US fighter jet shot down in Iran ಇರಾನ್‌ನಿಂದ ಅಮೆರಿಕದ ಯುದ್ಧ ವಿಮಾನ ಪತನ: ಸ್ಟೆಲ್ತ್ ವಿಫಲ? | Us Fighter Jet Shot Down In Iran Iran Surprised The World By Shooting Down An American Plane

US fighter jet shot down in Iran ಇರಾನ್‌ನಿಂದ ಅಮೆರಿಕದ ಯುದ್ಧ ವಿಮಾನ ಪತನ: ಸ್ಟೆಲ್ತ್ ವಿಫಲ? | Us Fighter Jet Shot Down In Iran Iran Surprised The World By Shooting Down An American Plane



US fighter jet shot down in Iran ಇರಾನ್‌ನಿಂದ ಅಮೆರಿಕದ ಯುದ್ಧ ವಿಮಾನ ಪತನ: ಸ್ಟೆಲ್ತ್ ವಿಫಲ? | Us Fighter Jet Shot Down In Iran Iran Surprised The World By Shooting Down An American Plane

ಮಧ್ಯಪ್ರಾಚ್ಯ ಯುದ್ಧದ ನಡುವೆ, ಇರಾನ್ ಅಮೆರಿಕದ ಎಫ್-35 ಸೇರಿದಂತೆ ಹಲವು ಯುದ್ಧ ವಿಮಾನಗಳನ್ನು ಹೊಡೆದುರುಳಿಸಿರುವುದಾಗಿ ಹೇಳಿಕೊಂಡಿದೆ. 23 ವರ್ಷಗಳಲ್ಲೇ ಮೊದಲ ಬಾರಿಗೆ ಶತ್ರು ದೇಶದಲ್ಲಿ ಅಮೆರಿಕದ ವಿಮಾನ ಪತನವಾಗಿದ್ದು, ಇದು ನಿಜವಾದರೆ ಅಮೆರಿಕದ ಸ್ಟೆಲ್ತ್ ತಂತ್ರಜ್ಞಾನದ ಸಾಮರ್ಥ್ಯದ ಬಗ್ಗೆ ಪ್ರಶ್ನೆ..

ಟೆಹ್ರಾನ್‌: ಮಧ್ಯಪ್ರಾಚ್ಯ ಯುದ್ಧ ಭೀಕರ ಸ್ವರೂಪ ಪಡೆದುಕೊಂಡಿರುವ ಹೊತ್ತಿನಲ್ಲೇ ಅಮೆರಿಕದ ದೈತ್ಯ ವಿಮಾನಗಳನ್ನು ಹೊಡೆದುರುಳಿಸುವ ಮೂಲಕ ಇರಾನ್‌ ಇಡೀ ವಿಶ್ವವನ್ನೇ ನಿಬ್ಬೆರಗಾಗಿಸಿದೆ. ಕಾರಣ, ಶತ್ರು ದೇಶವೊಂದರಲ್ಲಿ ಅಮೆರಿಕದ ಯುದ್ಧ ವಿಮಾನ ಪತನವಾಗಿದ್ದು 23 ವರ್ಷಗಳಲ್ಲೇ ಇದು ಮೊದಲು. ಈ ಹಿಂದೆ 2003ರಲ್ಲಿ ಇರಾಕ್‌ ಮೇಲಿನ ದಾಳಿ ವೇಳೆ ಅಮೆರಿಕದ ಯುದ್ಧ ವಿಮಾನ ಅಲ್ಲಿ ಪತನಗೊಂಡಿತ್ತು. ಅದರ ಬಳಿಕ ಅಮೆರಿಕ ಹಲವು ಯುದ್ಧ ನಡೆಸಿದ್ದರೂ ಎಲ್ಲಿಯೂ ಅದಕ್ಕೆ ಈ ರೀತಿಯ ಮುಖಭಂಗವಾಗಿರಲಿಲ್ಲ.

ಅಮೆರಿಕ ದಾಳಿ ಆರಂಭಿಸಿದಾಗ 4-5 ದಿನಗಳಲ್ಲಿ ಮುಗಿಯಬಹುದು ಎಂದೆಣಿಸಿದ್ದ ಕೊಲ್ಲಿ ಯುದ್ಧ 6ನೇ ವಾರಕ್ಕೆ ಕಾಲಿಡುತ್ತಿರುವ ಹೊತ್ತಿನಲ್ಲೂ ಅಮೆರಿಕ ಮತ್ತು ಇಸ್ರೇಲ್‌ಗೆ ಇರಾನ್ ಹೊಡೆಯುತ್ತಿರುವ ಸಡ್ಡು, ಅಮೆರಿಕ ಸ್ಟೆಲ್ತ್‌ ತಂತ್ರಜ್ಞಾನವನ್ನೇ ನಾಚಿಸುವಂತೆ ಅದರ ಯುದ್ಧ ವಿಮಾನಗಳನ್ನು ಹೊಡೆದುರುಳಿಸುತ್ತಿರುವುದು ಭಾರೀ ಅಚ್ಚರಿ ಮೂಡಿಸಿದೆ.

