Headlines

Delhi Covid alert ದೆಹಲಿ ವ್ಯಾಪ್ತಿಯಲ್ಲಿ ಕೋವಿಡ್ ರೀತಿ ರೋಗಲಕ್ಷಣ ಪತ್ತೆ, ಶೇ.56ರಷ್ಟು ಕುಟುಂಬದಲ್ಲಿ ವೈರಸ್ | Delhi Health Alert Covid Like Illness Spreads To Over Half Of Surveyed Households

Delhi Covid alert ದೆಹಲಿ ವ್ಯಾಪ್ತಿಯಲ್ಲಿ ಕೋವಿಡ್ ರೀತಿ ರೋಗಲಕ್ಷಣ ಪತ್ತೆ, ಶೇ.56ರಷ್ಟು ಕುಟುಂಬದಲ್ಲಿ ವೈರಸ್ | Delhi Health Alert Covid Like Illness Spreads To Over Half Of Surveyed Households



Delhi Covid alert ದೆಹಲಿ ವ್ಯಾಪ್ತಿಯಲ್ಲಿ ಕೋವಿಡ್ ರೀತಿ ರೋಗಲಕ್ಷಣ ಪತ್ತೆ, ಶೇ.56ರಷ್ಟು ಕುಟುಂಬದಲ್ಲಿ ವೈರಸ್ | Delhi Health Alert Covid Like Illness Spreads To Over Half Of Surveyed Households

ದೆಹಲಿ ವ್ಯಾಪ್ತಿಯಲ್ಲಿ ಕೋವಿಡ್ ರೀತಿ ರೋಗಲಕ್ಷಣ ಪತ್ತೆ, ಶೇ.56ರಷ್ಟು ಕುಟುಂಬದಲ್ಲಿ ವೈರಸ್ ಪತ್ತೆಯಾಗಿದೆ. ಜ್ವರ, ಗಂಟಲು ನೋವು, ಕೆಮ್ಮು ಸೇರಿದಂತೆ ಕೊರನಾ ವೈರಸ್ ರೋಗಲಕ್ಷಣಗಳು ಕಾಣಿಸಿಕೊಂಡಿದೆ.

ನವದೆಹಲಿ (ಏ.14) ದೆಹಲಿ ಹಾಗೂ ಎನ್‌ಸಿಆರ್ ವ್ಯಾಪ್ತಿಯಲ್ಲಿ ಕೋವಿಡ್ ರೀತಿ ರೋಗಲಕ್ಷಣ ಪತ್ತೆಯಾಗಿದೆ ಎಂದು ವರದಿಯಾಗಿದೆ. ರಾಷ್ಟ್ರ ರಾಜಧಾನಿ ವ್ಯಾಪ್ತಿಯಲ್ಲಿ ಶೇಕಡಾ 56ರಷ್ಟು ಕುಟುಂಬದಲ್ಲಿ ಕನಿಷ್ಠ ಒಬ್ಬರಿಗಾದರೂ ಕೋವಿಡ್ ರೀತಿಯ ರೋಗ ಲಕ್ಷಣಗಳು ಪತ್ತೆಯಾಗುತ್ತಿದೆ. ಉಸಿರಾಟದ ಸಮಸ್ಯೆಗಳು ಸೇರಿದಂತೆ ಕೋವಿಡ್ ಸೋಂಕು ತಗುಲಿದ ರೋಗಿಗಳಲ್ಲಿ ಕಾಣಿಸಿಕೊಳ್ಳುವ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತಿದೆ ಎಂದು ವರದಿಯಾಗಿದೆ.

ಯಾವ ಭಾಗದಲ್ಲಿ ಸೋಂಕು ಹೆಚ್ಚು?

ದೆಹಲಿ, ಗುರುಗ್ರಾಂ, ಘಾಜಿಯಾಬಾದ್, ನೋಯ್ಡಾ, ಫರೀದಾಬಾದ್ ಸೇರಿದಂತೆ ಹಲವು ಭಾಗದಲ್ಲಿ ಕೋವಿಡ್ ರೀತಿಯ ರೋಗಲಕ್ಷಣಗಳು ಹೆಚ್ಚಾಗುತ್ತಿದೆ. ಈ ಭಾಗದ ಶೇಕಡಾ 44ರಷ್ಟು ಕುಟುಂಬಗಳು ಯಾವುದೇ ರೋಗಲಕ್ಷಣಗಳು ಇಲ್ಲ ಎಂದಿದ್ದಾರೆ. ಇನ್ನು ಶೇಕಡಾ 12ರಷ್ಟು ಕುಟುಂಬ ಸದಸ್ಯರು ಕುಟುಂಬ ಕನಿಷ್ಠ ಒಬ್ಬರಿಗಾದರೂ ಕೋವಿಡ್ ರೀತಿ ರೋಗ ಲಕ್ಷಣಗಳು ಕಾಣಿಸಿಕೊಂಡಿದೆ ಎಂದಿದ್ದಾರೆ. ಇನ್ನು ಶೇಕಡಾ 33ರಷ್ಟು ಕುಟುಂಬಗಳಲ್ಲಿ ಇಬ್ಬರಿಂದ ಮೂವರಲ್ಲಿ ಕೋವಿಡ್ ರೀತಿ ರೋಗ ಲಕ್ಷಣಗಳು ಕಾಣಿಸಿಕೊಂಡಿದೆ ಎಂದಿದ್ದಾರೆ.

