Headlines

Iran attack on Gulf countries ಡೊನಾಲ್ಡ್ ಟ್ರಂಪ್ ‘ಶಿಲಾಯುಗ’ ಎಚ್ಚರಿಕೆ ಬೆನ್ನಲ್ಲೇ ಇರಾನ್‌ ದಾಳಿ ತೀವ್ರ! | Iran Intensifies Attacks Following Donald Trump S Stone Age Warning Rav

Iran attack on Gulf countries ಡೊನಾಲ್ಡ್ ಟ್ರಂಪ್ ‘ಶಿಲಾಯುಗ’ ಎಚ್ಚರಿಕೆ ಬೆನ್ನಲ್ಲೇ ಇರಾನ್‌ ದಾಳಿ ತೀವ್ರ! | Iran Intensifies Attacks Following Donald Trump S Stone Age Warning Rav



Iran attack on Gulf countries ಡೊನಾಲ್ಡ್ ಟ್ರಂಪ್ ‘ಶಿಲಾಯುಗ’ ಎಚ್ಚರಿಕೆ ಬೆನ್ನಲ್ಲೇ ಇರಾನ್‌ ದಾಳಿ ತೀವ್ರ! | Iran Intensifies Attacks Following Donald Trump S Stone Age Warning Rav

ಇರಾನ್ ಕೊಲ್ಲಿ ದೇಶಗಳ ಮೇಲೆ ತನ್ನ ದಾಳಿಯನ್ನು ತೀವ್ರಗೊಳಿಸಿದ್ದು, ಕುವೈತ್, ಯುಎಇ ಮತ್ತು ಸೌದಿ ಅರೇಬಿಯಾದಲ್ಲಿನ ತೈಲ, ಅನಿಲ ಮತ್ತು ನೀರು ಶುದ್ಧೀಕರಣ ಘಟಕಗಳನ್ನು ಗುರಿಯಾಗಿಸಿಕೊಂಡಿದೆ. ಇದಕ್ಕೆ ಪ್ರತಿಯಾಗಿ ಅಮೆರಿಕ ಮತ್ತು ಇಸ್ರೇಲ್ ಇರಾನ್ ಮೇಲೆ ದಾಳಿ ನಡೆಸಿವೆ.

ಕೊಲ್ಲಿ ದೇಶಗಳ ನೀರು ಶುದ್ಧೀಕರಣ ಘಟಕ, ರಿಫೈನರಿ, ಅನಿಲ ಘಟಕದ ಮೇಲೆ ದಾಳಿ

ಟೆಹ್ರಾನ್‌/ದುಬೈ(ಏ.4): ಇರಾನ್‌ ಬಳಿಯಿರುವ ಶಸ್ತ್ರಾಸ್ತ್ರಗಳೆಲ್ಲಾ ಮುಗಿಯುತ್ತಾ ಬಂದಿದ್ದು, ಅವರು ಸಂಧಾನಕ್ಕಾಗಿ ಹಾತೊರೆಯುತ್ತಿದ್ದಾರೆ ಎಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಅವರನ್ನು ಶಿಲಾಯುಗಕ್ಕೆ ಇಳಿಸುತ್ತೇವೆ ಎಂಬ ಬೆದರಿಕೆ ಒಡ್ಡುತ್ತಿದ್ದಂತೆ ಇರಾನ್‌ ತನ್ನ ಬಲಪ್ರದರ್ಶನವನ್ನು ತೀವ್ರಗೊಳಿಸಿದೆ. ಇಸ್ರೇಲ್‌ ಮತ್ತು ಕೊಲ್ಲಿ ದೇಶಗಳನ್ನು ಗುರಿಯಾಗಿಸಿ ಶುಕ್ರವಾರವೂ ಭಾರೀ ದಾಳಿ ನಡೆಸಿದೆ.

