Headlines

ಮೇಲೆ-ಕೆಳಗೆ ಮುಚ್ಚಿಕೊಳ್ಳಲು ನಟಿ ಅನನ್ಯಾ ಪರದಾಟ: ಕಾಲು ಸರಿಸಿ ಕಾಪಾಡಿದ ದೇವರಕೊಂಡ- ವಿಡಿಯೋ ವೈ | Vijaya Devarakonda Made Ananya Panday Confirt With Her Unconfirt Dress Suc

ಮೇಲೆ-ಕೆಳಗೆ ಮುಚ್ಚಿಕೊಳ್ಳಲು ನಟಿ ಅನನ್ಯಾ ಪರದಾಟ: ಕಾಲು ಸರಿಸಿ ಕಾಪಾಡಿದ ದೇವರಕೊಂಡ- ವಿಡಿಯೋ ವೈ | Vijaya Devarakonda Made Ananya Panday Confirt With Her Unconfirt Dress Suc



ಮೇಲೆ-ಕೆಳಗೆ ಮುಚ್ಚಿಕೊಳ್ಳಲು ನಟಿ ಅನನ್ಯಾ ಪರದಾಟ: ಕಾಲು ಸರಿಸಿ ಕಾಪಾಡಿದ ದೇವರಕೊಂಡ- ವಿಡಿಯೋ ವೈ | Vijaya Devarakonda Made Ananya Panday Confirt With Her Unconfirt Dress Suc

ಪ್ರೆಸ್​ಮೀಟ್​ವೊಂದರಲ್ಲಿ ತುಂಡುಡುಗೆ ಧರಿಸಿ ಮುಜುಗರಕ್ಕೀಡಾದ ನಟಿ ಅನನ್ಯಾ ಪಾಂಡೆಗೆ ಸಹನಟ ವಿಜಯ ದೇವರಕೊಂಡ ಸಹಾಯ ಮಾಡಿದ್ದಾರೆ. ವೇದಿಕೆಯಲ್ಲಿ ಅನನ್ಯಾ ತಮ್ಮ ಉಡುಪನ್ನು ಸರಿಪಡಿಸಿಕೊಳ್ಳಲು ಪರದಾಡುತ್ತಿದ್ದು, ಇದನ್ನು ಗಮನಿಸಿದ ವಿಜಯ, ಕ್ಯಾಮರಾ ಕಣ್ಣುಗಳಿಂದ ಆಕೆಯನ್ನು ಕಾಪಾಡಲು ಪ್ರಯತ್ನಿಸಿದರು. ಈ ಘಟನೆಯ ವಿಡಿಯೋ ವೈರಲ್ ಆಗಿದೆ.

ಹಲವು ಸಿನಿಮಾ ನಟಿಯರದ್ದು ಒಂದು ರೀತಿಯ ಹುಚ್ಚು. ಎಲ್ಲಾ ಕಾಣಿಸೋ, ಅಡಿಯಿಂದ ಮುಡಿಯವರೆಗೆ ಧಾರಾಳ ಪ್ರದರ್ಶನ ಆಗುವಂಥ ಡ್ರೆಸ್​ ಹಾಕಿಕೊಂಡು ಬರುವುದು, ಬಳಿಕ ಅದನ್ನು ಮೇಲೆ ಕೆಳಗೆ ಎಳೆದುಕೊಳ್ಳುತ್ತಲೇ ಇರುವುದು. ಇದೊಂದು ರೀತಿಯಲ್ಲಿ ಬೇರೆಯವರ ಗಮನ ಸೆಳೆಯುವ ತಂತ್ರವೋ ಏನೋ ಎನ್ನುವಷ್ಟರ ಮಟ್ಟಿಗೆ ಅಸಹ್ಯ ಎನ್ನಿಸುವುದು ಉಂಟು. ಲಕ್ಷ ಲಕ್ಷ ಕೊಟ್ಟು ತುಂಡುಡುಗೆ ಹಾಕುವ ನಟಿಯರು ಈ ರೀತಿ ಮಾಡುವುದು ಏಕೆ ಎನ್ನುವುದೇ ಪ್ರಶ್ನಾರ್ಹ ಎನ್ನಿಸುವುದು ಉಂಟು. ಹೀಗೆ ಮಾಡಿದ್ರೆ ಅವು ಟ್ರೋಲ್​ ಪೇಜ್​ನಲ್ಲಿ ಹೈಲೈಟ್​ ಆಗಿ, ಇನ್ನಷ್ಟು ಫೇಮಸ್​ ಆಗುವ ಹಂಬಲ ಇದ್ದರೂ ಇರಬಹುದು ಎನ್ನುವುದು ಉಂಟು.

