ಮಡುರೋ ಕಿಡ್ನಾಪ್‌ಗೆ ಆ್ಯಂಥ್ರೋಪಿಕ್‌ ಎಐ ಟೂಲ್‌ ಕ್ಲಾಡ್‌ ಬಳಸಿದ್ದ ಅಮೆರಿಕ- ಪಾಲುದಾರ ಪಾಲಂತೀರ್‌ ಬಳಕೆ | Us Reportedly Used Anthropics Ai Tool Claude In Maduro Kidnapping Case

ಮಡುರೋ ಕಿಡ್ನಾಪ್‌ಗೆ ಆ್ಯಂಥ್ರೋಪಿಕ್‌ ಎಐ ಟೂಲ್‌ ಕ್ಲಾಡ್‌ ಬಳಸಿದ್ದ ಅಮೆರಿಕ- ಪಾಲುದಾರ ಪಾಲಂತೀರ್‌ ಬಳಕೆ | Us Reportedly Used Anthropics Ai Tool Claude In Maduro Kidnapping Case



ಮಡುರೋ ಕಿಡ್ನಾಪ್‌ಗೆ ಆ್ಯಂಥ್ರೋಪಿಕ್‌ ಎಐ ಟೂಲ್‌ ಕ್ಲಾಡ್‌ ಬಳಸಿದ್ದ ಅಮೆರಿಕ- ಪಾಲುದಾರ ಪಾಲಂತೀರ್‌ ಬಳಕೆ | Us Reportedly Used Anthropics Ai Tool Claude In Maduro Kidnapping Case

ಇತ್ತೀಚೆಗಷ್ಟೇ ಕೋಡರ್‌ಗಳ ಕೆಲಸ ಕಸಿಯುವ ಭೂತದಂತೆ ಬಿಂಬಿತವಾಗಿದ್ದ ಆ್ಯಂಥ್ರೋಪಿಕ್‌ ಸಂಸ್ಥೆಯ ಎಐ ಟೂಲ್‌ ಕ್ಲಾಡ್‌, ವೆನಿಜುವೆಲಾ ಅಧ್ಯಕ್ಷ ನಿಕೋಲಸ್‌ ಮಡುರೋ ಅವರ ಅಪಹರಣದಲ್ಲಿ ಅಮೆರಿಕ ಸೇನೆಗೆ ಸಹಾಯ ಮಾಡಿತ್ತು ಎಂಬ ಅಚ್ಚರಿಯ ಮಾಹಿತಿ ಬೆಳಕಿಗೆ ಬಂದಿದೆ.

ವಾಷಿಂಗ್ಟನ್‌: ಇತ್ತೀಚೆಗಷ್ಟೇ ಕೋಡರ್‌ಗಳ ಕೆಲಸ ಕಸಿಯುವ ಭೂತದಂತೆ ಬಿಂಬಿತವಾಗಿದ್ದ ಆ್ಯಂಥ್ರೋಪಿಕ್‌ ಸಂಸ್ಥೆಯ ಎಐ ಟೂಲ್‌ ಕ್ಲಾಡ್‌, ವೆನಿಜುವೆಲಾ ಅಧ್ಯಕ್ಷ ನಿಕೋಲಸ್‌ ಮಡುರೋ ಅವರ ಅಪಹರಣದಲ್ಲಿ ಅಮೆರಿಕ ಸೇನೆಗೆ ಸಹಾಯ ಮಾಡಿತ್ತು ಎಂಬ ಅಚ್ಚರಿಯ ಮಾಹಿತಿ ಬೆಳಕಿಗೆ ಬಂದಿದೆ. ಈ ಮೂಲಕ ಕ್ಲಾಡ್‌ ಎಐ, ಸೇನಾ ಕಾರ್ಯಾಚರಣೆಯಲ್ಲಿ ಬಳಕೆಯಾದ ಮೊದಲ ಎಐ ಟೂಲ್‌ ಎನಿಸಿಕೊಂಡಿದೆ.

