ಬೆಂಗಳೂರಿಂದ ವಿದೇಶಕ್ಕೆ ಶಿಫ್ಟ್: ₹1.3 ಕೋಟಿ ವೇತನ, ಟೆಕ್ಕಿ ಜೀವನದಲ್ಲಿ ದೊಡ್ಡ ಬದಲಾವಣೆ, ಭಾರತಕ್ಕೆ ಮರಳೋದು ಡೌಟ್!

ಬೆಂಗಳೂರಿಂದ ವಿದೇಶಕ್ಕೆ  ಶಿಫ್ಟ್: ₹1.3 ಕೋಟಿ ವೇತನ, ಟೆಕ್ಕಿ ಜೀವನದಲ್ಲಿ ದೊಡ್ಡ ಬದಲಾವಣೆ, ಭಾರತಕ್ಕೆ ಮರಳೋದು ಡೌಟ್!

ಬೆಂಗಳೂರಿಂದ ವಿದೇಶಕ್ಕೆ  ಶಿಫ್ಟ್: ₹1.3 ಕೋಟಿ ವೇತನ, ಟೆಕ್ಕಿ ಜೀವನದಲ್ಲಿ ದೊಡ್ಡ ಬದಲಾವಣೆ, ಭಾರತಕ್ಕೆ ಮರಳೋದು ಡೌಟ್!

ಯುರೋಪಿನ ನಗರಗಳಲ್ಲಿ ಜೀವನ ವೆಚ್ಚ ಹೆಚ್ಚಾಗಿದ್ದರೂ, ಬೆಂಗಳೂರಿನಿಂದ ಐರ್ಲೆಂಡ್‌ನ ಡಬ್ಲಿನ್‌ಗೆ ಸ್ಥಳಾಂತರವಾದ ನಂತರ ತನ್ನ ಜೀವನದ ಗುಣಮಟ್ಟದಲ್ಲಿ ಗಮನಾರ್ಹ ಸುಧಾರಣೆ ಕಂಡಿದ್ದೇನೆ ಎಂದು 27 ವರ್ಷದ ಭಾರತೀಯ ಸಾಫ್ಟ್‌ವೇರ್ ಎಂಜಿನಿಯರ್ ಹೇಳಿದ್ದಾರೆ.

ಪ್ರಸ್ತುತ ಅಮೆಜಾನ್ ಕಂಪನಿಯಲ್ಲಿ ಸಾಫ್ಟ್‌ವೇರ್ ಡೆವಲಪ್‌ಮೆಂಟ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ಸುರಸ್ ನಾಯಕ್, ಕಂಪನಿಯೊಳಗಿನ ಆಂತರಿಕ ವರ್ಗಾವಣೆಯ ಮೂಲಕ ಮಾರ್ಚ್ 2025ರಲ್ಲಿ ಐರ್ಲೆಂಡ್‌ಗೆ ತೆರಳಿದ್ದಾರೆ. ಅವರ ಮಾಹಿತಿ ಪ್ರಕಾರ, ಅವರು ಪ್ರಸ್ತುತ ವರ್ಷಕ್ಕೆ ಸುಮಾರು 122,428 ಯುರೋಗಳು (ಸುಮಾರು ₹1.3 ಕೋಟಿ) ವೇತನ ಪಡೆಯುತ್ತಿದ್ದಾರೆ. ಇದು ಅವರು ಭಾರತದಲ್ಲಿ ಕೆಲಸ ಮಾಡುತ್ತಿದ್ದಾಗ ಪಡೆದಿದ್ದ ಸುಮಾರು ₹68 ಲಕ್ಷ ವೇತನಕ್ಕಿಂತ ಎರಡು ಪಟ್ಟು ಹೆಚ್ಚು ಎನ್ನಲಾಗಿದೆ.

