
ಹುಬ್ಬಳ್ಳಿಯ ಜಿಮ್ ಓನರ್ ಸಮೀರ್ ಮುಲ್ಲಾ ಲವ್ ಜಿಹಾದ್ ಪ್ರಕರಣದ ತನಿಖೆ ನಡೆಯುತ್ತಿರುವಾಗಲೇ, ಅದೇ ಜಿಮ್‌ನಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾದ ಮುಫೀಸ್ ಮಿಯಾನ್ನಾವರ್ ಎಂಬಾತನ ವಿರುದ್ಧ ಮತ್ತೊಂದು ಲವ್ ಜಿಹಾದ್ ಪ್ರಕರಣ ದಾಖಲಾಗಿದೆ. ಮದುವೆಯಾಗುವುದಾಗಿ ನಂಬಿಸಿ ಅ*ತ್ಯಾಚಾರ ಎಸಗಿ, ವಿಡಿಯೋ ಲೀಕ್ ಮಾಡುವುದಾಗಿ ಬೆದರಿಕೆ ಹಾಕಿದ ಆರೋಪದ ಮೇಲೆ ಯುವತಿ ದೂರು ನೀಡಿದ್ದಾಳೆ.
ಎರಡು ದಿನಗಳಿಂದ ಹುಬ್ಬಳ್ಳಿಯ ಜಿಮ್ ಓನರ್ ಸಮೀರ್ ಮುಲ್ಲಾ ಲವ್ ಜಿಹಾದ್ ಪ್ರಕರಣ ಭಾರಿ ಸದ್ದು ಮಾಡುತ್ತಿದೆ. ಹಲವಾರು ಹಿಂದೂ ಯುವತಿಯರಿಗೆ ಮೋಸ ಮಾಡಿ, ಅವರ ಮೇಲೆ ಅ*ತ್ಯಾಚಾರ ಮಾಡಿ, ಗರ್ಭಪಾತ ಮಾಡಿಸಿರುವ ಭಯಾನಕ ಘಟನೆ ನಡೆದಿದ್ದು, ತನಿಖೆಯಿಂದ ಆತ ಹಾಗೂ ಅವನಿಗೆ ಹಿಂದೂ ಯುವತಿಯರನ್ನು ಪೂರೈಸುತ್ತಿದ್ದ ಆರೋಪದ ಮೇಲೆ ಅಕ್ಕ ಇಬ್ಬರ ವಿರುದ್ಧವೂ ತನಿಖೆ ನಡೆಯುತ್ತಿದೆ. ತಾನು ತುಂಬಾ ಅಮಾಯಕ, ಹೆಣ್ಣು ಮಕ್ಕಳ ರಕ್ಷಣೆ ಮಾಡ್ತಿರೋದೇ ನನಗೆ ಮುಳುವಾಯ್ತು ಎಂದೆಲ್ಲಾ ಪುಂಗಿ ಬಿಡುವ ಸಮೀರ್ನ ಮೊಬೈಲ್ನಲ್ಲಿ ಡಿಲೀಟ್ ಮಾಡಿರೋ ಫೋಟೋಗಳು, ವಿಡಿಯೋಗಳ ರಿಕವರಿ ನಡೆಯುತ್ತಿದ್ದು, ಅವುಗಳ ಪೈಕಿ ಕೆಲವನ್ನು ನೋಡಿ ಇದಾಗಲೇ ಪೊಲೀಸರು ಬೆಚ್ಚಿಬಿದ್ದಿದ್ದಾರೆ.