ಯದ್ಧ 5ನೇ ವಾರಕ್ಕೆ ಕಾಲಿಡುತ್ತಿರುವ ಹೊತ್ತಿನಲ್ಲೇ ಶುಕ್ರವಾರ, ಕುವೈತ್‌ನ ಮಿನಾ ಅಲ್‌ ಅಹ್ಮದಿ ತೈಲ ಸಂಸ್ಕರಣಾ ಘಟಕ ಮತ್ತು ನೀರು ಶುದ್ಧೀಕರಣ ಘಟಕ ಗುರಿಯಾಗಿಸಿ ಇರಾನ್‌ ದಾಳಿ ನಡೆಸಿದೆ. ದಾಳಿ ಬಳಿಕ ಸಂಸ್ಕರಣಾ ಘಟಕದಲ್ಲಿ ಭಾರೀ ಬೆಂಕಿ ಹೊತ್ತಿಕೊಂಡಿದ್ದು, ಅದನ್ನು ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.

ಇನ್ನು ಸೌದಿ ಅರೇಬಿಯಾ, ಬಹ್ರೇನ್‌ ಮತ್ತು ಯುಎಇ ಮೇಲೂ ಇರಾನ್‌ ದಾಳಿ ನಡೆಸಿದೆ. ಯುಎಎನಲ್ಲಿರುವ ವಿಶ್ವದ ಅತಿದೊಡ್ಡ ಅನಿಲ ಉತ್ಪಾದನಾ ಘಟಕವಾದ ಹಬ್‌ಶಾನ್‌ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದೆ. ಆದರೆ ಇದನ್ನು ತಡೆಯುವಲ್ಲಿ ಯಶಸ್ವಿಯಾಗಿರುವುದಾಗಿ ಯುಎಇ ಹೇಳಿದೆ. ಆದರೆ ಈ ವೇಳೆ ಬಿದ್ದ ಅವಶೇಷಗಳಿಂದ ಘಟಕಕದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಘಟಕದಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ.

ಇದೇ ವೇಳೆ ಇರಾನ್‌ ರಾಜಧಾನಿ ಟೆಹ್ರಾನ್‌ ಮತ್ತು ಪರಮಾಣು ಕೇಂದ್ರ ಇರುವ ಇಸ್ಪ್‌ಹಾನ್‌ ಮೇಲೆ ಅಮೆರಿಕ ಮತ್ತು ಇಸ್ರೇಲ್‌ ದಾಳಿ ನಡೆಸಿವೆ.

ಅಮೆರಿಕ ನೌಕೆ ಮಧ್ಯಪ್ರಾಚ್ಯದತ್ತ

ಈ ನಡುವೆ ಕ್ರೊವೇಷಿಯಾದಲ್ಲಿ ದುರಸ್ತಿಗೆ ಒಳಪಟ್ಟಿದ್ದ ಅಮೆರಿಕದ ಅತಿದೊಡ್ಡ ಯುದ್ಧನೌಕೆಯಾದ ಯುಎಸ್‌ಎಸ್‌ ಜೆರಾಲ್ಡ್‌ ಆರ್‌. ಫೋರ್ಡ್‌ ಮರಳಿ ಇದೀಗ ರಾಷ್ಟ್ರೀಯ ಸೇವೆಗೆ ಅಣಿಯಾಗಿದೆ ಎಂದು ಅಮೆರಿಕ ಸೇನೆ ಹೇಳಿದೆ. ಉಳಿದಂತೆ ಅಮೆರಿಕದ ಇನ್ನೆರೆಡು ಯುದ್ಧ ನೌಕೆಗಳಾದ ಯುಎಸ್‌ಎಸ್‌ ಅಬ್ರಹಾಂ ಲಿಂಕನ್‌ ಅರೇಬಿಯನ್‌ ಸಮುದ್ರದಲ್ಲಿ ಬೀಡುಬಿಟ್ಟಿದ್ದರೆ, ಯುಎಸ್‌ಎಸ್‌ ಜಾರ್ಜ್‌ ಎಚ್‌.ಡಬ್ಲ್ಯು ಬುಷ್‌ ನೌಕೆ ನೋರ್ಫಾಕ್‌ನಿಂದ ಮಧ್ಯಪ್ರಾಚ್ಯದತ್ತ ಪ್ರಯಾಣ ಬೆಳೆಸಿದೆ.

