Headlines

Botox Oil at home : ಮಕ್ಕಳಿಗಿಂತ ಯಂಗ್‌ ಕಾಣ್ಬೇಕಂದ್ರೆ ಈಗ್ಲೇ ಈ ಆಯಿಲ್‌ ತಯಾರಿಸಿ ಬಳಸಿ | How To Make Anti Aging Botox Oil At Home

Botox Oil at home : ಮಕ್ಕಳಿಗಿಂತ ಯಂಗ್‌ ಕಾಣ್ಬೇಕಂದ್ರೆ ಈಗ್ಲೇ ಈ ಆಯಿಲ್‌ ತಯಾರಿಸಿ ಬಳಸಿ | How To Make Anti Aging Botox Oil At Home



Botox Oil at home : ಮಕ್ಕಳಿಗಿಂತ ಯಂಗ್‌ ಕಾಣ್ಬೇಕಂದ್ರೆ ಈಗ್ಲೇ ಈ ಆಯಿಲ್‌ ತಯಾರಿಸಿ ಬಳಸಿ | How To Make Anti Aging Botox Oil At Home

Botox Oil at home : ಚಂದ ಕಾಣ್ಬೇಕು ಅನ್ನೋದು ಎಲ್ಲರ ಆಸೆ. ನಿಜವಾದ ವಯಸ್ಸು ಮುಚ್ಚಿಟ್ಟು 10 ವರ್ಷ ಕಡಿಮೆ ವಯಸ್ಸು ಹೇಳ್ತೇವೆ. ಆದ್ರೆ ಮುಖ ನೋಡಿದಾಗ ಸತ್ಯ ಹೊರ ಬರುತ್ತೆ. ನಿಮ್ಮ ಮುಖ ಕೂಡ 10 ವರ್ಷ ಯಂಗ್ ಕಾಣ್ಬೇಕು ಅಂದ್ರೆ ಏನು ಮಾಡ್ಬೇಕು ಗೊತ್ತಾ? 

ವಯಸ್ಸಾದಂತೆ ಚರ್ಮ ಜೋತು ಬೀಳೋದು ಸಾಮಾನ್ಯ. 30-35 ವರ್ಷಗಳ ನಂತ್ರ ಮುಖದ ಮೇಲೆ ನೆರಿಗೆ ಬೀಳಲು ಶುರುವಾಗುತ್ತದೆ. ಮುಖದ ಚರ್ಮ ಸಡಿಲವಾಗಿ, ಸುಕ್ಕು ಕಾಣಿಸಿಕೊಂಡು ಚರ್ಮ ಕ್ರಮೇಣ ಹೊಳಪು ಕಳೆದುಕೊಳ್ಳುತ್ತೆ. ಈ ಸುಕ್ಕನ್ನು ಮುಚ್ಚಿಡಲು ಅನೇಕರು ಮೇಕಪ್ ಮೊರೆ ಹೋಗ್ತಾರೆ. ಮಾರ್ಕೆಟ್ ನಲ್ಲಿ ಸಿಗುವ ಅನೇಕ ಕೆಮಿಕಲ್ ಇರುವ ಸೌಂದರ್ಯವರ್ಧಕಗಳನ್ನು ಬಳಸ್ತಾರೆ. ಇದು ಸುಕ್ಕನ್ನು ಕಡಿಮೆ ಮಾಡುವ ಬದಲು ಹೆಚ್ಚು ಮಾಡುತ್ತದೆ. ಈಗಿನ ದಿನಗಳಲ್ಲಿ ಬೊಟಾಕ್ಸ್ ಚಿಕಿತ್ಸೆ ಪಡೆಯುವವರ ಸಂಖ್ಯೆ ಹೆಚ್ಚಾಗಿದೆ. ಬೊಟುಲಿನಮ್ ಟಾಕ್ಸಿನ್ನ ಶುದ್ಧೀಕರಿಸಿದ ರೂಪ. ಕ್ಲೋಸ್ಟ್ರಿಡಿಯಮ್ ಬೊಟುಲಿನಮ್ ಬ್ಯಾಕ್ಟೀರಿಯಾದಿಂದ ಪಡೆದ ಪ್ರೋಟೀನ್ನನ್ನು ಬೊಟಾಕ್ಸ್ ಎನ್ನಲಾಗುತ್ತದೆ. ನೀವು ಬೊಟಾಕ್ಸ್ ಚುಚ್ಚುಮದ್ದು ಬಳಸಬೇಕಾಗಿಲ್ಲ. ಮನೆಯಲ್ಲಿಯೇ ಬೊಟಾಕ್ಸ್ ಚಿಕಿತ್ಸೆ ಪಡೆಯಬಹುದು. ಅದಕ್ಕೆ ಹೆಚ್ಚಿನ ಖರ್ಚು ಮಾಡುವ ಅಗತ್ಯವಿಲ್ಲ. ಮನೆಯಲ್ಲಿರುವ ಪದಾರ್ಥ ಬಳಸಿ ನ್ಯಾಚ್ಯುರಲ್ ಬೊಟಾಕ್ಸ್ ಆಯಿಲ್ ತಯಾರಿಸಬಹುದು.