ವಿದೇಶದಲ್ಲಿ ವಾಸಿಸುವ ಕನಸು

ಸುರಸ್ ನಾಯಕ್ ಹೇಳುವಂತೆ, ವಿದೇಶದಲ್ಲಿ ವಾಸಿಸುವುದು ತನ್ನ ಬಾಲ್ಯದ ಕನಸಾಗಿತ್ತು. ನಾನು ಚಿಕ್ಕವನಾಗಿದ್ದಾಗಲೇ ವಿದೇಶಕ್ಕೆ ಹೋಗಬೇಕು ಎಂಬ ಆಸೆ ನನ್ನ ಮನಸ್ಸಿನಲ್ಲಿ ಇತ್ತು. ಹಾಲಿವುಡ್ ಸಿನಿಮಾಗಳನ್ನು ಹೆಚ್ಚು ನೋಡುತ್ತಿದ್ದ ಕಾರಣ ಪಾಶ್ಚಿಮಾತ್ಯ ದೇಶಗಳ ಜೀವನಶೈಲಿ ನನಗೆ ತುಂಬಾ ಆಕರ್ಷಕವಾಗಿತ್ತು. ಬೇರೆ ದೇಶಕ್ಕೆ ಹೋಗಿ ಅಲ್ಲಿ ವಾಸಿಸಿ, ಅವರ ಜೀವನ ಶೈಲಿಯನ್ನು ಅನುಭವಿಸಬೇಕು ಎಂಬ ಆಸೆ ಯಾವಾಗಲೂ ಇತ್ತು ಎಂದು ಅವರು ಹೇಳಿದ್ದಾರೆ.

ಅಮೆಜಾನ್‌ನಲ್ಲಿ ಉದ್ಯೋಗದ ಆರಂಭ

ನಾಯಕ್ ಅವರು ಐಐಟಿ ಅಲಹಾಬಾದ್) ನಲ್ಲಿ ತಮ್ಮ ಅಂತಿಮ ವರ್ಷದ ಅಧ್ಯಯನದ ವೇಳೆ ಆರು ತಿಂಗಳ ಇಂಟರ್ನ್‌ಶಿಪ್ ಪೂರ್ಣಗೊಳಿಸಿದ ಬಳಿಕ 2020ರಲ್ಲಿ ಅಮೆಜಾನ್‌ನಲ್ಲಿ ಪೂರ್ಣಕಾಲಿಕ ಉದ್ಯೋಗಕ್ಕೆ ಸೇರಿದರು. ನಂತರ ಅವರು ಬೆಂಗಳೂರಿನ ಅಮೆಜಾನ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು.

ಕಂಪನಿಯಲ್ಲಿ ಕನಿಷ್ಠ ಎರಡು ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿ ನಿರ್ದಿಷ್ಟ ಮಟ್ಟವನ್ನು ತಲುಪಿದ ಉದ್ಯೋಗಿಗಳು ವಿದೇಶಿ ಕಚೇರಿಗಳಲ್ಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅವಕಾಶ ಹೊಂದಿರುತ್ತಾರೆ ಎಂಬುದನ್ನು ಅವರು ನಂತರ ತಿಳಿದುಕೊಂಡರು. ಇದರಿಂದ ಅವರು ಯುನೈಟೆಡ್ ಕಿಂಗ್‌ಡಮ್, ಜರ್ಮನಿ ಮತ್ತು ಐರ್ಲೆಂಡ್‌ನಲ್ಲಿರುವ ಅಮೆಜಾನ್ ಕಚೇರಿಗಳಲ್ಲಿ ಲಭ್ಯವಿದ್ದ ಅವಕಾಶಗಳನ್ನು ಪರಿಶೀಲಿಸಲು ಆರಂಭಿಸಿದರು. ಇದರಲ್ಲಿಯೇ ಐರ್ಲೆಂಡ್‌ನ ಡಬ್ಲಿನ್ ನಗರವು ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನ ಕೇಂದ್ರವಾಗಿರುವುದರಿಂದ ಅವರು ಅದನ್ನು ಆಯ್ಕೆ ಮಾಡಿಕೊಂಡರು.

