Headlines

ಮೈಸೂರಿನ ಹುಡುಗನಿಗೆ ಡಿವೋರ್ಸ್;‌ ‘ಮುಕೇಶ್‌ ಅಂಬಾನಿ ಜೊತೆ ಮದುವೆಯಾಗೋಕೆ ರೆಡಿಯಾದ 47ರ ರಾಖಿ ಸಾವಂತ್! | Bigg Boss Rakhi Sawant In Bridal Dress Ready To Marry Mukesh Ambani

ಮೈಸೂರಿನ ಹುಡುಗನಿಗೆ ಡಿವೋರ್ಸ್;‌ ‘ಮುಕೇಶ್‌ ಅಂಬಾನಿ ಜೊತೆ ಮದುವೆಯಾಗೋಕೆ ರೆಡಿಯಾದ 47ರ ರಾಖಿ ಸಾವಂತ್! | Bigg Boss Rakhi Sawant In Bridal Dress Ready To Marry Mukesh Ambani



ಮೈಸೂರಿನ ಹುಡುಗನಿಗೆ ಡಿವೋರ್ಸ್;‌ ‘ಮುಕೇಶ್‌ ಅಂಬಾನಿ ಜೊತೆ ಮದುವೆಯಾಗೋಕೆ ರೆಡಿಯಾದ 47ರ ರಾಖಿ ಸಾವಂತ್! | Bigg Boss Rakhi Sawant In Bridal Dress Ready To Marry Mukesh Ambani

Bigg Boss Rakhi Sawant: ಈ ಹಿಂದೆ ಮೈಸೂರಿನ ಆದಿಲ್‌ ಖಾನ್‌ ಅವರನ್ನು ಮದುವೆ ಆಗಿದ್ದ ರಾಖಿ ಸಾವಂತ್‌ ಅವರು ರಿಲಾಯನ್ಸ್‌ ಸಾಮ್ರಾಜ್ಯದ ಮಾಲೀಕ ಮುಕೇಶ್‌ ಅಂಬಾನಿ ಜೊತೆ ಮದುವೆ ಆಗಲು ಹಾರ ಹಿಡಿದು ರೆಡಿ ಆಗಿದ್ದಾರೆ. ಈ ಬಗ್ಗೆ ಅವರು ಮಾತನಾಡಿದ್ದಾರೆ. 

ಬಾಲಿವುಡ್‌ನಲ್ಲಿ ತೆರೆ ಮೇಲೆ ಒಂದೇ ಅಲ್ಲದೆ, ತೆರೆ ಹಿಂದೆ ಕೂಡ ಅಸಂಬಂದ್ಧ ಮಾತನಾಡುತ್ತ ಮನರಂಜನೆ ಕೊಡುವ ರಾಖಿ ಸಾವಂತ್‌ ಅವರು ( Bigg Boss Rakhi Sawant ) ಈ ಹಿಂದೆ ಮೈಸೂರಿನ ಆದಿಲ್‌ ಖಾನ್‌ ಅವರನ್ನು ಮದುವೆಯಾಗಿ, ಆಮೇಲೆ ಡಿವೋರ್ಸ್‌ ಡ್ರಾಮಾ ಮಾಡಿದ್ದರು. ಈಗ ಮುಕೇಶ್‌ ಅಂಬಾನಿ ಅವರನ್ನು ಮದುವೆ ಆಗುವೆ ಎಂದು ಮಧುವಣಗಿತ್ತಿಯಂತೆ ರೆಡಿಯಾಗಿದ್ದಾರೆ.

ಕಂಪ್ಲೀಟ್‌ ಆಗಿ ವಧು ರೀತಿ ಡ್ರೆಸ್‌ ಮಾಡಿಕೊಂಡಿರುವ ರಾಖಿ ಸಾವಂತ್‌ ಅವರು ಫೋಟೋಗ್ರಾಫರ್‌ಗಳ ಮುಂದೆ ಬಂದು ಮದುವೆ ಆಗುವ ಹುಡುಗ ಹೇಗಿದ್ದಾನೆ ಎಂದು ಹೇಳಿದ್ದಲ್ಲದೆ, ಮುಕೇಶ್‌ ಅಂಬಾನಿ ಮೇಲಿನ ಲವ್‌ ಬಗ್ಗೆ ಮಾತನಾಡಿದ್ದಾರೆ.

ಮದುವೆ ಆಗೋಕೆ ರೆಡಿ ಇದ್ದೇನೆ

ನನಗೆ ಒಂಟಿಯಾಗಿದ್ದು ಸಾಕಾಗಿದೆ. ನಾನು ಕೊನೆಗೂ ವಧು ಆಗಿದ್ದೇನೆ, ರಿಯಲ್‌ ಆಗಿ ಮದುವೆ ಆಗುತ್ತಿದ್ದೇನೆ. ಖ್ಯಾತ ಚಾನೆಲ್‌ನಲ್ಲಿ ಮದುವೆ ನಡೆಯಲಿದೆ. ಇದು ನನ್ನ ಮೂರನೇ ಮದುವೆ. ನನ್ನ ಮದುವೆ ಆಗುವ ಹುಡುಗನಿಗೂ ಕೂಡ ಮೂರು ಮದುವೆ ಆಗಿದೆ. ಆ ಹುಡುಗನಿಗೆ ಈಗಾಗಲೇ ಹಿಂದು, ಕ್ರಿಶ್ಚಿಯನ್‌, ಮುಸ್ಲಿಂ ಜೊತೆಯಲ್ಲಿ ಮದುವೆ ಆಗಿದೆ.

