Headlines

ಮಹಿಳಾ ವಿಶ್ವಕಪ್: ಕೊನೆಯಲ್ಲಿ ಗುಡುಗಿದ ರಿಚಾ ಘೋಷ್, ಪಾಕ್‌ಗೆ ಸವಾಲಿನ ಗುರಿ ನೀಡಿದ ಭಾರತ! | Womens World Cup 2025 India Post 247 Vs Pakistan Richa Harleen Lead Fightback

ಮಹಿಳಾ ವಿಶ್ವಕಪ್: ಕೊನೆಯಲ್ಲಿ ಗುಡುಗಿದ ರಿಚಾ ಘೋಷ್, ಪಾಕ್‌ಗೆ ಸವಾಲಿನ ಗುರಿ ನೀಡಿದ ಭಾರತ! | Womens World Cup 2025 India Post 247 Vs Pakistan Richa Harleen Lead Fightback



ಮಹಿಳಾ ವಿಶ್ವಕಪ್: ಕೊನೆಯಲ್ಲಿ ಗುಡುಗಿದ ರಿಚಾ ಘೋಷ್, ಪಾಕ್‌ಗೆ ಸವಾಲಿನ ಗುರಿ ನೀಡಿದ ಭಾರತ! | Womens World Cup 2025 India Post 247 Vs Pakistan Richa Harleen Lead Fightback

ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ, ಪಾಕಿಸ್ತಾನದ ವಿರುದ್ಧ ಭಾರತ ತಂಡವು 247 ರನ್‌ಗಳ ಸವಾಲಿನ ಮೊತ್ತವನ್ನು ಕಲೆಹಾಕಿದೆ. ಹರ್ಲಿನ್ ಡಿಯೋಲ್, ಜೆಮಿಮಾ ರೋಡ್ರಿಗಸ್‌ ಮತ್ತು ರಿಚಾ ಘೋಷ್ ಅವರ ಉತ್ತಮ ಬ್ಯಾಟಿಂಗ್ ನೆರವಿನಿಂದ ಭಾರತ ಈ ಗುರಿಯನ್ನು ನೀಡಿದೆ.

ಕೊಲಂಬೊ: ಹರ್ಲಿನ್ ಡಿಯೋಲ್, ಜೆಮಿಮಾ ರೋಡ್ರಿಗಸ್‌ ಹಾಗೂ ಕೊನೆಯಲ್ಲಿ ರಿಚಾ ಘೋಷ್ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಬದ್ದ ಎದುರಾಳಿ ಪಾಕಿಸ್ತಾನ ಎದುರು ಭಾರತ ಮಹಿಳಾ ಕ್ರಿಕೆಟ್ ತಂಡವು ಸವಾಲಿನ ಮೊತ್ತ ಕಲೆಹಾಕಿದೆ. ನಿಗದಿತ 50 ಓವರ್‌ಗಳಲ್ಲಿ ಹರ್ಮನ್‌ಪ್ರೀತ್ ಕೌರ್ ಪಡೆ 10 ವಿಕೆಟ್ ಕಳೆದುಕೊಂಡು 247 ರನ್ ಬಾರಿಸಿದ್ದು, ಪಾಕ್‌ಗೆ ಸವಾಲಿನ ಗುರಿ ನೀಡಿದೆ

ಇಲ್ಲಿನ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಲಿಳಿದ ಭಾರತ ಮಹಿಳಾ ತಂಡವು ಉತ್ತಮ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್‌ಗೆ ಸ್ಮೃತಿ ಮಂಧನಾ ಹಾಗೂ ಪ್ರತಿಕಾ ರಾವಲ್ ಮೊದಲ 9 ಓವರ್‌ಗೆ 48 ರನ್‌ಗಳ ಜತೆಯಾಟವಾಡಿದರು. ಸ್ಮೃತಿ ಮಂಧನಾ 32 ಎಸೆತಗಳನ್ನು ಎದುರಿಸಿ 23 ರನ್ ಗಳಿಸಿ ಪಾಕ್ ನಾಯಕಿ ಪಾತಿಮಾ ಸನಾಗೆ ವಿಕೆಟ್ ಒಪ್ಪಿಸಿದರು. ಇನ್ನು ಮತ್ತೋರ್ವ ಆರಂಭಿಕ ಬ್ಯಾಟರ್ ಪ್ರತಿಕಾ ರಾವಲ್ 37 ಎಸೆತಗಳಲ್ಲಿ 5 ಬೌಂಡರಿ ಸಹಿತ 31 ರನ್ ಗಳಿಸಿ ಸಾದಿಯಾ ಇಕ್ಬಾಲ್ ಬೌಲಿಂಗ್‌ನಲ್ಲಿ ಕ್ಲೀನ್‌ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು.

