ಗೋಲ್‌ಗುಂಬಜ್ ಎಕ್ಸಪ್ರೆಸ್ ರೈಲಿಗೆ ತಲೆಕೊಟ್ಟು ಪ್ರಾಣ ಕಳೆದುಕೊಂಡ ಮನ್‌ಮುಲ್‌ ಉಪವ್ಯವಸ್ಥಾಪಕ | Maddur S Manmul S Deputy Manager Lost His Life After Being Hit By A Gol Gumbaz Express Raiway Mandya Mrq

ಮದ್ದೂರು ತಾಲೂಕಿನ ಗೆಜ್ಜಲಗೆರೆ ಮನ್‌ಮುಲ್‌ನ ಉಪ ವ್ಯವಸ್ಥಾಪಕ ಭರತರಾಜ್, ಮಂಡ್ಯದಲ್ಲಿ ರೈಲಿಗೆ ತಲೆ ಕೊಟ್ಟು ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಆನ್‌ಲೈನ್‌ ಅಥವಾ ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದೇ ಈ ದುರಂತಕ್ಕೆ ಕಾರಣ ಎಂದು ಶಂಕಿಸಲಾಗಿದೆ.

ಮಂಡ್ಯ: ಮದ್ದೂರು ತಾಲೂಕಿನ ಗೆಜ್ಜಲಗೆರೆ ಮನ್‌ಮುಲ್‌ನ ಉಪ ವ್ಯವಸ್ಥಾಪಕ ರೈಲಿಗೆ ತಲೆ ಕೊಟ್ಟು ಆತ್ಮ*ಹತ್ಯೆ ಮಾಡಿಕೊಂಡಿರುವ ಘಟನೆ ಮಂಡ್ಯ ನಗರದ ಷುಗರ್ ಟೌನ್ ಬಳಿ ಗುರುವಾರ ಸಂಜೆ ಜರುಗಿದೆ.

ಗೋಲ್‌ಗುಂಬಜ್ ಎಕ್ಸಪ್ರೆಸ್ ರೈಲಿಗೆ ಸಿಲುಕಿ ಆತ್ಮ*ಹತ್ಯೆ

ಗೆಜ್ಜಲಗೆರೆ ಮೆಗಾ ಡೈರಿಯ ಹಾಲು ಶೇಖರಣ ವಿಭಾಗದಲ್ಲಿ ಉಪ ವ್ಯವಸ್ಥಾಪಕರಾಗಿ ಕೆಲಸ ನಿರ್ವಹಿಸುತ್ತಿದ್ದ ಭರತ್ ರಾಜ್ ಆತ್ಮ*ಹತ್ಯೆಗೆ ಶರಣಾದ ವ್ಯಕ್ತಿ. ಗುರುವಾರ ಸಂಜೆ 4 ರಿಂದ 5 ಗಂಟೆ ಸುಮಾರಿಗೆ ಮೈಸೂರಿನಿಂದ ಬೆಂಗಳೂರು ಮಾರ್ಗವಾಗಿ ಬಿಜಾಪುರಕ್ಕೆ ತೆರಳುತ್ತಿದ್ದ ಗೋಲ್‌ಗುಂಬಜ್ ಎಕ್ಸಪ್ರೆಸ್ ರೈಲಿಗೆ ಸಿಲುಕಿ ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.

ಪ್ರಕರಣದಿಂದ ವಿಮುಕ್ತಿ ಆಗಿದ್ರು ಭರತರಾಜ್

ಮೂಲತಃ ಎಚ್‍.ಡಿ.ಕೋಟೆಯ ಯುವರಾಜ್ ಭರತ್ ರಾಜು ಮೈಸೂರಿನಲ್ಲಿ ಪತ್ನಿ ಅನು ಹಾಗೂ ಎರಡೂವರೆ ವರ್ಷದ ಮಗುವಿನೊಂದಿಗೆ ವಾಸವಾಗಿದ್ದರು. ಕಳೆದ ಕೆಲವು ವರ್ಷಗಳ ಹಿಂದೆ ಮನ್‌ಮುಲ್ ನಡೆದಿದ್ದ ಹಾಲಿಗೆ ನೀರು ಬೆರೆಸಿದ ಪ್ರಕರಣದಲ್ಲಿ ಆರೋಪಿಯಾಗಿದ್ದ ಭರತರಾಜ್ ವಿಚಾರಣೆ ನಂತರ ಪ್ರಕರಣದಿಂದ ವಿಮುಕ್ತಿಗೊಂಡಿದ್ದರು ಎಂದು ಹೇಳಲಾಗಿದೆ.

ಇದನ್ನೂ ಓದಿ: ಡಿಕೆಶಿ ಅವರನ್ನ ಸಿಎಂ ಮಾಡ್ತಿರೋ ಇಲ್ವೋ? ಸರ್ಕಾರಕ್ಕೆ ಸಂಕಷ್ಟ ಗ್ಯಾರಂಟಿ: ಹೈಕಮಾಂಡ್‌ಗೆ ಗಣಿಗ ರವಿಕುಮಾರ್ ಎಚ್ಚರಿಕೆ!

ಡೈರಿಯ ಸಹೋದ್ಯೋಗಿಗಳ ಪ್ರಕಾರ ಭರತರಾಜ್ ಆನ್‌ಲೈನ್‌ ಅಥವಾ ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸಿಕೊಂಡು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರು ಎಂದು ಗೊತ್ತಾಗಿದೆ. ಜಿಲ್ಲಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಂತರ ಶವವನ್ನು ವಾರಸುದಾರರ ವಶಕ್ಕೆ ಒಪ್ಪಿಸಲಾಯಿತು.

ಶ್ರದ್ಧಾಂಜಲಿ: ಭರತ್ ರಾಜ್ ಅವರ ನಿಧನಕ್ಕೆ ಒಕ್ಕೂಟದ ಅಧಿಕಾರಿಗಳು ಸಿಬ್ಬಂದಿ ಒಕ್ಕೂಟದ ಆವರಣದಲ್ಲಿ ಮೌನಾಚರಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದರು.

ಇದನ್ನೂ ಓದಿ: ಮಂಡ್ಯ ಗ್ರಾ.ಪಂಚಾಯ್ತಿಯೊಳಗೆ 3 ದಿನದಲ್ಲಿ 54 ಲಕ್ಷ ಗುಳುಂ: 11 ನೌಕರರ ವಿರುದ್ಧ ಪ್ರಕರಣ ದಾಖಲು

Source link

Leave a Reply

Your email address will not be published. Required fields are marked *