ಅಯತೊಲ್ಲಾ ಅಲಿ ಖಮೇನಿ ಹತ್ಯೆ? ಡೊನಾಲ್ಡ್ ಟ್ರಂಪ್‌ಗೆ X ಮೂಲಕ ತಿರುಗೇಟು ಕೊಟ್ಟ ಇರಾನ್! | Iran Hits Back At Khamenei Death Rumors With Defiant Social Media Post Amid Regional Attacks Mrq

ಅಯತೊಲ್ಲಾ ಅಲಿ ಖಮೇನಿ ಹತ್ಯೆ? ಡೊನಾಲ್ಡ್ ಟ್ರಂಪ್‌ಗೆ X ಮೂಲಕ ತಿರುಗೇಟು ಕೊಟ್ಟ ಇರಾನ್! | Iran Hits Back At Khamenei Death Rumors With Defiant Social Media Post Amid Regional Attacks Mrq


ಇರಾನ್‌ನ ಪರಮೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಯಾಗಿದ್ದಾರೆ ಎಂಬ ವದಂತಿಯನ್ನು ಇರಾನ್ ಅಲ್ಲಗಳೆದಿದೆ. ಖಮೇನಿ ಅವರ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ ಈ ಸುದ್ದಿಗೆ ತಿರುಗೇಟು ನೀಡಿದೆ.

ಟೆಹ್ರಾನ್: ಇರಾನ್‌ನ ಪರಮೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಯಾಗಿದ್ದಾರೆ ಎಂಬ ಅಮೆರಿಕ ಮತ್ತು ಇಸ್ರೇಲ್‌ನ ವದಂತಿಗಳಿಗೆ ಇರಾನ್ ತಿರುಗೇಟು ನೀಡಿದೆ. ಖಮೇನಿ ಅವರ ಅಧಿಕೃತ ಎಕ್ಸ್ ಖಾತೆಯಲ್ಲಿ ಹೊಸ ಪೋಸ್ಟ್ ಹಾಕುವ ಮೂಲಕ ಇರಾನ್ ಈ ಸುದ್ದಿಯನ್ನು ಅಲ್ಲಗಳೆದಿದೆ. “ಇಮಾಮ್ ಅಲಿ ಹೆಸರಿನಲ್ಲಿ” ಎಂಬ ಶೀರ್ಷಿಕೆಯೊಂದಿಗೆ ಪ್ರತೀಕಾರದ ದಾಳಿಯ ಸೂಚನೆ ನೀಡುವ ಪೋಸ್ಟ್ ಇದಾಗಿದೆ. ಖಮೇನಿ ಹತ್ಯೆಯಾಗಿದ್ದಾರೆ ಎಂಬುದು ಸುಳ್ಳು ಪ್ರಚಾರ ಎಂದು ಇರಾನ್‌ನ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ. ಖಮೇನಿ ಅವರೇ ಪ್ರತಿದಾಳಿಗೆ ನೇತೃತ್ವ ವಹಿಸುತ್ತಿದ್ದಾರೆ. ಆ ಎರಡು ದೇಶದ ಮಾಧ್ಯಮಗಳು ಹೇಳುತ್ತಿವೆ. ಖಮೇನಿ ಜೀವಂತವಾಗಿದ್ದು, ಸುರಕ್ಷಿತ ಸ್ಥಳದಲ್ಲಿದ್ದಾರೆ ಎಂದು ಇರಾನಿ ಮಾಧ್ಯಮಗಳು ಸ್ಪಷ್ಟಪಡಿಸಿವೆ.

ಇನ್ನೊಂದೆಡೆ, ಖಮೇನಿ ಹತ್ಯೆಯಾದ ಬಳಿಕ ಇರಾನ್‌ನ ಜನರು ಸಂಭ್ರಮಿಸುತ್ತಿರುವ ದೃಶ್ಯಗಳನ್ನು ಸಿಎನ್‌ಎನ್ (CNN) ಪ್ರಸಾರ ಮಾಡಿದೆ. ಇದಕ್ಕೂ ಮುನ್ನ, ಖಮೇನಿ ಅವರ ಮಗಳು ಮತ್ತು ಮೊಮ್ಮಗ ಕೂಡ ಹತ್ಯೆಯಾಗಿದ್ದಾರೆ ಎಂದು ಇಸ್ರೇಲ್ ಹೇಳಿಕೊಂಡಿತ್ತು.

