GBA New logo: ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಹೊಸ ಲೋಗೊ ರೆಡಿ, ವಿಶೇಷತೆಗಳೇನು? | New Gba Logo Revealed How It Differs From The Bbmp Emblem Rav

GBA New logo: ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಹೊಸ ಲೋಗೊ ರೆಡಿ, ವಿಶೇಷತೆಗಳೇನು? | New Gba Logo Revealed How It Differs From The Bbmp Emblem Rav



GBA New logo: ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಹೊಸ ಲೋಗೊ ರೆಡಿ, ವಿಶೇಷತೆಗಳೇನು? | New Gba Logo Revealed How It Differs From The Bbmp Emblem Rav

ಗ್ರೇಟರ್ ಬೆಂಗಳೂರು ಪ್ರಾಧಿಕಾರವು (GBA) ತನ್ನ ಹೊಸ ಲಾಂಛನವನ್ನು ಅನಾವರಣಗೊಳಿಸಲು ಸಜ್ಜಾಗಿದೆ. ಈ ಹೊಸ ಲೋಗೋದಲ್ಲಿ ಪಾರಂಪರಿಕ ಕೆಂಪೆಗೌಡ ಗೋಪುರದ ಜೊತೆಗೆ ಖಡ್ಗ ಹಿಡಿದ ಕೆಂಪೆಗೌಡರ ಚಿತ್ರಣವಿದ್ದು, ಮುಂಬರುವ ಬಜೆಟ್ ಪುಸ್ತಕದ ಮೇಲೆ ಇದು ಮುದ್ರಣಗೊಳ್ಳಲಿದೆ.

ಬೆಂಗಳೂರು (ಮಾ. 27): ಸಿಲಿಕಾನ್ ಸಿಟಿ ಬೆಂಗಳೂರಿನ ಆಡಳಿತಾತ್ಮಕ ಬದಲಾವಣೆಯ ಪರ್ವ ಆರಂಭವಾಗಿದೆ. ಮುಂಬರುವ ಬಜೆಟ್ ಮಂಡನೆ ಬೆನ್ನಲ್ಲೇ, ಬಹುನಿರೀಕ್ಷಿತ ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ’ (GBA) ತನ್ನ ಹೊಸ ಲಾಂಛನವನ್ನು (Logo) ಅನಾವರಣಗೊಳಿಸಲು ಸಜ್ಜಾಗಿದೆ.

ಬಜೆಟ್ ಪುಸ್ತಕದಲ್ಲೂ ಹೊಸ ಲೋಗೋ ಝಲಕ್!

ಈ ಬಾರಿ ಮಂಡನೆಯಾಗಲಿರುವ ಗ್ರೇಟರ್ ಬೆಂಗಳೂರು ಬಜೆಟ್ ಪುಸ್ತಕಗಳ ಮೇಲೆ ಈ ಹೊಸ ‘ಜಿಬಿಎ’ ಲೋಗೋ ಇರಲಿದೆ. ಬಜೆಟ್ ಘೋಷಣೆಯ ಜೊತೆಜೊತೆಗೇ ಈ ಲಾಂಛನ ಅಧಿಕೃತವಾಗಿ ಲೋಕಾರ್ಪಣೆಗೊಳ್ಳಲಿದೆ. ಬೆಂಗಳೂರಿನ ಇತಿಹಾಸವನ್ನು ನೆನಪಿಸುತ್ತಲೇ ಆಧುನಿಕ ಆಡಳಿತಕ್ಕೆ ಸಾಕ್ಷಿಯಾಗಲಿರುವ ಈ ಲೋಗೋ ಈಗ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

ಹಾಗಾದರೆ ಹೊಸ ಲೋಗೋದ ವಿಶೇಷತೆಗಳೇನು?

ಬೆಂಗಳೂರಿನ ಇತಿಹಾಸ ಮತ್ತು ಗಾಂಭೀರ್ಯವನ್ನು ಎತ್ತಿ ಹಿಡಿಯುವಂತೆ ಈ ಲೋಗೋವನ್ನು ವಿನ್ಯಾಸಗೊಳಿಸಲಾಗಿದೆ. ಹಿಂದಿನ ಬಿಬಿಎಂಪಿ ಲೋಗೋದಲ್ಲಿದ್ದ ಪಾರಂಪರಿಕ ಕೆಂಪೆಗೌಡರ ಗೋಪುರವನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ. ಇದರ ಜೊತೆಗೆ ವೀರತೆಯ ಗತ್ತಿನಲ್ಲಿ ನಿಂತಿರುವ ಖಡ್ಗದಾರಿ ಕೆಂಪೆಗೌಡರ ಚಿತ್ರಣ ಈ ಲೋಗೋದ ಪ್ರಮುಖ ಆಕರ್ಷಣೆಯಾಗಿರಲಿದೆ. ಇನ್ನು ಲೋಗೊದ ಬಣ್ಣವೂ ವಿಶಿಷ್ಟವಾಗಿದೆ. ಹಳದಿ ಬಣ್ಣದ ವೃತ್ತದೊಳಗೆ ಗೋಪುರ ಮತ್ತು ಕೆಂಪೆಗೌಡರ ಚಿತ್ರವಿದ್ದು, ಒಟ್ಟಾರೆ ಲಾಂಛನವು ನೀಲಿ, ಹಳದಿ ಮತ್ತು ಕೆಂಪು ಬಣ್ಣಗಳ ಸಂಯೋಜನೆಯಿಂದ ಕೂಡಿ ನೋಡಲು ಆಕರ್ಷಕವಾಗಿದೆ.

ಈ ಲೋಗೊವನ್ನು ಏಕಪಕ್ಷಿಯವಾಗಿ ವಿನ್ಯಾಸಗೊಳಿಸದೇ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಾರ್ವಜನಿಕರಿಂದ ಸಲಹೆಗಳನ್ನು ಪಡೆದ ಬಳಿಕವೇ ಈ ವಿನ್ಯಾಸವನ್ನು ಅಂತಿಮಗೊಳಿಸಿದ್ದಾರೆ.



Source link

Leave a Reply

Your email address will not be published. Required fields are marked *