Headlines

ತಮ್ಮದೇ ಮದುವೆ ಆರತಕ್ಷತೆಯಲ್ಲಿ ಸ್ಟ್ಯಾಚ್ಯೂ ಥರ ನಿಂತ ಅರ್ಜುನ್ ತೆಂಡೂಲ್ಕರ್! ವಿಡಿಯೋ ವೈರಲ್ | Arjun Tendulkar Marries Sania Chandok In Grand Mumbai Wedding Viral Video Sparks Online Reactions Kvn

ತಮ್ಮದೇ ಮದುವೆ ಆರತಕ್ಷತೆಯಲ್ಲಿ ಸ್ಟ್ಯಾಚ್ಯೂ ಥರ ನಿಂತ ಅರ್ಜುನ್ ತೆಂಡೂಲ್ಕರ್! ವಿಡಿಯೋ ವೈರಲ್ | Arjun Tendulkar Marries Sania Chandok In Grand Mumbai Wedding Viral Video Sparks Online Reactions Kvn



ತಮ್ಮದೇ ಮದುವೆ ಆರತಕ್ಷತೆಯಲ್ಲಿ ಸ್ಟ್ಯಾಚ್ಯೂ ಥರ ನಿಂತ ಅರ್ಜುನ್ ತೆಂಡೂಲ್ಕರ್! ವಿಡಿಯೋ ವೈರಲ್ | Arjun Tendulkar Marries Sania Chandok In Grand Mumbai Wedding Viral Video Sparks Online Reactions Kvn

ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್, ಉದ್ಯಮಿ ಸಾನಿಯಾ ಚಂದೋಕ್ ಅವರನ್ನು ಮುಂಬೈನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ವಿವಾಹವಾದರು. ಈ ಮದುವೆಗೆ ಕ್ರಿಕೆಟ್ ಮತ್ತು ಬಾಲಿವುಡ್ ತಾರೆಯರು ಸಾಕ್ಷಿಯಾಗಿದ್ದು, ಆರತಕ್ಷತೆ ವೇಳೆ ಅರ್ಜುನ್ ಭಾವನೆರಹಿತವಾಗಿ ನಿಂತಿದ್ದ ವಿಡಿಯೋ ವೈರಲ್ ಆಗಿದೆ.

ಮುಂಬೈ: ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಅವರ ಪುತ್ರ ಅರ್ಜುನ್ ತೆಂಡುಲ್ಕರ್ ಹಾಗೂ ಉದ್ಯಮಿ ಸಾನಿಯಾ ಚಂದೋಕ್ ಮದುವೆ ಮುಂಬೈನಲ್ಲಿ ಗುರುವಾರ ಅದ್ಧೂರಿಯಾಗಿ ನಡೆದಿದೆ. ಕಾರ್ಯಕ್ರಮದಲ್ಲಿ ಬಾಲಿವುಡ್‌ನ ಬಹುತೇಕ ಸೆಲೆಬ್ರೆಟಿಗಳು, ಉದ್ಯಮಿಗಳು, ಭಾರತದ ಮಾಜಿ ಹಾಲಿ ಕ್ರಿಕೆಟಿಗರು ಪಾಲ್ಗೊಂಡರು.

ಅದ್ದೂರಿಯಾಗಿ ನಡೆದ ಮದುವೆ ಕಾರ್ಯಕ್ರಮದಲ್ಲಿ ತೆಂಡೂಲ್ಕರ್ ಫ್ಯಾಮಿಲಿಯು ಹೊಸ ಸದಸ್ಯೆಯನ್ನು ಮನೆಗೆ ಸ್ವಾಗತಿಸಿದರು. ಇನ್ನು ಬುಧವಾರ ನಡೆದ ಮೆಹಂದಿ ಶಾಸ್ತ್ರದಲ್ಲಿ ಕ್ರಿಕೆಟ್ ಜಗತ್ತಿನ ಹಲವು ಸೆಲಿಬ್ರಿಟಿ ಆಟಗಾರರಾದ ರವಿಶಾಸ್ತ್ರಿ, ಇರ್ಫಾನ್ ಪಠಾಣ್, ಯೂಸುಫ್ ಪಠಾಣ್, ಜಹೀರ್ ಖಾನ್ ಸೇರಿದಂತೆ ಹಲವರು ಹಾಜರಾಗಿದ್ದರು. ಇದಾದ ಬಳಿಕ ಅರ್ಜುನ್ ತೆಂಡೂಲ್ಕರ್ ಹಾಗೂ ಸಾನಿಯಾ ಚಂದೋಕ್ ಮದುವೆಯ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.