ಕಳೆದ ಎರಡು ದಿನಗಳ ಅವಧಿಯಲ್ಲಿ ಅಮೆರಿಕದ ಎಫ್‌ 35, ಎಫ್‌ 15- ಇ ಮತ್ತು ಎ-10 ವಿಮಾನವನ್ನು ಹೊಡೆದುರುಳಿಸಿದ್ದಾಗಿ ಇರಾನ್‌ ಹೇಳಿಕೊಂಡಿದೆ. ಆದರೆ ಅಮೆರಿಕ ಮಾತ್ರ ಎಫ್‌15- ಇ ಮತ್ತು ಎ-10 ವಿಮಾನಗಳ ಮೇಲಿನ ದಾಳಿ ಖಚಿತಪಡಿಸಿದೆ. ಜೊತೆಗೆ ಘಟನೆ ವೇಳೆ ಇಬ್ಬರು ಪೈಲಟ್‌ಗಳು ನಾಪತ್ತೆಯಾಗಿದ್ದು, ಈ ಪೈಕಿ ಒಬ್ಬರ ರಕ್ಷಣೆ ಮಾಡಲಾಗಿದ್ದರೆ, ಇನ್ನೊಬ್ಬ ಪೈಲಟ್‌ಗಾಗಿ ಹುಡುಕಾಟ ಮುಂದುವರೆಸಿದೆ ಎಂದು ಖಚಿತಪಡಿಸಿದೆ.

ಆದರೆ ಇರಾನ್‌ ವಾದಿಸಿದಂತೆ ಒಂದು ವೇಳೆ ಎಫ್‌ 35 ವಿಮಾನ ಪತನ ಖಚಿತವಾದರೆ ಅದು ಅಮೆರಿಕದ ಅಹಂಗೆ ಭಾರೀ ಪೆಟ್ಟು ನೀಡಲಿದೆ. ಕಾರಣ ಎಫ್‌- 35 ವಿಶ್ವದ ಅತ್ಯಾಧುನಿಕ ಸ್ಟೆಲ್ತ್‌ (ರಾಡಾರ್‌ ಕಣ್ತಪ್ಪಿಸುವ ಸಾಮರ್ಥ್ಯ) ವಿಮಾನ ಎಂಬ ಹಿರಿಮೆ ಹೊಂದಿದೆ. ವಿಶ್ವದ ಯಾವುದೇ ಅತ್ಯಾಧುನಿಕ ರಾಡಾರ್‌ ವ್ಯವಸ್ಥೆಯನ್ನು ಭೇದಿಸಿ ಇದು ಶತ್ರುದೇಶದೊಳಗೆ ನುಗ್ಗಬಲ್ಲದು ಎಂದು ಅಮೆರಿಕ ಹೇಳುತ್ತಲೇ ಬಂದಿತ್ತು. ಆದರೆ ಇದೀಗ ಆ ಸ್ಟೆಲ್ತ್‌ ತಂತ್ರಜ್ಞಾನವನ್ನೇ ಭೇದಿಸಿ ತಾನು ಅದನ್ನು ಹೊಡೆದುರುಳಿಸಿದ್ದಾಗಿ ಇರಾನ್‌ ಹೇಳಿದೆ. ಇದು ನಿಜವಾದಲ್ಲಿ, ಇರಾನ್‌ ಸ್ಟೆಲ್ತ್‌ ತಂತ್ರಜ್ಞಾನ ಭೇದಿಸುವ ಸಾಮರ್ಥ್ಯ ಪಡೆದುಕೊಂಡಂತೆ ಆಗಲಿದೆ. ಜೊತೆಗೆ ಮುಂದಿನ ದಿನಗಳಲ್ಲಿ ಅಮೆರಿಕ ಮತ್ತು ಇಸ್ರೇಲ್‌ನ ಯುದ್ಧ ವಿಮಾನಗಳಿಗೆ ಭಾರೀ ಅಪಾಯಕಾರಿಯಾಗಿ ಪರಿಣಮಿಸಲಿದೆ.

ಇದರ ಜೊತೆಗೆ ಇರಾನ್‌ನ ಬಹುತೇಕ ರಕ್ಷಣಾ ಸಾಮರ್ಥ್ಯವನ್ನು ನಾವು ಧ್ವಂಸಗೊಳಿಸಿದ್ದೇವೆ. ಅಲ್ಲಿ ಹಾನಿ ಮಾಡಲು ನಮಗೆ ಇನ್ನೇನೂ ಉಳಿದಿಲ್ಲ ಎಂಬ ಅಮೆರಿಕ ಮತ್ತು ಇಸ್ರೇಲ್‌ನ ಸತತ ಹೇಳಿಕೆ ಹೊರತಾಗಿಯೂ, ಅಮೆರಿಕ ದಾಳಿಯಿಂದ ತನ್ನ ವಾಯುರಕ್ಷಣಾ ವ್ಯವಸ್ಥೆ ಹಾನಿಯಾಗಿದ್ದರೂ, ಅಮೆರಿಕದ ದೈತ್ಯ ವಿಮಾನಗಳನ್ನು ಹೊಡೆದುರುಳಿಸಿದ ಇರಾನ್‌ನ ಶಕ್ತಿ ಭಾರೀ ಅಚ್ಚರಿಗೆ ಕಾರಣವಾಗಿದೆ.



Source link

Leave a Reply

Your email address will not be published. Required fields are marked *