ನಿಮ್ ಹತ್ರ ವಾಟರ್ ಬಾಟಲ್ ಇದೆಯಾ?, ಹಾಗಾದ್ರೆ ನೀರು ದೋಸೆ ಮಾಡೋದು ಭಾಳ ಸುಲಭ ಕಣ್ರೀ | How To Make Neer Dosa Recipe Easily The Instagram Story Has Gone Viral Ahss

ನಿಮ್ ಹತ್ರ ವಾಟರ್ ಬಾಟಲ್ ಇದೆಯಾ?, ಹಾಗಾದ್ರೆ ನೀರು ದೋಸೆ ಮಾಡೋದು ಭಾಳ ಸುಲಭ ಕಣ್ರೀ | How To Make Neer Dosa Recipe Easily The Instagram Story Has Gone Viral Ahss



ನಿಮ್ ಹತ್ರ ವಾಟರ್ ಬಾಟಲ್ ಇದೆಯಾ?, ಹಾಗಾದ್ರೆ ನೀರು ದೋಸೆ ಮಾಡೋದು ಭಾಳ ಸುಲಭ ಕಣ್ರೀ | How To Make Neer Dosa Recipe Easily The Instagram Story Has Gone Viral Ahss

Neer Dosa Recipe: ಬಹುತೇಕ ಹೆಣ್ಣುಮಕ್ಕಳಿಗೆ ನೀರು ದೋಸೆ ಮಾಡುವಾಗ ಹಿಟ್ಟನ್ನು ಹಂಚಿಗೆ ಹಾಕಿದಾಗ ದೋಸೆ ಸರಿಯಾಗಿ ಮೇಲೇಳುವುದಿಲ್ಲ, ತೆಳ್ಳಗೆ ಬರದೆ ಬನ್ ತರಹ ಊದಿಕೊಳ್ಳುತ್ತೆ, ಹರಿದುಹೋಗುತ್ತೆ ಎಂಬುದೇ ಚಿಂತೆ. ಆದರೆ ಇನ್ಮೇಲೆ ಈ ಚಿಂತೆ ಬಿಡಿ… 

‘ನೀರು ದೋಸೆ’… ಮಲೆನಾಡು, ಕರ್ನಾಟಕ ಭಾಗಗಳಲ್ಲಿ ಬಹಳ ಫೇಮಸ್. ಆದರೆ ಇತ್ತೀಚಿನ ದಿನಗಳಲ್ಲಿ ಇದನ್ನು ಎಲ್ಲಾ ಭಾಗಗಳಲ್ಲಿಯೂ ಮಾಡುತ್ತಾರೆ. ಕೇರಳದಲ್ಲಿ ಇದನ್ನ ಅಪ್ಪಮ್ ಅಂತ ಕರಿತಾರೆ.

ಆದರೆ ಬಹುತೇಕ ಹೆಣ್ಣುಮಕ್ಕಳಿಗೆ ನೀರು ದೋಸೆ ಮಾಡುವಾಗ ಹಿಟ್ಟನ್ನು ಹಂಚಿಗೆ ಹಾಕಿದಾಗ ದೋಸೆ ಸರಿಯಾಗಿ ಮೇಲೇಳುವುದಿಲ್ಲ, ತೆಳ್ಳಗೆ ಬರದೆ ಬನ್ ತರಹ ಊದಿಕೊಳ್ಳುತ್ತೆ, ಹರಿದುಹೋಗುತ್ತೆ ಎಂಬುದೇ ಚಿಂತೆ. ಆದರೆ ಇನ್ಮೇಲೆ ಈ ಚಿಂತೆ ಬಿಡಿ. ಯಾಕಂದ್ರೆ ಬಹಳ ಸುಲಭವಾಗಿ ನೀರು ದೋಸೆ ಮಾಡುವುದು ಹೇಗೆಂದು ವೈರಲ್ ವಿಡಿಯೋವೊಂದರಲ್ಲಿ ತಿಳಿಸಲಾಗಿದೆ.

ವಿಡಿಯೋದಲ್ಲಿ ಏನಿದೆ?

