Headlines

ಚಿಕ್ಕಮಗಳೂರು ನೈತಿಕ ಪೊಲೀಸ್‌ಗಿರಿ; ಬಸ್ಸಿನಲ್ಲಿ ಮುಸ್ಲಿಂ ಹುಡುಗಿ ಪಕ್ಕದಲ್ಲಿ ಕುಳಿತಿದ್ದ ಯುವಕನಿಗೆ ಹಲ್ಲೆ! | Chikkamagaluru Moral Policing Youth Attacked For Sitting Beside Muslim Girl Sat

ಚಿಕ್ಕಮಗಳೂರು ನೈತಿಕ ಪೊಲೀಸ್‌ಗಿರಿ; ಬಸ್ಸಿನಲ್ಲಿ ಮುಸ್ಲಿಂ ಹುಡುಗಿ ಪಕ್ಕದಲ್ಲಿ ಕುಳಿತಿದ್ದ ಯುವಕನಿಗೆ ಹಲ್ಲೆ! | Chikkamagaluru Moral Policing Youth Attacked For Sitting Beside Muslim Girl Sat



ಚಿಕ್ಕಮಗಳೂರು ನೈತಿಕ ಪೊಲೀಸ್‌ಗಿರಿ; ಬಸ್ಸಿನಲ್ಲಿ ಮುಸ್ಲಿಂ ಹುಡುಗಿ ಪಕ್ಕದಲ್ಲಿ ಕುಳಿತಿದ್ದ ಯುವಕನಿಗೆ ಹಲ್ಲೆ! | Chikkamagaluru Moral Policing Youth Attacked For Sitting Beside Muslim Girl Sat

ಚಿಕ್ಕಮಗಳೂರಿನಲ್ಲಿ, ಮುಸ್ಲಿಂ ಸಹಪಾಠಿಯ ಪಕ್ಕ ಬಸ್ಸಿನಲ್ಲಿ ಕುಳಿತಿದ್ದಕ್ಕೆ ಕಾಲೇಜು ವಿದ್ಯಾರ್ಥಿಯ ಮೇಲೆ ಯುವಕರ ಗುಂಪೊಂದು ಹಲ್ಲೆ ನಡೆಸಿದೆ. ಈ ನೈತಿಕ ಪೊಲೀಸ್‌ಗಿರಿ ಘಟನೆಯು ಎಐಟಿ ವೃತ್ತದ ಬಳಿ ನಡೆದಿದ್ದು, ಪುಂಡರು ವಿದ್ಯಾರ್ಥಿಯ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಚಿಕ್ಕಮಗಳೂರು (ಫೆ.27): ಕಾಫಿನಾಡು ಚಿಕ್ಕಮಗಳೂರಿನಲ್ಲಿ ನೈತಿಕ ಪೊಲೀಸ್‌ಗಿರಿ (Moral Policing) ಪ್ರಕರಣಗಳು ಮುಂದುವರಿದಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿವೆ. ಬಸ್ಸಿನಲ್ಲಿ ಮುಸ್ಲಿಂ ಯುವತಿಯ ಪಕ್ಕದಲ್ಲಿ ಕುಳಿತಿದ್ದ ಎಂಬ ಕಾರಣಕ್ಕೆ ಕಾಲೇಜು ವಿದ್ಯಾರ್ಥಿಯೋರ್ವನ ಮೇಲೆ ಯುವಕರ ಗುಂಪೊಂದು ಭೀಕರವಾಗಿ ಹಲ್ಲೆ ನಡೆಸಿ, ಆತನ ಮೊಬೈಲ್‌ ಕಿತ್ತುಕೊಂಡಿರುವ ಆಘಾತಕಾರಿ ಘಟನೆ ನಗರದ ಎಐಟಿ (AIT) ವೃತ್ತದ ಬಳಿ ನಡೆದಿದೆ.

ಘಟನೆಯ ವಿವರ:

