Headlines

Vinay Kulkarni Convicted ಪರಪ್ಪನ ಅಗ್ರಹಾರ ಜೈಲಿಗೆ ವಿನಯ್ ಕುಲಕರ್ಣಿ, ಆರ್ಡರ್ ಶೀಟ್‌ಗೆ ಕಾಯುತ್ತಿರುವ ಪೊಲೀಸ್ | Congress Vinay Kulkarni To Be Shifted To Parappana Agrahara Jail Police Await Order

ಪರಪ್ಪನ ಅಗ್ರಹಾರ ಜೈಲಿಗೆ ವಿನಯ್ ಕುಲಕರ್ಣಿ, ಆರ್ಡರ್ ಶೀಟ್‌ಗೆ ಕಾಯುತ್ತಿರುವ ಪೊಲೀಸ್, ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿ ದೋಷಿ ಎಂದು ಕೋರ್ಟ್ ಮಹತ್ವದ ತೀರ್ಪು ನೀಡಿದೆ. 

ಬೆಂಗಳೂರು (ಏ.15) ಬಿಜೆಪಿ ಮುಖಂಡ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ದೋಷಿ ಎಂದು ಜನಪ್ರತಿನಿಧಿಗಳ ನ್ಯಾಯಾಲಯ ತೀರ್ಪು ನೀಡಿದೆ. ಈ ಕೊಲೆ ಪ್ರಕರಣದ ಆರೋಪಿಗಳ ಪೈಕಿ ಪ್ರಭಾವಿಯಾಗಿದ್ದ ವಿನಯ್ ಕುಲಕರ್ಣಿ ಅಪರಾಧಿ ಎಂದು ಕೋರ್ಟ್ ಹೇಳಿದೆ. ಇಷ್ಟು ದಿನ ಜಾಮೀನಿನ ಮೇಲೆ ಹೊರಗಿದ್ದ ವಿನಯ್ ಕುಲಕರ್ಣಿ ಇದೀಗ ಮತ್ತೆ ಜೈಲು ಸೇರಬೇಕಾಗಿದೆ. ಕೋರ್ಟ್ ವಾರೆಂಟ್ ಹಾಗೂ ಆರ್ಡರ್‌‌ಗಾಗಿ ಸಿಬಿಐ ಪೊಲೀಸರು ಕಾಯುತಿದ್ದಾರೆ. ಆರ್ಡರ್ ಕಾಪಿ ಸಿಕ್ಕ ಬೆನ್ನಲ್ಲೇ ಸಿಬಿಐ ಪೊಲೀಸರು, ವಿನಯ್ ಕುಲಕರ್ಣಿಯನ್ನು ಪರಪ್ಪನ ಅಗ್ರಹಾರ ಜೈಲಿಗೆ ಕರೆದೊಯ್ಯಲಿದ್ದಾರೆ.

ಎ15 ಆರೋಪಿ ವಿನಯ್ ಕುಲಕರ್ಣಿ

ಕಳೆದ ಕೆಲ ವರ್ಷಗಳಿಂದ ವಿನಯ್ ಕುಲಕರ್ಣಿ ಪ್ರಕರಣ ರಾಜ್ಯದಲ್ಲಿ ಭಾರಿ ಕೋಲಾಹಲ ಸೃಷ್ಟಿಸಿದೆ. ಇಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಲಯ ಎಲ್ಲಾ ಆರೋಪಿಗಳ ಖುದ್ದು ಹಾಜರಾತಿ ಪರಿಶೀಲಿಸಿ ತೀರ್ಪು ಪ್ರಕಟಿಸಿತ್ತು.ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾ.ಸಂತೋಷ್ ಗಜಾನನ ಭಟ್ ಪ್ರಕಟಿಸಿದ್ದಾರೆ. ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಎ15 ಆರೋಪಿಯಾಗಿದ್ದರು. ಇದೀಗ ಅಪರಾಧಿಯಾಗಿದ್ದಾರೆ. ವಿನಯ್ ಕುಲಕರ್ಣಿ ಮೇಲೆ 302 r/ w 120B IPC, 201 IPC, 149 ಹಾಗೂ 120B ಸೆಕ್ಷನ್ ಅಡಿಯಲ್ಲಿ ಶಿಕ್ಷೆಯಾಗಿದೆ.

ವಿನಯ್ ಕುಲಕರ್ಣಿ ಮಾಡಿದ ಅಪರಾಧವೇನು?

ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಕೊಲೆ ಹಾಗೂ ಅಪರಾಧ ಸಂಚು, ಸಾಕ್ಷ್ಯನಾಶ, ಮಾರಕಾಸ್ತ್ರಗಳಿಂದ ಹಲ್ಲೆ, ಅಕ್ರಮ ಕೂಟ ಆರೋಪಗಳು ಸಾಬೀತಾಗಿದೆ. ಹೀಗಾಗಿ ಕಠಿಣ ಶಿಕ್ಷೆಗೆ ಗುರಿಯಾಗಲಿದ್ದಾರೆ. ಶಿಕ್ಷೆ ಪ್ರಮಾಣವನ್ನು ನಾಳೆ ಕೋರ್ಟ್ ಪ್ರಕಟಿಸಲಿದೆ.

ಸೆಕ್ಷನ್ ಅಡಿಯಲ್ಲಿ ಶಿಕ್ಷೆ ಪ್ರಮಾಣ

302- ಜೀವಾವಧಿ

120B- ಜೀವಾವಧಿ

201- ಏಳು ವರ್ಷ ಶಿಕ್ಷೆ ಮತ್ತು ದಂಡ

148- ಮೂರು ವರ್ಷ ಶಿಕ್ಷೆ

ನಾಳೆ (ಏ.15) ಜನಪ್ರತಿನಿಧಿಗಳ ನ್ಯಾಯಲಯ ಅಪರಾಧಿಗಳಿಗೆ ಶಿಕ್ಷೆ ಪ್ರಕಟಿಸಲಿದೆ. ವಿನಯ್ ಕುಲಕರ್ಣಿ ಮೇಲಿನ ಆರೋಪಗಳು ಸಾಬೀತಾಗಿದೆ. ಹೀಗಾಗಿ ಕಠಿಣ ಶಿಕ್ಷೆ ಪ್ರಕಟಗೊಳ್ಳುವ ಸಾಧ್ಯತೆ ಇದೆ. 2 ವರ್ಷಕ್ಕಿಂತ ಮೇಲ್ಪಟ್ಟು ಜೈಲು ಶಿಕ್ಷೆಗೆ ಗುರಿಯಾದರೆ ವಿನಯ್ ಕುಲಕರ್ಣಿ ಶಾಸಕ ಸ್ಥಾನ ರದ್ದಾಗಲಿದೆ.

Source link

Leave a Reply

Your email address will not be published. Required fields are marked *