ಬೀದರ್ ತಾಲೂಕಿನ ಯದಲಾಪುರ ಗ್ರಾಮದಲ್ಲಿ, ಸಾಲದ ಸುಳಿಗೆ ಸಿಲುಕಿದ್ದ ಶಿವಕುಮಾರ್ ಮೇತ್ರೆ (42) ಎಂಬುವವರು ಬಾವಿಗೆ ಹಾರಿ ಆತ್ಮ೧ಹತ್ಯೆ ಮಾಡಿಕೊಂಡಿದ್ದಾರೆ. ಮನೆ ನಿರ್ಮಾಣ ಹಾಗೂ ಆಸ್ಪತ್ರೆ ವೆಚ್ಚಕ್ಕಾಗಿ ಸುಮಾರು 5 ಲಕ್ಷ ಸಾಲ ಮಾಡಿಕೊಂಡಿದ್ದ ಅವರು, ಮಾನಸಿಕ ಖಿನ್ನತೆಯಿಂದ ಈ ದುರಂತ ನಿರ್ಧಾರ
ಬೀದರ್ (ಫೆ.13): ಸಾಲದ ಸುಳಿಗೆ ಸಿಲುಕಿದ ವ್ಯಕ್ತಿಯೊಬ್ಬರು ಬಾವಿಗೆ ಜಿಗಿದು ಆತ್ಮ೧ಹತ್ಯೆ ಮಾಡಿಕೊಂಡಿರುವ ಮನಕಲುಕುವ ಘಟನೆ ಬೀದರ್ ತಾಲೂಕಿನ ಯದಲಾಪುರ ಗ್ರಾಮದಲ್ಲಿ ಸಂಭವಿಸಿದೆ. ಗ್ರಾಮದ ನಿವಾಸಿ ಶಿವಕುಮಾರ್ ಮೇತ್ರೆ (42) ಎಂಬುವವರೇ ಸಾವನ್ನಪ್ಪಿದ ದುರ್ದೈವಿ.
ಹೊಸಮನೆ, ಹೆಲ್ತ್‌ಗೆ ಸಾಲ ಮಾಡಿಕೊಂಡಿದ್ದ ಶಿವಕುಮಾರ್
ಮೃತ ಶಿವಕುಮಾರ್ ಅವರು ಸುಂದರವಾದ ನೂತನ ಮನೆ ನಿರ್ಮಾಣ ಮಾಡುವ ಕನಸು ಕಂಡಿದ್ದರು. ಇದಕ್ಕಾಗಿ ಹಾಗೂ ಕುಟುಂಬದ ಆಸ್ಪತ್ರೆ ವೆಚ್ಚಗಳಿಗಾಗಿ ಸ್ವ-ಸಹಾಯ ಸಂಘಗಳು ಮತ್ತು ಖಾಸಗಿ ವ್ಯಕ್ತಿಗಳಿಂದ ಸುಮಾರು 5 ಲಕ್ಷ ರೂಪಾಯಿಗಳಷ್ಟು ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ. ದಿನಕಳೆದಂತೆ ಸಾಲದ ಹೊರೆ ಹೆಚ್ಚಾಗುತ್ತಿದ್ದುದ್ದನ್ನು ಕಂಡು ಶಿವಕುಮಾರ್ ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂದು ತಿಳಿದುಬಂದಿದೆ.
ಮಗನ ಜೊತೆ ಕೊನೆಯ ಮಾತು; ಆಮೇಲೆ ನಡೆದದ್ದೇ ಬೇರೆ!
ಇಂದು ಬೆಳಿಗ್ಗೆ ಶೌಚಕ್ಕೆಂದು ಗ್ರಾಮದ ಹೊರವಲಯಕ್ಕೆ ತೆರಳಿದ್ದ ಶಿವಕುಮಾರ್, ಅಲ್ಲಿ ಬಾವಿಯ ಬಳಿ ತನ್ನ ಸ್ವಂತ ಮಗನೊಂದಿಗೆ ಕೊನೆಯ ಬಾರಿಗೆ ಮಾತನಾಿದ್ದರು. ಮಗನ ಜೊತೆ ಸಹಜವಾಗಿಯೇ ಮಾತನಾಡಿ ಬಳಿಕ ಮಗನನ್ನು ಅಲ್ಲಿಂದ ಕಳುಹಿಸಿದ್ದರು. ಆದರೆ ಮಗ ಕಣ್ಣೆದುರಿನಿಂದ ಮರೆಯಾಗುತ್ತಿದ್ದಂತೆ, ಶಿವಕುಮಾರ್ ಬಾವಿಗೆ ಹಾರಿ ತನ್ನ ಜೀವನವನ್ನು ಕೊನೆಗಾಣಿಸಿದ್ದಾರೆ. ತಂದೆಯ ಸಾವಿನ ಸುದ್ದಿ ಕೇಳಿದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಸ್ಥಳಕ್ಕೆ ಪೊಲೀಸರ ಭೇಟಿ, ಮೃತದೇಹಕ್ಕಾಗಿ ಶೋಧ
ಘಟನಾ ಸ್ಥಳಕ್ಕೆ ಬೀದರ್ ಗ್ರಾಮೀಣ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಬಾವಿಯಲ್ಲಿ ಮೃತದೇಹಕ್ಕಾಗಿ ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ. ಬಡತನ ಮತ್ತು ಸಾಲದ ಬಾಧೆಗೆ ಕುಟುಂಬವನ್ನು ಬೀದಿಗೆ ತಂದಿರುವುದು ಗ್ರಾಮಸ್ಥರ ಕಣ್ಣಾಲಿಗಳಲ್ಲಿ ನೀರು ತರಿಸಿದೆ.
