ಛೀ.. ಎಂಥಾ ವಿಕೃತಿ! ಶಿವಾಜಿ ಮಹಾರಾಜ್‌, ರಾಣಿ ಪದ್ಮಿನಿ ಚಿತ್ರವನ್ನು ಶೌಚಾಲಯದ ಚಿಹ್ನೆಗೆ ಬಳಸಿದ ಪ್ರಖ್ಯಾತ ಹೋಟೆಲ್‌! | Haryana Banquet Hall Shivaji Maharaj Rani Padmini Washroom Signage Controversy San

ಛೀ.. ಎಂಥಾ ವಿಕೃತಿ! ಶಿವಾಜಿ ಮಹಾರಾಜ್‌, ರಾಣಿ ಪದ್ಮಿನಿ ಚಿತ್ರವನ್ನು ಶೌಚಾಲಯದ ಚಿಹ್ನೆಗೆ ಬಳಸಿದ ಪ್ರಖ್ಯಾತ ಹೋಟೆಲ್‌! | Haryana Banquet Hall Shivaji Maharaj Rani Padmini Washroom Signage Controversy San



ಛೀ.. ಎಂಥಾ ವಿಕೃತಿ! ಶಿವಾಜಿ ಮಹಾರಾಜ್‌, ರಾಣಿ ಪದ್ಮಿನಿ ಚಿತ್ರವನ್ನು ಶೌಚಾಲಯದ ಚಿಹ್ನೆಗೆ ಬಳಸಿದ ಪ್ರಖ್ಯಾತ ಹೋಟೆಲ್‌! | Haryana Banquet Hall Shivaji Maharaj Rani Padmini Washroom Signage Controversy San

Portraits of Shivaji Maharaj & Rani Padmini Used as Washroom Signage ಹರಿಯಾಣದ ‘ಮಿಲನ್ ಬ್ಯಾಂಕ್ವೆಟ್ ಹಾಲ್’ ಶೌಚಾಲಯದ ಬಾಗಿಲುಗಳಿಗೆ ಛತ್ರಪತಿ ಶಿವಾಜಿ ಮಹಾರಾಜ್ ಮತ್ತು ರಾಣಿ ಪದ್ಮಿನಿ ಅವರ ಭಾವಚಿತ್ರಗಳನ್ನು ಸೈನೇಜ್‌ ಆಗಿ ಬಳಸಿ ಭಾರೀ ವಿವಾದ ಸೃಷ್ಟಿಸಿದೆ.

ನವದೆಹಲಿ (ಫೆ.23): ಹರಿಯಾಣದ ಸಿಕ್ರಿಯಲ್ಲಿರುವ ‘ಮಿಲನ್ ಬ್ಯಾಂಕ್ವೆಟ್ ಹಾಲ್’ (Milan Banquet Hall) ಮಾಡಿರುವ ಎಡವಟ್ಟು ಈಗ ಇಡೀ ದೇಶದ ಜನರ ಕೆಂಗಣ್ಣಿಗೆ ಗುರಿಯಾಗಿದೆ. ಭಾರತದ ಹೆಮ್ಮೆಯ ವೀರ ಪುರುಷ ಛತ್ರಪತಿ ಶಿವಾಜಿ ಮಹಾರಾಜ್ ಮತ್ತು ತ್ಯಾಗದ ಸಂಕೇತ ರಾಣಿ ಪದ್ಮಿನಿ ಅವರ ಭಾವಚಿತ್ರಗಳನ್ನು ಶೌಚಾಲಯದ ಸೈನೇಜ್‌ ಆಗಿ ಬಳಸಿರುವುದು ಭಾರಿ ವಿವಾದ ಸೃಷ್ಟಿಸಿದೆ.

ಸಾಮಾಜಿಕ ಜಾಲತಾಣವಾದ ‘X’ (ಟ್ವಿಟರ್) ನಲ್ಲಿ ಹರಿದಾಡುತ್ತಿರುವ ವಿಡಿಯೋವೊಂದರಲ್ಲಿ, ಬ್ಯಾಂಕ್ವೆಟ್ ಹಾಲ್‌ನ ಶೌಚಾಲಯದ ಬಾಗಿಲಿಗಳಿಗೆ ಸೈನೇಜ್‌ ಆಗಿ ಈ ಐತಿಹಾಸಿಕ ವ್ಯಕ್ತಿಗಳ ಫೋಟೋಗಳನ್ನು ಹಾಕಲಾಗಿದೆ. ಪುರುಷರ ಶೌಚಾಲಯಕ್ಕೆ ಶಿವಾಜಿ ಮಹಾರಾಜ್ ಮತ್ತು ಮಹಿಳೆಯರ ಶೌಚಾಲಯಕ್ಕೆ ರಾಣಿ ಪದ್ಮಿನಿ ಅವರ ಭಾವಚಿತ್ರಗಳನ್ನು ಬಳಸಲಾಗಿದೆ. ಈ ದೃಶ್ಯಗಳನ್ನು ಕಂಡ ನೆಟ್ಟಿಗರು ಮ್ಯಾನೇಜ್‌ಮೆಂಟ್ ವಿರುದ್ಧ ಕಿಡಿಕಾರುತ್ತಿದ್ದಾರೆ

