Matrubhumi: ಸಲ್ಮಾನ್ ಖಾನ್ ‘ಮಾತೃಭೂಮಿ’ ಬಿಡುಗಡೆ ಮುಂದೂಡಿಕೆ! ಹೊಸ ದಿನಾಂಕ ಯಾವುದು? | Salman Khan Movie Maatrubhumi Postponed New Release Date May 2026 Gvd

Matrubhumi: ಸಲ್ಮಾನ್ ಖಾನ್ ‘ಮಾತೃಭೂಮಿ’ ಬಿಡುಗಡೆ ಮುಂದೂಡಿಕೆ! ಹೊಸ ದಿನಾಂಕ ಯಾವುದು? | Salman Khan Movie Maatrubhumi Postponed New Release Date May 2026 Gvd



Matrubhumi: ಸಲ್ಮಾನ್ ಖಾನ್ ‘ಮಾತೃಭೂಮಿ’ ಬಿಡುಗಡೆ ಮುಂದೂಡಿಕೆ! ಹೊಸ ದಿನಾಂಕ ಯಾವುದು? | Salman Khan Movie Maatrubhumi Postponed New Release Date May 2026 Gvd

ಮಾತೃಭೂಮಿ ಚಿತ್ರವು ಮೇ 15, 2026 ರಂದು ಬಿಡುಗಡೆಯಾಗುವ ಸಾಧ್ಯತೆಯಿದೆ. “ಚಿತ್ರದ ಹೆಚ್ಚುವರಿ ಶೂಟಿಂಗ್ ಮುಗಿದಿದ್ದು, ಸಿನಿಮಾ ಶೀಘ್ರದಲ್ಲೇ ಸಿದ್ಧವಾಗಲಿದೆ. ಹೀಗಾಗಿ, ನಿರ್ಮಾಪಕರು ಬೇಗನೆ ರಿಲೀಸ್ ಮಾಡಲು ಬಯಸಿದ್ದಾರೆ.

ಸಲ್ಮಾನ್ ಖಾನ್ ಅವರ ಬಹುನಿರೀಕ್ಷಿತ ಸಿನಿಮಾ ‘ಮಾತೃಭೂಮಿ’ ಮತ್ತೆ ಸುದ್ದಿಯಲ್ಲಿದೆ. ಏಪ್ರಿಲ್ 17, 2026 ರಂದು ಬಿಡುಗಡೆಯಾಗಬೇಕಿದ್ದ ಈ ಚಿತ್ರದ ರಿಲೀಸ್ ಡೇಟ್ ಮುಂದೂಡಿಕೆಯಾಗಿದೆ ಎಂದು ವರದಿಗಳು ಹೇಳುತ್ತಿವೆ. ಹಾಗಾದರೆ ಸಲ್ಮಾನ್ ಖಾನ್ ಅವರ ‘ಮಾತೃಭೂಮಿ’ ಚಿತ್ರದ ಹೊಸ ಬಿಡುಗಡೆ ದಿನಾಂಕ ಯಾವುದು? ಇಲ್ಲಿದೆ ವಿವರ.

ಸಲ್ಮಾನ್ ಖಾನ್ ನಟನೆಯ ‘ಮಾತೃಭೂಮಿ’ ಚಿತ್ರದ ಬಿಡುಗಡೆ ದಿನಾಂಕದ ಬಗ್ಗೆ ಗೊಂದಲ ಮುಂದುವರೆದಿದೆ. ಈ ಹಿಂದೆ ‘ಬ್ಯಾಟಲ್ ಆಫ್ ಗಲ್ವಾನ್’ ಎಂದು ಕರೆಯಲಾಗುತ್ತಿದ್ದ ಈ ಸಿನಿಮಾ, ಏಪ್ರಿಲ್ 17, 2026 ರಂದು ತೆರೆಗೆ ಬರಬೇಕಿತ್ತು. ಆದರೆ ಈಗ ಚಿತ್ರತಂಡ ಹೊಸ ದಿನಾಂಕದ ಹುಡುಕಾಟದಲ್ಲಿದೆ.

