Headlines

christmas gift ಏರ್ ಇಂಡಿಯಾದ ಪ್ರತಿ ಪ್ರಯಾಣಿಕರಿಗೆ ಕ್ರಿಸ್ಮಸ್ ಗಿಫ್ಟ್, ಬೆಂಗಳೂರಿನಿಂದ ಹೊರಟವರಿಗೆ ಸರ್ಪ್ರೈಸ್ | Air India Surprise Bengaluru Mumbai Flight Passenger With Christmas Gift

christmas gift ಏರ್ ಇಂಡಿಯಾದ ಪ್ರತಿ ಪ್ರಯಾಣಿಕರಿಗೆ ಕ್ರಿಸ್ಮಸ್ ಗಿಫ್ಟ್, ಬೆಂಗಳೂರಿನಿಂದ ಹೊರಟವರಿಗೆ ಸರ್ಪ್ರೈಸ್ | Air India Surprise Bengaluru Mumbai Flight Passenger With Christmas Gift



christmas gift ಏರ್ ಇಂಡಿಯಾದ ಪ್ರತಿ ಪ್ರಯಾಣಿಕರಿಗೆ ಕ್ರಿಸ್ಮಸ್ ಗಿಫ್ಟ್, ಬೆಂಗಳೂರಿನಿಂದ ಹೊರಟವರಿಗೆ ಸರ್ಪ್ರೈಸ್ | Air India Surprise Bengaluru Mumbai Flight Passenger With Christmas Gift

ಏರ್ ಇಂಡಿಯಾದ ಪ್ರತಿ ಪ್ರಯಾಣಿಕರಿಗೆ ಕ್ರಿಸ್ಮಸ್ ಗಿಫ್ಟ್, ಬೆಂಗಳೂರಿನಿಂದ ಹೊರಟವರಿಗೆ ಸರ್ಪ್ರೈಸ್, ದೇಶದಲ್ಲಿ ಕ್ರಿಸ್ಮಸ್ ಸಂಭ್ರಮ ಆರಂಭಗೊಂಡಿದೆ. ಇದರ ಬೆನ್ನಲ್ಲೇ ಹಲವು ಕಂಪನಿಗಳು ಉಡುಗೊರೆ ನೀಡುತ್ತಿದೆ.

ಬೆಂಗಳೂರು (ಡಿ.19) ದೇಶ ವಿದೇಶಗಳಲ್ಲಿ ಕ್ರಿಸ್ಮಸ್ ಸಂಭ್ರಮ ಶುರುವಾಗಿದೆ. ಹಲವು ಕಂಪನಿಗಳು ಕ್ರಿಸ್ಮಸ್ ಹಾಗೂ ಹೊಸ ವರ್ಷದ ಕಾರಣ ಆಫರ್ ನೀಡುತ್ತಿದ್ದಾರೆ. ಇದೀಗ ಏರ್ ಇಂಡಿಯಾ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಪ್ರತಿ ಪ್ರಯಾಣಿಕರಿಗೆ ಸರ್ಪ್ರೈಸ್ ಉಡುಗೊರೆ ನೀಡಿದೆ. ಏರ್ ಇಂಡಿಯಾ ಪ್ರಯಾಣ ಮಾಡಿದ ಪ್ರಯಾಣಿಕರು ಕ್ರಿಸ್ಮಸ್ ಹಬ್ಬದ ಸಲುವಾಗಿ ವಿಶೇಷ ಉಡುಗೊರೆ ಪಡೆದಿದ್ದಾರೆ. ಹಲವರು ಅಚ್ಚರಿಗೊಂಡಿದ್ದಾರೆ. ಈ ಕುರಿತು ಏರ್ ಇಂಡಿಯಾ ಪ್ರಯಾಣಿಕರು ತಮ್ಮ ಸೋಶಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ.

ಬೆಂಗಳೂರಿನಿಂದ ಹೊರಟವರಿಗೆ ಅಚ್ಚರಿ

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮುಂಬೈಗೆ ಏರ್ ಇಂಡಿಯಾ ಮೂಲಕ ತೆರಳಿದ ಪ್ರಯಾಣಿಕರು ಲ್ಯಾಂಡಿಂಗ್ ಬಳಿಕ ಸರ್ಪ್ರೈಸ್ ಗಿಫ್ಟ್ ಪಡೆದಿದ್ದಾರೆ. ವಿಮಾನ ಲ್ಯಾಂಡಿಂಗ್ ಬಳಿಕ ಪ್ರಯಾಣಿಕರು ತಮ್ಮ ಲಗೇಜ್ ಪಡೆಯಲು ಬೆಲ್ಟ್ ಕೌಂಟರ್ ಬಳಿ ಬಂದಿದ್ದಾರೆ. ಈ ವೇಳೆ ಪ್ರಯಾಣಿಕರ ಲಗೇಜಜ್ ಜೊತೆಗೆ ಹಲವು ಬಾಕ್ಸ್‌ಗಳು ಬಂದಿದೆ. ಸ್ವೀಟ್, ಕೇಕ್ ಸೇರಿದಂತೆ ಹಲವು ವಿಶೇಷ ಉಡುಗೊರೆಗಳ ಬಾಕ್ಸ್ ಇದಾಗಿದೆ. ಪ್ರತಿ ಪ್ರಯಾಣಿಕರಿಗೆ ಈ ವಿಶೇಷ ಉಡುಗೊರೆಗಳ ಬಾಕ್ಸ್ ನೀಡಲಾಗಿದೆ. ಪ್ರತಿ ಸೀಟು ನಂಬರ್ ಲಗತ್ತಿಸಿ ಉಡುಗೊರೆ ನೀಡಲಾಗಿತ್ತು.