Scroll to load tweet…

ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶದ ಅಲೆ

ಈ ಕೃತ್ಯವನ್ನು ‘ಅಸಡ್ಡೆ’ ಮತ್ತು ‘ಅಗೌರವದ ಪರಮಾವಧಿ’ ಎಂದು ಬಣ್ಣಿಸಿರುವ ಜನರು, ಹೋಟೆಲ್ ಮಾಲೀಕರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ “ಮಹಾನ್ ಪುರುಷರ ಫೋಟೋಗಳನ್ನು ಎಲ್ಲಿ ಹಾಕಬೇಕು ಎಂಬ ಕನಿಷ್ಠ ಜ್ಞಾನವೂ ನಿಮಗಿಲ್ಲವೇ?” ಎಂದು ಯೂಸರ್‌ ಒಬ್ಬರು ಪ್ರಶ್ನಿಸಿದ್ದಾರೆ. “ಶಿವಾಜಿ ಮಹಾರಾಜ್ ಸ್ವರಾಜ್ಯದ ಸಂಕೇತ, ರಾಣಿ ಪದ್ಮಿನಿ ಗೌರವಕ್ಕಾಗಿ ಪ್ರಾಣತ್ಯಾಗ ಮಾಡಿದವರು. ಅವರ ಫೋಟೋಗಳನ್ನು ಶೌಚಾಲಯದ ಬಾಗಿಲಿಗೆ ಬಳಸುವುದು ಕೋಟ್ಯಂತರ ಜನರ ಭಾವನೆಗಳಿಗೆ ಮಾಡಿದ ಗಾಯ” ಎಂದು ಮತ್ತೊಬ್ಬರು ಆಕ್ರೋಶ ಹೊರಹಾಕಿದ್ದಾರೆ.

ಕಠಿಣ ಕ್ರಮಕ್ಕೆ ಆಗ್ರಹ

ಕೆಲವು ಬಳಕೆದಾರರು ಇದು ಉದ್ದೇಶಪೂರ್ವಕವಾಗಿ ಮಾಡಿದ ಅವಮಾನ ಎಂದು ಆರೋಪಿಸಿದ್ದಾರೆ. ಹೋಟೆಲ್ ಮ್ಯಾನೇಜ್‌ಮೆಂಟ್‌ಗೆ ಭಾರಿ ದಂಡ ವಿಧಿಸಬೇಕು ಮತ್ತು ತಕ್ಷಣವೇ ಆ ಫೋಟೋಗಳನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ. ಇನ್ನು ಕೆಲವರು ಸ್ಥಳೀಯ ಅಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಿ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ.

ಇನ್ನೂ ಸಿಕ್ಕಿಲ್ಲ ಸ್ಪಷ್ಟನೆ

ಈ ವಿವಾದದ ಬಗ್ಗೆ ಮಿಲನ್ ಬ್ಯಾಂಕ್ವೆಟ್ ಹಾಲ್ ಮ್ಯಾನೇಜ್‌ಮೆಂಟ್ ಆಗಲಿ ಅಥವಾ ಸ್ಥಳೀಯ ಪೊಲೀಸರಾಗಲಿ ಇದುವರೆಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಈ ಫೋಟೋಗಳನ್ನು ಉದ್ದೇಶಪೂರ್ವಕವಾಗಿ ನಾಮಫಲಕವಾಗಿ ಬಳಸಲಾಗಿದೆಯೇ ಅಥವಾ ಅಲಂಕಾರಿಕ ಕಲೆಯ ಭಾಗವಾಗಿ ಹಾಕಲಾಗಿದ್ದನ್ನು ಯಾರಾದರೂ ತಪ್ಪಾಗಿ ಬಳಸಿಕೊಂಡಿದ್ದಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.



Source link

Leave a Reply

Your email address will not be published. Required fields are marked *