Alwar firecracker factory blast: ಅಕ್ರಮ ಪಟಾಕಿ ತಯಾರಿಕಾ ಘಟಕದಲ್ಲಿ ಸ್ಫೋಟ : 7 ಕಾರ್ಮಿಕರು ಸಜೀವ ದಹನ | Massive Fire At An Illegal Firecracker Factory In Bhiwadi Rajasthan Kills 7

Alwar firecracker factory blast: ಅಕ್ರಮ ಪಟಾಕಿ ತಯಾರಿಕಾ ಘಟಕದಲ್ಲಿ ಸ್ಫೋಟ : 7 ಕಾರ್ಮಿಕರು ಸಜೀವ ದಹನ | Massive Fire At An Illegal Firecracker Factory In Bhiwadi Rajasthan Kills 7



Alwar firecracker factory blast: ಅಕ್ರಮ ಪಟಾಕಿ ತಯಾರಿಕಾ ಘಟಕದಲ್ಲಿ ಸ್ಫೋಟ : 7 ಕಾರ್ಮಿಕರು ಸಜೀವ ದಹನ | Massive Fire At An Illegal Firecracker Factory In Bhiwadi Rajasthan Kills 7

ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಭಿವಾಡಿ ಕೈಗಾರಿಕಾ ಪ್ರದೇಶದಲ್ಲಿನ ಅಕ್ರಮ ಪಟಾಕಿ ಕಾರ್ಖಾನೆಯೊಂದರಲ್ಲಿ ಭೀಕರ ಸ್ಫೋಟ ಸಂಭವಿಸಿದೆ. ಈ ದುರಂತದಲ್ಲಿ ಕನಿಷ್ಠ 8 ಕಾರ್ಮಿಕರು ಸಜೀವ ದಹನಗೊಂಡಿದ್ದು, ಇನ್ನೂ ಕೆಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. 

ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ 7 ಕಾರ್ಮಿಕರು ಸಜೀವ ದಹನ

ಅಲ್ವಾರ್: ಅಕ್ರಮ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಕನಿಷ್ಠ 7 ಕಾರ್ಮಿಕರು ಸಜೀವ ದಹನಗೊಂಡಿದ್ದಾರೆ. ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಭಿವಾಡಿ ಕೈಗಾರಿಕಾ ಪ್ರದೇಶದಲ್ಲಿ ಇಂದು ಘಟನೆ ನಡೆದಿದೆ. ಕಾರ್ಖಾನೆಯೊಳಗೆ ಇನ್ನೂ ಇಬ್ಬರು ಕಾರ್ಮಿಕರು ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಘಟನೆ ನಡೆದ ಸಮಯದಲ್ಲಿ, ಸುಮಾರು 25 ಕಾರ್ಮಿಕರು ಸ್ಥಳದಲ್ಲಿದ್ದರು ಎಂದು ತಿಳಿದು ಬಂದಿದೆ. ಬೆಂಕಿಯ ಬಗ್ಗೆ ಮಾಹಿತಿ ಹರಡಿದ ತಕ್ಷಣ ಹತ್ತಿರದ ಕಾರ್ಖಾನೆಗಳ ಕಾರ್ಮಿಕರು ಮತ್ತು ನೌಕರರು ಪ್ರಾಣ ಉಳಿಸಿಕೊಳ್ಳಲು ಹೊರಗೆ ಓಡಿ ಬಂದಿದ್ದಾರೆ.

ಘಟನೆ ನಡೆದ ಕಾರ್ಖಾನೆಯನ್ನು ವ್ಯಕ್ತಿಯೊಬ್ಬರು ಬಾಡಿಗೆಗೆ ಪಡೆದು ಅಲ್ಲಿ ಅಕ್ರಮವಾಗಿ ಪಟಾಕಿ ತಯಾರಿಕಾ ಘಟಕ ಆರಂಭಿಸಿದ್ದರು ಎಂಬ ಆರೋಪ ಕೇಳಿ ಬಂದಿದೆ. ಕಾರ್ಖಾನೆಯೊಳಗೆ ಸಂಗ್ರಹಿಸಲಾಗಿದ್ದ ಗನ್‌ಪೌಡರ್ ಮತ್ತು ಕಾರ್ಡ್‌ಬೋರ್ಡ್‌ನ ದೊಡ್ಡ ದಾಸ್ತಾನು ಭಾರಿ ಸ್ಫೋಟದ ನಂತರ ಬೆಂಕಿಗೆ ಆಹುತಿಯಾಗಿದ್ದು, ಇದು ಬೆಂಕಿ ತೀವ್ರವಾಗಿ ಹರಡುವುದಕ್ಕೆ ಕಾರಣವಾಯ್ತು.ಮುನ್ನೆಚ್ಚರಿಕೆ ಕ್ರಮವಾಗಿ, ಹತ್ತಿರದ ಕಾರ್ಖಾನೆಗಳಲ್ಲಿದ್ದ ಜನರನ್ನು ಬೇರೆಡೆ ಸ್ಥಳಾಂತರಿಸಲಾಗಿದ್ದು, ಹೆಚ್ಚಿನ ಅನಾಹುತವನ್ನು ತಡೆಗಟ್ಟಲು ತಾತ್ಕಾಲಿಕವಾಗಿ ವಿದ್ಯುತ್ ಸರಬರಾಜನ್ನು ಕಡಿತಗೊಳಿಸಲಾಗಿದೆ.