Scroll to load tweet…

 

ಮತ್ತೆ ಆಸರೆಯಾದ ಹರ್ಲಿನ್ ಡಿಯೋಲ್:

ವಿಶ್ವಕಪ್ ಉದ್ಘಾಟನಾ ಪಂದ್ಯದಲ್ಲಿ ಶ್ರೀಲಂಕಾ ಎದುರು ಆಕರ್ಷಕ 48 ರನ್ ಗಳಿಸಿ ಮಿಂಚಿದ್ದ ಹರ್ಲಿನ್ ಡಿಯೋಲ್, ಇದೀಗ ಪಾಕಿಸ್ತಾನ ಎದುರು ಜವಾಬ್ದಾರಿಯುತ ಆಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಆರಂಭದಲ್ಲಿ ಎಚ್ಚರಿಕೆಯ ಆಟವಾಡಿದ ಡಿಯೋಲ್, ಆ ಬಳಿಕ ರನ್ ಗಳಿಕೆಗೆ ಚುರುಕು ಮುಟ್ಟಿಸಿದರು. ಡಿಯೋಲ್ 65 ಎಸೆತಗಳನ್ನು ಎದುರಿಸಿ 4 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 46 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.

Scroll to load tweet…

 

ಇನ್ನು ನಾಯಕಿ ಹರ್ಮನ್‌ಪ್ರೀತ್ ಕೌರ್ 19 ರನ್ ಗಳಿಸಿ ನಿರಾಸೆ ಮೂಡಿಸಿದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಜೆಮಿಮಾ ರೋಡ್ರಿಗಸ್ ಆಕರ್ಷಕ 32 ರನ್ ಸಿಡಿಸಿದರೆ, ಅನುಭವಿ ಆಲ್ರೌಂಡರ್ ದೀಪ್ತಿ ಶರ್ಮಾ 25 ಹಾಗೂ ಸ್ನೆಹ್ ರಾಣಾ 20 ರನ್ ಗಳಿಸುವ ಮೂಲಕ ತಂಡಕ್ಕೆ ಅಮೂಲ್ಯ ಕಾಣಿಕೆ ನೀಡಿದರು.

ಕೊನೆಯಲ್ಲಿ ಗುಡುಗಿದ ರಿಚಾ ಘೋಷ್

ಕೊನೆಯಲ್ಲಿ ಸ್ಪೋಟಕ ಬ್ಯಾಟಿಂಗ್ ನಡೆಸಿದ ರಿಚಾ ಘೋಷ್ ಕೇವಲ 20 ಎಸೆತಗಳನ್ನು ಎದುರಿಸಿ 3 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ ಅಜೇಯ 35 ರನ್ ಬಾರಿಸುವ ಮೂಲಕ ತಂಡಕ್ಕೆ ಆಸರೆಯಾದರು.

ಪಾಕಿಸ್ತಾನ ತಂಡದ ಪರ ಡಯಾನಾ ಬೇಗ್ 4 ವಿಕೆಟ್ ಪಡೆದರೆ, ನಾಯಕಿ ಪಾತಿಮಾ ಸನಾ, ಸಾದಿಯಾ ಇಕ್ಬಾಲ್ ತಲಾ 2, ನಶ್ರಾ ಸಂಧು ಹಾಗೂ ರಮೀನಾ ಶಮಿಮ್ ತಲಾ ಒಂದೊಂದು ವಿಕೆಟ್ ಪಡೆದರು

 



Source link

Leave a Reply

Your email address will not be published. Required fields are marked *