ಅನನ್ಯಾ ಪಾಂಡೆ ಅಸಹ್ಯ

ಇದೀಗ ಅಂಥದ್ದೇ ಒಂದು ಅಸಂಬದ್ಧ ಎನ್ನಿಸುವ ವಿಡಿಯೋ ವೈರಲ್​ ಆಗಿದೆ. ಬಾಲಿವುಡ್​ ನಟಿ ಅನನ್ಯಾ ಪಾಂಡೆ, ಸ್ಲಿಟ್ ಡ್ರೆಸ್​ ಹಾಕಿದ್ದಾರೆ. ಕೆಳಗಿನ ಭಾಗದಲ್ಲಿಯೂ ಪ್ರದರ್ಶನ, ಮೇಲಿನ ಭಾಗದಲ್ಲಿಯೂ ಪ್ರದರ್ಶನ. ಈ ರೀತಿಯ ಡ್ರೆಸ್​ ಹಾಕಿಕೊಂಡು ಪ್ರೆಸ್​ಮೀಟ್​ನಲ್ಲಿ ಭಾಗಿಯಾಗಿದ್ದಾರೆ. ಎಲ್ಲಾ ಕ್ಯಾಮೆರಾ ಕಣ್ಣುಗಳು ತಮ್ಮ ಮೇಲೆ ಇರುವುದು ತಿಳಿದೇ ಈ ರೀತಿಯ ಡ್ರೆಸ್​​ ಹಾಕಿರುವುದಂತೂ ಕನ್​ಫರ್ಮ್​. ಆದರೆ ವೇದಿಕೆಯ ಮೇಲೆ ಕಾಲಿನ ಮೇಲೆ ಕಾಲು ಹಾಕಿಕೊಂಡು ಕುಳಿತ ನಟಿಗೆ ಏನೋ ಕಸಿವಿಸಿ ಆದಂತಿದೆ.

ವಿಜಯ ದೇವರಕೊಂಡ ಏನ್​ ಮಾಡಿದ್ರು?

ಕೆಳಗೆ, ಮೇಲೆ ಎಲ್ಲಾ ಕಡೆ ಡ್ರೆಸ್​ ಎಳೆದುಕೊಳ್ಳುವುದೇ ಕೆಲಸ ಆಗಿದೆ. ಪ್ರೆಸ್​​ಮೀಟ್​ಗೆ ಬಂದಿದ್ದ ವಿಜಯ ದೇವರಕೊಂಡ ಅವರು ನೋಡಿ ನೋಡಿ ಸಾಕಾಯ್ತು. ಈ ನಟಿ ಉದ್ದೇಶಪೂರ್ವಕವಾಗಿ ಹೀಗೆಲ್ಲಾ ಮಾಡ್ತಿದ್ದಾರೋ, ಕಸಿವಿಸಿಯಾಗಿ ಮಾಡ್ತಿದ್ದಾರೋ ಪಾಪ ಆ ನಟನಿಗೆ ಹೇಗೆ ಗೊತ್ತಾಗಬೇಕು. ಆದರೂ ನೋಡುವಷ್ಟು ನೋಡಿ ಕೊನೆಗೆ ನಟಿಯ ಕಾಲನ್ನು ಇತ್ತ ಕಡೆ ಸರಿಸಿ ಸ್ಲಿಟ್​ ಭಾಗ ಎದುರಿನ ಕ್ಯಾಮೆರಾ ಕಣ್ಣಿಗೆ ಬೀಳದಂತೆ ತಕ್ಕಮಟ್ಟಿಗೆ ಕಾಪಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಮೇಲಿನ ತುಂಡು ಡ್ರೆಸ್​

ಆದರೆ, ಮೇಲೆ ಹಾಕಿರುವ ತುಂಡುಡುಗೆಯನ್ನೂ ನಟಿ ಎಳೆದುಕೊಳ್ಳುತ್ತಲೇ ಇದ್ದರು. ಏಕೆಂದರೆ, ಅಲ್ಲಿಂದಲೂ ಅವರ ದೇಹ ಧಾರಾಳ ಪ್ರದರ್ಶನ ಆಗುತ್ತಿತ್ತು. ವಿಜಯ ದೇವರಕೊಂಡ ಅದನ್ನೂ ನೋಡಿದರು. ಆದರೆ ಅವರಿಗೆ ಅಲ್ಲಿ ಏನೂ ಮಾಡಲು ಆಗಲಿಲ್ಲ. ಇಲ್ಲದಿದ್ದರೆ ಅದನ್ನೂ ಎಳೆದು ಸರಿ ಮಾಡುತ್ತಿದ್ದರೋ ಗೊತ್ತಿಲ್ಲ. ಆದರೆ ಪತ್ರಕರ್ತರ ಕ್ಯಾಮೆರಾ ಕಣ್ಣುಗಳು ಅಲ್ಲೇ ಇದ್ದವಲ್ಲ, ಆದ್ದರಿಂದ ತಕ್ಕಮಟ್ಟಿಗೆ ನಟಿಯ ಮರ್ಯಾದೆ (?) ಕಾಪಾಡುವಲ್ಲಿ ನಟ ಯಶಸ್ವಿಯಾಗಿದ್ದಾರೆ. ಇದರ ವಿಡಿಯೋ ವೈರಲ್​ ಆಗುತ್ತಲೇ ನೆಟ್ಟಿಗರು ನಟಿಗೆ ಹಿಗ್ಗಾಮುಗ್ಗ ಬೈದಿದ್ದರೆ, ನಟನ ಈ ಕ್ರಿಯೆಗೆ ಭಾರಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.



Source link

Leave a Reply

Your email address will not be published. Required fields are marked *