ಲಗೇಜ್ ಪಡೆಯಲು ಬಂದ ಪ್ರಯಾಣಿಕರಿಗೆ ಅಚ್ಚರಿಯಾಗಿದೆ. ಈ ಕುರಿತು ಪ್ರಯಾಣಿಕನೊಬ್ಬ ಎಕ್ಸ್ ಮೂಲಕ ಸಂಭ್ರಮ ಹಂಚಿಕೊಂಡಿದ್ದಾನೆ. ಏರ್ ಇಂಡಿಯಾ ಮೂಲಕ ಬೆಂಗಳೂರಿನಿಂದ ಮುಂಬೈಗೆ ಬಂದಿಳಿದಾಗ ಅಚ್ಚರಿ ಕಾದಿತ್ತು. ಏರ್ ಇಂಡಿಯಾ ಈ ಉಡುಗೊರೆ ವಿಶೇಷ ಎನಿಸಿತು. ಲಗೇಜ್ ಬ್ಯಾಗ್ ಪಡೆಯಲು ಹೋದಾಗ ಪ್ರತಿ ಸೀಟು ನಂಬರ್ ನಮೂದಿಸಿ ಉಡುಗೊರೆ ಬಾಕ್ಸ್ ಇಡಲಾಗಿತ್ತು. ಏರ್ ಇಂಡಿಯಾದ ಈ ನಡೆ ವಿಶೇಷ ಹಾಗೂ ಆಪ್ತವೆನಿಸಿತು ಎಂದು ಪ್ರಯಾಣಿಕರು ಹೇಳಿಕೊಂಡಿದ್ದಾರೆ. ದಿನವನ್ನು ಮತ್ತಷ್ಟು ಸುಂದರವಾಗಿಸಿದ್ದಕ್ಕೆ ಧನ್ಯವಾದ ಎಂದು ಪ್ರಯಾಣಿಕ ಹೇಳಿಕೊಂಡಿದ್ದಾನೆ.

Scroll to load tweet…

ಗಿಫ್ಟ್ ಬಾಕ್ಸ್‌ನಲ್ಲಿ ಏನಿತ್ತು?

ಏರ್ ಇಂಡಿಯಾ ನೀಡಿದ ಕ್ರಿಸ್ಮಸ್ ಉಡುಗೊರೆಯಲ್ಲಿ ಸ್ವೀಟ್, ಕೇಕ್, ಮೂರು ಬಗೆಯ ಮ್ಯಾರಿಯಟ್ ಬೊನ್ವೋಯ್ ಕುಕೀಸ್, ಚಾಕೋಲೇಟ್ ಕ್ರಿಂಕಲ್ ಕುಕೀಸ್, ಸಿನಾಮೊನ್ ಕುಕೀಸ್, ವೆನಿಲ್ಲಾ ಕಿಪ್‌ಪರ್ಲ್ ಸೇರಿದಂತೆ ಕೆಲ ಸ್ವೀಟ್ಸ್ ಇಡಲಾಗಿತ್ತು. ಈ ಗಿಫ್ಟ್‌ಗೆ ಹಲವರು ಪ್ರತಿಕ್ರಿಯಿಸಿದ್ದಾರೆ. ನಾನೂ ಏರ್ ಇಂಡಿಯಾದಲ್ಲಿ ಪ್ರಯಾಣ ಮಾಡಬೇಕಿತ್ತು ಎಂದಿದ್ದಾರೆ. ಇದು ಮರಳಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬರುವಾಗ ಕ್ಯಾಬ್ ಹಿಡಿಯಲು ಅಲೆದಾಡಬೇಕಾಗುತ್ತದೆ. ಈ ವೇಳೆ ಎನರ್ಜಿ ಇರಲಿ ಎಂದು ಕೊಟ್ಟಿದ್ದಾರೆ ಎಂದು ಕೆಲವರು ತಮಾಷೆ ಮಾಡಿದ್ದಾರೆ.



Source link

Leave a Reply

Your email address will not be published. Required fields are marked *