ಇರಾನ್‌ ಸೇನೆಗೆ 12 ವರ್ಷದ ಮಕ್ಕಳೂ ನೇಮಕ: ಆಮ್ನೆಸ್ಟಿ

ಟೆಹ್ರಾನ್‌: ಅಮೆರಿಕ ಭೂದಾಳಿಗೆ ಸಜ್ಜಾಗುತ್ತಿರುವ ವರದಿಗಳ ನಡುವೆಯೇ, ಇರಾನ್‌ನ ಅರೆಸೇನಾಪಡೆಯಾದ ರೆವಲ್ಯೂನರಿ ಗಾರ್ಡ್ಸ್‌ ತನ್ನ ಬಸಿಜ್‌ ಪಡೆಗೆ 12 ವರ್ಷದ ಚಿಕ್ಕಮಕ್ಕಳನ್ನೂ ನೇಮಕ ಮಾಡಿಕೊಳ್ಳುತ್ತಿದೆ ಎಂದು ಆಮ್ನೆಸ್ಟಿ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ. ಚಿಕ್ಕಮಕ್ಕಳ ಕೈಗೆ ಕಲಾಶ್ನಿಕೋವ್‌ನಂಥ ಅತ್ಯಾಧುನಿಕ ಗನ್‌ಗಳನ್ನು ಕೊಟ್ಟು ಅವರನ್ನು ತಪಾಸಣಾ ಕೇಂದ್ರಗಳ ಬಳಿಕ, ಪಹರೆಗೆ ನಿಯೋಜಿಸಲಾಗುತ್ತಿದೆ ಎಂದು ಸಂಸ್ಥೆ ಹೇಳೀದೆ.

ಕ್ಷಿಪಣಿ ಅವಶೇಷ ಉರುಳಿ 5 ಭಾರತೀಯರಿಗೆ ಗಾಯ

ದುಬೈ: ಇರಾನ್‌ ಕಡೆಯಿಂದ ಹಾರಿಬಂದ ಕ್ಷಿಪಣಿಗಳನ್ನು ಯುಎಇ ವಾಯುರಕ್ಷಣಾ ವ್ಯವಸ್ಥೆ ಹೊಡೆದುರುಳಿಸಿದೆ. ಆದರೆ ಅವುಗಳ ಭಾಗಗಳು ಬಿದ್ದು ಅಬುಧಾಬಿಯಲ್ಲಿ 5 ಭಾರತೀಯರು ಸೇರಿ 6 ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ. ಶುಕ್ರವಾರ 18 ಬ್ಯಾಲಿಸ್ಟಿಕ್‌ ಕ್ಷಿಪಣಿ, 4 ಕ್ರೂಸ್‌ ಕ್ಷಿಪಣಿ ಮತ್ತು 47 ಯುಎಇಗಳನ್ನು ಇರಾನ್‌ ಹಾರಿಸಿದ್ದು, ಅವೆಲ್ಲವನ್ನು ಹೊಡೆದಿರುವುದಾಗಿ ಯುಎಇ ಹೇಳಿದೆ.

ಒಮಾನ್‌ ಜತೆ ಸೇರಿ ಹೋರ್ಮುಜ್‌ ನಿಯಂತ್ರಣ: ಇರಾನ್

ಟೆಹ್ರಾನ್‌: ‘ಹೋರ್ಮುಜ್‌ ನಿಯಂತ್ರಣ ನಮ್ಮ ಮತ್ತು ಒಮಾನ್‌ ಕೈಲಿದೆ’ ಎಂದಿದ್ದ ಇರಾನ್‌, ಆ ಜಲಸಂಧಿಯ ನಿರ್ವಹಣೆಯನ್ನು ಒಮಾನ್‌ ಜತೆ ಸೇರಿ ನಡೆಸಲು ಪ್ರಸ್ತಾವನೆಯನ್ನು ಸಿದ್ಧಪಡಿಸುತ್ತಿದೆ ಎನ್ನಲಾಗಿದೆ. ಈ ಪ್ರಸ್ತಾವನೆಯ ಉದ್ದೇಶ, ಆ ಮಾರ್ಗದಲ್ಲಿ ಸುರಕ್ಷಿತ ಸಾಗಣೆ ಸುಗಮಗೊಳಿಸಲು ಹಡಗುಗಳಿಗೆ ಉತ್ತಮ ಸೇವೆ ಒದಗಿಸುವುದು ಎನ್ನಲಾಗಿದೆ. ಆದರೆ ಈ ಬಗ್ಗೆ ಒಮಾನ್‌ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.



Source link

Leave a Reply

Your email address will not be published. Required fields are marked *