ಇದನ್ನೂ ಓದಿ: ಮನೆ ಟೆರೇಸ್ ಮೇಲೆ ಬಾಂಬ್ ತಯಾರಿಸುತ್ತಿದ್ದಾಗ ಸ್ಫೋಟ: ಅಮ್ಮ ಮಗ ಸಾವು

ಹಲವು ಗಂಟೆಗಳ ಕಠಿಣ ಪ್ರಯತ್ನದ ನಂತರ, ಅಗ್ನಿಶಾಮಕ ದಳದ ತಂಡಗಳು ಬೆಂಕಿಯನ್ನು ಬಹುತೇಕ ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾದವು, ಆದರೂ ವಾತಾವರಣವನ್ನು ತಂಪಾಗಿಸುವ ಕಾರ್ಯಾಚರಣೆಗಳು ದೀರ್ಘಕಾಲದವರೆಗೆ ಮುಂದುವರೆದವು. ಬೆಂಕಿಯ ಸಮಯದಲ್ಲಿ ಮೂರರಿಂದ ನಾಲ್ಕು ದೊಡ್ಡ ಸ್ಫೋಟಗಳ ಶಬ್ದಗಳು ಕೇಳಿಬಂದವು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ, ಇದು ನಿವಾಸಿಗಳು ಮತ್ತು ಕಾರ್ಮಿಕರಲ್ಲಿ ಭೀತಿ ಉಂಟುಮಾಡಿತು.

ಬಿವಾಂಡಿಯ ಹೆಚ್ಚುವರಿ ಜಿಲ್ಲಾ ಅಧಿಕಾರಿ ಸುಮಿತ್ರಾ ಮಿಶ್ರಾ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದು, ಪೊಲೀಸ್ ಪಟ್ರೋಲ್ ವಾಹನವೂ ಕಾರ್ಖಾನೆಯಲ್ಲಿ ಬೆಂಕಿ ಹೊತ್ತಿಕೊಳ್ಳುತ್ತಿವುದನ್ನು ಗಮನಿಸಿತ್ತು. ಇದರ ನಂತರ, ಪೊಲೀಸರು ಮತ್ತು ಆಡಳಿತ ತಂಡಗಳು ತಕ್ಷಣವೇ 6 ಅಗ್ನಿಶಾಮಕ ದಳದ ವಾಹನಗಳನ್ನು ಸ್ಥಳಕ್ಕೆ ಕರೆಸಿಕೊಂಡರು. ಅಗ್ನಿಶಾಮಕ ದಳದವರ ಸಹಾಯದಿಂದ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು. ಇಲ್ಲಿಯವರೆಗೆ, ಕಾರ್ಖಾನೆಯಿಂದ ಏಳು ಮೃತದೇಹಗಳನ್ನು ಹೊರತೆಗೆಯಲಾಗಿದೆ. ಕಾರ್ಮಿಕರು ಉತ್ತರ ಪ್ರದೇಶ ಮತ್ತು ಬಿಹಾರ ನಿವಾಸಿಗಳಾಗಿದ್ದು ಇನ್ನೂ ಇಬ್ಬರು ಸಿಕ್ಕಿಬಿದ್ದಿರುವ ಸಾಧ್ಯತೆ ಇದ್ದು, ಶೋಧ ಕಾರ್ಯಾಚರಣೆ ಮುಂದುವರೆದಿದೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ನಿಮ್ಮ ಅಳಿಯನನ್ನೂ ಈಗಲೇ ಬುಕ್ ಮಾಡಿ: ಸೀಮಿತ ಆಫರ್

ಕೈಗಾರಿಕಾ ಪ್ರದೇಶದ ಪ್ಲಾಟ್ ಸಂಖ್ಯೆ ಜಿ -1, 118 ರಲ್ಲಿರುವ ಕಾರ್ಖಾನೆಯು ಹಲವಾರು ತಿಂಗಳುಗಳಿಂದ ಮುಚ್ಚಲ್ಪಟ್ಟಿತ್ತು ಎಂದು ಅಗ್ನಿಶಾಮಕ ಠಾಣೆಯ ಉಸ್ತುವಾರಿ ರಾಜು ಖಾನ್ ತಿಳಿಸಿದ್ದಾರೆ. ಆವರಣದೊಳಗೆ ದೊಡ್ಡ ಪ್ರಮಾಣದ ಕಾರ್ಡ್‌ಬೋರ್ಡ್ ಸ್ಟಾಕ್ ಅನ್ನು ಸಂಗ್ರಹಿಸಲಾಗಿತ್ತು. ಸೋಮವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಕಾರ್ಖಾನೆಯ ಒಳಗಿನಿಂದ ಹೊಗೆ ಏರುತ್ತಿರುವುದು ಕಂಡುಬಂತು ಮತ್ತು ಸ್ವಲ್ಪ ಸಮಯದೊಳಗೆ ಬೆಂಕಿ ವಿನಾಶಕಾರಿ ರೂಪವನ್ನು ಪಡೆದುಕೊಂಡಿತು ಎಂದು ಅವರು ಮಾಹಿತಿ ನೀಡಿದ್ದಾರೆ.



Source link

Leave a Reply

Your email address will not be published. Required fields are marked *