ಚಿಕ್ಕಮಗಳೂರು ನಗರದ ಖಾಸಗಿ ಕಾಲೇಜೊಂದರಲ್ಲಿ ಓದುತ್ತಿರುವ ಯೋಗೀಶ್‌ ಎಂಬ ಯುವಕ ಹಾಗೂ ಅದೇ ಕಾಲೇಜಿನ ಮುಸ್ಲಿಂ ಯುವತಿಯೊಬ್ಬರು ಸಹಪಾಠಿಗಳಾಗಿದ್ದಾರೆ. ಇಂದು ಬೆಳಿಗ್ಗೆ ಇಬ್ಬರೂ ಒಟ್ಟಿಗೆ ಬಸ್ಸಿನಲ್ಲಿ ಕಾಲೇಜಿಗೆ ಬರುತ್ತಿದ್ದಾಗ, ಯೋಗೀಶ್‌ ಆ ಯುವತಿಯ ಪಕ್ಕದ ಸೀಟಿನಲ್ಲಿ ಕುಳಿತಿದ್ದರು. ಇದನ್ನು ಗಮನಿಸಿದ ಸಾಹಿಲ್‌ ಎಂಬ ಯುವಕ ಹಾಗೂ ಆತನ ತಂಡ, ‘ನನ್ನ ಗೆಳೆಯನ ತಂಗಿ ಪಕ್ಕದಲ್ಲಿ ನೀನ್ಯಾಕೆ ಕುಳಿತಿದ್ದೀಯಾ?’ ಎಂದು ಪ್ರಶ್ನಿಸಿ ಗಲಾಟೆ ಆರಂಭಿಸಿದ್ದಾರೆ.

ಕ್ಲಾಸ್‌ಮೇಟ್ಸ್‌ ಅಂದರೂ ಬಿಡದ ಪುಂಡರು:

ಈ ವೇಳೆ ಯೋಗೀಶ್‌, ‘ನಾವಿಬ್ಬರೂ ಒಂದೇ ಕಾಲೇಜಿನವರು, ಕ್ಲಾಸ್‌ಮೇಟ್ಸ್‌ ಹಾಗೂ ಸ್ನೇಹಿತರು. ಸ್ನೇಹಿತರಾಗಿ ಪಕ್ಕದಲ್ಲಿ ಕುಳಿತುಕೊಳ್ಳುವುದರಲ್ಲಿ ತಪ್ಪೇನಿದೆ?’ ಎಂದು ಸಮರ್ಥಿಸಿಕೊಂಡಿದ್ದಾರೆ. ಇದರಿಂದ ಕೆರಳಿದ ಸಾಹಿಲ್‌ ಮತ್ತು ಆತನ ತಂಡ ಯೋಗೀಶ್‌ ಮೇಲೆ ಹಲ್ಲೆಗೆ ಮುಂದಾಗಿದೆ. ಬೆಳಿಗ್ಗೆ ಬಸ್ಸಿನಲ್ಲಿ ಶುರುವಾದ ಈ ಮಾತಿನ ಚಕಮಕಿ ಸಂಜೆ ವೇಳೆಗೆ ವಿಕೋಪಕ್ಕೆ ತಲುಪಿದೆ.

ಕಾಲೇಜು ಗೇಟ್‌ನಲ್ಲೇ ಪುಂಡಾಟ:

ಸಂಜೆ ಕಾಲೇಜು ಮುಗಿದು ಯೋಗೀಶ್‌ ಹೊರಬರುತ್ತಿದ್ದಂತೆ, ಸಾಹಿಲ್‌ ನೇತೃತ್ವದ ತಂಡ ಎಐಟಿ ವೃತ್ತದ ಬಳಿ ಆತನನ್ನು ಅಡ್ಡಗಟ್ಟಿದೆ. ಸಾರ್ವಜನಿಕರ ಮುಂದೆಯೇ ಯೋಗೀಶ್‌ ಮೇಲೆ ಹಲ್ಲೆ ನಡೆಸಿದ ಪುಂಡರು, ಆತನ ಬಳಿಯಿದ್ದ ಮೊಬೈಲ್‌ ಫೋನ್ ಅನ್ನು ಬಲವಂತವಾಗಿ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಈ ಗಲಾಟೆಯನ್ನು ಬಿಡಿಸಲು ಬಂದ ಮತ್ತೋರ್ವ ಯುವಕನ ಮೇಲೂ ಈ ಗುಂಪು ಹಲ್ಲೆ ನಡೆಸಿದೆ ಎಂದು ತಿಳಿದುಬಂದಿದೆ.

ಪೊಲೀಸ್‌ ಭೇಟಿ ಮತ್ತು ತನಿಖೆ:

ಘಟನೆ ನಡೆದ ತಕ್ಷಣ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಸವನಹಳ್ಳಿ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಕಾಲೇಜು ಆವರಣದ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ತನಿಖೆ ಚುರುಕುಗೊಳಿಸಲಾಗಿದೆ. ಸ್ನೇಹಿತರ ನಡುವಿನ ಸೌಹಾರ್ದತೆಯನ್ನು ಕೋಮು ಬಣ್ಣ ಹಚ್ಚಿ ನೈತಿಕ ಪೊಲೀಸ್‌ಗಿರಿ ನಡೆಸುತ್ತಿರುವ ಇಂತಹ ಶಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಸದ್ಯ ಬಸವನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.



Source link

Leave a Reply

Your email address will not be published. Required fields are marked *