ವೆನಿಜುವೆಲಾ ಮೇಲಿನ ದಾಳಿಗೆ ಅಮೆರಿಕ ಹಲವು ತಿಂಗಳುಗಳಿಂದ ತಯಾರಿ

ವೆನಿಜುವೆಲಾ ಮೇಲಿನ ದಾಳಿಗೆ ಅಮೆರಿಕ ಹಲವು ತಿಂಗಳುಗಳಿಂದ ತಯಾರಿ ನಡೆಸುತ್ತಿತ್ತು ಎಂದು ವರದಿಯಾಗಿತ್ತು. ಇದಕ್ಕೆ ಪೂರಕವಾಗಿರುವ ವಾಲ್‌ಸ್ಟ್ರೀಟ್‌ ಜರ್ನಲ್‌ ವರದಿಯ ಪ್ರಕಾರ, ಜ.3ರಂದು ವೆನಿಜುವೆಲಾದ ರಾಜಧಾನಿ ಕಾರಕಸ್‌ ಮೇಲೆ ಸ್ಫೋಟಕಗಳ ಮಳೆಗರೆದು, ಅಧ್ಯಕ್ಷ ಮಡುರೋರನ್ನು ಪತ್ನಿ ಸಮೇತ ಅಪಹರಣ ಮಾಡಲು ಕ್ಲಾಡ್‌ ಅನ್ನು ಬಳಸಲಾಗಿತ್ತು. ನಿಖರವಾಗಿ ಅದನ್ನು ಹೇಗೆ ಬಳಸಲಾಗಿತ್ತು ಎಂದು ಅಧಿಕೃತವಾಗಿ ಅಮೆರಿಕದ ಸೇನೆ ಅಥವಾ ಆ್ಯಂಥ್ರೋಪಿಕ್‌ ಮಾಹಿತಿ ನೀಡಿಲ್ಲ.

ಬಳಕೆ ಹೇಗೆ?:

ಆ್ಯಂಥ್ರೋಪಿಕ್‌ನ ನಿಯಮಗಳ ಪ್ರಕಾರ, ಅದರ ಎಐ ಟೂಲ್‌ ಅನ್ನು ಆಯುಧಗಳ ಅಭಿವೃದ್ಧಿ, ಕಣ್ಗಾವಲಿನಂತಹ ಕೆಲಸ ಹಾಗೂ ಹಿಂಸೆಗೆ ಬಳಸುವಂತಿಲ್ಲ. ಆದರೆ ಅಮೆರಿಕ ಈ ಎಲ್ಲಾ ಕೆಲಸಗಳನ್ನು ಮಾಡಿಸಿಕೊಂಡಿರುವುದು ಆ ಸಂಸ್ಥೆಯ ಪಾಲುದಾರನಾದ ಪಾಲಂತೀರ್‌ ಎಂಬ ಸಂಸ್ಥೆಯ ಮೂಲಕ.

ಮೂಲಗಳ ಪ್ರಕಾರ, ಇದು ನೇರವಾಗಿ ದಾಳಿಯಲ್ಲಿ ಭಾಗಿಯಾಗುವ ಬದಲು ಕಾರ್ಯತಂತ್ರ ರೂಪಿಸಲು ಸಹಕರಿಸಿತ್ತು. ಉಪಗ್ರಹ ಚಿತ್ರಗಳನ್ನು ಅಧ್ಯಯನ ಮಾಡುವ ಮೂಲಕ ಕಾರಕಸ್‌ನಲ್ಲಿನ ಸೇನಾ ನಿಯೋಜನೆ, ವ್ಯಕ್ತಿ ಹಾಗೂ ವಾಹನಗಳ ಓಡಾಟದಂತಹ ಮಾಹಿತಿಯನ್ನು ಪಡೆದಿತ್ತು. ಕರೆಗಳು, ಸಂದೇಶ ಅಥವಾ ರೇಡಿಯೋ ಭಾಷಣಗಳನ್ನು ಪರಿಶೀಲಿಸಬಲ್ಲ ತನ್ನ ಸಾಮರ್ಥ್ಯವನ್ನು ಬಳಸಿಕೊಂಡು, ಮಡುರೋ ಅಥವಾ ಅವರ ಸೇನೆಯ ಯೋಜನೆ, ನಿಯೋಜನೆಗಳನ್ನು ಪತ್ತೆ ಮಾಡಿತ್ತು. ಈ ಎಲ್ಲಾ ಮಾಹಿತಿಯನ್ನು ಬಳಸಿಕೊಂಡು, ಯಾವ ಪ್ರದೇಶದಲ್ಲಿ ಸೇನಾ ಜಮಾವಣೆ ಕಡಿಮೆಯಿದೆ, ಎಲ್ಲಿಂದ ಸಾಗಿ ದಾಳಿ ಮಾಡಿದರೆ ಸೂಕ್ತ, ಯಾವ ಕಡೆ ದಾಳಿ ನಡೆಸಿದರೆ ಹೆಚ್ಚು ಹಾನಿಯಾಗುತ್ತದೆ ಎಂಬ ಯೋಜನೆಯನ್ನು ತಯಾರಿಸಿತ್ತು. ದಾಳಿಯ ವೇಳೆಯೂ ಇಂತಹ ಮಾಹಿತಿಗಳನ್ನೊದಗಿಸಿ ಸಹಕರಿಸಿತ್ತು ಎನ್ನಲಾಗಿದೆ.



Source link

Leave a Reply

Your email address will not be published. Required fields are marked *