ಮದುವೆ ಆಗೋ ಹುಡುಗ ಯಾರು?

ನನ್ನ ಮದುವೆ ಆಗುವ ಹುಡುಗ ಕೋಟ್ಯಧಿಪತಿ ಹೌದೋ, ಅಲ್ಲವೋ ಎಂಬುದನ್ನು ಈಗಲೇ ಹೇಳೋದಿಲ್ಲ. ನನ್ನ ಮದುವೆ ವಿಷಯ ನಿಮಗೆ ಸರ್ಪ್ರೈಸ್‌ ಆಗಲಿದೆ. ವಧು ಆಗೋದು ನನಗೆ ತುಂಬ ಇಷ್ಟ. ಇಷ್ಟುದಿನಗಳ ಕಾಲ ಒಳ್ಳೆಯ ಹುಡುಗ ಸಿಕ್ಕಿರಲಿಲ್ಲ, ಈಗ ಸಿಕ್ಕಿದ್ದು ಆ ಹುಡುಗ ಇಡೀ ವಿಶ್ವವನ್ನು ನಗಿಸುತ್ತಾನೆ, ನನ್ನನ್ನು ಅಳಿಸುತ್ತಾನೆ. ಯಾರಿಗೆ ಹೊಟ್ಟೆ ಬೊಜ್ಜು ಇರುತ್ತದೆಯೋ ಅವರನ್ನು ನಾನು ಎಂದಿಗೂ ಮದುವೆ ಆಗೋದಿಲ್ಲ.

ಮುಕೇಶ್‌ ಅಂಬಾನಿ ಮದುವೆ ಆಗ್ತೀನಿ

ನನ್ನ ಬ್ಲೌಸ್‌ 24 ಕ್ಯಾರೆಟ್‌ ಗೋಲ್ಡ್‌ನಿಂದ ಕೂಡಿದೆ. ನೀತಾ ಅಂಬಾನಿ ಬಂಗಾರದಲ್ಲಿ ಏನಾದರೂ ಮಿಕ್ಸ್‌ ಆಗಿರಬಹುದು, ಆದರೆ ನನ್ನ ಗೋಲ್ಡ್‌ನಲ್ಲಿ ಯಾವುದೂ ಮಿಸ್‌ ಇಲ್ಲ. ಮುಕೇಶ್‌ ಅಂಬಾನಿ ಅವರನ್ನು ನಾನು ಮದುವೆ ಆದರೆ, ಚೆನ್ನಾಗಿ ನೋಡಿಕೊಳ್ತೀನಿ. ನೀತು ಅಂಬಾನಿ ಅವರಿಗೆ ನಾನು ಸೌತಿ ಆಗ್ತೀನಿ.

ಮುಕೇಶ್‌ ಅವರಿಂದ ನನಗೆ ಮಗು ಬೇಕು

ಬೇರೆಯವರಿಗೆ ಮೂರು ನಾಲ್ಕು ಮದುವೆ ಮಾಡಿಸುವ ಮುಕೇಶ್‌ ಯಾಕೆ ಒಂದು ಮದುವೆ ಆಗಿದ್ದಾರೆ? ನಾನು ಅವರನ್ನು ಮದುವೆ ಆಗೋಕೆ ರೆಡಿಯಿದ್ದೇನೆ. ಅಷ್ಟೆಲ್ಲ ಆಸ್ತಿಯಿರುವ ಮುಕೇಶ್‌ ನನಗೆ ಬಂಗಾರ, ವಜ್ರ, ಮನೆ, ಮಗು ಕೊಟ್ಟರೆ ಸಾಕು. ಮುಕೇಶ್‌ ಅವರನ್ನು ನಾನು ಸಣ್ಣ ಮಾಡಿಸ್ತೀನಿ.

ನನ್ನ ಜಾತಕ ಮ್ಯಾಚ್‌ ಆಗಬೇಕು

ಸರಿಯಾಗಿ ಜಾತಕ ಮ್ಯಾಚ್‌ ಆಗುವವರನ್ನು ನಾನು ಮದುವೆ ಆಗ್ತೀನಿ. ಮುಕೇಶ್‌ ಅವರು ನನ್ನ ಜಾತಕ ನೋಡಿದರೆ ನಾನು ಎಷ್ಟು ಚೆನ್ನಾಗಿ ನೋಡಿಕೊಳ್ತೀನಿ ಎಂದು ಗೊತ್ತಾಗುತ್ತದೆ.



Source link

Leave a Reply

Your email address will not be published. Required fields are marked *