ಬೊಟಾಕ್ಸ್ ಆಯಿಲ್ ಗೆ ಬೇಕಾದ ಪದಾರ್ಥಗಳು

1 ಸ್ಪೂನ್ ಲವಂಗ

3 ಸ್ಪೂನ್ ಬೇಬಿ ಎಣ್ಣೆ

2 ಸ್ಪೂನ್ ಅಲೋವೆರಾ ಜೆಲ್

1 ವಿಟಮಿನ್ ಇ ಕ್ಯಾಪ್ಸುಲ್

1 ಸ್ಪೂನ್ ರೋಸ್ ವಾಟರ್

ಅರ್ಧ ಚಮಚ ಗ್ಲಿಸರಿನ್

ಫಾರ್ಮಲ್ ಜೊತೆ ಕ್ಯಾಶುಯಲ್ ಲುಕ್: ಬೆಸ್ಟ್ ಎನಿಸುವ 10 ಶಾರ್ಟ್ ಸ್ಕರ್ಟ್‌ಗಳು!

ಬೊಟಾಕ್ಸ್ ತಯಾರಿಸುವ ವಿಧಾನ :

ಒಂದು ಚಮಚ ಲವಂಗವನ್ನು ಮಿಕ್ಸಿಗೆ ಹಾಕಿ ಪುಡಿ ಮಾಡಿಕೊಳ್ಳಿ. ಸಣ್ಣ ಪ್ಯಾನ್ ಗೆ ಮೂರು ಸ್ಪೂನ್ ಬೇಬಿ ಆಯಿಲ್ ಹಾಕಿ. ಅದಕ್ಕೆ ಪುಡಿ ಮಾಡಿದ ಲವಂಗದ ಪುಡಿ ಸೇರಿಸಿ. ಕಡಿಮೆ ಉರಿಯಲ್ಲಿ 5-7 ನಿಮಿಷಗಳ ಕಾಲ ಬಿಸಿ ಮಾಡಿ. ಎಣ್ಣೆ ಸ್ವಲ್ಪ ಬಣ್ಣ ಬದಲಾಯಿಸಲು ಪ್ರಾರಂಭಿಸಿದಾಗ ಗ್ಯಾಸ್ ಬಂದ್ ಮಾಡಿ ನಂತ್ರ ಎಣ್ಣೆ ತಣ್ಣಗಾಗಲು ಬಿಡಿ. ಎಣ್ಣೆಯನ್ನು ಶುದ್ಧವಾದ ಬಟ್ಟಲಿಗೆ ಸೋಸಿ. ಎರಡು ಚಮಚ ಅಲೋವೆರಾ ಜೆಲ್ ಸೇರಿಸಿ ಮತ್ತು ಚೆನ್ನಾಗಿ ಮಿಕ್ಸ್ ಮಾಡಿ. ಒಂದು ವಿಟಮಿನ್ ಇ ಕ್ಯಾಪ್ಸುಲ್ ಅನ್ನು ಕತ್ತರಿಸಿ ಎಣ್ಣೆಗೆ ಸೇರಿಸಿ. ಒಂದು ಚಮಚ ರೋಸ್ ವಾಟರ್ ಮತ್ತು ಅರ್ಧ ಚಮಚ ಗ್ಲಿಸರಿನ್ ಸೇರಿಸಿ, ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಎಣ್ಣೆಯನ್ನು ಸ್ವಚ್ಛವಾದ ಗಾಜಿನ ಬಾಟಲಿಯಲ್ಲಿ ಸಂಗ್ರಹಿಸಿ.

ಬೊಟಾಕ್ಸ್ ಆಯಿಲ್ ಬಳಕೆ ಹೇಗೆ?

ಬೊಟಾಕ್ಸ್ ಆಯಿಲ್ ಎರಡು ಹನಿಗಳನ್ನು ನಿಮ್ಮ ಕೈಯಲ್ಲಿ ತೆಗೆದುಕೊಂಡು ನಿಧಾನವಾಗಿ ಮಸಾಜ್ ಮಾಡಬೇಕು. ಚರ್ಮದ ಮೇಲೆ ಯಾವುದೇ ಕಾರಣಕ್ಕೂ ಉಜ್ಜಬಾರದು. ಎಣ್ಣೆ ಹೀರಿಕೊಳ್ಳಲು ನಿಧಾನವಾಗಿ ಪ್ಯಾಟ್ ಮಾಡಿ. ಇದನ್ನು ನಿಮ್ಮ ಮುಖ, ಕುತ್ತಿಗೆ, ಕೈಗೆ ಹಚ್ಚಬಹುದು. ಇದನ್ನು ನೀವು ರಾತ್ರಿ ಹಚ್ಚುವುದು ಒಳ್ಳೆಯದು.

Hair Clips: ಬ್ರೈಡಲ್ ಲುಕ್‌ನಿಂದ ಬೀಚ್ ಲುಕ್‌ವರೆಗೆ, ಬಳಸಿ ಈ

ಈ ಎಣ್ಣೆಯ ವಿಶೇಷತೆಯೆಂದರೆ ಇದನ್ನು ರೆಫ್ರಿಜರೇಟರ್ನಲ್ಲಿ ಇಡುವ ಅಗತ್ಯವಿಲ್ಲ. ಇದನ್ನು ಕೋಣೆಯ ಉಷ್ಣಾಂಶದಲ್ಲಿ ಸಂಗ್ರಹಿಸಬಹುದು. ಎಣ್ಣೆ ಖಾಲಿಯಾಗುವವರೆಗೂ ಇದು ಹಾಳಾಗುವುದಿಲ್ಲ. ಖಾಲಿಯಾದ್ಮೇಲೆ ಮತ್ತೆ ತಯಾರಿಸಿ ಇದನ್ನು ಬಳಸಿ. ಪ್ರತಿ ದಿನ ನೀವು ಈ ಆಯಿಲ್ ಬಳಕೆ ಮಾಡ್ಬಹುದು.



Source link

Leave a Reply

Your email address will not be published. Required fields are marked *