ಸದ್ಯ ಇನ್‌ಸ್ಟಾಗ್ರಾಂನಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ತೋರಿಸಿರುವ ಪ್ರಕಾರ, ಮೊದಲಿಗೆ ನೀರು ದೋಸೆಯನ್ನು ಒಂದು ವಾಟರ್‌ ಬಾಟಲಿಯಲ್ಲಿ ತುಂಬಿಸಿಕೊಳ್ಳಬೇಕು. ಬಾಟಲಿ ಕ್ಯಾಪ್‌ನಲ್ಲಿ ಚಿಕ್ಕ ಚಿಕ್ಕ ರಂಧ್ರಗಳನ್ನು ಮಾಡಿಕೊಳ್ಳಬೇಕು. ಆ ನಂತರ ಇದನ್ನು ವಿಡಿಯೋದಲ್ಲಿ ತೋರಿಸುವ ಹಾಗೆ ಬಾಣಲೆಯಲ್ಲಿ ರೌಂಡಾಗಿ ಹಾಕಿದರೆ ಸೆಕೆಂಡುಗಳ ಲೆಕ್ಕದಲ್ಲಿ ಅದು ಬೇಯುತ್ತದೆ. ಆಗ ಅದನ್ನು ಮಾಮೂಲಿ ದೋಸೆ ತೆಗೆದ ಹಾಗೆ ತೆಗೆದರೆ ಮುಗಿಯಿತು. ಈ ರೀತಿ ಮಾಡಿದರೆ ಹತ್ತು ನಿಮಿಷಕ್ಕೆ ಒಂದೈವತ್ತು ದೋಸೆಯಾದರೂ ಆಶ್ಚರ್ಯವಿಲ್ಲ.

ಇನ್‌ಸ್ಟಾದಲ್ಲಿ ವಿಡಿಯೋ ವೈರಲ್

ಇನ್‌ಸ್ಟಾಗ್ರಾಂನಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋವನ್ನು ಅನಿಸಿಕೆ-ಶಶಿ (anisikeshashi2) ಎಂಬ ಇನ್‌ಸ್ಟಾಗ್ರಾಂ ಪೇಜ್‌ನಿಂದ ಹಂಚಿಕೊಳ್ಳಲಾಗಿದೆ. ಈ ವಿಡಿಯೋಗೆ ಸಾಕಷ್ಟು ಕಾಮೆಂಟ್ಸ್ ಕೂಡ ಬಂದಿದೆ. ಮಿಶ್ರ ಪ್ರತಿಕ್ರಿಯೆಗಳು ಸಹ ವ್ಯಕ್ತವಾಗುತ್ತಿವೆ. ಕೆಲವರು ತಮ್ಮ ಊರನ್ನು ನೆನೆದು “ನಮ್ಮ ಊರಿನ ಅಮ್ಮನ ಅಚ್ಚು ಮೆಚ್ಚಿನ ಸುಲಭ ದೋಸೆ” ಎಂದು ಕಾಮೆಂಟ್ ಮಾಡಿದರೆ, ಮತ್ತೆ ಕೆಲವರು “ನಮ್ಮ ಮನೇಲು ನೀರು ದೋಸೆ ಮಾಡ್ತೀವಿ ನಮ್ಮ ಕೊಡಗಿನ ಊಟದ ರುಚಿಯೇ ಚಂದ” ಅಂದಿದ್ದಾರೆ. ಮತ್ತೆ ಕೆಲವರು “ಇದು ಬೆಸ್ಟ್ ಐಡಿಯಾ” ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಯಾರು ಏನೇ ಹೇಳಲಿ ಒಟ್ಟಾರೆ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವುದಂತೂ ಸುಳ್ಳಲ್ಲ.

