Headlines

ಓದಿದ ಶಾಲೆಗೆ 25 ವರ್ಷದ ಬಳಿಕ ಮರಳಿದ 1999-2001 ಬ್ಯಾಚ್‌ನ ವಿದ್ಯಾರ್ಥಿಗಳು: ಭಾವನಾತ್ಮಕ ಸಮಾರಂಭ | Sarjapur Koogur Village Government High School Students Of 1999 2001 Batch Returned To Their School After 25 Years Mrq

1999-2001ನೇ ಸಾಲಿನ ಹಳೆ ವಿದ್ಯಾರ್ಥಿಗಳು ತಮ್ಮ 25ನೇ ವರ್ಷದ ಬೆಳ್ಳಿ ಮಹೋತ್ಸವವನ್ನು ಆಚರಿಸಿದರು. ಈ ಭಾವನಾತ್ಮಕ ಸಮಾರಂಭದಲ್ಲಿ ಹಳೆಯ ಸ್ನೇಹಿತರು ಮತ್ತು ಗುರುಗಳನ್ನು ಭೇಟಿಯಾಗಿ, ಶಾಲಾ ದಿನಗಳ ನೆನಪುಗಳನ್ನು ಮೆಲುಕು ಹಾಕಿದರು. ಈ ವೇಳೆ ಶಿಕ್ಷಕರಿಗೆ ಸನ್ಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ದೊಮ್ಮಸಂದ್ರ: ವಿದ್ಯಾರ್ಥಿಗಳ ಪುನರ್ಮಿಲನ ಕಾರ್ಯಕ್ರಮಗಳು ಹಳೆಯ ನೆನಪುಗಳನ್ನು ಮತ್ತೆ ಜೀವಂತಗೊಳಿಸುವುದಷ್ಟೇ ಅಲ್ಲದೆ ಮುಂದಿನ ಪೀಳಿಗೆಗೆ ಪ್ರೇರಣೆಯಾಗುತ್ತವೆ. ಪ್ರತಿಯೊಬ್ಬ ವಿದ್ಯಾರ್ಥಿಯು ತಾನು ಕಲಿತ ಶಾಲೆಯ ಅಭಿವೃದ್ಧಿಗೆ ಸಹಕಾರ ನೀಡಿ ಕೃತಜ್ಞತಾ ಮನೋಭಾವನೆಯನ್ನು ಮೆರೆಯಬೇಕು ಎಂದು ಶಿಕ್ಷಕ ಕೃಷ್ಣಾರೆಡ್ಡಿ ತಿಳಿಸಿದರು.

ಅವರು ಸರ್ಜಾಪುರ ಸಮೀಪದ ಮುಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಗೂರು ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ 1999 ರಿಂದ 2001ನೇ ಸಾಲಿನ ಹಳೆ ವಿದ್ಯಾರ್ಥಿಗಳಿಂದ ಆಯೋಜಿಸಿದ್ದ 25ನೇ ವರ್ಷದ ಬೆಳ್ಳಿ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.

25 ವರ್ಷಗಳ ನಂತರದ ಭೇಟಿ

ಹಳೆ ವಿದ್ಯಾರ್ಥಿನಿ ಶಿಲ್ಪ ಮಾತನಾಡಿ, ಈ ಶಾಲೆಯು ನೀಡಿದ ಶಿಕ್ಷಣ ಮತ್ತು ಮೌಲ್ಯಗಳು ಎಂದಿಗೂ ಮರೆಯಲಾರವು. ಇಂದು 25 ವರ್ಷಗಳ ನಂತರ ಮತ್ತೆ ಇದೇ ಶಾಲಾ ಆವರಣದಲ್ಲಿ ಸ್ನೇಹಿತರನ್ನೂ, ಶಿಕ್ಷಕರನ್ನೂ ಭೇಟಿ ಮಾಡುತ್ತಿರುವುದು ತುಂಬಾ ಭಾವನಾತ್ಮಕ ಕ್ಷಣವಾಗಿದ್ದು. ಶಾಲಾ ದಿನಗಳಲ್ಲಿ ನಾವು ಹಂಚಿಕೊಂಡ ಸ್ನೇಹ, ಆಟಗಳು, ತರಗತಿಯ ನೆನಪುಗಳು ಎಲ್ಲವೂ ಇಂದು ಮತ್ತೆ ಮನಸ್ಸಿನಲ್ಲಿ ಮೂಡುತ್ತಿವೆ ಎಂದರು.

ಇದೇ ವೇಳೆ ಶಿಕ್ಷಕರಾದ ರಾಘವ ಹೊಳ್ಳ, ಕೃಷ್ಣಾರೆಡ್ಡಿ, ಮುತ್ತಪ್ಪ ಹಂಜಗಿರ, ಮುನಿರಾಜು, ಸುಧಾಮಣಿ, ಪ್ರಭಾವತಿ, ಸುನೀತಾ ನಾಯಕ್ ಅವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು. ಮತ್ತು ಹಳೆ ವಿದ್ಯಾರ್ಥಿಗಳಿಂದ ಗಾಯನ, ನೃತ್ಯ ಸೇರಿ ಹಲವು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು..

ಕಾರ್ಯಕ್ರ‌ಮದಲ್ಲಿ ಹಳೆಯ ವಿದ್ಯಾರ್ಥಿಗಳಾದ ನರೇಂದ್ರ, ಸೋಮಶೇಖರ್, ಬಾಲಾಜಿ ಹಾಗೂ ಮತ್ತಿತರರು ಹಾಜರಿದ್ದರು.

ಇದನ್ನೂ ಓದಿ: ವೈರಲ್ ಆದ ಪಿಜ್ಜಾ ಡೆಲಿವರಿ ಬಾಯ್ ವೀಡಿಯೋದ ಅಸಲಿಯತ್ತು ಇದು: ನೆಟ್ಟಿಗರಿಂದ ತೀವ್ರ ತರಾಟೆ

25ನೇ ವರ್ಷದ ಬೆಳ್ಳಿ ಮಹೋತ್ಸವ ಕಾರ್ಯಕ್ರಮ

ಸರ್ಜಾಪುರ ಸಮೀಪದ ಮುಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಗೂರು ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ 1999 ರಿಂದ 2001ನೇ ಸಾಲಿನ ಹಳೆ ವಿದ್ಯಾರ್ಥಿಗಳಿಂದ ಆಯೋಜಿಸಿದ್ದ 25ನೇ ವರ್ಷದ ಬೆಳ್ಳಿ ಮಹೋತ್ಸವ ಕಾರ್ಯಕ್ರಮದಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಇದನ್ನೂ ಓದಿ: 60 ವರ್ಷದ ಬಳಿಕ ಗೆಳೆಯರ ಭೇಟಿ; ಪದವಿ ಮುಗಿದಾಗ ಇದ್ದಿದ್ದು 122, ಈಗ ಉಳಿದಿರೋದು 12 ಜನ ಮಾತ್ರ

Scroll to load tweet…

Source link

Leave a Reply

Your email address will not be published. Required fields are marked *