ಆರತಕ್ಷತೆ ಕಾರ್ಯಕ್ರಮದಲ್ಲಿ ಸ್ಟ್ಯಾಚ್ಯೂ ರೀತಿ ನಿಂತ ಅರ್ಜುನ್ ತೆಂಡೂಲ್ಕರ್:

ಪ್ರತಿಯೊಬ್ಬರ ಜೀವನದಲ್ಲಿ ಮದುವೆ ಒಂದು ರೀತಿಯ ಸುಂದರ ಕ್ಷಣ. ಈ ಸಂದರ್ಭದಲ್ಲಿ ವಧುವರರು ಖುಷಿ ಖುಷಿಯಿಂದ ಇರುತ್ತಾರೆ. ಆದರೆ ಮೆಹಂದಿ ಶಾಸ್ತ್ರದ ಸಂಜೆ ಆರತಕ್ಷತೆ ಕಾರ್ಯಕ್ರಮದ ವೇಳೆಯಲ್ಲಿ ಸಂಗೀತ ಸಂಜೆಯನ್ನು ಏರ್ಪಡಿಸಲಾಗಿತ್ತು. ಆ ಸಂದರ್ಭದಲ್ಲಿ ಗಾಯಕಿಯೊಬ್ಬರು ಹಿಂದಿಯ ಫೇಮಸ್ ಹಾಡಾಗಿರುವ ‘ಕುಚ್ ಕುಚ್ ಹೋತಾ ಹೈ’ ಹಾಡುವ ಮೂಲಕ ರಂಜಿಸುತ್ತಿದ್ದರು. ಸಾನಿಯಾ ಚಂದೋಕ್ ಕೂಡಾ ಈ ಹಾಡನ್ನು ಎಂಜಾಯ್ ಮಾಡುತ್ತಾ ಇದ್ದರೇ ಪಕ್ಕದಲ್ಲೇ ನಿಂತಿದ್ದ ಅರ್ಜುನ್ ತೆಂಡೂಲ್ಕರ್, ಇದು ತಮ್ಮದೇ ಮದುವೆ ಎನ್ನುವುದನ್ನೂ ಮರೆತು ಒಂದು ರೀತಿ ಸ್ಟ್ಯಾಚ್ಯೂ ನಿಂತಂತೆ ನಿಂತಿದ್ದರು. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಅರ್ಜುನ್ ತೆಂಡೂಲ್ಕರ್ ಕಾಲೆಳೆದ ನೆಟ್ಟಿಗರು:

ಇನ್ನು ತಮ್ಮದೇ ಮದುವೆಯಲ್ಲಿ ಯಾವುದೇ ಭಾವನೆ ವ್ಯಕ್ತಪಡಿಸದೇ ಸ್ಟ್ಯಾಚ್ಯೂ ರೀತಿ ನಿಂತ ಅರ್ಜುನ್ ತೆಂಡೂಲ್ಕರ್ ಅವರನ್ನು ನೆಟ್ಟಿಗರು ಕಾಲೆಳೆದಿದ್ದಾರೆ. ರೋಹನ್ ಎನ್ನುವವರು, ಅರ್ಜುನ್ ತೆಂಡೂಲ್ಕರ್ ನೆಕ್ಸ್ಟ್ ಲೆವೆಲ್ ಅಂತರ್ಮುಖಿ. ಬ್ರದರ್ ಸ್ವಲ್ಪವಾದರೂ ಸ್ಮೈಲ್ ಮಾಡಿ, ಯಾಕೆಂದರೆ ಇದು ನಿಮ್ಮ ಮದುವೆ ಎಂದು ಕಾಲೆಳೆದಿದ್ದಾರೆ.

Scroll to load tweet…

Scroll to load tweet…

ಇನ್ನೋರ್ವ ನೆಟ್ಟಿಗ, ಬೇಗ ಇದನ್ನೆಲ್ಲಾ ಮುಗಿಸಿ, ನನಗೆ ಆಕಳಿಕೆ ಬರುತ್ತಿದೆ ಎಂದು ಅರ್ಜುನ್ ತೆಂಡೂಲ್ಕರ್ ಗೊಣಗುತ್ತಿದ್ದಾರೆ ಎಂದು ಟ್ರೋಲ್ ಮಾಡಿದ್ದಾರೆ.

ಅರ್ಜುನ್ ತೆಂಡೂಲ್ಕರ್ ಮದುವೆಗೆ ಹಾಜರಾದ ಪ್ರಮುಖ ಸೆಲಿಬ್ರಿಟಿಗಳಿವರು:

ಅಮಿತಾಬ್‌ ಬಚ್ಚನ್‌, ಶಾರುಖ್‌ ಖಾನ್‌, ಅಮೀರ್‌ ಖಾನ್‌, ಐಶ್ವರ್ಯಾ ರೈ, ಮುಕೇಶ್‌ ಅಂಬಾನಿ, ಎಂ.ಎಸ್‌.ಧೋನಿ, ರಾಹುಲ್‌ ದ್ರಾವಿದ್‌, ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್‌ ಪ್ರದಾದ್‌, ಹರ್ಭಜನ್‌ ಸಿಂಗ್‌, ಯುವರಾಜ್ ಸಿಂಗ್, ಅನಿಲ್ ಕುಂಬ್ಳೆ, ರವಿ ಶಾಸ್ತ್ರಿ, ಸುನಿಲ್ ಗವಾಸ್ಕರ್, ಟೀಂ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್, ಹರ್ಭಜನ್ ಸಿಂಗ್, ವೀರೇಂದ್ರ ಸೆಹ್ವಾಗ್, ಜಹೀರ್ ಖಾನ್, ಇರ್ಫಾನ್ ಪಠಾಣ್, ಯೂಸುಫ್ ಪಠಾಣ್ ಸೇರಿದಂತೆ ಪ್ರಮುಖರು ಹಾಜರಾಗಿದ್ದರು.



Source link

Leave a Reply

Your email address will not be published. Required fields are marked *