ದಿಢೀರ್ ಸೋಂಕು ಕಾಣಿಸಿಕೊಳ್ಳಲು ಕಾರಣವೇನು?

ದೆಹಲಿ ಹಾಗೂ ರಾಷ್ಟ್ರ ರಾಜಧಾನಿ ವ್ಯಾಪ್ತಿಯಲ್ಲಿ ದಿಢೀರ್ ಕೋವಿಡ್ ರೀತಿಯ ರೋಗಲಕ್ಷಣಗಳು ಕಾಣಿಸಿಕೊಳ್ಳಲು ಕಾರಣವೇನು ಅನ್ನೋ ಕುರಿತು ವೈದ್ಯರು ಹಾಗೂ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸದ್ಯ ಕಾಣಿಸಿಕೊಂಡಿರುವ ಕೋವಿಡ್ ಸೋಂಕು ರೀತಿಯ ಅಲೆಗೆ ಪ್ರಮುಖ ಕಾರಣ H3N2 ವೈರಸ್. ಪ್ರತಿ ದಿನ ಬದಲಾಗುತ್ತಿರುವ ಹವಾಮಾನ, ತಾಪಮಾನ ಏರಿಕೆಗಳಿಂದ ಸೋಂಕು ಹರಡುತ್ತಿದೆ. ದೇಹದ ರೋಗ ನಿರೋಧ ಶಕ್ತಿ ಕುಗ್ಗಿಸುತ್ತಿದೆ. ವಾತಾವರಣದಲ್ಲಿ ಆಗುತ್ತಿರುವ ಬದಲಾವಣೆಯಿಂದ ವೈರಸ್ ಜನರನ್ನು ಹೈರಾಣು ಮಾಡುತ್ತಿದೆ ಎಂದಿದ್ದಾರೆ.

ಪ್ರಮುಖವಾಗಿ ಉರಿ ಬಿಸಿಲಿನಿಂದ ತಾಪಮಾನ ಏರಿಕೆಯಾಗುತ್ತಿದೆ. ಇದರ ನಡುವೆ ದಿಢೀರ್ ಮಳೆಯಿಂದ ತಾಪಮಾನ ಕುಸಿತ ಕಾಣುತ್ತಿದೆ. ಇದು ಈ ಸೋಂಕು ಎಲ್ಲೆಡೆ ಕಾಣಿಸಿಕೊಳ್ಳಲು ಪ್ರಮುಖ ಕಾರಣವಾಗುತ್ತಿದೆ. ಇನ್ನು ಚಳಿಗಾಲದಿಂದ ಬೇಸಿಗೆ ಕಾಲ ಹಾಗೂ ಮಳೆಗಾಲಕ್ಕೆ ಬದಲಾವಣೆಗಳ ಸಂದರ್ಭಗಳಲ್ಲಿ ಜ್ವರ, ಶೀತ, ಕೆಮ್ನು ಸೇರಿದಂತೆ ಸಾಮಾನ್ಯ ರೋಗಗಳು ಕಾಣಿಸಿಕೊಳ್ಳುತ್ತಿದೆ. ಇದರ ಜೊತೆಗೆ H3N2 ವೈರಸ್ ಕೂಡ ಸೇರಿಕೊಂಡಿರುವುದು ಕ್ಷಿಪ್ರ ಗತಿಯಲ್ಲಿ ವೈರಸ್ ಹರಡಲು ಕಾರಣಾಗಿದೆ. ಇನ್ನು ರಾಷ್ಟ್ರ ರಾಜಧಾನಿ ವ್ಯಾಪ್ತಿಯಲ್ಲಿ ವಾಯು ಮಾಲಿನ್ಯ ವಿಪರೀತವಾಗಿರುವ ಕಾರಣ ಸಾಮಾನ್ಯವಾಗಿ ಜನರಲ್ಲಿ ಉಸಿರಾಟದ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದೆ. ಇದಕ್ಕೆ ವೈರಸ್ ಕೂಡ ಸೇರಿಕೊಂಡು ಆರೋಗ್ಯವನ್ನು ಮತ್ತಷ್ಟು ಹದಗೆಡಿಸಿದೆ.



Source link

Leave a Reply

Your email address will not be published. Required fields are marked *