತದ ಕಾನೂನು ಹೇಳೋದೇನು?

ಭಾರತದಲ್ಲಿ ವಿವಾಹ ಕಾಯ್ದೆಯಡಿ ಆಸ್ತಿ ಇತ್ಯರ್ಥಕ್ಕೆ ಏಕರೂಪದ ಮತ್ತು ಸ್ಪಷ್ಟವಾದ ನಿಬಂಧನೆ ಇಲ್ಲ. ಆದರೆ, ಇದನ್ನು ವಿವಿಧ ಧರ್ಮಗಳ ಪ್ರಕಾರ ಜಾರಿಗೆ ತರಲಾಗುತ್ತದೆ. ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 27 ರ ಅಡಿಯಲ್ಲಿ, ಪತಿ ಮತ್ತು ಪತ್ನಿ ಜಂಟಿಯಾಗಿ ಹೊಂದಿರುವ ಆಸ್ತಿಯನ್ನು ವಿಚ್ಛೇದನದ ಸಮಯದಲ್ಲಿ ವಿಂಗಡಿಸಲಾಗಿದೆ. ಈ ಕಾನೂನು ಸ್ತ್ರೀಧನಕ್ಕೂ ಅವಕಾಶ ನೀಡುತ್ತದೆ, ಇದು ಪತ್ನಿ ಸ್ವೀಕರಿಸಿದ ಉಡುಗೊರೆಗಳು, ಆಭರಣಗಳು, ಪೀಠೋಪಕರಣಗಳು ಇತ್ಯಾದಿಗಳ ರೂಪದಲ್ಲಿರುತ್ತದೆ ಮತ್ತು ಈ ಆಸ್ತಿಯನ್ನು ವಿಚ್ಛೇದನದ ಸಮಯದಲ್ಲಿ ಹೆಂಡತಿಗೆ ಮಾತ್ರ ನೀಡಲಾಗುತ್ತದೆ. ಕಾಯ್ದೆಯ ಸೆಕ್ಷನ್ 25 ರ ಅಡಿಯಲ್ಲಿ, ವಿಚ್ಛೇದನದ ಸಂದರ್ಭದಲ್ಲಿ ಪತ್ನಿಗೆ ಜೀವನಾಂಶ ಭತ್ಯೆ ಪಡೆಯುವ ಹಕ್ಕಿದೆ.

2023ರಲ್‌ಲಿ ವಿಚ್ಛೇದನವಾಗಿದ್ದ ದಂಪತಿ

ಧವನ್ ಮತ್ತು ಅವರ ಮಾಜಿ ಪತ್ನಿ ಆಯೇಷಾ ಮುಖರ್ಜಿ ಅಕ್ಟೋಬರ್ 2023 ರಲ್ಲಿ ಅಧಿಕೃತವಾಗಿ ವಿಚ್ಛೇದನ ಪಡೆದರು. 2011ರಲ್ಲಿ ಈ ಜೋಡಿ ವಿವಾಹವಾಗಿದ್ದು, 11 ವರ್ಷಗಳ ಸಂಸಾರದಲ್ಲಿ ಜೋರಾವರ್‌ ಹೆಸರಿನ ಪುತ್ರನನ್ನೂ ಪಡೆದಿದ್ದರು. ಆಯೇಷಾ ಮುಖರ್ಜಿ, ಧವನ್‌ ಜೊತೆಗಿನ ಮದುವೆಗೂ ಮುನ್ನ ಮೊದಲ ವಿವಾಹದಲ್ಲಿ ಇಬ್ಬರು ಹೆಣ್ಣು ಮಕ್ಕಳಿದ್ದರು.

ಧವನ್ 2010 ರಲ್ಲಿ ಟಿ20 ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು ಮತ್ತು 2011 ರಲ್ಲಿ ಭಾರತ ಪರ ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಆದರೆ, ಟೆಸ್ಟ್‌ ತಂಡಕ್ಕೆ ಪ್ರವೇಶಿಸಲು ಅವರಿಗೆ ಮೂರು ವರ್ಷಗಳು ಬೇಕಾಯಿತು. ಅವರು 2013 ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು, ಅಲ್ಲಿಂದ ಅವರು ಮೂರು ಮಾದರಿಯ ಟೀಮ್‌ನಲ್ಲಿ ಸ್ಥಾನ ಪಡೆದರು.



Source link

Leave a Reply

Your email address will not be published. Required fields are marked *