Headlines

ಟಾಕ್ಸಿಕ್ vs ಧುರಂಧರ್ 2: ಕರ್ನಾಟಕದಲ್ಲೇ ಯಶ್–ರಣ್‌ವೀರ್ ಬಾಕ್ಸಾಫೀಸ್ ಯುದ್ಧ ಶುರು!

ಟಾಕ್ಸಿಕ್ vs ಧುರಂಧರ್ 2: ಕರ್ನಾಟಕದಲ್ಲೇ ಯಶ್–ರಣ್‌ವೀರ್ ಬಾಕ್ಸಾಫೀಸ್ ಯುದ್ಧ ಶುರು!

ಟಾಕ್ಸಿಕ್ vs ಧುರಂಧರ್ 2: ಕರ್ನಾಟಕದಲ್ಲೇ ಯಶ್–ರಣ್‌ವೀರ್ ಬಾಕ್ಸಾಫೀಸ್ ಯುದ್ಧ ಶುರು!

ಈ ವರ್ಷದ ಮೋಸ್ಟ್ ಎಕ್ಸ್‌ಪೆಕ್ಟೆಡ್‌ ಸಿನಿಮಾಗಳಲ್ಲಿ ರಾಕಿಂಗ್ ಸ್ಟಾರ್ ಯಶ್ ನಟನೆಯ ‘ಟಾಕ್ಸಿಕ್’ ಒಂದಾದ್ರೆ, ರಣ್‌ವೀರ್ ಸಿಂಗ್ ನಟನೆಯ ‘ಧುರಂಧರ್ 2′ ಮತ್ತೊಂದು. ಈ ಎರಡೂ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ದಾಖಲೆಗಳನ್ನು ಮುರಿಯುವುದಕ್ಕೆ ಶತ ಪ್ರಯತ್ನ ಮಾಡುತ್ತಿವೆ. ಈ ಬಾಕ್ಸಾಫೀಸ್ ಯುದ್ಧದಲ್ಲಿ ಗೆಲ್ಲಲೇಬೇಕು ಅಂತ ಪಣ ತೊಟ್ಟು ನಿಂತಿವೆ. ಈ ಸಿನಿಮಾಗಳ ಮಧ್ಯೆ ನಡೆಯುತ್ತಿರೋ ವಾರ್​ ಕರ್ನಾಟಕದಿಂದಲೇ ಶುರುವಾಗಿದೆ. ಹಾಗಾದ್ರೆ ಕನ್ನಡ ನಾಡಿನಲ್ಲಿ ಟಾಕ್ಸಿಕ್ ಮತ್ತು ಧುರಂದರ್ ಮಧ್ಯೆ ಏನೆಲ್ಲಾ ನಡೀತಾ ಇದೆ..? ನೋಡೋಣ ಬನ್ನಿ.

ಕನ್ನಡ ನಾಡಿನಲ್ಲಿ ಯಶ್​ ಜತೆ ಸೆಣಸಾಟಕ್ಕೆ ನಿಂತ ರಣ್ವೀರ್!

ಯೆಸ್, ಕನ್ನಡದ ಕಂಪನ್ನ ಇಡೀ ವಿಶ್ವಕ್ಕೆ ಪಸರಿಸುತ್ತಿರೋ ಕನ್ನಡಿಗ ರಾಕಿಂಗ್ ಸ್ಟಾರ್ ಯಶ್‌ಗೆ ಕರ್ನಾಟಕದಲ್ಲೇ ಸವಾಲ್ ಎದುರಾಗಿದೆ. ಈ ಸವಾಲು ಹಾಕಿರೋದು ಉತ್ತರ ಭಾರತದ ಹಿಂದಿ ಮಂದಿ. ಅದಕ್ಕೆ ಕಾರಣ ಒಂದೇ ದಿನ ಒಂದೇ ಸಮಯಕ್ಕೆ ಒಟ್ಟಿಗೆ ಬಿಡುಗಡೆ ಆಗುತ್ತಿರೋ ಪ್ಯಾನ್​ ವರ್ಲ್ಡ್​​ ಸಿನಿಮಾಗಳಾದ ಟಾಕ್ಸಿಕ್ ಹಾಗು ಧುರಂದರ್​-2.

