Headlines

ಕೆಡಿ ಸಿನಿಮಾ ಸರ್ಸೆ ಹಾಡಿನ ವಿವಾದಕ್ಕೆ ಇಡೀ ಸಿನಿಮಾ ಪ್ರದರ್ಶನವನ್ನೇ ರದ್ದುಗೊಳಿಸುವಂತೆ ಮತ್ತೊಂದು ದೂರು ದಾಖಲು! | Sandalwood Complaint Filed Against Dhruva Sarja Kd Movie Hindi Dubbing Controversy Sat

ಕೆಡಿ ಸಿನಿಮಾ ಸರ್ಸೆ ಹಾಡಿನ ವಿವಾದಕ್ಕೆ ಇಡೀ ಸಿನಿಮಾ ಪ್ರದರ್ಶನವನ್ನೇ ರದ್ದುಗೊಳಿಸುವಂತೆ ಮತ್ತೊಂದು ದೂರು ದಾಖಲು! | Sandalwood Complaint Filed Against Dhruva Sarja Kd Movie Hindi Dubbing Controversy Sat



ಕೆಡಿ ಸಿನಿಮಾ ಸರ್ಸೆ ಹಾಡಿನ ವಿವಾದಕ್ಕೆ ಇಡೀ ಸಿನಿಮಾ ಪ್ರದರ್ಶನವನ್ನೇ ರದ್ದುಗೊಳಿಸುವಂತೆ ಮತ್ತೊಂದು ದೂರು ದಾಖಲು! | Sandalwood Complaint Filed Against Dhruva Sarja Kd Movie Hindi Dubbing Controversy Sat

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ‘ಕೆಡಿ’ ಚಿತ್ರದ ‘ಸರ್ಕೆ ಚುನರ್ ತೇರಿ ಸರ್ಕೆ’ ಹಿಂದಿ ಹಾಡಿನ ವಿರುದ್ಧ ಅಶ್ಲೀಲತೆ ಮತ್ತು ಮದ್ಯಪಾನ ವೈಭವೀಕರಣದ ಆರೋಪದ ಮೇಲೆ ದೂರು ದಾಖಲಾಗಿದೆ. ಸಾಮಾಜಿಕ ಹೋರಾಟಗಾರ ಪುಂಡಿತ್‌ರಾವ್ ಧರೆನವರ್,  ಚಿತ್ರ ಪ್ರದರ್ಶನಕ್ಕೆ ತಡೆ ನೀಡುವಂತೆ ಪತ್ರ ಬರೆದಿದ್ದಾರೆ.

ಬೆಂಗಳೂರು (ಮಾ.18): ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಬಹುನಿರೀಕ್ಷಿತ ‘ಕೆಡಿ’ (KD: The Devil) ಚಿತ್ರದ ವಿರುದ್ಧ ಈಗ ಮತ್ತೊಂದು ದೂರು ದಾಖಲಾಗಿದೆ. ಚಿತ್ರದ ‘ಸರ್ಕೆ ಚುನರ್ ತೇರಿ ಸರ್ಕೆ’ (Sarke Chunar Teri Sarke) ಹಾಡಿನಲ್ಲಿ ಅಶ್ಲೀಲತೆ ಇದೆ ಎಂದು ಆರೋಪಿಸಿರುವ ಸಾಮಾಜಿಕ ಹೋರಾಟಗಾರ ಡಾ. ಪುಂಡಿತ್‌ರಾವ್ ಧರೆನವರ್, ಚಿತ್ರದ ಹಿಂದಿ ಆವೃತ್ತಿಯ ಪ್ರದರ್ಶನಕ್ಕೆ ಅನುಮತಿ ನೀಡಬಾರದು ಎಂದು ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಗೆ (CBFC) ಪತ್ರ ಬರೆದಿದ್ದಾರೆ.

ಹಾಡಿನಲ್ಲಿ ಏನಿದೆ ದೋಷ?

ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುವ ‘ಸರ್ಕೆ ಚುನರ್ ತೇರಿ ಸರ್ಕೆ’ ಹಾಡಿನಲ್ಲಿ ಅಶ್ಲೀಲ ಸಾಹಿತ್ಯ ಮತ್ತು ಅಶ್ಲೀಲ ನೃತ್ಯದ ಹೆಜ್ಜೆಗಳಿವೆ ಎಂಬುದು ಹೋರಾಟಗಾರರ ಪ್ರಮುಖ ಆರೋಪವಾಗಿದೆ. ಹಾಡಿನ ಸಾಹಿತ್ಯದಲ್ಲಿ ದ್ವಂದ್ವ ಅರ್ಥದ ಪದಗಳನ್ನು ಬಳಸಲಾಗಿದ್ದು, ಇದು ಸಮಾಜದ ಮೇಲೆ ಕೆಟ್ಟ ಪ್ರಭಾವ ಬೀರುತ್ತಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಮದ್ಯಪಾನ ವೈಭವೀಕರಣದ ಆರೋಪ:

ಕೇವಲ ಅಶ್ಲೀಲತೆ ಮಾತ್ರವಲ್ಲದೆ, ಈ ಹಾಡಿನಲ್ಲಿ ಮದ್ಯಪಾನವನ್ನು ವೈಭವೀಕರಿಸಲಾಗಿದೆ ಎಂದು ಡಾ. ಪುಂಡಿತ್‌ರಾವ್ ಕಿಡಿಕಾರಿದ್ದಾರೆ. ‘ಚಲನಚಿತ್ರಗಳು ಸಮಾಜಕ್ಕೆ ಮಾದರಿಯಾಗಬೇಕು. ಆದರೆ ಇಂತಹ ಹಾಡುಗಳಲ್ಲಿ ಮದ್ಯಪಾನವನ್ನು ದೊಡ್ಡ ಸಾಧನೆಯಂತೆ ತೋರಿಸುವುದು ಯುವ ಪೀಳಿಗೆ ಮತ್ತು ಮಕ್ಕಳ ದಾರಿ ತಪ್ಪಿಸುತ್ತದೆ. ಇಂತಹ ಹಾಡುಗಳು ಮಕ್ಕಳ ಮೇಲೆ ಅತ್ಯಂತ ಕೆಟ್ಟ ಪರಿಣಾಮ ಬೀರುತ್ತವೆ’ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಮಾನವ ಹಕ್ಕುಗಳ ಉಲ್ಲಂಘನೆ:

ವಿಶೇಷವೆಂದರೆ, ಈ ದೂರನ್ನು ಮಾನವ ಹಕ್ಕುಗಳ ದೃಷ್ಟಿಕೋನದಿಂದಲೂ ನೋಡಲಾಗಿದೆ. ‘ಅರ್ಥಪೂರ್ಣ ಚಲನಚಿತ್ರಗಳು ಮತ್ತು ಹಾಡುಗಳನ್ನು ನೋಡುವುದು ಪ್ರತಿಯೊಬ್ಬ ನಾಗರಿಕನ ಹಕ್ಕು. ಆದರೆ ಅಶ್ಲೀಲ ಮತ್ತು ದ್ವಂದ್ವ ಅರ್ಥದ ಸಾಹಿತ್ಯವಿರುವ ಚಿತ್ರಗಳು ಜನರು ಘನತೆಯಿಂದ ಬದುಕುವ ಮೂಲಭೂತ ಮಾನವ ಹಕ್ಕುಗಳನ್ನು ಉಲ್ಲಂಘಿಸುತ್ತವೆ’ ಎಂದು ಪುಂಡಿತ್‌ರಾವ್ ದೂರಿನಲ್ಲಿ ಪ್ರತಿಪಾದಿಸಿದ್ದಾರೆ.

ಹಿಂದಿ ರಿಲೀಸ್‌ಗೆ ಬ್ರೇಕ್ ಹಾಕಲು ಒತ್ತಾಯ:

ಹಿಂದಿ ಸೆನ್ಸಾರ್ ಮಂಡಳಿಗೆ ಪತ್ರ ಬರೆದಿರುವ ಅವರು, ‘ಕೆಡಿ ಶೀರ್ಷಿಕೆಯ ಹಿಂದಿ-ಡಬ್ ಮಾಡಲಾದ ಚಿತ್ರದ ಆವೃತ್ತಿಯನ್ನು ಯಾವುದೇ ಕಾರಣಕ್ಕೂ ಪ್ರಸಾರ ಮಾಡಲು ಅನುಮತಿಸಬಾರದು. ಒಂದು ವೇಳೆ ಈ ಹಾಡನ್ನು ಒಳಗೊಂಡಂತೆ ಚಿತ್ರ ಬಿಡುಗಡೆಯಾದರೆ, ಕಾನೂನು ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದ್ದಾರೆ.

ಜೋಗಿ ಪ್ರೇಮ್ ನಿರ್ದೇಶನದ ಈ ಚಿತ್ರದ ಮೇಲೆ ಭಾರಿ ನಿರೀಕ್ಷೆಗಳಿದ್ದವು. ಆದರೆ ಈಗ ಸಾಹಿತ್ಯ ಮತ್ತು ನೃತ್ಯದ ವಿಚಾರವಾಗಿ ದೊಡ್ಡ ವಿವಾದ ತಲೆದೋರಿದೆ. ಚಿತ್ರತಂಡ ಈ ಬಗ್ಗೆ ಯಾವ ರೀತಿ ಪ್ರತಿಕ್ರಿಯಿಸಲಿದೆ ಮತ್ತು ಸೆನ್ಸಾರ್ ಮಂಡಳಿ ಈ ದೂರನ್ನು ಹೇಗೆ ಪರಿಗಣಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.



Source link

Leave a Reply

Your email address will not be published. Required fields are marked *