ದುಬೈ ವಿಮಾನ ನಿಲ್ದಾಣದ ಮೇಲೆ ದಾಳಿ

ಈ ನಡುವೆ, ಇರಾನ್ ಗಲ್ಫ್ ರಾಷ್ಟ್ರಗಳ ಮೇಲೆ ತನ್ನ ಪ್ರತಿದಾಳಿಯನ್ನು ಮುಂದುವರಿಸಿದೆ. ಡ್ರೋನ್ ದಾಳಿಯಿಂದಾಗಿ ದುಬೈನ ಹೆಗ್ಗುರುತಾದ ಬುರ್ಜ್ ಅಲ್ ಅರಬ್ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ದುಬೈ ವಿಮಾನ ನಿಲ್ದಾಣದ ಮೇಲೂ ದಾಳಿ ನಡೆದಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಪ್ರಯಾಣಿಕರನ್ನು ತಕ್ಷಣವೇ ಸ್ಥಳಾಂತರಿಸಲಾಗಿದೆ. ಜಬೆಲ್ ಅಲಿ ಬಂದರಿನ ಮೇಲೂ ದಾಳಿ ನಡೆದಿದೆ. ಯುಎಇ ಮೇಲೆ ಇರಾನ್ ಒಟ್ಟು 137 ಕ್ಷಿಪಣಿಗಳು ಮತ್ತು 209 ಡ್ರೋನ್‌ಗಳನ್ನು ಹಾರಿಸಿದೆ. ಬಹ್ರೇನ್ ಮತ್ತು ಕತಾರ್‌ನ ಜನವಸತಿ ಪ್ರದೇಶಗಳ ಮೇಲೂ ಕ್ಷಿಪಣಿ ದಾಳಿಗಳು ನಡೆದಿವೆ.

201 ಮಂದಿ ಸಾವು: ಇರಾನಿಯನ್ ರೆಡ್ ಕ್ರೆಸೆಂಟ್ ಸೊಸೈಟಿ ಮಾಹಿತಿ

ಇಸ್ರೇಲ್ ಮತ್ತು ಅಮೆರಿಕದ ದಾಳಿಗೆ ಇರಾನ್ ಪ್ರತೀಕಾರ ತೀರಿಸಿಕೊಳ್ಳಲು ಆರಂಭಿಸುತ್ತಿದ್ದಂತೆ ಪಶ್ಚಿಮ ಏಷ್ಯಾ ಯುದ್ಧದ ಜ್ವಾಲೆಯಲ್ಲಿ ಹೊತ್ತಿ ಉರಿಯುತ್ತಿದೆ. ಕುವೈತ್ ವಿಮಾನ ನಿಲ್ದಾಣ ಮತ್ತು ಯುಎಇಯ ಪಾಮ್ ಜುಮೆರಾದಲ್ಲಿಯೂ ದಾಳಿಗಳು ನಡೆದಿವೆ. ಕುವೈತ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಗುರಿಯಾಗಿಸಿಕೊಂಡು ನಡೆದ ಡ್ರೋನ್ ದಾಳಿಯಲ್ಲಿ ಒಬ್ಬ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಅಯತೊಲ್ಲಾ ಅಲಿ ಖಮೇನಿ ಸತ್ತಿದ್ದು ನಿಜ, ಟ್ರಂಪ್ ಸ್ಫೋಟಕ ಹೇಳಿಕೆ! ಇರಾನ್‌ನ ಟಾಪ್ ಲೀಡರ್‌ಗಳೂ ಖಲಾಸ್!

ಇತ್ತ, ಇರಾನ್‌ನಲ್ಲಿ ಒಂದೇ ದಿನದಲ್ಲಿ 201 ಜನರು ಸಾವನ್ನಪ್ಪಿದ್ದಾರೆ ಎಂದು ಇರಾನಿಯನ್ ರೆಡ್ ಕ್ರೆಸೆಂಟ್ ಸೊಸೈಟಿ ತಿಳಿಸಿದೆ. ಅಮೆರಿಕ-ಇಸ್ರೇಲ್ ದಾಳಿಯಿಂದಾಗಿ 747 ಜನರು ಗಾಯಗೊಂಡಿದ್ದಾರೆ ಎಂದು ಅದು ಬಿಡುಗಡೆ ಮಾಡಿದ ಅಂಕಿಅಂಶದಲ್ಲಿ ಹೇಳಿದೆ. ಇರಾನ್‌ನ 24 ಪ್ರಾಂತ್ಯಗಳಲ್ಲಿ ಈ ದಾಳಿಗಳು ನಡೆದಿವೆ ಎಂದು ರೆಡ್ ಕ್ರೆಸೆಂಟ್ ಸೊಸೈಟಿ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಆಫ್ಘನ್‌ ಮೇಲೆ ಪಾಕ್‌ ದಾಳಿ : ಸಾವಿನ ಸಂಖ್ಯೆ 331ಕ್ಕೇರಿಕೆ



Source link

Leave a Reply

Your email address will not be published. Required fields are marked *