ಅವಕಾಶ ಸಿಕ್ಕ ಕ್ಷಣ

“ಈ ಅವಕಾಶ ನನಗೆ ಸಿಕ್ಕಿದೆ ಎಂದು ತಿಳಿದಾಗ ನಾನು ತುಂಬಾ ಸಂತೋಷಪಟ್ಟೆ. ತಕ್ಷಣ ನನ್ನ ಹೆತ್ತವರ ಬಳಿಗೆ ಹೋಗಿ ಈ ವಿಷಯವನ್ನು ಹೇಳಿದೆ. ಅದು ನಮ್ಮ ಕುಟುಂಬಕ್ಕೆ ತುಂಬಾ ಸಂತೋಷದ ಕ್ಷಣವಾಗಿತ್ತು. ವಿಶೇಷವಾಗಿ ನನ್ನ ತಂದೆ ಯಾವಾಗಲೂ ನನ್ನ ಕನಸುಗಳಿಗೆ ಬೆಂಬಲ ನೀಡುತ್ತಿದ್ದರು,” ಎಂದು ನಾಯಕ್ ನೆನಪಿಸಿಕೊಳ್ಳುತ್ತಾರೆ.

ವೀಸಾ ಮತ್ತು ಸ್ಥಳಾಂತರ ಸಹಾಯ

ಉದ್ಯೋಗ ದೃಢಪಟ್ಟ ನಂತರ ಸುಮಾರು 6 ರಿಂದ 8 ವಾರಗಳೊಳಗೆ ಅವರಿಗೆ ಕೆಲಸದ ವೀಸಾ ದೊರಕಿತು. ಸ್ಥಳಾಂತರಕ್ಕೆ ಸಂಬಂಧಿಸಿದ ವೆಚ್ಚಗಳು, ತಾತ್ಕಾಲಿಕ ವಸತಿ ವ್ಯವಸ್ಥೆ ಹಾಗೂ ಭಾರತದಿಂದ ಅವರ ವಸ್ತುಗಳನ್ನು ಸಾಗಿಸುವ ಖರ್ಚನ್ನು ಅಮೆಜಾನ್ ಕಂಪನಿಯೇ ಭರಿಸಿತು ಎಂದು ಹೇಳಿದ್ದಾರೆ.

ಯುರೋಪಿನಲ್ಲಿ ಜೀವನ ವೆಚ್ಚ

ಆದರೆ ಹೆಚ್ಚಿನ ಸಂಬಳ ಇದ್ದರೂ ಡಬ್ಲಿನ್ ನಗರದಲ್ಲಿ ಜೀವನ ವೆಚ್ಚಕ್ಕೆ ಹೊಂದಿಕೊಳ್ಳುವುದು ಸುಲಭವಿರಲಿಲ್ಲ. “ಭಾರತದಲ್ಲಿ ಇದ್ದಾಗ ನಾನು ಖರ್ಚಿನ ಬಗ್ಗೆ ಹೆಚ್ಚು ಯೋಚಿಸಿರಲಿಲ್ಲ, ಏಕೆಂದರೆ ಅಲ್ಲಿ ವೆಚ್ಚಗಳು ಕಡಿಮೆ ಇರುತ್ತವೆ. ಆದರೆ ಡಬ್ಲಿನ್‌ನಲ್ಲಿ ಬಾಡಿಗೆ ಮತ್ತು ದಿನಸಿ ಸಾಮಗ್ರಿಗಳ ಬೆಲೆ ಭಾರತಕ್ಕಿಂತ ಹೆಚ್ಚು ಇರುವುದರಿಂದ ಈಗ ನಾನು ನನ್ನ ಖರ್ಚುಗಳನ್ನು ಸರಿಯಾಗಿ ಯೋಜಿಸಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.

ಪ್ರಸ್ತುತ ಅವರು 3 ಬೆಡ್‌ರೂಣ ಮನೆಯನ್ನು ಇನ್ನಿಬ್ಬರು ಅಮೆಜಾನ್ ಉದ್ಯೋಗಿಗಳೊಂದಿಗೆ ಹಂಚಿಕೊಂಡಿದ್ದಾರೆ. ಆ ಮನೆಯ ಒಟ್ಟು ಬಾಡಿಗೆ ತಿಂಗಳಿಗೆ ಸುಮಾರು 4,000 ಯುರೋಗಳು ಆಗಿದ್ದು, ಅದರಲ್ಲಿ ನಾಯಕ್ ಅವರು ತಿಂಗಳಿಗೆ ಸುಮಾರು 1,450 ಯುರೋಗಳು ಪಾವತಿಸುತ್ತಿದ್ದಾರೆ.