ನೀರು ದೋಸೆ ತಯಾರಿಸುವ ವಿಧಾನ
ನೀರು ದೋಸೆ ಮಾಮೂಲಿ ದೋಸೆಯ ಹಾಗೆ ಹುದುಗಿಸಿ ಮಾಡಬೇಕಂತಿಲ್ಲ, ಅಕ್ಕಿಯೊಂದಿದ್ದರೆ ಸಾಕು, ಉದ್ದಿನ ಬೇಳೆ ಬೇಕಿಲ್ಲ, ಅವಲಕ್ಕಿ ಬೇಕಿಲ್ಲ, ಅನ್ನ ಬೇಕಿಲ್ಲ. ಕೆಲವೇ ಗಂಟೆಯಲ್ಲಿ ಫಟಾ ಫಟ್ ಅಂತ ರೆಡಿಯಾಗುತ್ತೆ. ರಾತ್ರಿ ಅಕ್ಕಿ ನೆನೆಸಿ, ಬೆಳಗ್ಗೆ ರುಬ್ಬಿ ಮಾಡಿದರೂ ನಡೆಯುತ್ತದೆ ಅಥವಾ ಅಕ್ಕಿಯನ್ನ ಎರಡು- ಮೂರು ಗಂಟೆ ನೆನೆಸಿ ಕೂಡ ಮಾಡಬಹುದು. ಹೌದು. ಅಕ್ಕಿ ಚೆನ್ನಾಗಿ ನೆನೆದ ಮೇಲೆ ರುಬ್ಬಿ, ಮಾಮೂಲಿ ದೋಸೆ ಹುಯ್ಯುವ ಹಾಗೆ ಕಾವಲಿಯಲ್ಲಿ ಹಾಕಿದರೆ ಮುಗಿಯಿತು. ಕೆಲವರು ಇದಕ್ಕೆ ಕಾಯಿತುರಿ ಕೂಡ ಸೇರಿಸುತ್ತಾರೆ. ಆದರೆ ಕೆಲವರು ಮಾತ್ರ ಹಾಗೆಯೇ ರುಬ್ಬಿ ಮಾಡುತ್ತಾರೆ. ಇದನ್ನು ಕಾಯಿ ಚಟ್ನಿ, ಕೋಳಿ ಸಾರು ಜೊತೆ ನೆನಸಿ ತಿಂದರೆ ಅದರ ಮಜಾನೇ ಬೇರೆ.

ನೀರು ದೋಸೆಯಲ್ಲಿಯೂ ವೆರೈಟಿ ಲಭ್ಯ
ಇತ್ತೀಚೆಗಂತೂ ದೋಸೆಯು ಹಲವಾರು ವಿಧಗಳಲ್ಲಿ ಲಭ್ಯವಿದ್ದು, ನೀರು ದೋಸೆಯಲ್ಲಿಯೂ ವೆರೈಟಿ ನೋಡಬಹುದು. ಸಿಹಿ ಖಾರ ಮಿಶ್ರಿತವಾದ ಮಸಾಲೆ ನೀರುದೋಸೆ, ಮಕ್ಕಳಿಗೂ ಇಷ್ಟವಾಗುವಂತೆ ಸ್ವಲ್ಪ ಮಸಾಲ ಸೇರಿಸಿ ಕಲರ್ ಫುಲ್ ಆಗಿ ಮಾಡುವ ದೋಸೆ, ಕರಾವಳಿ ಶೈಲಿಯ ತೆಳುವಾದ ದೋಸೆ, ಮಲೆನಾಡಿನ ಉಪಹಾರಕ್ಕೆ ಮಾಡಿಕೊಳ್ಳುವ ದೋಸೆ ಇತ್ಯಾದಿ.

ದೋಸೆ ರುಚಿಕರ ಮಾತ್ರವಲ್ಲ, ಆರೋಗ್ಯಕಕ್ಕೂ ಒಳ್ಳೆಯದು. ಆದರೆ ನೆನಪಿಡಿ ಇದನ್ನು ತಯಾರಿಸಲು ನೀವು ಕಡಿಮೆ ಎಣ್ಣೆಯನ್ನು ಬಳಸುವುದು ಒಳ್ಳೆಯದು.

ಇಲ್ಲಿದೆ ನೋಡಿ ಪೂರ್ತಿ ವಿಡಿಯೋ



Source link

Leave a Reply

Your email address will not be published. Required fields are marked *