ವರದಿಗಳ ಪ್ರಕಾರ, ಈ ಚಿತ್ರವು ಮೇ 15, 2026 ರಂದು ಬಿಡುಗಡೆಯಾಗುವ ಸಾಧ್ಯತೆಯಿದೆ. “ಚಿತ್ರದ ಹೆಚ್ಚುವರಿ ಶೂಟಿಂಗ್ ಮುಗಿದಿದ್ದು, ಸಿನಿಮಾ ಶೀಘ್ರದಲ್ಲೇ ಸಿದ್ಧವಾಗಲಿದೆ. ಹೀಗಾಗಿ, ನಿರ್ಮಾಪಕರು ಬೇಗನೆ ರಿಲೀಸ್ ಮಾಡಲು ಬಯಸಿದ್ದಾರೆ. ಅವರು ಮೇ 15ರ ದಿನಾಂಕವನ್ನು ಗಂಭೀರವಾಗಿ ಪರಿಗಣಿಸುತ್ತಿದ್ದಾರೆ” ಎಂದು ಬಾಲಿವುಡ್ ಹಂಗಾಮ ವರದಿಯಲ್ಲಿ ಮೂಲಗಳನ್ನು ಉಲ್ಲೇಖಿಸಿ ಹೇಳಲಾಗಿದೆ.

“ಒಂದು ಹಂತದಲ್ಲಿ, ಸ್ವಾತಂತ್ರ್ಯ ದಿನಾಚರಣೆಯಂದು ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ಯೋಜಿಸಿತ್ತು. ಆದರೆ, ಆಮಿರ್ ಖಾನ್ ಪ್ರೊಡಕ್ಷನ್ಸ್‌ನ ಸನ್ನಿ ಡಿಯೋಲ್ ಅಭಿನಯದ ‘Lahore 1947’ ಚಿತ್ರಕ್ಕೆ ಆ ದಿನಾಂಕ ನಿಗದಿಯಾಗಿರುವುದರಿಂದ ಅದು ಸಾಧ್ಯವಾಗಲಿಲ್ಲ” ಎಂದು ಮೂಲಗಳು ತಿಳಿಸಿವೆ. ಈಗ ನಿರ್ಮಾಪಕರು ಮೇ ಅಥವಾ ಜುಲೈನಿಂದ ಅಕ್ಟೋಬರ್ ನಡುವೆ ಹೊಸ ದಿನಾಂಕವನ್ನು ಹುಡುಕುತ್ತಿದ್ದಾರೆ.

ಅಪೂರ್ವ ಲಖಿಯಾ ನಿರ್ದೇಶನದ ‘ಮಾತೃಭೂಮಿ’ ಚಿತ್ರದಲ್ಲಿ ಸಲ್ಮಾನ್ ಖಾನ್‌ಗೆ ಮೊದಲ ಬಾರಿಗೆ ಚಿತ್ರಾಂಗದಾ ಸಿಂಗ್ ನಾಯಕಿಯಾಗಿ ನಟಿಸಿದ್ದಾರೆ. ಈದ್ ಹಬ್ಬದಂದು ಬಿಡುಗಡೆಯಾದ ಚಿತ್ರದ ರೊಮ್ಯಾಂಟಿಕ್ ಹಾಡಿಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸಿನಿಮಾ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ.

ಸಲ್ಮಾನ್ ಖಾನ್ ಮುಂದಿನ ಚಿತ್ರದ ಘೋಷಣೆ

‘ಮಾತೃಭೂಮಿ’ ಅಲ್ಲದೆ, ಸಲ್ಮಾನ್ ಖಾನ್ ಅವರ ಮತ್ತೊಂದು ಚಿತ್ರವೂ ಘೋಷಣೆಯಾಗಿದೆ. ಇದನ್ನು ವಂಶಿ ಪೈಡಿಪಲ್ಲಿ ನಿರ್ದೇಶಿಸಲಿದ್ದು, ನಯನತಾರಾ ನಾಯಕಿಯಾಗಿ ನಟಿಸಲಿದ್ದಾರೆ. “ಈ ಏಪ್ರಿಲ್‌ನಿಂದ ನಿರ್ದೇಶಕ ವಂಶಿ ಪೈಡಿಪಲ್ಲಿ ಮತ್ತು ದಿಲ್ ರಾಜು ಅವರೊಂದಿಗೆ ಹೃದಯ, ಮನಸ್ಸು, ಧೈರ್ಯದಿಂದ” ಎಂದು ಸಲ್ಮಾನ್ ಇತ್ತೀಚೆಗೆ ಟ್ವೀಟ್ ಮಾಡಿ ಖಚಿತಪಡಿಸಿದ್ದರು. ವರದಿಗಳ ಪ್ರಕಾರ, ಈ ಚಿತ್ರವು 2027ರ ಈದ್ ಹಬ್ಬಕ್ಕೆ ಬಿಡುಗಡೆಯಾಗಬಹುದು.



Source link

Leave a Reply

Your email address will not be published. Required fields are marked *