ಇನ್ನೊಂದು ಲವ್ ಜಿಹಾದ್
ಈ ಕೇಸ್ ಇನ್ನೂ ನಡೆಯುತ್ತಿರುವಾಗಲೇ ಇನ್ನೊಂದು ಲವ್ ಜಿಹಾದ್ ಪ್ರಕರಣ ಹುಬ್ಬಳ್ಳಿಯಲ್ಲಿ ಬೆಳಕಿಗೆ ಬಂದಿದೆ. ಮುಫೀಸ್ ಮಿಯಾನ್ನಾವರ್ ಎಂಬಾತ ಯುವತಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಆತನ ಮೇಲೆ ಯುವತಿ ದೂರು ದಾಖಲು ಮಾಡಿದ್ದಾಳೆ. ಈತ ಕೂಡ ಸಮೀರ್ನ ಜಿಮ್‌ನಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಲಾಗುತ್ತಿದೆಯಾದರೂ ಈ ಬಗ್ಗೆ ಇನ್ನಷ್ಟೇ ವಿವರ ಬಹಿರಂಗಗೊಳ್ಳಬೇಕಿದೆ. ಯುವತಿ ಹೇಳಿರುವ ಪ್ರಕಾರ, ಈತ ತನ್ನನ್ನು ಪ್ರೀತಿಸುವುದಾಗಿ ಹೇಳಿದ್ದ. ಆಮೇಲೆ ಅದು ನಾಟಕ ಎನ್ನುವುದು ಗೊತ್ತಾಯಿತು. ಈತ ಪ್ರೀತಿಸಿರುವುದಾಗಿ ನಂಬಿಕ ರೇ*ಪ್ ಮಾಡಿದ್ದಾನೆ ಎಂದಿದ್ದಾಳೆ. ಸ್ನೇಹಿತೆಯೊಬ್ಬಳು ಈತನನ್ನು ಪರಿಚಯ ಮಾಡಿಸಿದ್ಲು. ಅಲ್ಲಿಂದ ಲವ್ ಶುರುವಾಯ್ತು. ಆಮೇಲೆ ಪ್ರೀತಿ ಮಾಡ್ತೇನೆ ಎಂದಿದ್ದ. ನಾನೂ ನಂಬಿದ್ದೆ ಎಂದಿದ್ದಾಳೆ ಯುವತಿ.
ಮದುವೆಗೂ ಸಿದ್ಧತೆ
ಪೊಲೀಸರು ಹೇಳಿರುವ ಪ್ರಕಾರ, ಇವರಿಬ್ಬರೂ ಧಾರವಾಡದಲ್ಲಿ ರಿಜಿಸ್ಟ್ರಾರ್ ಮದುವೆಗೆ ಸಿದ್ಧತೆ ಮಾಡಿಕೊಂಡಿದ್ದರು. ಯುವತಿ ಕುಟುಂಬಸ್ಥರಿಗೆ ಆತನ ಮೇಲೆ ಅನುಮಾನ ಬಂದು ಮದುವೆ ನಿಲ್ಲಿಸಿದ್ದಾರೆ. ವಿಷಯ ತಿಳಿಯುತ್ತಲೇ ತಮ್ಮಿಬ್ಬರ ಆ ಕ್ರಿಯೆಯ ವಿಡಿಯೋ ಮಾಡಿಕೊಂಡಿದ್ದ ಮುಫೀಸ್, ಅದನ್ನು ಲೀಕ್ ಮಾಡುವುದಾಗಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಸದ್ಯ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಒಂಟಿಯಾಗಿದ್ದಾಗ ಹೋಗ್ತಿದ್ದ
ಯುವತಿ ಮನೆಯಲ್ಲಿ ಒಂಟಿಯಾಗಿದ್ದ ವೇಳೆ ಹೋಗುತ್ತಿದ್ದ. ಅಲ್ಲಿ ಅ*ತ್ಯಾಚಾರ ಎಸಗುತ್ತಿದ್ದ. ವಿಷಯ ಯಾರಿಗಾದರೂ ತಿಳಿಸಿದರೆ, ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದ. ಜೀವ ಭಯದ ಹಿನ್ನೆಲೆ ದೂರು ನೀಡಲು ಹಿಂದೇಟು ಹಾಕಿದ್ದಳು. ಆದರೆ ಆದರೆ ಸಮೀರ್ ಮುಲ್ಲಾನ ಲವ್ ಜಿಹಾದ್ ಪ್ರಕರಣ ಹೊರ ಬಂದ ಬಳಿಕ ದೂರು ದಾಖಲಿಸಲು ಮುಂದೆ ಬಂದಿರೋ ಯುವತಿ, ಸಂಘಟನೆಯವರ ನೆರವಿನಿಂದ ಹುಬ್ಬಳ್ಳಿಯ ಕೇಶ್ವಾಪುರ ಠಾಣೆಯಲ್ಲಿ ಆರೋಪಿ ವಿರುದ್ಧ ದೂರು ದಾಖಲು ಮಾಡಿದ್ದಾಳೆ ಎನ್ನಲಾಗಿದೆ.