ಹೊಸ ಪರಿಸರಕ್ಕೆ ಹೊಂದಿಕೊಳ್ಳುವುದು

ಐರ್ಲೆಂಡ್‌ಗೆ ಸ್ಥಳಾಂತರವಾದ ನಂತರ ಅಲ್ಲಿನ ತಂಪಾದ ಹವಾಮಾನಕ್ಕೆ ಹೊಂದಿಕೊಳ್ಳುವುದು ಅವರಿಗೆ ಆರಂಭದಲ್ಲಿ ಸ್ವಲ್ಪ ಕಷ್ಟವಾಗಿತ್ತು. ಜೊತೆಗೆ ಹೊಸ ದೇಶದಲ್ಲಿ ಸ್ನೇಹಿತರ ವಲಯವನ್ನು ನಿರ್ಮಿಸುವುದು ಕೂಡ ಸವಾಲಿನ ಸಂಗತಿಯಾಗಿತ್ತು. ಆದರೆ ನಂತರ ಸಾಮಾಜಿಕ ಜಾಲತಾಣ ಅಪ್ಲಿಕೇಶನ್ ಮೀಟ್‌ ಅಪ್ ಮೂಲಕ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಪ್ರಾರಂಭಿಸಿದ ನಂತರ ಪ್ರಪಂಚದ ವಿವಿಧ ಭಾಗಗಳಿಂದ ಬಂದ ಜನರೊಂದಿಗೆ ಪರಿಚಯವಾಗಲು ಸಾಧ್ಯವಾಯಿತು.

ಮುಂದಿನ ಯೋಜನೆ

ಇದೀಗ ಡಬ್ಲಿನ್‌ನಲ್ಲಿ ನೆಲೆಸಿರುವ ನಾಯಕ್ ಅವರು ಅಲ್ಲಿನ ಜೀವನಶೈಲಿಯನ್ನು ತುಂಬಾ ಇಷ್ಟಪಡುತ್ತಿದ್ದಾರೆ. ವಿಶೇಷವಾಗಿ ಪ್ರಕೃತಿಗೆ ಹತ್ತಿರವಾದ ಪರಿಸರ ಹಾಗೂ ಯುರೋಪಿನ ಇತರ ದೇಶಗಳಿಗೆ ಸುಲಭವಾಗಿ ಪ್ರಯಾಣ ಮಾಡುವ ಅವಕಾಶಗಳು ಅವರಿಗೆ ತುಂಬಾ ಆಕರ್ಷಕವಾಗಿವೆ. ಮುಂದಿನ 10 ರಿಂದ 15 ವರ್ಷಗಳವರೆಗೆ ಭಾರತಕ್ಕೆ ಹಿಂತಿರುಗುವ ಯಾವುದೇ ಯೋಜನೆ ಇಲ್ಲ ಎಂದು ಅವರು ತಿಳಿಸಿದ್ದಾರೆ. “ಇಲ್ಲಿನ ಜೀವನದ ಗುಣಮಟ್ಟ ನನಗೆ ಬಹಳಷ್ಟು ಉತ್ತಮವಾಗಿದೆ. ಐರ್ಲೆಂಡ್‌ನಲ್ಲಿ ನಾನು ಅನುಭವಿಸುತ್ತಿರುವ ಜೀವನಶೈಲಿಗೆ ಈಗ ಒಗ್ಗಿಕೊಂಡಿದ್ದೇನೆ. ನಾನು ಭಾರತಕ್ಕೆ ಹಿಂತಿರುಗಿದ್ದರೆ ಈ ರೀತಿಯ ಜೀವನವನ್ನು ಅನುಭವಿಸಲು ಸಾಧ್ಯವಾಗುತ್ತಿರಲಿಲ್ಲ,” ಎಂದು ನಾಯಕ್ ಹೇಳಿದ್ದಾರೆ.

Source link

Leave a Reply

Your email address will not be published. Required fields are marked *