ಹೌದು, ಮಾರ್ಚ್​​ 19ಕ್ಕೆ ವಿಶ್ವದಾದ್ಗಯಂತ ನಮ್ಮ ಕನ್ನಡದ ಸಿನಿಮಾ ಟಾಕ್ಸಿಕ್ ತೆರೆ ಕಾಣುತ್ತಿದೆ. ಅದೇ ದಿನ ಈಗಾಗ್ಲೆ ಸೂಪರ್ ಹಿಟ್ ಆಗಿರೋ ಧುರಂದರ್​ ಸಿನಿಮಾದ ಮುಂದುವರೆದ ಭಾಗ ಧುರಂದರ್​-2 ಕೂಡ ಬಿಡುಗಡೆ ಆಗುತ್ತಿದೆ. ಟಾಕ್ಸಿಕ್​​ ಜೊತೆ ಪೈಪೋಟಿಗೆ ಇಳಿದಿರೋ ದುರಂಧರ್​​-2 ಕನ್ನಡ ನಾಡಿನಲ್ಲೇ ಯಶ್ ಬುಡಕ್ಕೆ ಕೈ ಹಾಕಿದೆ.

ಕರ್ನಾಟಕದ ಮಲ್ಟಿಫ್ಲೆಕ್ಸ್‌ಗಾಗಿ ಧುರಂದರ್​ ವಾರ್!

’ಟಾಕ್ಸಿಕ್’ ಹಾಗು ‘ಧುರಂಧರ್-2 ಹಲವು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಹೀಗಾಗಿ ಎರಡೂ ಸಿನಿಮಾಗಳಿಗೂ ಅತೀ ಹೆಚ್ಚು ಸ್ಕ್ರೀನ್‌ಗಳು ಬೇಕಿವೆ. ಈಗಿನಿಂದಲೇ ಮಲ್ಟಿಪ್ಲೆಕ್ಸ್ ಸ್ಕ್ರೀನ್‌ಗಳ ಮೇಲೆ ಎರಡೂ ಸಿನಿಮಾ ತಂಡಗಳು ಕಣ್ಣಿಟ್ಟಿದ್ದು, ಸ್ಕ್ರೀನ್ ಬುಕ್ ಮಾಡೋ ಕೆಲಸ ಮಾಡುತ್ತಿವೆ. ಯಶ್​​​ ನಮ್ಮೂರನ್ನ ನನ್ನನ್ನ ಟಚ್ ಮಾಡೋರು ಯಾರು ಅಂತ ನಂಬಿಕೆ ಮೇಲೆ ಉತ್ತರ ಭಾರತ ಆಂಧ್ರ, ತೆಲಂಗಾಣ, ತಮಿಳುನಾಡು, ಕೇರಳ, ಹಾಗು ವಿದೇಶದಲ್ಲಿ ಥಿಯೇಟರ್​ ಸೆಟ್ ಮಾಡುತ್ತಿದ್ದಾರೆ.

ಆದ್ರೆ ಹಿಂದಿಯ ಧುರಂದರ್​-2 ತಂಡ ಯಶ್ ಬುಡಕ್ಕೆ ಕೈ ಹಾಕಿ ಕರ್ನಾಟಕದಲ್ಲಿರೋ ಸ್ಕ್ರೀನ್‌ಗಳ ಸೆಟಪ್ ಮಾಡುತ್ತಿದೆ. ಕರ್ನಾಟಕದಲ್ಲಿ ಟಾಕ್ಸಿಕ್​​ ಚಿತ್ರಕ್ಕಿಂತಲೂ ಹೆಚ್ಚು ಸ್ಕ್ರೀನ್​ಗಳಲ್ಲಿ ಧುರಂಧರ್​-2 ಸಿನಿಮಾ ಬಿಡುಗಡೆಗೆ ಪೈಪೋಟಿ ಕೊಡುತ್ತಿದ್ದಾರೆ. ಹೀಗಾಗಿ ಕರ್ನಾಟಕದ ಮಂದಿ ಕನ್ನಡಿಗನ ಟಾಕ್ಸಿಕ್​ಗೆ ಸಪೋರ್ಟ್ ಮಾಡುತ್ತಾರಾ? ಹಿಂದಿಯ ಧುರಂಧರ್‌ನ ಗೆಲ್ಲಿಸ್ತಾರಾ ಕಾದು ನೋಡಬೇಕು

Source link

Leave a Reply

Your email address will not be published. Required fields are marked *