Women's Reservation Bill India: ಮಹಿಳಾ ಮೀಸಲಾತಿಬಿಲ್‌ಗೆ ಕೇಂದ್ರದ ಅಸ್ತು- ಸಂಸತ್ತು, ವಿಧಾನಸಭೆಯ 33% ಸ್ಥಾನ ಸ್ತ್ರೀಯರಿಗೆ

<p><strong>ನವದೆಹಲಿ (ಏ.9):</strong> ಮಹತ್ವದ ನಿರ್ಧಾರವೊಂದರಲ್ಲಿ 2011ರ ಜನಗಣತಿ ಆಧರಿಸಿ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33 ರಷ್ಟು ಸ್ಥಾನಗಳನ್ನು ಕಾಯ್ದಿರಿಸುವ ಮಸೂದೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅಂಗೀಕಾರ ನೀಡಿದೆ ಎಂದು ಮೂಲಗಳು ಹೇಳಿವೆ.</p><p>ಏಪ್ರಿಲ್ 16 ರಂದು ಪ್ರಾರಂಭವಾಗುವ ಮಹಿಳಾ ಮೀಸಲು ಕುರಿತಾದ ವಿಶೇಷ ಸಂಸತ್ ಅಧಿವೇಶನದಲ್ಲಿ ಈ ಮಸೂದೆಯನ್ನು ಮಂಡಿಸಲಾಗುವುದು. ಈ ಮಸೂದೆಯಲ್ಲಿ ಸಾಂವಿಧಾನಿಕ ತಿದ್ದುಪಡಿ ಮಸೂದೆಯೂ ಸೇರಿದೆ. ಸಂಸತ್ತಿನ ಅಂಗೀಕಾರ ದೊರೆತ ಬಳಿಕ 2029ರ ಲೋಕಸಭಾ ಚುನಾವಣೆಯೊಂದಿಗೆ ಮೀಸಲನ್ನು ಜಾರಿಗೆ ತರಲಾಗುವುದು ಎಂದು ಅವು ಹೇಳಿವೆ.</p><p>ಈ ಮುಂಚೆ ಹೊಸ ಜನಗಣತಿ ಆಧರಿಸಿ ಮೀಸಲು ಹಾಗೂ ಕ್ಷೇತ್ರ ಮರುವಿಂಗಡಣೆ ಮಾಡುವ ಉದ್ದೇಶ ಇರಿಸಿಕೊಂಡು ಸಂಸತ್ತಿನಲ್ಲಿ ಮಸೂದೆ ಅಂಗೀಕರಿಸಲಾಗಿತ್ತು. ಆದರೆ ಗಣತಿ ವಿಳಂಬ ಆಗಿರುವ ಕಾರಣ 2011ರ ಜನಗಣತಿ ಆಧರಿಸಿಯೇ ಈ ಪ್ರಕ್ರಿಯೆ ಮುಗಿಸಲು ನಿರ್ಣಯಿಸಲಾಗಿದೆ. ಹೀಗಾಗಿ ಮೂಲ ಕಾಯ್ದೆಯಾದ ನಾರಿ ಶಕ್ತಿ ವಂದನ ಕಾಯ್ದೆಗೆ (ಮಹಿಳಾ ಮೀಸಲಾತಿ ಕಾಯ್ದೆ) ತಿದ್ದುಪಡಿ ತರುವ ಉದ್ದೇಶ ಸರ್ಕಾರದ್ದು. ಇದರ ಪ್ರಕಾರ ಲೋಕಸಭಾ ಸ್ಥಾನಗಳ ಸಂಖ್ಯೆ 543 ರಿಂದ 816 ಕ್ಕೆ ಹೆಚ್ಚಾಗುತ್ತದೆ. ಇದರಲ್ಲಿ ಶೇ.33ರಷ್ಟು ಸ್ಥಾನಗಳು (273 ಸೀಟುಗಳು) ಮಹಿಳೆಯರಿಗೆ ಮೀಸಲಾಗಿರುತ್ತವೆ.</p>

Source link

Leave a Reply

Your email address will not be published. Required fields are marked *