Headlines

GST Reforms 2025: ಜಿಎಸ್‌ಟಿ ಸರಳೀಕರಣ ಬಡವರಿಗೆ, ಮಧ್ಯಮ ವರ್ಗದವರಿಗೆ ಪ್ರಯೋಜನ: ಸಂಸದ ಕಾಗೇರಿ | Gst Reforms 2025 Mp Visheshwar Hegde Kageri Reacts

ಜಿಎಸ್ಟಿ ದರ ಪರಿಷ್ಕರಣೆಯಿಂದ ಬಡವರಿಗೆ ಮತ್ತು ಮಧ್ಯಮ ವರ್ಗದವರಿಗೆ ಹೆಚ್ಚಿನ ಲಾಭವಾಗಲಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ. 

ಉತ್ತರ ಕನ್ನಡ (ಸೆ.4): ಭಾರತವು ಆರ್ಥಿಕವಾಗಿ ಸಶಕ್ತವಾಗುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಿಎಸ್ಟಿ ದರವನ್ನು ಹೊಸ ಮಾದರಿಯಲ್ಲಿ ಪರಿವರ್ತನೆಗೊಳಿಸಿ, ಸರಳೀಕರಣಗೊಳಿಸಿದೆ. ಇದರಿಂದ ಬಡವರಿಗೆ ಹಾಗೂ ಮಧ್ಯಮ ವರ್ಗದವರಿಗೆ ಬಹಳ ಪ್ರಯೋಜನವಾಗಲಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಶಿರಸಿ ನಗರದ ದೀನದಯಾಳ ಸಭಾಭವನದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ವಿಸ್ತ್ರತ ಚರ್ಚೆ ನಡೆಸಿ, ಅದರ ಅನ್ವಯದಲ್ಲಿ ಹಣಕಾಸಿನ ಸಚಿವರು ಇದನ್ನು ಘೋಷಣೆ ಮಾಡಲಾಗಿದೆ. ದೂರದೃಷ್ಠಿ ಚಿಂತನೆಯ ಈ ತೀರ್ಮಾನವು ನಮ್ಮ ಭಾರತದ ಬಡವರಿಗೆ, ಮಧ್ಯಮವರ್ಗದವರಿಗೆ ಇದು ಬಹು ಅನುಕೂಲ ಆಗಲಿದೆ ಎಂದರು.

ತೆರಿಗೆ ಹೆಚ್ಚಳವನ್ನು ಎಲ್ಲ ಸರ್ಕಾರಗಳು ಮಾಡುತ್ತವೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಭಾರತದ ಏಳಿಗೆಗಾಗಿ ಜಿಎಸ್ಟಿ ಕಡಿಮೆ ಮಾಡಿದ್ದಾರೆ. ಈ ಸುಧಾರಣೆ ಕೇವಲ ಬಿಹಾರ ಚುನಾವಣೆಗೆ ಸಂಬಂಧ ಇಲ್ಲ‌. ಆರೆಂಟು ವರ್ಷಗಳಿಂದ‌ ನಡೆದೇ ಇತ್ತು. ಕಾಂಗ್ರೆಸ್ ಇಂತಹ ಆರೋಪ ಮಾಡಿದರೆ ಅಪ್ರಬುದ್ಧತೆಯ ಸಂಕೇತ ಎನ್ನಬೇಕಾಗುತ್ತದೆ ಎಂದರು‌.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ ಹರ್ತೆಬೈಲ್‌, ವಿಭಾಗ ಸಂಚಾಲಕ ಆರ್.ಡಿ.ಹೆಗಡೆ ಜಾನ್ಮನೆ, ಜಿಲ್ಲಾ ವಕ್ತಾರ ಸದಾನಂದ ಭಟ್ಟ, ನಗರಸಭೆ ಅಧ್ಯಕ್ಷೆ ಶರ್ಮಿಳಾ‌ ಮಾದನಗೇರಿ ಮತ್ತಿತರರು ಇದ್ದರು.

Source link

Leave a Reply

Your email address will not be published. Required fields are marked *